ಮೈಸೂರು,ಜೂ.15(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರು ಕಟ್ಟೆ ಇಲ್ಲದೆ ನಷ್ಟ ಅನುಭವಿ ಸಿರುವ ಹೂ, ಹಣ್ಣು-ತರಕಾರಿ ಬೆಳೆದ ರೈತರಿಗೆ ಸರ್ಕಾರ 168 ಕೋಟಿ ರೂ. ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ. ಮೈಸೂ ರಿನ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸರ್ಕಾರ 168 ಕೋಟಿ ರೂ.ಗಳ ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂದರು. ಮೈಸೂರು…
ರೇಷ್ಮೆ ಇಲಾಖೆಯೊಂದಿಗೆ ಕೆಎಸ್‍ಐಸಿ ವಿಲೀನ ಪ್ರಸ್ತಾವನೆ: ಸಚಿವ ಕೆ.ಸಿ.ನಾರಾಯಣಗೌಡ
June 16, 2020ಮೈಸೂರು, ಜೂ. 15(ಆರ್‍ಕೆ)- ರೇಷ್ಮೆ ಇಲಾಖೆ ಯೊಂದಿಗೆ ಕೆಎಸ್‍ಐಸಿಯನ್ನು ವಿಲೀನಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಎಸ್‍ಐಸಿ ಒಂದು ಬೋರ್ಡ್ ಆಗಿದ್ದು, ವ್ಯವಸ್ಥಾಪಕ ನಿರ್ದೇಶಕರೇ ಅದÀರ ಮುಖ್ಯಸ್ಥ ರಾಗಿರುವುದರಿಂದ ಸಂಸ್ಥೆ ನಿಯಂತ್ರಣಕ್ಕೆ ಸಿಗುತ್ತಿಲ್ಲವಾ ದ್ದರಿಂದ ಅದನ್ನು ರೇಷ್ಮೆ ಇಲಾಖೆಯೊಂದಿಗೆ ವಿಲೀನಗೊಳಿಸಿ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಸಂಸದ…
ಮೈಸೂರಲ್ಲಿ ಕೊರೊನಾರ್ಭಟ: ಚಾಮುಂಡಿ ಬೆಟ್ಟದಲ್ಲಿ ಈ ಬಾರಿ ಆಷಾಢ ಪೂಜೆ ರದ್ದು?
June 16, 2020ಮೈಸೂರು,ಜೂ.15-ಕೊರೊನಾ ವೈರಸ್ ಆರ್ಭಟದ ಹಿನ್ನೆಲೆಯಲ್ಲಿ ಈ ಬಾರಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಶುಕ್ರವಾರ ಆಚರಣೆ ಮಾಡದಿರುವುದೇ ಸೂಕ್ತ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಲಹೆ ನೀಡಿದೆ. ಹೀಗಾಗಿ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಜಾತ್ರೆ ನಡೆಯುವುದೇ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ. ನಾಡಿನ ಅಧಿದೇವತೆ ಚಾಮುಂಡಿ ದೇವಾಲಯದಲ್ಲಿ ಆಷಾಢ ಮಾಸಾಚರಣೆ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಈ ಬಾರಿ…
ಕೊರೊನಾ ಹಾವಳಿ: ಕಲ್ಯಾಣ ಮಂಟಪಗಳ ತೆರಿಗೆ ರದ್ದಿಗೆ ಶಾಸಕ ಸಾರಾ ಮಹೇಶ್ ಆಗ್ರಹ
June 16, 2020ಮೈಸೂರು, ಜೂ. 15- ಕೊರೊನಾ ಲಾಕ್‍ಡೌನ್ ಸಂದರ್ಭ ದಲ್ಲಿ ಕಲ್ಯಾಣ ಮಂಟಪಗಳು ತೀವ್ರ ನಷ್ಟಕ್ಕೊಳ ಗಾಗಿದ್ದು, ಅವುಗಳ ತೆರಿಗೆ ಯನ್ನು ರದ್ದುಪಡಿಸ ಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿ ಸಿದರು. ಮೈಸೂರಿನ ರಮಾವಿಲಾಸ ರಸ್ತೆಯಲ್ಲಿ ರುವ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದ ಕಾರಣ ಕಲ್ಯಾಣ ಮಂಟಪಗಳು ತೀವ್ರ ನಷ್ಟ ಅನುಭವಿಸಿವೆ ಎಂದರು. ಕಲ್ಯಾಣ ಮಂಟಪಗಳಿಗೆ ಆದಾಯವೇ ಇಲ್ಲದೇ ಇರುವಾಗ ತೆರಿಗೆ ಪಾವತಿಸುವುದು…
ಮಗನ ಅಗಲಿಕೆಯ ಆಘಾತದಿಂದ ತಂದೆ ಸಾವು!
June 16, 2020ಸೋ.ಪೇಟೆ ಬಳಿ ಹಾನಗಲ್ಲುಶೆಟ್ಟಳ್ಳಿಯಲ್ಲಿ ಮನಕಲಕುವ ಘಟನೆ ಸೋಮವಾರಪೇಟೆ, ಜೂ.15- ಇಂದಿನ ಜಾಗತಿಕ ಕಾಲಘಟ್ಟದಲ್ಲಿ ಸ್ವಾರ್ಥವೇ ಮೈದುಂಬಿ ಸಂಬಂಧವಂತೂ ಆಸ್ತಿ ವಿಚಾರಗಳಲ್ಲಿ ಬಹುತೇಕ ಮೈಮನಸ್ಸು ಉಂಟಾಗಿ ಪೋಷಕರನ್ನು ಆಶ್ರಮಗಳಿಗೆ ದೂಡುವವರೇ ಹೆಚ್ಚು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಗನ ಅಗಲಿಕೆ ತಡೆಯಲಾಗದ ತಂದೆ, ಮಗನ ಅಂತ್ಯಕ್ರಿಯೆ ನೆರವೇರಿಸಿ ನಂತರ ಆಘಾತದಿಂದ ತಾವೂ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ನಡೆದಿದೆ. ಗ್ರಾಮದ ಶಿವಪ್ಪ(72) ಹಗೂ ಅವರ ಪುತ್ರ ರಮೇಶ್(38) ಸಾವನ್ನಪ್ಪಿದವರು. ರಮೇಸ್ ಆರೋಗ್ಯ ಸಮಸ್ಯೆಯಿಂದ ಭಾನುವಾರ ಮೃತಪಟ್ಟಿದ್ದರು….
ಹಾಡಿಗಳಿಗೆ ಅಂಡರ್‍ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಸೆಸ್ಕ್‍ನಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
June 16, 2020ಮೈಸೂರು, ಜೂ.15(ಎಂಕೆ)- ಮೈಸೂರು ಜಿಲ್ಲೆ ಯಲ್ಲಿ ಬುಡಕಟ್ಟು ಜನರು ವಾಸಿಸುವ ಹಾಡಿಗಳಿಗೆ ಯುಜಿ(ಅಂಡರ್ ಗ್ರೌಂಡ್) ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಅನುಮತಿ ಕೋರಿ ಕೇಂದ್ರ ಸರ್ಕಾ ರಕ್ಕೆ ಮತ್ತೆ ಮನವಿ ಸಲ್ಲಿಸಲು ಸೆಸ್ಕ್ ನಿರ್ಧರಿಸಿದೆ. ಹಾಡಿ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಡಿಡಿಜಿ(ವಿಕೇಂದ್ರೀಕೃತ ವಿತರಣಾ ಉತ್ಪಾದನೆ) ಯೋಜನೆಯಡಿ ಕಳೆದ 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೇಂದ್ರ ಸರ್ಕಾ ರದ ಅರಣ್ಯ ಸಚಿವಾಲಯದ ಅನುಮತಿ ದೊರೆ ಯದೆ ಯೋಜನೆ ನೆನೆಗುದಿಗೆ ಬಿದ್ದಿದೆ. ಹಾಡಿಗಳಲ್ಲಿಯೇ ಸೋಲಾರ್…
ಡಿಕೆಶಿ ವಿರುದ್ಧದ ರೇಣುಕಾಚಾರ್ಯ ಹೇಳಿಕೆಗೆ ಖಂಡನೆ
June 16, 2020ಮೈಸೂರು, ಜೂ.15- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಮಾಜಿ ಸಚಿವ ರೇಣುಕಾ ಚಾರ್ಯ ಲಘುವಾಗಿ ಮಾತನಾಡಿರುವುದನ್ನು ಕೆಪಿಸಿಸಿ ಸದಸ್ಯರೂ ಆದ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಜಿ.ಶ್ರೀನಾಥ್ ಬಾಬು ಖಂಡಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಡಿಕೆಶಿ ಅವರ ಬಗ್ಗೆ ಹಗುರವಾಗಿ ಮಾತನಾಡಿ, ರಾಜಕೀಯ ವಿಡಂಬಣೆ ಮಾಡಿರುವ ರೇಣುಕಾಚಾರ್ಯ, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳ ಬೇಕು. ವಿದ್ಯಾರ್ಥಿ ಸಂಘಟನೆಯಿಂದ ಗುರುತಿಸಿಕೊಂಡು ಗ್ರಾಪಂ, ಜಿಪಂ ಚುನಾವಣೆ ಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಅವರು, ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬಲ…
ದಿಗ್ವಿಜಯ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲು
June 16, 2020ಮಧ್ಯಪ್ರದೇಶ,ಜೂ.15-ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರಿಗೆ ಸಂಬಂಧಿಸಿದಂತೆ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಭೂಪಾಲ್ ಅಪರಾಧ ವಿಭಾಗದ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ವಿರುದ್ಧ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರ ವರ್ಚಸ್ಸು ಕುಗ್ಗಿಸಲು ದಿಗ್ವಿಜಯ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು….
ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಮೂಲಕ ರೈತರ ಬೆನ್ನೆಲುಬು ಮುರಿಯಲು ಮುಂದಾದ ಸರ್ಕಾರ
June 16, 2020ಮೈಸೂರು, ಜೂ.15(ಎಂಟಿವೈ)- ರಾಜ್ಯ ಬಿಜೆಪಿ ಸರ್ಕಾರ ಸುಗ್ರ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ರೈತರ ಬೆನ್ನೆಲುಬು ಮುರಿಯಲು ಮುಂದಾಗಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಸಭಾಂಗಣ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರು, ರೈತರು ಹಾಗೂ ಶ್ರಮಿಕ ವರ್ಗದ ಹಿತಾಸಕ್ತಿ ಬಲಿ ಕೊಟ್ಟಿದೆ. ಕೇವಲ ಕಾರ್ಪೋರೇಟ್ ಕಂಪನಿ ಹಾಗೂ ಉಳ್ಳ ವರ ಹಿತಕಾಯುವ ಯೋಜನೆಗಳಷ್ಟೇ ಜಾರಿಗೆ ತಂದು ಬಂಡವಾಳ ಶಾಹಿಗಳು…
ಪರಿಷತ್ ಚುನಾವಣೆಯಲ್ಲಿ ಕೋಟೆ ಶಿವಣ್ಣರಿಗೆ ಅವಕಾಶ ಕಲ್ಪಿಸಲು ಮನವಿ
June 16, 2020ಮೈಸೂರು, ಜೂ.15- ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷರಾಗಿ ಮೂರೂವರೆ ವರ್ಷಗಳ ಕಾಲ ಸಮರ್ಥವಾಗಿ ಪಕ್ಷದ ಸಂಘಟನೆಯನ್ನು ಮಾಡಿರುವ ಶಿವಣ್ಣ, ಮೈಸೂರು ಮಾತ್ರವಲ್ಲದೆ ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲೂ ಚಿರಪರಿಚಿತ ರಾಗಿರುವ ಸಜ್ಜನ ವ್ಯಕ್ತಿಯಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸ ಲಾಗಿದೆ. ಕಳೆದ 40 ವರ್ಷಗಳಿಂದ ಜನಸೇವೆಯಲ್ಲಿ ತೊಡಗಿರುವ…










