ಮೈಸೂರು,ಜೂ.14(ಪಿಎಂ)- ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ 3ರ ರೈಲ್ವೆ ಬಡಾವಣೆಯ ಮುಖ್ಯ ರಸ್ತೆಯ 3, 4, 5 ಹಾಗೂ 6ನೇ ಅಡ್ಡರಸ್ತೆಗಳಿಗೆ ಮರು ಡಾಂಬರೀಕರಣ ಹಾಗೂ ಅಗತ್ಯ ವಿರುವೆಡೆ ಚರಂಡಿ ಮತ್ತು ಡೆಕ್‍ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಭಾನುವಾರ ಚಾಲನೆ ನೀಡಿದರು. ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಶಾಸಕರ ವಿವೇಚನಾ ವಿಶೇಷ ಅನುದಾನದ 25 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗೆ ವಾರ್ಡಿನ ಪಾಲಿಕೆ ಸದಸ್ಯ…
ಜಗತ್ತಿನಾದ್ಯಂತ ಕೊರೊನಾ ನರ್ತನ: 79 ಲಕ್ಷ ದಾಟಿದ ಸೋಂಕು, 4.33 ಲಕ್ಷ ಬಲಿ!
June 15, 2020ನವದೆಹಲಿ,ಜೂ.14-ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತನ್ನ ನರ್ತನ ವನ್ನು ಮುಂದುವರೆಸಿದ್ದು ಸೋಂಕಿತರ ಸಂಖ್ಯೆ 79 ಲಕ್ಷ ದಾಟಿದ್ದು 4.33 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವಿಶ್ವದಲ್ಲಿ ಸೋಂಕಿನ ಸಂಖ್ಯೆ 79,11, 909ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕಿಗೆ 4,33,158 ಮಂದಿ ಬಲಿ ಯಾಗಿದ್ದಾರೆ. ಇನ್ನು ಸಾವಿನ ಪ್ರಮಾಣ ಮುಂದುವರೆಯಲಿದೆ. ಅಮೆರಿಕದಲ್ಲಿ 21.43 ಲಕ್ಷ ಮಂದಿ ಸೋಂಕಿಗೆ ತುತ್ತಾಗಿ ದ್ದಾರೆ. 1.17 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬ್ರೆಜಿಲ್‍ನಲ್ಲಿ 8.51 ಲಕ್ಷ ಸೋಂಕು, 42 ಸಾವಿರ ಬಲಿ. ರಷ್ಯಾ 5.29…
ಕೊರೊನಾ ವಾರಿಯರ್ಸ್‍ಗೆ ಕಚೇರಿಯಲ್ಲೇ ಸಂಘ-ಸಂಸ್ಥೆಗಳಿಂದ ಸನ್ಮಾನ
June 15, 2020ಮೈಸೂರು, ಜೂ.14(ಎಂಟಿವೈ)- ಮೈಸೂರಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಘಟಿತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನಗರದ ಹಲವು ಸಂಸ್ಥೆಗಳು ಸನ್ಮಾನಿಸಿದವು. ಮೈಸೂರಿನ ಸಾಯಿ ಫೌಂಡೇಷನ್, ಕೀರ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ, ವಿಶ್ವಮಾತಾ ಸೇವಾ ಸಂಸ್ಥೆ ಹಾಗೂ ರೋಶಿಣಿ ಫೌಂಡೇಷನ್ ಪದಾಧಿಕಾರಿಗಳು ಕೊರೊನಾ ವಾರಿಯರ್ಸ್ ತಂಡದ ಅಧಿಕಾರಿಗಳಿದ್ದ ಕಚೇರಿಗೇ ತೆರಳಿ ಆತ್ಮೀಯವಾಗಿ ಸನ್ಮಾನಿಸಿದರು. ನಗರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಸನ್ಮಾನಿತರು: ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಪಂ ಸಿಇಓ…
ಭಾರತದಲ್ಲಿ ಒಂದೇ ದಿನ 11,929 ಮಂದಿಯಲ್ಲಿ ಕೊರೊನಾ ಪತ್ತೆ, 3.20 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 9,195 ಮಂದಿ ಬಲಿ
June 15, 2020ನವದೆಹಲಿ, ಜೂ.14- ಭಾರತದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ ದಾಖಲೆಯ 11,929 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ 3.20 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಮಾಹಿತಿ ನೀಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 311 ಮಂದಿ ಬಲಿಯಾಗಿದ್ದು, ಮಹಾಮಾರಿ ವೈರಸ್‍ಗೆ ಬಲಿಯಾದವರ ಸಂಖ್ಯೆ 9,195ಕ್ಕೆ ತಲುಪಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11,929 ಮಂದಿಯಲ್ಲಿ ಸೋಂಕು…
ಕುಂಬಾರಕೊಪ್ಪಲು ವ್ಯಕ್ತಿ ಮಹಡಿಯಿಂದ ಬಿದ್ದು ಸಾವು
June 15, 2020ಮೈಸೂರು, ಜೂ.14(ಎಸ್‍ಬಿಡಿ)- ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ವ್ಯಕ್ತಿ ಯೊಬ್ಬರು ಶನಿವಾರ ರಾತ್ರಿ ಆಯತಪ್ಪಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ, ಮಲೆಯೂರು ಗ್ರಾಮದ ಗುರುಸ್ವಾಮಿ(35) ಮೃತರು. ಮೈಸೂರಿನಲ್ಲಿ ಎಂ-ಸ್ಯಾಂಡ್, ಜಲ್ಲಿ, ಇಟ್ಟಿಗೆ ಇನ್ನಿತರೆ ಕಟ್ಟಡ ಸಾಮಗ್ರಿಗಳ ಪೂರೈಕೆದಾರರಾಗಿದ್ದ ಗುರುಸ್ವಾಮಿ, ಕುಂಬಾರಕೊಪ್ಪಲಿನಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದರು. ಕಟ್ಟಡದ 2ನೇ ಮಹಡಿಯಲ್ಲಿ ರೂಂ ಇದ್ದು, ಶನಿವಾರ ಸಂಜೆ 7.30ರಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ನೆರೆಹೊರೆಯವರು ಅವರನ್ನು ಆದಿತ್ಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ…
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಸರ್ಕಾರಕ್ಕೆ ಪತ್ರ: ಹೊರಟ್ಟಿ
June 15, 2020ಬೆಂಗಳೂರು, ಜೂ.14- ರೈತ ನಾಯಕನೆಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ರೈತರ ಬಾಯಿಗೆ ಮಣ್ಣು ಹಾಕಲು ಹೊರಟಿದ್ದೀರಿ ಎಂದು ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಯವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ. ಕರ್ನಾಟಕ ಹೈಕೋರ್ಟ್ ಆದೇಶದ ನೆಪವೊಡ್ಡಿ ಭೂಕಂದಾಯ ನಿಯಮಾವಳಿಗೆ ತಿದ್ದುಪಡಿ ತಂದಿರುವುದು ದೊಡ್ಡ ಆಘಾತ ತಂದಿದೆ. ಬೇರೆ ಯಾವುದೇ ರಾಜ್ಯದಲ್ಲಿಯೂ ಇಲ್ಲದ ಕಾನೂನು ನಮ್ಮ ರಾಜ್ಯದಲ್ಲಿ ತಂದು ಕೃಷಿಕರ ಭೂಮಿ ಕಬಳಿಸುವ ಹುನ್ನಾರ ಅಡಗಿದೆ. ಕಪ್ಪು ಹಣವುಳ್ಳವರಿಗೆ, ರಿಯಲ್ ಎಸ್ಟೇಟ್ ಮಾಡುವವ ರಿಗೆ…
ಮೈಸೂರು ಸರ್ಕಾರಿ ಅತಿಥಿ ಗೃಹದ ಆರ್ಚ್ ಬಳಿಯ ಎರಡು ಪಾರಂಪರಿಕ ಕಂಬಗಳ ಸುರಕ್ಷಿತ ಸ್ಥಳಾಂತರ
June 14, 2020ಮೈಸೂರು, ಜೂ.13(ಎಸ್‍ಬಿಡಿ)- ಮೈಸೂರಿನ ಸರ್ಕಾರಿ ಅತಿಥಿ ಗೃಹದ ಉತ್ತರ ಭಾಗದ ಸ್ವಾಗತ ಕಮಾನು ಬಳಿಯಿದ್ದ ಎರಡು ಪಾರಂಪರಿಕ ಕಂಬಗಳನ್ನು ಶನಿವಾರ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಮೈಸೂರು-ಬೆಂಗಳೂರು ರಸ್ತೆ ಭಾಗದ ಸರ್ಕಾರಿ ಅತಿಥಿ ಗೃಹದ ಪಾರಂಪರಿಕ ಆರ್ಚ್ ಮುಂಭಾಗ ವಿದ್ದ 2 ಪಾರಂಪರಿಕ ಕಂಬಗಳನ್ನು ಸ್ವಲ್ಪವೂ ಹಾನಿ ಯಾಗದಂತೆ ಅತ್ಯಂತ ಸುರಕ್ಷಿತವಾಗಿ ಸ್ಥಳಾಂತರಿಸ ಲಾಯಿತು. 2 ಕ್ರೇನ್, ಜೆಸಿಬಿ ಮೂಲಕ 20ಕ್ಕೂ ಹೆಚ್ಚು ಮಂದಿ ಈ ಸೂಕ್ಷ್ಮ ಕಾರ್ಯವನ್ನು ಪೂರ್ಣಗೊಳಿಸು ವಲ್ಲಿ ಯಶಸ್ವಿಯಾದರು. ವಲಯ ಕಚೇರಿ 7ರ ಸಹಾ ಯಕ…
ರಾಜ್ಯಸಭೆಗೆ ಆಯ್ಕೆ: ದೇವೇಗೌಡರ ಅಭಿನಂದಿಸಿದ ಜೆಡಿಎಸ್ ಮುಖಂಡರು
June 14, 2020ಮೈಸೂರು, ಜೂ.13- ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿ ರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಜೆಡಿಎಸ್ ಮುಖಂ ಡರು ಅಭಿನಂದಿಸಿದ್ದಾರೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ), ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮುಖಂಡರಾದ ಸಯ್ಯದ್ ರಹಮತ್ ಉಲ್ಲಾ, ಹಾಶಿಂ ಅಲಿಖಾನ್(ನೂರಿ) ಹಾಗೂ ಶಬ್ಬೀರ್ ಅಹಮದ್ ಖಾನ್ ಅಭಿನಂದನೆ ಸಲ್ಲಿಸಿ ದ್ದಾರೆ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದು ಪ್ರತಿಯೊಬ್ಬರಲ್ಲೂ ಸಂತಸ ತಂದಿದೆ. ರಾಜ್ಯಸಭೆಯಲ್ಲಿ ರಾಜ್ಯದ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಸಮರ್ಥ ನಾಯರೊಬ್ಬರ ಅಗತ್ಯವಿತ್ತು…
ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ: ಸತತ 7ನೇ ದಿನ ಏರಿಕೆ
June 14, 2020ನವದೆಹಲಿ, ಜೂ.13- ಭಾರತೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತಷ್ಟು ಹೆಚ್ಚಳ ವಾಗಿದೆ. ಸತತ ಏಳನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಶನಿ ವಾರ (ಜೂನ್ 13) ಪೆಟ್ರೋಲ್ ಲೀಟರ್‍ಗೆ 59 ಪೈಸೆ ಏರಿಕೆ ಕಂಡಿದ್ದು, 75.16 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‍ಗೆ 58 ಪೈಸೆ ಹೆಚ್ಚಳವಾಗಿ 73.39 ರುಪಾಯಿ ದಾಖ ಲಾಗಿದೆ. ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾ ರಂಭಗೊಂಡಿತು….
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾ ಸೋಂಕು
June 14, 2020ನವದೆಹಲಿ: ಪಾಕಿಸ್ತಾನದ ಪ್ರಸಿದ್ಧ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅಫ್ರಿದಿ ಟ್ವೀಟ್ ಮಾಡುವ ಮೂಲಕ ಸ್ವತಃ ಈ ಮಾಹಿತಿ ನೀಡಿದ್ದಾರೆ. ಗುರುವಾರದಿಂದ ನಾನು ಆರೋಗ್ಯ ವಾಗಿಲ್ಲ, ನನ್ನ ದೇಹವು ತುಂಬಾ ನೋವಿನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ನಾನು ಕೆಲ ಆರೋಗ್ಯ ಪರೀಕ್ಷೆಯನ್ನು ಮಾಡಿ ಸಿದ್ದೇನೆ. ದುರದೃಷ್ಟವಶಾತ್ ನಾನು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಚೇತರಿಸಿ ಕೊಳ್ಳುವ ಭರವಸೆ ಇದೆ ಎಂದು ಅವರು ಟ್ವಿಟರ್‍ನಲ್ಲಿ ಬರೆದಿದ್ದಾರೆ. ಇಡೀ ವಿಶ್ವದಲ್ಲೇ ತಲ್ಲಣ…










