ಮೈಸೂರು: ಪವಿತ್ರ ರಂಜಾನ್ ಹಬ್ಬಕ್ಕೆ ಇನ್ನೆರಡು ದಿನವಷ್ಟೇ ಬಾಕಿಯಿದ್ದು, ಕೊರೊನಾ ಆತಂಕದ ನಡುವೆಯೂ ನಗರದಲ್ಲಿ ಸಡಗರದಿಂದ ಹಬ್ಬ ಆಚರಣೆಗೆ ಮುಸ್ಲಿಂ ಸಮುದಾಯ ದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಭಾನುವಾರ ಪೂರ್ಣ ಲಾಕ್‍ಡೌನ್ ಘೋಷಣೆ ಆಗಿರುವುದರಿಂದ ಹಬ್ಬಕ್ಕೆ ಅಗತ್ಯ ವಾದ ವಸ್ತುಗಳ ಖರೀದಿ ಅಸಾಧ್ಯ ಎಂಬು ದನ್ನು ಅರಿತ ಮುಸ್ಲಿಂ ಬಾಂಧವರು ಶನಿ ವಾರ ಬೆಳಿಗ್ಗೆಯಿಂದ ಸಂಜೆವರೆಗೂ ಶಾಪಿಂಗ್ ನಡೆಸಿದರು. ದೇವರಾಜ ಮಾರು ಕಟ್ಟೆ, ಮೀನಾ ಬಜಾರ್, ಕೆ.ಟಿ. ಸ್ಟ್ರೀಟ್ ಸೇರಿದಂತೆ ಹಲವೆಡೆ ಹೊಸ ಬಟ್ಟೆ ಮತ್ತಿ ತರ…
ಡೋಲಾಯಮಾನ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು
May 24, 2020ಮೈಸೂರು, ಮೇ 23 (ಆರ್‍ಕೆ)- ಸರ್ಕಾರ ಒಂದು ಖಚಿತ ನಿಲುವು ತಾಳದೇ ದಿನ ದೂಡುತ್ತಿರುವುದರಿಂದ ಮೈಸೂರಿನ ಹೋಟೆಲ್ ಮಾಲೀಕರ ಸ್ಥಿತಿ ಡೋಲಾಯ ಮಾನವಾಗಿದೆ. ಕೋವಿಡ್ ಲಾಕ್‍ಡೌನ್ ನಿರ್ಬಂಧ ದಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್ ಆಗಿರುವ ಹೋಟೆಲ್‍ಗಳ ಮಾಲೀಕರು, ಲಾಕ್‍ಡೌನ್ ಸಡಿಲಗೊಂಡು ಇನ್ನಿತರ ಎಲ್ಲಾ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಿ ದ್ದರೂ ಹೋಟೆಲ್‍ಗಳನ್ನು ಕೇವಲ ಪಾರ್ಸೆಲ್ ಸೇವೆಗೆ ಸೀಮಿತಗೊಳಿಸಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮಂಗಳವಾರ ಬೆಂಗಳೂರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿ ಮಾಡಿ, ಮನವಿ ಸಲ್ಲಿಸಿದ…
ಸೋನಿಯಾ ಗಾಂಧಿ ಸಂಸದರು, ಸರ್ಕಾರದ ಕ್ರಮ ಖಂಡಿಸುವ ಹಕ್ಕಿದೆ
May 24, 2020ಮೈಸೂರು,ಮೇ23(ಪಿಎಂ)-ಸಂಸದರಾಗಿರುವ ಸೋನಿಯಾ ಗಾಂಧಿ ಅವರು `ಪಿಎಂ ಕೇರ್ಸ್ ಫಂಡ್’ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿ ದ್ದಾರೆ. ಹಾಗಾಗಿ ಅವರ ಹೇಳಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಕ್ಷೇಪಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣೆ ಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಸಂಬಂಧ ಮೈಸೂರಿನ ಜಲ ದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಮಾಧ್ಯಮದ ವರಿಗೆ ಪ್ರತಿಕ್ರಿಯೆ ನೀಡಿದ ಧ್ರುವನಾರಾಯಣ್, ಯುಪಿಎ ಒಕ್ಕೂಟದ ನಾಯಕಿಯೂ ಆಗಿರುವ ಎಐಸಿಸಿ ಅಧ್ಯಕ್ಷೆ…
ಜುಬಿಲಂಟ್ ಪ್ರಕರಣ; ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ದಸಂಸ ಆಗ್ರಹ
May 24, 2020ಮೈಸೂರು, ಮೇ 23(ಪಿಎಂ)- ಕೊರೊನಾ ಸೋಂಕು ಮೈಸೂರು ಜಿಲ್ಲೆ ಯಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಕಾರಣ ವಾದ ನಂಜನಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆ ವಿರುದ್ಧ ಕ್ರಿಮಿ ನಲ್ ಪ್ರಕರಣ ದಾಖಲಿಸಿ, ತನಿಖೆಯನ್ನು ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು. ಕಾರ್ಖಾನೆಯಿಂದಾಗಿ ಕೊರೊನಾ ಸೋಂಕಿನ ಕಷ್ಟಕ್ಕೆ ಸಿಲುಕಿದವ ರಿಗೆ ಕಂಪನಿಯೇ ಪರಿಹಾರ ಭರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಮೈಸೂರಿನ ನಜರ್‍ಬಾದ್ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪ್ರಕರಣದಲ್ಲಿ…
ಮುಸ್ಲಿಂ ಬಾಂಧವರಿಗೆ ದಿನಸಿ, ರಂಜಾನ್ ಕಿಟ್ ವಿತರಣೆ
May 24, 2020ಮೈಸೂರು, ಮೇ 23(ಪಿಎಂ)- ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು ಶನಿವಾರ ವಿತರಣೆ ಮಾಡಲಾಯಿತು. ಮೈಸೂರಿನ ಜಯನಗರದಲ್ಲಿ ಬಳಗದ ಮುಖಂಡರೂ ಆದ ಮೈಸೂರು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು (ಡ್ರೈಫ್ರೂಟ್ಸ್) ವಿತರಣೆ ಮಾಡಿ, ಶುಭ ಕೋರಿದರು. ಬಳಿಕ ಮಾತನಾಡಿದ ಎಲ್.ಆರ್….
ಬೀಜೋಪಚಾರ ಮಾಹಿತಿಗಾಗಿ `ಆನ್‍ಲೈನ್ ಲೈವ್’ಗೆ ಬಂದ 30 ರೈತರು!
May 24, 2020ಮೈಸೂರು,ಮೇ 23(ಎಂಟಿವೈ)- ಮುಂಗಾರು ಇನ್ನೇನು ಆರಂಭವಾಗಲಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆ ನಿಧಾನ ವಾಗಿ ಗರಿಗೆದರುತ್ತಿದೆ. ಆಧುನಿಕ ತಂತ್ರಜ್ಞಾನ ದೊಟ್ಟಿಗೆ ಹಂತಹಂತವಾಗಿ ನಂಟು ಸಾಧಿಸಿ ಕೊಳ್ಳುತ್ತಿರುವ ರೈತರು, ಈಗ `ಆನ್‍ಲೈನ್ ಲೈವ್’ಗೆ ಬಂದು ಕೃಷಿ ಸಂಶೋಧನಾ ಕೇಂದ್ರದೊಟ್ಟಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಬೀಜೋಪಚಾರದ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡಿದ್ದಾರೆ! ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಸಾವಯವ ಕೃಷಿ ಸಂಶೋಧನಾ ಕೇಂದ್ರವು ರೈತರಿಗೆ ಕ್ರಮಬದ್ಧ ಬೀಜೋ ಪಚಾರ ಮಾಡುವ ತರಬೇತಿ ಕಾರ್ಯ ಕ್ರಮವನ್ನು ಶನಿವಾರ ಆನ್‍ಲೈನ್‍ನಲ್ಲಿ ಆಯೋಜಿಸಿತ್ತು. ಆಸಕ್ತ…
ರಂಜಾನ್: ನೂರಾರು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ
May 24, 2020ಮೈಸೂರು: ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಸಮುದಾಯದ 600ಕ್ಕೂ ಹೆಚ್ಚು ಕುಟುಂಬಗಳಿಗೆ ಅಶೋಕ ರಸ್ತೆಯಲ್ಲಿನ ಸರ್ಕಾರಿ ನಿಜಾಮಿಯ ಬಾಡಿಗಾರ್ಡ್ ಪ್ರೌಢಶಾಲೆ ಆವರಣದಲ್ಲಿ ಶಾಸಕ ಎಲ್.ನಾಗೇಂದ್ರ ದಿನಸಿ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಶಾಸಕರು, ರಂಜಾನ್ ಪ್ರಯುಕ್ತ ಹಾಗೂ ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ರಂಜಾನ್ ಹಬ್ಬವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಹಬ್ಬ ಆಚರಿಸಿ ಎಂದರಲ್ಲದೆ, ಹಬ್ಬದ ಶುಭಾಶಯ ಕೋರಿದರು. ಮೇಯರ್ ತಸ್ನಿಂ ಮಾತನಾಡಿ, ವಾರ್ಡ್ 25 ಮತ್ತು 26ರಲ್ಲಿ…
ಹೋಟೆಲ್ ಮಾಲೀಕರ ಸಂಘದಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ
May 24, 2020ಮೈಸೂರು: ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅಶೋಕಪುರಂನ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಸಂಘದ ಸಭಾಂಗಣದಲ್ಲಿ ಅಕ್ಕಿ, ಸಕ್ಕರೆ, ಬೇಳೆ, ಎಣ್ಣೆ, ರವೆ, ಸಾಂಬಾರ್‍ಪೌಡರ್, ಉದ್ದಿನಬೇಳೆ, ಗೋಧಿಹಿಟ್ಟು, ಉಪ್ಪುಗಳನ್ನೊಳಗೊಂಡ ದಿನಸಿ ಕಿಟ್ ಅನ್ನು 20 ಮಂದಿ ಆಟೋ ಚಾಲಕರಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ವಿತರಿಸಿದರು. ಇದೇವೇಳೆ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಡುಬಡವರಿಗೆ ಪಾಲಿಕೆ ವತಿಯಿಂದ ದಿನಸಿ ಕಿಟ್ ವಿತರಿಸುತ್ತಿದ್ದು, 4 ಸಾವಿರ ಪ್ಯಾಕೆಟ್ ಅಡುಗೆ ಎಣ್ಣೆ ಖರೀದಿಸಲು…
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
May 24, 2020ಮೈಸೂರು: ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾ ನಂದ ಆಶ್ರಮ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಸಹಯೋಗ ದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬದವರಿಗೆ ದಿನಸಿ ಕಿಟ್ ವಿತರಿಸಲಾಯಿತು. ಇಟ್ಟಿಗೆಗೂಡಿನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಕಿಟ್ ವಿತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೊರೊನಾದಿಂದ ಎಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ಲಾಕ್‍ಡೌನ್‍ನಿಂದಾಗಿ 2 ತಿಂಗಳಿಂದ ದೇವಾಲಯಗಳು ಮುಚ್ಚಿವೆ. ಸಮಾರಂಭಗಳು ನಡೆಯುತ್ತಿಲ್ಲ. ಪರಿಣಾಮ ಅರ್ಚಕರು ಹಾಗೂ ಪುರೋಹಿತರ ಕುಟುಂಬ ತೀವ್ರ ಸಂಕಷ್ಟದಲ್ಲಿವೆ. ಈಗಾಗಲೇ ಮೈಸೂರು ಬ್ರಾಹ್ಮಣ ಸಂಘವು,…
ಸರ್ಕಾರದ ಸಹಾಯ ಧನ ಸಂಬಂಧ ಆಟೋ, ಟ್ಯಾಕ್ಸಿ ಚಾಲಕರಲ್ಲಿ ಗೊಂದಲ
May 24, 2020ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಬೆಳಕು ಸಂಸ್ಥೆ ನೆರವು ಮೈಸೂರು: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಸಹಾಯ ಧನ ಘೋಷಿಸಿದೆ. ಆದರೆ ಅದನ್ನು ಪಡೆಯು ವುದು ಹೇಗೆ ಎಂಬುದು ಬಹಳಷ್ಟು ಚಾಲಕರಿಗೆ ತಿಳಿದಿಲ್ಲ. ಹಾಗಾಗಿ ಮೈಸೂರಿನ ಬೆಳಕು ಸಂಸ್ಥೆ ದಿನದಲ್ಲಿ ಮೂರು ಕಡೆ ತಾತ್ಕಾಲಿಕ ಸೇವಾ ಕೇಂದ್ರ ತೆರೆದು, ಸರ್ಕಾರ ನೀಡುವ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಚಾಲಕರಿಗೆ ನೆರವಾಗಿದೆ. ಗನ್‍ಹೌಸ್ ವೃತ್ತದ ಬಳಿ ಈ ಕಾರ್ಯಕ್ಕೆ ಬಿಜೆಪಿ…










