ಮೈಸೂರು

ಲಡಾಖ್ ಸಂಘರ್ಷ ಬೆನ್ನಲ್ಲೇ ಚೀನಾಗೆ ಮೊದಲ ಪೆಟ್ಟು:  471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳು ರದ್ದು
ಮೈಸೂರು

ಲಡಾಖ್ ಸಂಘರ್ಷ ಬೆನ್ನಲ್ಲೇ ಚೀನಾಗೆ ಮೊದಲ ಪೆಟ್ಟು: 471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳು ರದ್ದು

June 19, 2020

ನವದೆಹಲಿ, ಜೂ.18- 20 ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಚೀನಾ ಕಂಪನಿಗೆ ನೀಡಿದ್ದ 471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಯನ್ನು ರದ್ದುಪಡಿಸಿದೆ. ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಅಂಡ್ ಕಮ್ಯೂನಿಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ಗುತ್ತಿಗೆ ನೀಡಲಾಗಿತ್ತು. ವಿಶ್ವಬ್ಯಾಂಕ್‍ನಿಂದ 471…

ಕಾಂಗ್ರೆಸ್ ಪಕ್ಷ ಟೀಕಿಸಿದ್ದಕ್ಕೆ ವಕ್ತಾರ ಸ್ಥಾನದಿಂದ ಸಂಜಯ್ ಝಾ ವಜಾ
ಮೈಸೂರು

ಕಾಂಗ್ರೆಸ್ ಪಕ್ಷ ಟೀಕಿಸಿದ್ದಕ್ಕೆ ವಕ್ತಾರ ಸ್ಥಾನದಿಂದ ಸಂಜಯ್ ಝಾ ವಜಾ

June 19, 2020

ನವದೆಹಲಿ, ಜೂ.18- ಪಂಡಿತ್ ಜವಾಹರಲಾಲ ನೆಹರೂ ಕಾಲದಲ್ಲಿದ್ದ ಪ್ರಜಾತಂತ್ರ, ಉದಾರ ಮೌಲ್ಯ ಹಾಗೂ ಸಹಿಷ್ಣುತೆಯಿಂದ ಇಂದು ಪಕ್ಷ ದೂರ ಸರಿಯುತ್ತಿದೆ ಎಂದು ಹೇಳಿದ್ದ ಸಂಜಯ್ ಝಾ ಅವರನ್ನು ತನ್ನ ಪಕ್ಷದ ವಕ್ತಾರ ಸ್ಥಾನದಿಂದ ಕಾಂಗ್ರೆಸ್ ವಜಾ ಮಾಡಿದೆ. ಪಕ್ಷದ ಧೋರಣೆ, ನೀತಿಯನ್ನು ಟೀಕಿಸಿ ಅವರು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ರಾತ್ರಿ ಈ ನಿರ್ಧಾರ ತೆಗೆದುಕೊಂಡಿ ದ್ದಾರೆ. ಈ ಆದೇಶವು ಕೂಡಲೇ ಜಾರಿಗೆ ಬರುತ್ತದೆ ಎಂದ ಅಧ್ಯಕ್ಷೆ, ಝಾ…

ಕೋವಿಡ್-19 ಸೋಂಕು ತಡೆಗೆ ಸಾಮಾಜಿಕ ಅಂತರ ಅನಿವಾರ್ಯ
ಮೈಸೂರು

ಕೋವಿಡ್-19 ಸೋಂಕು ತಡೆಗೆ ಸಾಮಾಜಿಕ ಅಂತರ ಅನಿವಾರ್ಯ

June 19, 2020

ಬೆಂಗಳೂರು, ಜೂ.18(ಕೆಎಂಶಿ)-ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಾಸ್ಕ್ ಬಗ್ಗೆ ಜನಜಾಗೃತಿ ಮೂಡಿಸಲು ಸ್ವತಃ ಮುಖ್ಯಮಂತ್ರಿಯವರೇ ವಿಧಾನಸೌಧದಿಂದ ಒಂದು ಕಿಲೋ ಮೀಟರ್‍ವರೆಗೆ ಮಾಸ್ಕ್ ಧರಿಸಿ, ನಡಿಗೆಯಲ್ಲಿ ಪಾಲ್ಗೊಂಡರು. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಸಹಕಾರದಿಂದ ಕೋವಿಡ್ ತಡೆಯಲು ಸಹಕಾರವಾಗಿದೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕಾಲ ಮಿಂಚಿಲ್ಲ ಎಲ್ಲಾ ಒಟ್ಟಾಗಿ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡಬೇಕು, ಹೆಚ್ಚು ಜನ ಸೇರಬಾರದು…

ಮೈಸೂರಿನ ವಿವಿಧೆಡೆ `ಮಾಸ್ಕ್ ಡೇ’ ಆಚರಣೆ  
ಮೈಸೂರು

ಮೈಸೂರಿನ ವಿವಿಧೆಡೆ `ಮಾಸ್ಕ್ ಡೇ’ ಆಚರಣೆ  

June 19, 2020

ಮೈಸೂರು, ಜೂ.18(ಪಿಎಂ)- ಕೊರೊನಾ ಸೋಂಕು ವಿರುದ್ಧ ಹೋರಾಡಲು ಮಾಸ್ಕ್ (ಮುಖಗವಸು) ಪ್ರಮುಖ ಅಸ್ತ್ರ. ಈ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಸರ್ಕಾರದ ಆದೇ ಶದ ಮೇರೆಗೆ ಇಂದು (ಜೂ.18) `ಮಾಸ್ಕ್ ಡೇ’ ಆಚರಿಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಮೈಸೂರು ನಗರಾ ದ್ಯಂತ ಮಾಸ್ಕ್ ದಿನ ಆಚರಿಸಿ ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್‍ನ ಮಹತ್ವದ ಬಗ್ಗೆ ಸಂದೇಶ ರವಾನಿಸಲಾಯಿತು. ಪಾಲಿಕೆ: ಮೈಸೂರು ಮಹಾನಗರ ಪಾಲಿಕೆ ಯಿಂದ ನಡೆದ `ಮಾಸ್ಕ್ ಡೇ’ ಜಾಥಾಕ್ಕೆ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಡಿಸಿ ಅಭಿ ರಾಮ್ ಜಿ.ಶಂಕರ್…

ಮಾಸ್ಕ್ ವಿತರಿಸಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪುಣ್ಯ ಸ್ಮರಣೆ
ಮೈಸೂರು

ಮಾಸ್ಕ್ ವಿತರಿಸಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪುಣ್ಯ ಸ್ಮರಣೆ

June 19, 2020

ಮೈಸೂರು, ಜೂ.18-ಮೈಸೂರಿನ ಸತ್ಯ ಮೇವ ಜಯತೇ ಸಂಘಟನೆ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಮುಂದೆ ಸಾರ್ವಜನಿಕರಿಗೆ ಮಾಸ್ಕ್ ವಿತ ರಿಸುವ ಮೂಲಕ ಝಾನ್ಸಿರಾಣಿ ಲಕ್ಷ್ಮೀ ಬಾಯಿ ಅವರ ಪುಣ್ಯ ಸ್ಮರಣೆ ಮಾಡಲಾಯಿತು. ಮಾಸ್ಕ್ ವಿತರಿಸಿ ಮಾತನಾಡಿದ ಬಿಜೆಪಿ ಮುಖಂಡ ಕೇಬಲ್ ಮಹೇಶ್, ಭಾರ ತೀಯ ಮಹಿಳಾ ಸಮುದಾಯಕ್ಕೆ ಮಾತ್ರ ವಲ್ಲದೆ ಜಗತ್ತಿನ ಮಹಿಳಾ ಸಮುದಾಯಕ್ಕೆ ಗೌರವ ತಂದುಕೊಟ್ಟವರು ಝಾನ್ಸಿರಾಣಿ ಲಕ್ಷ್ಮೀಬಾಯಿ ಎಂದರು. ಮೈಸೂರಿನ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿನ ನಾಮ ಫಲಕ ಕಿತ್ತು ಹೋಗಿದ್ದು, ಪಾಲಿಕೆ…

ಪರಿಷತ್ ಅಭ್ಯರ್ಥಿಗಳ ಘೋಷಣೆ ಹಿಂದೆಯೇ ಬಿಜೆಪಿಯಲ್ಲಿ ಭಿನ್ನಮತ
ಮೈಸೂರು

ಪರಿಷತ್ ಅಭ್ಯರ್ಥಿಗಳ ಘೋಷಣೆ ಹಿಂದೆಯೇ ಬಿಜೆಪಿಯಲ್ಲಿ ಭಿನ್ನಮತ

June 19, 2020

ಬೆಂಗಳೂರು, ಜೂ.18-ವಿಧಾನಸಭೆ ಯಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ ಗೊಂಡಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ನೇತೃತ್ವದ 10ಕ್ಕೂ ಹೆಚ್ಚು ಉತ್ತರ ಕರ್ನಾಟಕ ಭಾಗದ ಶಾಸಕರು ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ ಎಂದು ಹೇಳಲಾಗಿದೆ. ನಾವು ಆಡಳಿತ ಪಕ್ಷದಲ್ಲಿದ್ದರೂ ನಮಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ…

ರಾಜಕೀಯದಲ್ಲಿ ಹತಾಶೆ ಸಲ್ಲ: ಶ್ರೀನಿವಾಸಪ್ರಸಾದ್
ಮೈಸೂರು

ರಾಜಕೀಯದಲ್ಲಿ ಹತಾಶೆ ಸಲ್ಲ: ಶ್ರೀನಿವಾಸಪ್ರಸಾದ್

June 19, 2020

ಮೈಸೂರು, ಜೂ.18(ಎಸ್‍ಬಿಡಿ)- ರಾಜಕೀಯದಲ್ಲಿ ಎಂದೂ ಹತಾಶ ರಾಗಬಾರದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು. ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಚುನಾ ವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮೈಸೂರಿನ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಈ ಬಗ್ಗೆ ವಿಶ್ವನಾಥ್ ಅವರೊಂದಿಗೆ ಚರ್ಚಿಸಿ ಮುಂದೇನು ಮಾಡುವುದು? ಎಂಬುದರ ಬಗ್ಗೆ ಚರ್ಚಿಸುತ್ತೇನೆ. ನಂತರ ಮುಖ್ಯಮಂತ್ರಿಗಳೊಂದಿಗೂ ಮಾತನಾಡುತ್ತೇವೆ ಎಂದರು. ಜೆಡಿಎಸ್ ಸೇರುವ ಮೊದಲೂ ವಿಶ್ವನಾಥ್ ಯಾವ ಹುದ್ದೆಯಲ್ಲೂ ಇರಲಿಲ್ಲ. ಹಾಗಾಗಿ ಈಗಿನ ಬೆಳ…

ಸ್ವಸ್ಥಾನಗಳಿಗೆ ಮರಳಿರುವ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ 50,000 ಕೋಟಿ
ಮೈಸೂರು

ಸ್ವಸ್ಥಾನಗಳಿಗೆ ಮರಳಿರುವ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ 50,000 ಕೋಟಿ

June 19, 2020

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರಿಂದ ಗರೀಬ್ ಕಲ್ಯಾಣ್ ರೋಜ್‍ಗಾರ್ ಯೋಜನೆ ಮಾಹಿತಿ ಯೋಜನೆಗೆ ಜೂನ್ 20ರಂದು ಪ್ರಧಾನಿ ಮೋದಿ ಅವರಿಂದ ಬಿಹಾರದ ಖಗೇರಿಯಾದಲ್ಲಿ ಚಾಲನೆ ಮುಂದಿನ 125 ದಿನಗಳಲ್ಲಿ ಕೇಂದ್ರ ಸರ್ಕಾರದ ಸುಮಾರು 25 ಯೋಜನೆಗಳ ಜಾರಿ ನವದೆಹಲಿ, ಜೂ.18-ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಕಾರಣಗಳಿಂದಾಗಿ ಅಸಂಖ್ಯಾತ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಿದ್ದಾರೆ. ಈ ಎಲ್ಲಾ ವಲಸೆ ಕಾರ್ಮಿಕರಿಗೆ ಅವರ ಗ್ರಾಮಗಳಲ್ಲೇ ಜೀವನೋ ಪಾಯ ಕಲ್ಪಿಸುವ ಗುರಿ ಹೊಂದಿರುವ ಗರೀಬ್ ಕಲ್ಯಾಣ್ ರೋಜ್‍ಗಾರ್ ಯೋಜನೆ…

ನಾನೇ ನರಸಿಂಹರಾಜ ಕ್ಷೇತ್ರದ ಶಾಸಕ!
ಮೈಸೂರು

ನಾನೇ ನರಸಿಂಹರಾಜ ಕ್ಷೇತ್ರದ ಶಾಸಕ!

June 19, 2020

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಖಂಡನೆ ಮೈಸೂರು, ಜೂ.18-ಸಾರ್ವತ್ರಿಕ ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಇರುವಾಗಲೇ, ನಾನೇ ನರಸಿಂಹರಾಜ ವಿಧಾನ ಸಭಾ ಕ್ಷೇತ್ರಕ್ಕೆ ಶಾಸಕ ಎಂದು ಹೇಳುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಧಟತನ ಮೆರೆದಿದ್ದಾರೆ. ಇದು ಪ್ರಜಾಪ್ರತಿನಿಧಿಯೊಬ್ಬರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮುಖಂಡರೂ ಆದ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎನ್.ಧ್ರುವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಅಲ್ಪಸಂಖ್ಯಾತ ನಾಯಕ ಅಜೀಜ್…

ಬುಧವಾರ ರಾಜ್ಯದಲ್ಲಿ 204 ಸೋಂಕಿತರು
ಮೈಸೂರು

ಬುಧವಾರ ರಾಜ್ಯದಲ್ಲಿ 204 ಸೋಂಕಿತರು

June 18, 2020

ಬೆಂಗಳೂರು, ಜೂ.17-ಹೊರ ರಾಜ್ಯದಿಂದ ಬಂದಿದ್ದ 106 ಹಾಗೂ ಇಬ್ಬರು ವಿದೇಶದಿಂದ ಬಂದಿದ್ದವರು ಸೇರಿದಂತೆ 204 ಮಂದಿಗೆ ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ದೃಢ ಪಟ್ಟಿದೆ. ಅದೇ ವೇಳೆ ಮಂಡ್ಯದಲ್ಲಿ 6 ಮಂದಿ ಸೇರಿದಂತೆ 348 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕಿ ತರ ಸಂಖ್ಯೆ 7,734ಕ್ಕೆ ಏರಿದ್ದರೂ, ಒಟ್ಟು 4,804 ಮಂದಿ ಗುಣಮುಖರಾಗಿ ಉಳಿದ 2,824 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದ್ದು, ಶೇ.62ರಷ್ಟು ಕೊರೊನಾ ಸೋಂಕಿತರು ಗುಣಮುಖ ರಾಗಿರು ವುದು…

1 525 526 527 528 529 1,611
Translate »