ಮೈಸೂರು

7 ಮಂದಿ ಜಲ ಸಮಾಧಿ
ಮೈಸೂರು

7 ಮಂದಿ ಜಲ ಸಮಾಧಿ

June 15, 2020

ಮಂಡ್ಯ, ಜೂ.14(ನಾಗಯ್ಯ)- ಜಿಲ್ಲೆಯಲ್ಲಿ ಇಂದು ಕರಾಳ ಭಾನುವಾರವಾಗಿದ್ದು, ಪ್ರತ್ಯೇಕ ಮೂರು ಪ್ರಕರಣದಲ್ಲಿ ಐವರು ಮಹಿಳೆಯರು ಸೇರಿ ದಂತೆ ಒಟ್ಟು 7 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೀರನಹಳ್ಳಿಯಲ್ಲಿ ತಾಯಿ, ಇಬ್ಬರು ಮಕ್ಕಳು ನೀರು ಪಾಲು: ನಾಗಮಂಗಲ ತಾಲೂಕು ಬೋಗಾಧಿ ಗ್ರಾಪಂ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕಾಲು ಜಾರಿ ಬಿದ್ದು ಸಾವನ್ನಪ್ಪಿ ದ್ದಾರೆ. ಬೀರನಹಳ್ಳಿ ಗ್ರಾಮದ ನರ ಸಿಂಹಯ್ಯ ಎಂಬುವರ ಪತ್ನಿ ಗೀತಾ (40) ಹಾಗೂ…

50ಕ್ಕೂ ಹೆಚ್ಚು ಬಾರಿ ರಕ್ತದಾನ-ಸನ್ಮಾನ
ಮೈಸೂರು

50ಕ್ಕೂ ಹೆಚ್ಚು ಬಾರಿ ರಕ್ತದಾನ-ಸನ್ಮಾನ

June 15, 2020

ಮೈಸೂರು, ಜೂ.14(ಎಂಟಿವೈ)- `ವಿಶ್ವ ರಕ್ತದಾನಿಗಳ ದಿನಾಚರಣೆ’ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಜೀವಧಾರ ರಕ್ತ ನಿಧಿ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿದ ಹಲವು ದಾನಿಗಳನ್ನು ಡಿಟಿಎಸ್ ಫೌಂಡೇಶನ್ ವತಿಯಿಂದ ಸನ್ಮಾ ನಿಸಲಾಯಿತು. ರಕ್ತದಾನ ಮುಂದುವರಿಸಿ ರೋಗಿಗಳ ಪ್ರಾಣ ರಕ್ಷಣೆಗೆ ಸಹಕರಿಸು ವಂತೆ ಕೋರಲಾಯಿತು. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಭಾನು ವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 50ಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ರಕ್ತದಾನ ಮಾಡಿ `ವಿಶ್ವ ರಕ್ತದಾನಿಗಳ ದಿನ’ ವನ್ನು ಅರ್ಥಪೂರ್ಣವಾಗಿ ಆಚರಿಸಿದರು….

ಶಾಲಾ ಕಾಲೇಜು ಆರಂಭ, ಆನ್‍ಲೈನ್ ಶಿಕ್ಷಣ ಕುರಿತು ತಜ್ಞರ ಅಭಿಪ್ರಾಯ ಸೂಕ್ತ: ಮಂಜುಳಾ ನಾಯ್ಡು
ಮೈಸೂರು

ಶಾಲಾ ಕಾಲೇಜು ಆರಂಭ, ಆನ್‍ಲೈನ್ ಶಿಕ್ಷಣ ಕುರಿತು ತಜ್ಞರ ಅಭಿಪ್ರಾಯ ಸೂಕ್ತ: ಮಂಜುಳಾ ನಾಯ್ಡು

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಶಾಲಾ-ಕಾಲೇಜು ಆರಂಭ ಹಾಗೂ ಆನ್‍ಲೈನ್ ಶಿಕ್ಷಣ ಕುರಿತು ರಾಜ್ಯ ಸರ್ಕಾರ ಶಿಕ್ಷಣ ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಹೇಳಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮೈಸೂರು ಬಲಿಜ ವೇದಿಕೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಲಾಕ್‍ಡೌನ್ ನಿಯಮ ಸಡಿಲಿಕೆ ನಂತರ ಎಲ್ಲ ವಾಣಿಜ್ಯ ವಹಿ ವಾಟುಗಳು ಆರಂಭವಾಗಿದ್ದರೂ, ಕೊರೊನಾ ಬಗ್ಗೆ ಜನರಲ್ಲಿನ್ನೂ ಭಯವಿದೆ. ಇಂತಹ ವೇಳೆ ಶಾಲೆ ಪುನಾರಂಭ ಸರಿಯಲ್ಲ. ಈ ವಿಚಾರದಲ್ಲಿ ಸರ್ಕಾರ ದುಡುಕಿ…

35ನೇ ವಾರ್ಡ್‍ನಲ್ಲಿ ಒಳಚರಂಡಿ ಕಾಮಗಾರಿಗೆ ಸಾತ್ವಿಕ್‍ಸ್ವಾಮಿ ಚಾಲನೆ
ಮೈಸೂರು

35ನೇ ವಾರ್ಡ್‍ನಲ್ಲಿ ಒಳಚರಂಡಿ ಕಾಮಗಾರಿಗೆ ಸಾತ್ವಿಕ್‍ಸ್ವಾಮಿ ಚಾಲನೆ

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 35ನೇ ವಾರ್ಡ್‍ನಲ್ಲಿ 35 ಲಕ್ಷ ರೂ. ಅಂದಾಜಿನ ಒಳಚರಂಡಿ ಕಾಮಗಾರಿಗೆ ಪಾಲಿಕೆ ಸದಸ್ಯ ಸಾತ್ವಿಕ್ ಸ್ವಾಮಿ ಭಾನು ವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭ ಶಕ್ತಿನಗರ ಹಿತಕ್ಷಣಾ ಸಮಿತಿ ಅಧ್ಯಕ್ಷ ಮಹಾಬಲರಾಜ್, ಉಪಾ ಧ್ಯಕ್ಷ ಚಿಕ್ಕಕೆಂಪೇಗೌಡ, ಎನ್.ಆರ್.ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎನ್.ಆರ್.ನಾಗೇಶ್, ಕಾರ್ರ್ಯದರ್ಶಿ ದೊರೆ, ಮುಖಂಡರಾದ ರೇಣುಕಾ, ಮಂಜು ಸಿ.ಗೌಡ, ಪುಟ್ಟರಾಜು, ಕರುಣಾಕರ್, ಧನ ರಾಜ್, ಅಯ್ಯಪ್ಪ, ಮಹಾಂತಪ್ಪ, ಚಂದ್ರ ಶೇಖರ್, ಶಿವು, ರಘು ಉಪಸ್ಥಿತರಿದ್ದರು.

ಬಿಜೆಪಿ ಯುವ ಮೋರ್ಚಾ ನಗರ ಘಟಕ ಪದಾಧಿಕಾರಿಗಳ ನೇಮಕ
ಮೈಸೂರು

ಬಿಜೆಪಿ ಯುವ ಮೋರ್ಚಾ ನಗರ ಘಟಕ ಪದಾಧಿಕಾರಿಗಳ ನೇಮಕ

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಬಿಜೆಪಿ ಯುವ ಮೋರ್ಚಾ ಮೈಸೂರು ನಗರ (ಜಿಲ್ಲಾ) ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಮೋರ್ಚಾ ನಗರ ಘಟಕ ಅಧ್ಯಕ್ಷ ಎಂ.ಜೆ.ಕಿರಣ್‍ಗೌಡ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಕೆ.ಎಂ.ನಿಶಾಂತ್, ಕಾರ್ತಿಕ್‍ಕುಮಾರ್, ಎಲ್.ದೀಪಕ್ (ಉಪಾಧ್ಯಕ್ಷರು), ಎಸ್.ಭರತ್, ಸಂತೋಷ್‍ಕುಮಾರ್  (ಪ್ರಧಾನ ಕಾರ್ಯದರ್ಶಿ), ಎಸ್.ಮಧು, ಎಸ್.ಹರ್ಷಿತ್‍ಕುಮಾರ್, ಸಂದೀಪ್ (ಕಾರ್ಯದರ್ಶಿ), ಟಿ.ಎಸ್.ಅರುಣ್, ಜೆ.ಸಚಿನ್, ಆರ್.ನಾಗೇಶ್, ಅಭಿಷೇಕ್, ಪಿ.ಅಭಿಷೇಕ್, ಜೆ.ಆನಂದ್, ರಾಘವೇಂದ್ರ, ಚಂದನ್, ಕಿರಣ್, ಜಗದೀಶ್, ಎಂ.ರಾಘ ವೇಂದ್ರ, ಕೀರ್ತಿಕುಮಾರ್ (ಕಾರ್ಯಕಾರಿ ಸದಸ್ಯರು) ನೇಮಕಗೊಂಡಿದ್ದಾರೆ ಎಂದರು. ನಮ್ಮ…

ಫಾರ್ಮಾಸಿಸ್ಟ್ ಸಂಘದಿಂದ ಪರಿಸರ ದಿನ
ಮೈಸೂರು

ಫಾರ್ಮಾಸಿಸ್ಟ್ ಸಂಘದಿಂದ ಪರಿಸರ ದಿನ

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಕರ್ನಾಟಕ ನೋಂದಾಯಿತ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಘಟಕ ಮತ್ತು ರೋಟರ್ಯಾಕ್ಟ್ ಮೈಸೂರು ಪರಿಸರ ದಿನದ ಅಂಗವಾಗಿ ಮೈಸೂರಿನ ವಿಜಯನಗರ 3ನೇ ಹಂತದ ಎ ಬ್ಲಾಕ್ ಉದ್ಯಾನವನದಲ್ಲಿ ವಿವಿಧ ಜಾತಿಯ 25ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಹಿನಕಲ್ ಗ್ರಾಪಂ ಸದಸ್ಯ ವಿಜಯ ನಗರ ಮಂಜು ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಗುರಿ ಇದೆ. ಸಸಿಗಳ ರಕ್ಷಣೆಗಾಗಿ ರಘುಲಾಲ್ ಅಂಡ್ ಕಂಪನಿಯ ರಾಘವನ್ ಟ್ರೀಗಾರ್ಡ್‍ಗಳನ್ನು ನೀಡಿದ್ದಾರೆ ಎಂದರು. ಫಾರ್ಮಾಸಿಸ್ಟ್‍ಗಳ ಸಂಘದ…

ಹಗಲು ವೇಷಧಾರಿಗಳ ಬಣ್ಣದ ಬದುಕು ಕತ್ತಲಾಗಿಸಿದ ಲಾಕ್‍ಡೌನ್!
ಮೈಸೂರು

ಹಗಲು ವೇಷಧಾರಿಗಳ ಬಣ್ಣದ ಬದುಕು ಕತ್ತಲಾಗಿಸಿದ ಲಾಕ್‍ಡೌನ್!

June 15, 2020

ಮೈಸೂರು, ಜೂ.14- ಬೀದಿ ಬೀದಿಗಳಲ್ಲಿ ಅಂಗಡಿ, ಮನೆಗಳ ಮುಂದೆ ಹೋಗಿ ನಮ್ಮ ವೇಷ ಪ್ರದರ್ಶಿಸಿ, ಸಂಗೀತ ಹಾಡಿ ಅವರು ನೀಡುವ ಒಂದಷ್ಟು ಬಿಡಿಗಾಸಿ ನಲ್ಲಿ ಜೀವನ ನಿರ್ವಹಿಸುತ್ತಿದ್ದ ನಮಗೆ ಎರಡು ತಿಂಗಳ ಲಾಕ್‍ಡೌನ್ ಸಾಕಷ್ಟು ಸಂಕಷ್ಟಕ್ಕೆ ದೂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಈಗ ನಾವು ವೇಷ ತೊಟ್ಟು ಹೋದರೆ ಅನುಮಾನ ದೃಷ್ಟಿಯಿಂದ ಕಾಣುತ್ತಿದ್ದಾರೆ. ಹೀಗಾಗಿ ನಮಗೆ ಜೀವನ ನಿರ್ವಹಣೆ ಹೇಗೆಂಬುದೇ ತಿಳಿ ಯುತ್ತಿಲ್ಲ. ನಮ್ಮ ಕಷ್ಟ ಕೇಳುವವರ್ಯಾರು? ಹಗಲು ವೇಷ ತೊಟ್ಟು ಮನೆ, ಅಂಗಡಿ ಮುಂದೆ ಕಲಾಪ್ರೌಢಿಮೆ ಪ್ರದರ್ಶಿಸಿ,…

ಅಂಬಾರಿ ಕನ್ವೆನ್‍ಷನ್ ಹಾಲ್ ಶುಭಾರಂಭ
ಮೈಸೂರು

ಅಂಬಾರಿ ಕನ್ವೆನ್‍ಷನ್ ಹಾಲ್ ಶುಭಾರಂಭ

June 15, 2020

ಮೈಸೂರು,ಜೂ.14(ಪಿಎಂ)- `ಅಂಬಾರಿ’ ಮೈಸೂರಿನ ಸಾಂಸ್ಕೃತಿಕತೆ ಹಾಗೂ ಪರಂ ಪರೆಯ ವೈಭವದ ಸಂಕೇತ. ಇದೀಗ ಇದೇ ಹೆಸರಿನಲ್ಲಿ ಮೈಸೂರಿನಲ್ಲಿ ಶುಭ ಸಮಾ ರಂಭಗಳಿಗಾಗಿ ಸುಸಜ್ಜಿತ ಹಾಗೂ ಸುಂದರ ಸಭಾಂಗಣ ನಿರ್ಮಾಣಗೊಂಡಿದ್ದು, ಆ ಮೂಲಕ ಅರಮನೆಗಳ ನಗರಿ ಮೈಸೂ ರಿಗೆ ಮತ್ತೊಂದು ಹಿರಿಮೆ ಬಂದಂತಾಗಿದೆ. ಇಂತಹ ವೈಶಿಷ್ಟ್ಯ ಹೊಂದಿರುವ ಸಭಾಂ ಗಣವೇ `ಅಂಬಾರಿ ಕನ್ವೆನ್‍ಷನ್ ಹಾಲ್’. ವಿಶ್ವೇಶ್ವರನಗರದ ಸ್ಟರ್ಲಿಂಗ್ ಟಾಕೀಸ್ ರಸ್ತೆಯಲ್ಲಿ ಮಹರ್ಷಿ ಪಬ್ಲಿಕ್ ಸ್ಕೂಲ್ ಎದುರು ಅಂಬಾರಿ ಕನ್ವೆನ್‍ಷನ್ ಹಾಲ್ (ಎ/ಸಿ) ಪ್ರಸ್ತು ತಕ್ಕೆ ಅನುಗುಣವಾಗಿ ಎಲ್ಲಾ ಅತ್ಯಾಧುನಿಕ…

ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿಗೆ ಹಾಸನದ ಚಿತ್ರಗೌಡ ಆಯ್ಕೆ
ಮೈಸೂರು

ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿಗೆ ಹಾಸನದ ಚಿತ್ರಗೌಡ ಆಯ್ಕೆ

June 15, 2020

ಬೆಂಗಳೂರು, ಜೂ. 14- ಕೆನಡಾ ವಾಟರ್ ಶೃಂಗ ಸಭೆಯು ಕೊಡ ಮಾಡುವ ವಾಟರ್ ನೆಕ್ಸ್ಟ್ 2020 ವಾರ್ಷಿಕ ಪ್ರಶಸ್ತಿಗೆ ಕನ್ನಡತಿ ಚಿತ್ರ ಗೌಡ ಆಯ್ಕೆಯಾಗಿದ್ದಾರೆ. ನೀರಿನ ಕಾರ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಯೋಜನೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ ಸಾಧಕ ರನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಮೊಟ್ಟ ಮೊದಲ ಬಾರಿಗೆ ಕನ್ನಡಿಗರೊಬ್ಬರಿಗೆ ಸಂದಿ ರುವುದು ವಿಶೇಷವಾಗಿದೆ. ಚಿತ್ರ ಗೌಡ, ಹಾಸನ ಜಿಲ್ಲೆ ಚನ್ನ ರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದ (ಪುರುದೇಗೌಡರ ಮನೆ) ಡಾ.ಹಾಲಪ್ಪಗೌಡ ಮತ್ತು ರತ್ನಮ್ಮ…

ಚೆನ್ನೈ ಅಧೀನ ನ್ಯಾಯಾಲಯದ ಮೂವರು ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್
ಮೈಸೂರು

ಚೆನ್ನೈ ಅಧೀನ ನ್ಯಾಯಾಲಯದ ಮೂವರು ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್

June 15, 2020

ಚೆನ್ನೈ, ಜೂ. 14- ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ನ್ಯಾಯಾಧೀಶರಿಗೂ ಕಂಟಕವಾಗಿ ಕಾಡುತ್ತಿದೆ. ಮದ್ರಾಸ್ ಹೈಕೋರ್ಟ್ ಕ್ಯಾಂಪಸ್‍ನಲ್ಲಿರುವ ಅಧೀನ ನ್ಯಾಯಾಲಯಗಳ ಮೂವರು ನ್ಯಾಯಾಧೀಶ ರಿಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಮೂವರು ನ್ಯಾಯಾಧೀ ಶರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧೀನ ನ್ಯಾಯಾಲಯಗಳ ಕೆಲವು ಸಿಬ್ಬಂದಿಗೂ ಸಹ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಎಷ್ಟು ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ….

1 530 531 532 533 534 1,611
Translate »