ಮೈಸೂರು

ಮೈಸೂರು-ಹುಣಸೂರು ತಾಲೂಕು ಸಂಪರ್ಕ ರಸ್ತೆ ಶೀಘ್ರ ಅಭಿವೃದ್ಧಿ: ಶಾಸಕ ಜಿ.ಟಿ.ದೇವೇಗೌಡ
ಮೈಸೂರು

ಮೈಸೂರು-ಹುಣಸೂರು ತಾಲೂಕು ಸಂಪರ್ಕ ರಸ್ತೆ ಶೀಘ್ರ ಅಭಿವೃದ್ಧಿ: ಶಾಸಕ ಜಿ.ಟಿ.ದೇವೇಗೌಡ

June 16, 2020

ಮೈಸೂರು, ಜೂ.15(ಆರ್‍ಕೆಬಿ)-ಮೈಸೂರು ಮತ್ತು ಹುಣಸೂರು ತಾಲೂಕನ್ನು ಸಂಪರ್ಕಿಸುವ ಕಂತೆಗೌಡನಕೊಪ್ಪಲು, ಹುಸೇನ್‍ಪುರ, ತೆಂಕಲ ಕೊಪ್ಪಲು, ಕೊಮೆಗೌಡನಕೊಪ್ಪಲು, ದಡದಕಲ್ಲಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗಾಮಸ್ಥರಿಗೆ ಇಂದಿಲ್ಲಿ ಭರವಸೆ ನೀಡಿದರು. ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಅಲ್ಲಿನ ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಉಪಮುಖ್ಯಮಂತ್ರಿ ಗಳೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಗಮನ ಸೆಳೆಯಲಾಗಿತ್ತು. ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ನಿರ್ಮಿಸಿದ್ದ ಸೇತುವೆ…

ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಕೊರಚ, ಕೊರಮ, ಲಂಬಾಣಿ ಕೈಬಿಡಲಾಗಿದೆ ಅಪಪ್ರಚಾರ: ಕಾನೂನು ಕ್ರಮಕ್ಕೆ ಒತ್ತಾಯ
ಮೈಸೂರು

ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಕೊರಚ, ಕೊರಮ, ಲಂಬಾಣಿ ಕೈಬಿಡಲಾಗಿದೆ ಅಪಪ್ರಚಾರ: ಕಾನೂನು ಕ್ರಮಕ್ಕೆ ಒತ್ತಾಯ

June 16, 2020

ಮೈಸೂರು,ಜೂ.15-ರಾಜ್ಯದಲ್ಲಿ ಭೋವಿ, ಕೊರಚ, ಕೊರಮ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅಸಂವಿಧಾನಿಕ ಅರ್ಜಿ ತಿರ ಸ್ಕರಿಸಲು ಆಗ್ರಹಿಸಿ ಶ್ರೀ ಶ್ರೀ ಶಿವಯೋಗಿ ಸಿದ್ಧರಾಮೇ ಶ್ವರ ಭೋವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ನಾಗ ರಾಜು ಜಿಲ್ಲಾ ವ್ಯಾಪ್ತಿ ಪತ್ರ ಚಳವಳಿಗೆ ಚಾಲನೆ ನೀಡಿದರು. ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನಿಕ ಮೀಸಲಾತಿಯ ಹಕ್ಕನ್ನು ಭೋವಿ, ಕೊರಚ, ಕೊರಮ, ಲಂಬಾಣಿ ಜಾತಿಗೆ ನೀಡಿದೆ. ಇದನ್ನು…

ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

June 16, 2020

ಮೈಸೂರು, ಜೂ. 15-ಖ್ಯಾತ ಚಿತ್ರನಟಿ, ರಾಜ್ಯ ಬಿಜೆಪಿ ವಕ್ತಾರರಾದ ಶ್ರೀಮತಿ ಮಾಳವಿಕ ಅವಿನಾಶ್ ಅವರ ನೇತೃತ್ವದಲ್ಲಿ ಭಾನುವಾರ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬ್ರಾಹ್ಮಣರ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಯಿತು. ಬೃಂದಾವನ ಬಡಾವಣೆಯ ಗಾಯತ್ರಿ ವಿಪ್ರ ವೃಂದದ ಆಶ್ರಯದಲ್ಲಿ ನಡೆದ ಸಮಾ ರಂಭದಲ್ಲಿ ಸುಮಾರು 150ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಹಲವು ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಅನ್ನು ವಿತರಿಸಿ ಮಾತ ನಾಡಿ, ಕೋವಿಡ್ ಟಾಸ್ಕ್‍ಫೋರ್ಸ್‍ನ ಮುಖ್ಯಸ್ಥರೂ ಆದ ಮಾಳವಿಕ…

ಭೋವಿ, ಕೊರಮ, ಬಂಜಾರ, ಲಂಬಾಣಿ ಜನಾಂಗಗಳಿಗೆ ಜಾತಿ ಪ್ರಮಾಣಪತ್ರ ನೀಡದೆ ಕಿರುಕುಳ
ಮೈಸೂರು

ಭೋವಿ, ಕೊರಮ, ಬಂಜಾರ, ಲಂಬಾಣಿ ಜನಾಂಗಗಳಿಗೆ ಜಾತಿ ಪ್ರಮಾಣಪತ್ರ ನೀಡದೆ ಕಿರುಕುಳ

June 16, 2020

ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಆರೋಪ ಮೈಸೂರು, ಜೂ.15(ಆರ್‍ಕೆಬಿ)- ಮೈಸೂರು ತಾಲೂಕು ಕಚೇರಿಯಲ್ಲಿ ಭೋವಿ, ಕೊರಮ, ಬಂಜಾರ, ಲಂಬಾಣಿ ಜನಾಂಗಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡದೆ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಜನರಲ್ ಕ್ಯಾಟಗರಿಗೆ ಸೇರಿದ್ದೀರಿ. ಹೀಗಾಗಿ…

ಕೊರೊನಾ ಸೋಂಕು ನಿಯಂತ್ರಣದಲ್ಲಿ ಬಿಎಸ್‍ವೈ ಸರ್ಕಾರದಿಂದ ದಿಟ್ಟ ಕ್ರಮ
ಮೈಸೂರು

ಕೊರೊನಾ ಸೋಂಕು ನಿಯಂತ್ರಣದಲ್ಲಿ ಬಿಎಸ್‍ವೈ ಸರ್ಕಾರದಿಂದ ದಿಟ್ಟ ಕ್ರಮ

June 15, 2020

ಬೆಂಗಳೂರು, ಜೂ.14- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಗೆ ಕೇಂದ್ರದಲ್ಲಿ ಮೊದಲನೇ ವರ್ಷ ಪೂರೈಸಿದೆ. ಇದರ ಭಾಗವಾಗಿ ಭಾನುವಾರ ನವದೆಹಲಿಯಿಂದ ಫೇಸ್‍ಬುಕ್ ಲೈವ್ ಮೂಲಕ ರಾಜ್ಯ ಬಿಜೆಪಿಯ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಷಣ ಮಾಡಿದರು. ಕೋವಿಡ್-19 ವೈರಸ್ ನಿಯಂ ತ್ರಣದಲ್ಲಿ ಕರ್ನಾಟಕ ಸರ್ಕಾರದ ಸಾಧನೆ ಶ್ಲಾಘನೀಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿ ಯಾಗಿದೆ ಎಂದು…

ಕೊರೊನಾ ಪ್ರಕರಣ ಹೆಚ್ಚುತ್ತಿದ್ದರೂ ವೈರಸ್ ಶಕ್ತಿ ಕುಗ್ಗಿದೆ: ನಾರಾಯಣಗೌಡ
ಮೈಸೂರು

ಕೊರೊನಾ ಪ್ರಕರಣ ಹೆಚ್ಚುತ್ತಿದ್ದರೂ ವೈರಸ್ ಶಕ್ತಿ ಕುಗ್ಗಿದೆ: ನಾರಾಯಣಗೌಡ

June 15, 2020

ಮೈಸೂರು, ಜೂ.14(ಎಂಟಿವೈ)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದೆ ಯಾದರೂ ವೈರಸ್ ಶಕ್ತಿ ಕುಗ್ಗಿರುವ ಕಾರಣ ಮತ್ತೊಮ್ಮೆ ಲಾಕ್‍ಡೌನ್ ಮಾಡುವುದಿಲ್ಲ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಮೈಸೂರಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಹಜ ವಾಗಿ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಇದರ ನಡುವೆ ಮತ್ತೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡಲಾಗು ತ್ತದೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ವಾಸ್ತವ ವಾಗಿ ಮತ್ತೆ ಲಾಕ್‍ಡೌನ್ ಮಾಡುವ ಅನಿವಾರ್ಯತೆ ಇಲ್ಲ…

ವಿಶ್ವನಾಥ್‍ಗೆ ಎಂಎಲ್‍ಸಿ ಟಿಕೆಟ್ ಖಚಿತ
ಮೈಸೂರು

ವಿಶ್ವನಾಥ್‍ಗೆ ಎಂಎಲ್‍ಸಿ ಟಿಕೆಟ್ ಖಚಿತ

June 15, 2020

ಬಿಜೆಪಿ ಅಧಿಕಾರಕ್ಕೆ ಬರಲು ಹಲವು ನಾಯಕರಲ್ಲಿ ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಅವರೂ ಕಾರಣರಾಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಖಚಿತ ಎಂದು ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಂಎಲ್‍ಸಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ನಿಲುವು ತಾಳುತ್ತದೆ. ಮಾಜಿ ಸಂಸದ ಎ.ಹೆಚ್.ವಿಶ್ವನಾಥ್ ಅವರಿಗೆ ಎಂಎಲ್‍ಸಿ ಟಿಕೆಟ್ ಸಿಕ್ಕೇ ಸಿಗುತ್ತದೆ. ಅವರಿಗೆ ಟಿಕೆಟ್ ಸಿಗಬೇಕೆಂ ಬುದೇ ನಮ್ಮ ಭಾವನೆಯೂ ಆಗಿದೆ. ಹೈಕಮಾಂಡ್ ಕೂಡ ಅದನ್ನೇ ನಿರ್ಧಾರ ಮಾಡಲಿದೆ ಎಂದರು….

ರಾಜ್ಯದಲ್ಲಿ 7 ಸಾವಿರ ತಲುಪಿದ ಕೊರೊನಾ ಐವರ ಸಾವು, ಸಾವಿನ ಸಂಖ್ಯೆ 86ಕ್ಕೆ ಏರಿಕೆ
ಮೈಸೂರು

ರಾಜ್ಯದಲ್ಲಿ 7 ಸಾವಿರ ತಲುಪಿದ ಕೊರೊನಾ ಐವರ ಸಾವು, ಸಾವಿನ ಸಂಖ್ಯೆ 86ಕ್ಕೆ ಏರಿಕೆ

June 15, 2020

ಬೆಂಗಳೂರು, ಜೂ. 14- ರಾಜ್ಯ ದಲ್ಲಿ ಕೊರೊನಾ ಸೋಂಕು ಪ್ರಕರಣ 7 ಸಾವಿರಕ್ಕೆ ತಲುಪಿದೆ. ಭಾನುವಾರ 176 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಹೊರ ರಾಜ್ಯ ದಿಂದ ಬಂದವರು 88 ಮಂದಿಯಾದರೆ, 6 ಮಂದಿ ವಿದೇಶದಿಂದ ಬಂದವರು. ಬೆಂಗಳೂರಿನ 55 ವರ್ಷದ ವ್ಯಕ್ತಿ, 57 ಮತ್ತು 60 ವರ್ಷದ ಮಹಿಳೆಯರು, ದಕ್ಷಿಣ ಕನ್ನಡದಲ್ಲಿ 24 ವರ್ಷದ ಯುವಕ ಮತ್ತು ಬೀದರ್‍ನಲ್ಲಿ 76 ವರ್ಷದ ವೃದ್ಧ ಸೇರಿ ಇಂದು ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 88ಕ್ಕೇರಿದೆ. ರಾಜ್ಯದಲ್ಲಿ…

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಮೈಸೂರು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

June 15, 2020

ಮುಂಬೈ, ಜೂ.14- ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜ ಪೂತ್ ಬಾಂದ್ರಾದಲ್ಲಿನ ತಮ್ಮ ನಿವಾಸ ದಲ್ಲಿ ಭಾನುವಾರ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 34 ವರ್ಷದ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಿಯಾನ್ ಆತ್ಮಹತ್ಯೆಗೆ ಮರುಕ ವ್ಯಕ್ತಪಡಿಸಿ ಸುಶಾಂತ್ ಸಿಂಗ್ ಟ್ವೀಟ್ ಮಾಡಿದ್ದರು. 1986 ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಸುಶಾಂತ್ ಸಿಂಗ್, ಪವಿತ್ರ ರಿಶ್ತಾ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ…

ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲವೇ ಇಲ್ಲ
ಮೈಸೂರು

ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲವೇ ಇಲ್ಲ

June 15, 2020

ಕಲಬುರಗಿ, ಜೂ.14- ಕರ್ನಾಟಕ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಕಲ ಬುರಗಿ ನಗರದ ದ ಜಿಮ್ಸ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದರು. ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಲ್ಲ. ಎಲ್ಲಾ ವ್ಯವಸ್ಥೆಗಳನ್ನು ಮಾರ್ಗಸೂಚಿಗಳ ಪ್ರಕಾರ…

1 529 530 531 532 533 1,611
Translate »