ಮೈಸೂರು

ಸುಗಮ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಶಿಕ್ಷಣ ಸಂಸ್ಥೆಗಳಿಗೆ ಸುರೇಶ್ ಕುಮಾರ್ ಪತ್ರ
ಮೈಸೂರು

ಸುಗಮ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಶಿಕ್ಷಣ ಸಂಸ್ಥೆಗಳಿಗೆ ಸುರೇಶ್ ಕುಮಾರ್ ಪತ್ರ

May 29, 2020

ಬೆಂಗಳೂರು, ಮೇ 28- ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸವಾಲಿನಿಂದ ಕೂಡಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದು ಮನವಿಮಾಡಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸಚಿವರು, ಪರೀಕ್ಷೆ ಯನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಮಕ್ಕಳ ಶ್ರೇಯಸ್ಸಿಗೆ ಪೂರಕವಾಗಿ ನಡೆಯಲು ಎಲ್ಲ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು,…

ಲಾಕ್‍ಡೌನ್ ಸಂತ್ರಸ್ತರಿಗೆ ಕಾಂಗ್ರೆಸ್‍ನಿಂದ ಭಾರೀ ಸೇವೆ: ಸಲೀಂ ಅಹಮ್ಮದ್
ಮೈಸೂರು

ಲಾಕ್‍ಡೌನ್ ಸಂತ್ರಸ್ತರಿಗೆ ಕಾಂಗ್ರೆಸ್‍ನಿಂದ ಭಾರೀ ಸೇವೆ: ಸಲೀಂ ಅಹಮ್ಮದ್

May 29, 2020

ಮೈಸೂರು, ಮೇ 28(ಎಂಟಿವೈ)- ಲಾಕ್ ಡೌನ್ ಸಂತ್ರಸ್ತರು ಹಾಗೂ ವಲಸೆ ಕಾರ್ಮಿ ಕರ ಹಿತಕಾಯುವುದರೊಂದಿಗೆ ಅಗತ್ಯ ನೆರವು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲ ವಾಗಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಮುಖಂಡರು ಕಳೆದ 60 ದಿನಗಳಿಂದ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಕೆಪಿ ಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಯಾಗಿ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು,…

ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾ ಘಟಕ ಬಲಿಷ್ಠವಾಗಬೇಕು
ಮೈಸೂರು

ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾ ಘಟಕ ಬಲಿಷ್ಠವಾಗಬೇಕು

May 29, 2020

ಮೈಸೂರು, ಮೇ 28(ಎಂಟಿವೈ)- ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಲಕ್ಷಾಂತರ ಜನ ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಸುಳ್ಳನ್ನೇ ಬಂಡವಾಳ ವಾಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಕಟ್ಟಿಹಾಕಲು ದೇಶದಲ್ಲಿ ವಿದ್ಯುನ್ಮಾನ ಮತಯಂತ್ರ ರದ್ದು ಮಾಡಬೇಕು. ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾ ಘಟಕ ಬಲಪಡಿಸಬೇಕಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾ ರಂಭಕ್ಕೆ ಪೂರ್ವಭಾವಿಯಾಗಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ಅಪಪ್ರಚಾರ…

ಚಾಮುಂಡೇಶ್ವರಿ, ಉತ್ತನಹಳ್ಳಿ ಅಮ್ಮ, ನಂಜುಂಡೇಶ್ವರ ದೇವಸ್ಥಾನ ತೆರೆಯುವ ಸಂಬಂಧ ಸಭೆ
ಮೈಸೂರು

ಚಾಮುಂಡೇಶ್ವರಿ, ಉತ್ತನಹಳ್ಳಿ ಅಮ್ಮ, ನಂಜುಂಡೇಶ್ವರ ದೇವಸ್ಥಾನ ತೆರೆಯುವ ಸಂಬಂಧ ಸಭೆ

May 29, 2020

ಮೈಸೂರು, ಮೇ 28(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಬಂದ್ ಆಗಿರುವ ದೇವಾಲಯಗಳನ್ನು ತೆರೆಯುವ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ರಾಜ್ಯಾದ್ಯಂತ ಮುಜರಾಯಿ ವ್ಯಾಪ್ತಿಯು ಸೇರಿದಂತೆ ಎಲ್ಲಾ ದೇವಸ್ಥಾನಗಳನ್ನು ತೆರೆದು, ಪೂಜಾ ಕೈಂಕರ್ಯ ಮತ್ತು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸರ್ಕಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದೆ. ಲಾಕ್‍ಡೌನ್ ನಿರ್ಬಂಧ ತೆರವುಗೊಳಿಸಿದ ನಂತರ ಯಾವ ದೇವಾಲಯಗಳನ್ನು ಜೂನ್ 1ರಿಂದ ತೆರೆಯಬಹುದು,…

ಸುತ್ತೂರು ಮಠದಲ್ಲಿ ಸಚಿವರಿಂದ `ಎಜು ಕೌಶಲ್’ ಆ್ಯಪ್ ಬಿಡುಗಡೆ
ಮೈಸೂರು

ಸುತ್ತೂರು ಮಠದಲ್ಲಿ ಸಚಿವರಿಂದ `ಎಜು ಕೌಶಲ್’ ಆ್ಯಪ್ ಬಿಡುಗಡೆ

May 29, 2020

ಮೈಸೂರು, ಮೇ 28(ಆರ್‍ಕೆಬಿ)- ಪ್ರಾಥ ಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕೌಶಲಗಳನ್ನು ಅಭಿವೃದ್ಧಿಪಡಿಸುವ `ಎಜು ಕೌಶಲ ಆ್ಯಪ್’ (EDU KAUSHAL APP) ಅನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಮುಂಡಿಬೆಟ್ಟದ ಪಾದದಲ್ಲಿರುವ ಸುತ್ತೂರು ಮಠದಲ್ಲಿ ಬಿಡುಗಡೆ ಗೊಳಿಸಿದರು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಸಚಿವರು, ಬಳಿಕ ಆ್ಯಪ್ ಬಿಡುಗಡೆಗೊಳಿಸಿ ದರು. ಮೈಸೂರಿನ ಎವಿಕೆ ರಿಸೋರ್ಸ್ ಸೆಂಟರ್ ಎಸ್‍ಜೆಸಿಇ-ಸ್ಟೆಪ್‍ನಲ್ಲಿ `ಎಜು ಕೌಶಲ್ ಆ್ಯಪ್’ ಅಭಿವೃದ್ಧಿಪಡಿಸಿದೆ. 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಶೈಕ್ಷ ಣಿಕ ಕಾರ್ಯಕ್ಷಮತೆ ಅಭಿವೃದ್ಧಿಗಾಗಿ…

ಬಿಜೆಪಿಯಲ್ಲಿ ತುಂಬಾ ಗೌರವವಿದೆ: ರಮೇಶ್ ಜಾರಕಿಹೊಳಿ
ಮೈಸೂರು

ಬಿಜೆಪಿಯಲ್ಲಿ ತುಂಬಾ ಗೌರವವಿದೆ: ರಮೇಶ್ ಜಾರಕಿಹೊಳಿ

May 29, 2020

ಮೈಸೂರು,ಮೇ28(ಆರ್‍ಕೆಬಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನನ್ನು ಸಹಜವಾದ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ನನಗೆ ತುಂಬಾ ಗೌರವವೂ ಸಿಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಮೈಸೂರಿನ ಚಾಮರಾಜ ಪುರಂನಲ್ಲಿರುವ ಬಿಜೆಪಿ ಕಚೇರಿ ರಾಜೇಂದ್ರ ಭವನಕ್ಕೆ ಭೇಟಿ ನೀಡಿದಾಗ ನೀಡಿದ ಗೌರವ ಸ್ವೀಕರಿಸಿದ ಸಚಿವರು ಪಕ್ಷದ ಕಾರ್ಯಕರ್ತ ರನ್ನುದ್ದೇಶಿಸಿ ಮಾತನಾಡಿದರು. ಆರ್‍ಎಸ್‍ಎಸ್‍ನ ಅನೇಕ ಹಿರಿಯರು ಕಟ್ಟಿ ಬೆಳೆಸಿದ ಈ ಪಕ್ಷಕ್ಕೆ ಬಂದ ನಂತರ ನನ್ನಲ್ಲಿ ಇನ್ನಷ್ಟು ದೇಶಾಭಿಮಾನ ಮೂಡಿದೆ ಎಂದರು. ಕಾಂಗ್ರೆಸ್‍ನಲ್ಲಿ ನನ್ನನ್ನು ನಡೆಸಿಕೊಂಡ…

ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕದಾಸ ನೆನಪಾಗಲಿಲ್ಲವೇ?
ಮೈಸೂರು

ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕದಾಸ ನೆನಪಾಗಲಿಲ್ಲವೇ?

May 29, 2020

ವಿಪಕ್ಷಗಳಿಗೆ ಸಂಸದ ಪ್ರತಾಪ್‍ಸಿಂಹ ಪ್ರಶ್ನೆ ವೀರಸಾವರ್ಕರ್ ಹೆಸರಿಡಲು ವಿರೋಧಕ್ಕೆ ಟೀಕೆ ಮೈಸೂರು, ಮೇ 28(ಆರ್‍ಕೆಬಿ)- ಯಲಹಂಕ ಫ್ಲೈ ಓವರ್‍ಗೆ ವೀರ ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತವಾಗಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಸುತ್ತೂರು ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ವೀರ ಸಾರ್ವಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರಿಡಲು ಇವರೇಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿಪಕ್ಷಗಳು ಇಂತಹ ಕ್ಷುಲ್ಲಕ ರಾಜಕಾರಣ ಬಿಡಬೇಕು….

10 ದಿನದಲ್ಲಿ ಪಾಲಿಕೆಯಿಂದ 6.5 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಮೈಸೂರು

10 ದಿನದಲ್ಲಿ ಪಾಲಿಕೆಯಿಂದ 6.5 ಕೋಟಿ ಆಸ್ತಿ ತೆರಿಗೆ ಸಂಗ್ರಹ

May 29, 2020

ಮೈಸೂರು, ಮೇ28(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಡುವೆಯೂ ಕಳೆದ 10 ದಿನದಲ್ಲಿ ಮೈಸೂರು ಮಹಾ ನಗರ ಪಾಲಿಕೆ 6.5 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ. ಜುಲೈ 31ರವರೆಗೆ ಶೇ.5ರಷ್ಟು ರಿಯಾಯಿತಿ ಯೊಂದಿಗೆ ಆಸ್ತಿ ತೆರಿಗೆ ಪಾವತಿ ಸಲು ಸರ್ಕಾರ ಅವಕಾಶ ನೀಡಿ ರುವುದರಿಂದ ನಾಗರಿಕರು ಮೈಸೂ ರಿನ ಎಲ್ಲಾ 9 ಪಾಲಿಕೆ ವಲಯ ಕಚೇರಿಗಳಲ್ಲಿ ನಿತ್ಯ ಸಾಲುಗಟ್ಟಿ ನಿಂತು ತೆರಿಗೆ ಪಾವತಿಸುತ್ತಿ ದ್ದಾರೆ. ವರ್ಷಕ್ಕೆ ಸುಮಾರು 150 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಜುಲೈ…

ಶಾಸಕ ನಾಗೇಂದ್ರರಿಂದ ದಿನಸಿ ಕಿಟ್ ವಿತರಣೆ
ಮೈಸೂರು

ಶಾಸಕ ನಾಗೇಂದ್ರರಿಂದ ದಿನಸಿ ಕಿಟ್ ವಿತರಣೆ

May 29, 2020

ಮೈಸೂರು, ಮೇ 28(ಪಿಎಂ)- ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಸಹಾಯವಾಗಲೆಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ದಿನಸಿ ಕಿಟ್ ವಿತರಣೆ ಮುಂದುವರೆಸಿದ್ದಾರೆ. ಗುರುವಾರ ವಾರ್ಡ್ 21ರ ವ್ಯಾಪ್ತಿಯ ಕುಕ್ಕರಹಳ್ಳಿ ಹಾಗೂ ಜನತಾನಗರ ಪ್ರದೇಶದ 750 ಬಡ ಕುಟುಂಬಗಳಿಗೆ ಜನತಾ ನಗರದ ಬಿಸಿಲು ಮಾರಮ್ಮನ ದೇವಸ್ಥಾನದ ಬಳಿ ದಿನಸಿ ಕಿಟ್‍ಗಳನ್ನು ಶಾಸಕರು ವಿತರಣೆ ಮಾಡಿದರು. ವಾರ್ಡ್‍ನ ಪಾಲಿಕೆ ಸದಸ್ಯೆ ಸಿ.ವೇದಾವತಿ, ಬಿಜೆಪಿ ಚಾಮರಾಜ ಕ್ಷೇತ್ರ ಅಧ್ಯಕ್ಷ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರಾದ ಶಿವಶಂಕರ್, ಶ್ರೀನಿವಾಸ್, ದಿನೇಶ್‍ಗೌಡ,…

ಮೈಸೂರಿನ ಸರಸ್ವತಿಪುರಂ, ವಿಜಯನಗರದ ಆಧಾರ್ ಸೇವಾ ಕೇಂದ್ರ ಪುನರಾರಂಭ
ಮೈಸೂರು

ಮೈಸೂರಿನ ಸರಸ್ವತಿಪುರಂ, ವಿಜಯನಗರದ ಆಧಾರ್ ಸೇವಾ ಕೇಂದ್ರ ಪುನರಾರಂಭ

May 28, 2020

ಮೈಸೂರು,ಮೇ 27(ಎಂಟಿವೈ)-ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿದ್ದ ಮೈಸೂರಿನ ಸರಸ್ವತಿಪುರಂ ಹಾಗೂ ವಿಜಯನಗರದಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಪುನರಾರಂಭವಾಗಿದ್ದು, ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿವವರಿಗೆ ಮಾತ್ರ ಸೇವೆ ಒದಗಿಸುತ್ತಿದೆ. ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಿಗೂ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ಎಲ್ಲೆಡೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವುದೇ ಒಂದು ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಸೇವಾ ಕೇಂದ್ರಗಳಲ್ಲದೇ ಮೈಸೂರಿನ…

1 555 556 557 558 559 1,611
Translate »