ಬೆಂಗಳೂರು, ಜೂ.13 (ಕೆಎಂಶಿ)-ಕೃಷಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯಗಳು ಆದಷ್ಟು ಕೃಷಿಕರಿಗೆ ಹತ್ತಿರವಾಗಿರಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ಕೊಟ್ಟಿದ್ದಾರೆ. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ಹೊಸ ಬೇಸಾಯ ಪದ್ಧತಿಗಳು ಕಾಲ, ಹವಾಮಾನ, ಭೂಮಿಗನುಗುಣವಾಗಿ ಬೇಸಾಯ, ತಾಂತ್ರಿಕ ಬಳಕೆಗಳ ಬಗ್ಗೆ ಹೆಚ್ಚೆಚ್ಚು ಪ್ರಚುರಪಡಿಸಬೇಕು. ರೈತರು ಅಪ್ಪ ಹಾಕಿದ ಆಲದಮರವೆಂಬ ಮನಸ್ಥಿತಿಯಿಂದ ಹೊರಬಂದು ಕೃಷಿಯಲ್ಲಿ ನವೀನತೆ ಸಾಧಿಸಲು ಮುಂದಾಗಬೇಕೆಂದು ಕರೆ ನೀಡಿದರು. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡದೇ…
ನೆನೆಗುದಿಗೆ ಬಿದ್ದ ಮುಡಾ ಗುಂಪು ಮನೆ ಯೋಜನೆ
June 14, 2020ಮೈಸೂರು, ಜೂ. 13- ಅತೀ ವೇಗ ವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಿವೇಶನ ಮತ್ತು ಮನೆಗಳಿಗೆ ಭಾರೀ ಬೇಡಿಕೆ ಇದೆ. ಪೆನ್ಷನರ್ಸ್ ಪ್ಯಾರಡೈಸ್ ಎಂದೇ ಕರೆ ಯುವ ಮೈಸೂರು ನಗರದಲ್ಲಿ ನೆಲೆಸಲು ಹೊರಗಿನಿಂದ ಬರುತ್ತಿರುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾ ಗುತ್ತಿರುವುದು ವಸತಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ. ಅದೇ ಉದ್ದೇಶಕ್ಕಾಗಿ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘ, ಡೆವಲಪರ್‍ಗಳು ನಿರ್ಮಿಸುವ ಬಡಾ ವಣೆಗಳು, ಅಪಾರ್ಟ್‍ಮೆಂಟ್‍ಗಳಲ್ಲಿ ನಿವೇ ಶನ ಮತ್ತು ಮನೆಗಳು ಬಿಕರಿಯಾಗುತ್ತಿರು ವುದನ್ನು ಕಾಣಬಹುದು….
ಆಯಿಷ್‍ಗೆ ಜಯಚಾಮರಾಜೇಂದ್ರ ಒಡೆಯರ್, ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರಿಡಿ
June 14, 2020ಮೈಸೂರು, ಜೂ.13(ವೈಡಿಎಸ್)- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಗೆ `ಜಯಚಾಮರಾಜೇಂದ್ರ ಒಡೆಯರ್’ ಹಾಗೂ ಮೈಸೂರು ಮಂಡ ಕಳ್ಳಿ ವಿಮಾನ ನಿಲ್ದಾಣಕ್ಕೆ ರಾಜರ್ಷಿ `ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಗೋಕುಲಂನಲ್ಲಿರುವ ಶ್ರೀ ಕೃಷ್ಣ ಗಾನಸಭಾದಲ್ಲಿ ಶನಿವಾರ ಆಯೋ ಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆ ಯರ್ ಅವರ 136ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು…
ಮುಕ್ತ ವಿವಿಯಲ್ಲಿ ಮಾತ್ರ ದೂರ ಶಿಕ್ಷಣ: ಸಂಸದ ಪ್ರತಾಪ್‍ಸಿಂಹ ಸ್ವಾಗತ
June 14, 2020ಮೈಸೂರು, ಜೂ.13-ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಮಾತ್ರವೇ ದೂರ ಶಿಕ್ಷಣ ನೀಡ ಬೇಕೆಂದು ರಾಜ್ಯ ಸರ್ಕಾರ ಕೈಗೊಂ ಡಿರುವ ತೀರ್ಮಾನವನ್ನು ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಯುಜಿಸಿ ಮಾನ್ಯತೆ ರದ್ದಾದ ಮೇಲೆ ತೊಂದರೆಗೀಡಾದ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಪ್ರಯತ್ನದಲ್ಲಿದ್ದೇವೆ ಎಂದಿದ್ದಾರೆ. ಪರಿಷತ್ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ತಾವು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೇಳುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು…
ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ: ಶಿಕ್ಷಕರಿಗೂ, ಪೋಷಕರಿಗೂ ಕಷ್ಟಕಷ್ಟ
June 14, 2020ಮೈಸೂರು, ಜೂ.13(ಎಸ್‍ಪಿಎನ್)- ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ ಗಳು ಆರಂಭವಾಗಿವೆ. ಆನ್‍ಲೈನ್ ಶಿಕ್ಷಣಕ್ಕೆ ದಿನಕ್ಕೆ ಕನಿಷ್ಟ 2ಜಿಬಿ ಡೇಟಾ ಅಗತ್ಯವಿದೆ. ಇದರ ವೆಚ್ಚ ಭರಿಸಲು ಕೆಲ ಪೋಷಕರಿಗೆ ಕಷ್ಟವಾಗುತ್ತಿದೆ ಎಂಬ ಮಾತುಗಳು ಪೋಷಕರು ಮತ್ತು ಶಿಕ್ಷಕರ ವಲಯ ದಿಂದ ಕೇಳಿ ಬರುತ್ತಿವೆ. ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಜೂóಮ್ ಆಪ್ ಬಳಸಿ ಆನ್‍ಲೈನ್ ಪಾಠ ಆರಂಭಿಸಲಾಗಿದೆ. ಒಮ್ಮೆ ನೆಟ್‍ವರ್ಕ್ ಪ್ರಾಬ್ಲಂ, ಮತ್ತೊಮ್ಮೆ ಶಿಕ್ಷಕರ ಪಾಠ ಮಕ್ಕಳಿಗೆ ಬೋರ್ ಹಿಡಿಸುತ್ತಿದೆ. ಈ…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘ ಪ್ರತಿಭಟನೆ
June 14, 2020ಮೈಸೂರು, ಜೂ. 13(ಪಿಎಂ)- ಕರ್ನಾ ಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದು ಪಡಿ ಮಾಡಿರುವುದನ್ನು ವಿರೋಧಿಸಿ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮೈಸೂರಿನ ನ್ಯಾಯಾಲಯಗಳ ಮುಂದಿನ ಗಾಂಧಿ ಪುತ್ಥಳಿ ಎದುರು ಶನಿ ವಾರ ಪ್ರತಿಭಟನೆ ನಡೆಸಿದವು. ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ತಿದ್ದುಪಡಿ ಕಾಯ್ದೆಯ ಕರಡು ಪ್ರತಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಈಗಿನ…
ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರರಿಂದ ಗುದ್ದಲಿ ಪೂಜೆ
June 14, 2020ಮೈಸೂರು, ಜೂ. 13(ಪಿಎಂ)-ಮೈಸೂರಿನ ಚಾಮ ರಾಜ ವಿಧಾನಸಭಾ ಕ್ಷೇತ್ರದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ 21 ಹಾಗೂ ವಾರ್ಡ್ 23ರ ವ್ಯಾಪ್ತಿಯಲ್ಲಿ ಒಟ್ಟು 1.55 ಕೋಟಿ ರೂ. ವೆಚ್ಚದ (1 ಕೋಟಿ 55 ಲಕ್ಷ ರೂ.) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಶಾಸಕರ ವಿವೇಚನಾ ವಿಶೇಷ ಅನುದಾನ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಕೈಗೆತ್ತಿಕೊಂಡಿ ರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ…
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಾಗೃತಿ ಅಭಿಯಾನ
June 14, 2020ಮೈಸೂರು, ಜೂ.13(ಎಂಟಿವೈ)- ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಬಾಲ್ಯ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ 2 ದಿನಗಳ ಅಭಿ ಯಾನಕ್ಕೆ ಮೈಸೂರು ನ್ಯಾಯಾಲಯದ ಸೀನಿಯರ್ ಸಿವಿಲ್ ಜಡ್ಜ್ ಸುನಿಲ್ ಶೆಟ್ಟರ್ ಶನಿವಾರ ಚಾಲನೆ ನೀಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಂಯುಕ್ತಾಶ್ರಯ ದಲ್ಲಿ ಕಾರ್ಯಕ್ರಮ ಸರಳವಾಗಿ ನಡೆಯಿತು. ಬಾಲಕಾರ್ಮಿಕ…
ಪರಿಷತ್‍ಗೆ ಕಲಾವಿದರ ಕೋಟಾದಡಿ ಅವಕಾಶಕ್ಕೆ ಬಿ.ಪಿ.ಮಂಜುನಾಥ್ ಮನವಿ
June 14, 2020ನಾಲ್ಕು ದಶಕದಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷನಿಷ್ಠೆ ಮೆರೆದ ದಾಖಲೆ ಮೈಸೂರು,ಜೂ.13(ಎಸ್‍ಬಿಡಿ)-ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ. ಮಂಜುನಾಥ್, ವಿಧಾನ ಪರಿಷತ್ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾಲ್ಕು ದಶಕಗಳಿಂದ ವಿವಿಧ ಹಂತಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿ ಸುತ್ತಿದ್ದು, ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಲು ಕಲಾವಿದರ ಕ್ಷೇತ್ರದಿಂದ ನನ್ನನ್ನು ಪರಿಗಣಿಸುವ ಮೂಲಕ ಮತ್ತಷ್ಟು ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಘಟನಾತ್ಮಕ ಹೋರಾಟ, ಜನಪರ…
ಮುಂಗಡ ಹಣ ಮರುಪಾವತಿ ವಿಚಾರ: ಸರ್ಕಾರದ ಲಿಖಿತ ಆದೇಶ ಹೊರಬಿದ್ದ ನಂತರ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ
June 14, 2020ಮೈಸೂರು, ಜೂ.13(ಆರ್‍ಕೆ)- ಮದುವೆ ಹಾಗೂ ಇನ್ನಿತರೆ ಶುಭ ಸಮಾರಂಭ ಗಳಿಗೆ ಈಗಾಗಲೇ ಪಾವತಿಯಾಗಿರುವ ಮುಂಗಡ ಹಣ ಮರು ಪಾವತಿ¸ುವ ಸಂಬಂಧ ಸರ್ಕಾರ ಲಿಖಿತ ಆದೇಶ ಹೊರಬಿದ್ದ ನಂತರ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆ ನಿರ್ಧರಿಸಲು ಕಲ್ಯಾಣ ಮಂಟಪ ಗಳ ಮಾಲೀಕರು ತೀರ್ಮಾನಿಸಿದ್ದಾರೆ. ಮೈಸೂರಿನ ವಿಶ್ವೇಶ್ವರನಗರದ ಸಿಂಧೂರ ಕಲ್ಯಾಣ ಮಂಟಪದಲ್ಲಿ ಇಂದು ಸಭೆ ನಡೆಸಿ, ಸರ್ಕಾರದ ಮೌಖಿಕ ಆದೇಶ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಮಾಲೀಕರು, ಮದುವೆ, ಇನ್ನಿತರೆ ಶುಭ ಸಮಾರಂಭಕ್ಕೆಂದು ಕಲ್ಯಾಣ ಮಂಟಪ ಬುಕ್ ಮಾಡಿ…










