ಮೈಸೂರು, ಮೇ 10(ಎಸ್‍ಬಿಡಿ)- ಮೈಸೂರಿನ ಸೀವೆಜ್ ಫಾರ್ಮ್ ತ್ಯಾಜ್ಯ ಸಂಸ್ಕರಣೆ ಸಂಬಂಧ ಸಾರ್ವಜನಿಕ ಅಭಿ ಪ್ರಾಯ, ಜನಪ್ರತಿನಿಧಿಗಳ ಸಹಕಾರದಿಂ ದಲೇ ಯೋಜನೆ ಕೈಗೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ನಾಗ್ಪುರ ಮಾದರಿಯಲ್ಲಿ ಕಸ ಸಂಸ್ಕರಣ ಮಾಡುವುದಕ್ಕೆ ಜನ ಒಪ್ಪಿದರೆ ತಮ್ಮದೇನು ತಕರಾರಿಲ್ಲ ಎಂಬ ಶಾಸಕ ಎಸ್.ಎ.ರಾಮ ದಾಸ್ ಅವರ ವಾದಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ವಿ.ಸೋಮಣ್ಣನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2019ರ ನವೆಂಬರ್ 2ರಂದು ಸೀವೆಜ್ ಫಾರ್ಮ್‍ಗೆ ಭೇಟಿ ನೀಡಿ ದ್ದರು. ಅದಕ್ಕೂ ಮುನ್ನ…
ಇಂದು ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್
May 11, 2020ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ (ಸೋಮ ವಾರ) ಮಧ್ಯಾಹ್ನ 3 ಗಂಟೆಗೆ ಎಲ್ಲ ರಾಜ್ಯ ಗಳ ಹಾಗೂ ಕೇಂದ್ರಾ ಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಲಾಕ್‍ಡೌನ್ ಜಾರಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 5ನೇ ಬಾರಿಗೆ ವಿಡಿಯೋ ಮೂಲಕ ಸಭೆ ನಡೆಸಲಿದ್ದು, ಹಂತಹಂತವಾಗಿ ಆರ್ಥಿಕ ಚಟುವಟಿಕೆ ಪುನರ್ ಆರಂಭ, ಕೊರೊನಾ ನಿರ್ವಹಣೆ ಬಗ್ಗೆ ಪರಾಮರ್ಶೆ ನಡೆಸಲಿ ದ್ದಾರೆ. ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ….
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು
May 11, 2020ನವದೆಹಲಿ: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖ ಲಿಸಿದ್ದು, ತಜ್ಞವೈದ್ಯರ ತಂಡವು ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದೆ. ಭಾರತದ ಆರ್ಥಿಕತೆಯ ಸುಧಾರಣಾ ಶಿಲ್ಪಿ ಎಂದು ಪ್ರಸಿದ್ಧಿ ಪಡೆದಿರುವ ಡಾ. ಮನಮೋಹನ್‍ಸಿಂಗ್ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದಾರೆ….
ದೇಶದಲ್ಲಿ ಕೊರೊನಾ ಮಹಾಮಾರಿಗೆ 2 ಸಾವಿರಕ್ಕೂ ಹೆಚ್ಚು ಮಂದಿ ಬಲಿ
May 11, 2020ನವದೆಹಲಿ,ಮೇ 10-ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 62,939ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್‍ಗೆ 2,109 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,277 ಮಂದಿ ಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 128 ಮಂದಿ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಶನಿವಾರ 1165 ಹೊಸ ಕೇಸ್ ನೊಂದಿಗೆ ಒಟ್ಟು ಸಂಖ್ಯೆ 20,228ಕ್ಕೇರಿದೆ. ಸಾವಿಗೀಡಾದವರ ಸಂಖ್ಯೆ 779ಕ್ಕೆ ಜಿಗಿದಿದೆ. ಇನ್ನು ತಮಿಳುನಾಡಿನಲ್ಲಿ 526, ಗುಜರಾತ್ ನಲ್ಲಿ 394, ರಾಜಸ್ತಾನದಲ್ಲಿ 129, ಮಧ್ಯಪ್ರದೇಶದಲ್ಲಿ 116 ಹಾಗೂ ಬಂಗಾಳದಲ್ಲಿ 108…
ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಿಗೆ ಅರಣ್ಯ ಸಚಿವರ ಭೇಟಿ ಹುಲಿ ದಾಳಿ ಸಂತ್ರಸ್ತರ ಸಮಸ್ಯೆ ಆಲಿಕೆ
May 11, 2020ಗುಂಡ್ಲುಪೇಟೆ, ಮೇ 10 (ಸೋಮ್.ಜಿ) – ಕಳೆದ 20 ದಿನಗಳಿಂದ ಜಾನುವಾರು ಗಳ ಮೇಲೆ ಹುಲಿ ದಾಳಿ ಮಾಡಿ ಬಲಿ ಪಡೆಯುತ್ತಿರುವ ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ 20ಕ್ಕೂ ಹೆಚ್ಚು ಹಸು ಗಳನ್ನು ಕೊಂದು ಅಟ್ಟಹಾಸ ಮೆರೆಯು ತ್ತಿರುವ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಖುದ್ದು ಅರಣ್ಯ ಸಚಿವರೇ ಭೇಟಿ ನೀಡಿ…
ಲಾಕ್‍ಡೌನ್: ಮೈಸೂರಿನ `ಸ್ವಯಂ ಸೇವಕರ’ ಹೃದಯಸ್ಪರ್ಶಿ ಸೇವಾ ಕಾರ್ಯ
May 11, 2020ಮೈಸೂರು, ಮೇ 10(ಎಂಕೆ)- ಮೈಸೂ ರಿನಲ್ಲಿ ಕೊರೊನಾ ಸೋಂಕು ಹರಡುವು ದನ್ನು ತಡೆಯಲು ರಾತ್ರಿ-ಹಗಲು ಶ್ರಮಿಸು ತ್ತಿರುವ ಸಾವಿರಾರು ಕೊರೊನಾ ವಾರಿ ಯರ್ಸ್‍ಗೆ ಮೈಸೂರಿನ ನೂರಾರು ಸ್ವಯಂ ಸೇವಕರು ಉತ್ತಮ ಸಾಥ್ ನೀಡಿದ್ದಾರೆ. ಮೈಸೂರಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ಈಗ ದಿನದಿಂದ ಕಡಿಮೆಯಾ ಗುತ್ತಿದೆ. ಇದಕ್ಕಾಗಿ ಶ್ರಮಿಸಿದ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸರಂತೆಯೇ ಸ್ವಯಂ ಸೇವಕರು ಸಹ ಬೆವರು ಹರಿಸಿದ್ದಾರೆ. ಲಾಕ್ ಡೌನ್ ಸಂದರ್ಭ ಕಷ್ಟಕ್ಕೆ ಸಿಲುಕಿದವರ ಮನೆ ಬಾಗಿಲಿಗೆ ಔಷಧಿ,…
ಮೈಸೂರಿನ ಐದು ನಿರಾಶ್ರಿತ ಕೇಂದ್ರಗಳಿಂದ 93 ಮಂದಿ ಸ್ವಸ್ಥಳಕ್ಕೆ, ಕೆಲವರು ಕೆಲಸಕ್ಕೆ ವಾಪಸ್
May 11, 2020ಮೈಸೂರು, ಮೇ 10(ಎಂಕೆ)- ಕೊರೊನೊ ಹರಡುವಿಕೆ ತಡೆಯಲು ದೇಶದಲ್ಲಿ ದಿಢೀರ್ ಲಾಕ್‍ಡೌನ್ ಜಾರಿಯಾಗಿದ್ದರಿಂದ ಕಷ್ಟಕ್ಕೆ ಸಿಲುಕಿ ಮೈಸೂರಿನ ನಿರಾಶ್ರಿತರ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಉಳಿದು ಕೊಂಡಿದ್ದ ನೂರಾರು ಜನರು, ಲಾಕ್‍ಡೌನ್ ಸಡಿಲವಾಗು ತ್ತಿದ್ದಂತೆ ತಮ್ಮ ಊರುಗಳಿಗೆ ಹೋದರೆ ಕೆಲವರು ಉದ್ಯೋಗಕ್ಕೆ ಮರಳುತ್ತಿದ್ದಾರೆ. ಮೈಸೂರು ಮಹಾನಗರಪಾಲಿಕೆಯಿಂದ ನಗರದ ವಿವಿಧೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿದ್ದ 93 ಮಂದಿ ನಿರಾ ಶ್ರಿತರಲ್ಲಿ 32 ಮಂದಿ, ನೇರಂಬಳ್ಳಿ ಕಲ್ಯಾಣ ಮಂಟಪದಿಂದ 8 ಮಂದಿ, ನಿತ್ಯೋತ್ಸವ ಕಲ್ಯಾಣ ಮಂಟಪದಿಂದ…
ವಿವಿಧ ಕ್ಷೇತ್ರಗಳ ಸಾರ್ಥಕ ಸೇವೆ ಜತೆಗೇ ಮಕ್ಕಳ ಪಾಲನೆಯಲ್ಲೂ ಮಾದರಿಯಾದ ಮಾತೆಯರ ಪಾದ ತೊಳೆದು ಸನ್ಮಾನ
May 11, 2020ಮೈಸೂರು, ಮೇ 10(ಪಿಎಂ)- `ಅಂತಾ ರಾಷ್ಟ್ರೀಯ ಅಮ್ಮಂದಿರ ದಿನ’ದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಲೇ ತಮ್ಮ ಮಕ್ಕಳ ಪಾಲನೆಯಲ್ಲೂ ಮಾದರಿಯಾದ ಮಾತೆಯರ ಪಾದ ತೊಳೆದು ಭಾನುವಾರ ನಗರದಲ್ಲಿ ಸನ್ಮಾನಿಸಿದರು. ಮೈಸೂರಿನ ಕಾಡಾ ಕಚೇರಿ ಆವರಣ ನಡೆದ ಸರಳ ಸಮಾರಂಭದಲ್ಲಿ ವೈದ್ಯೆ ಡಾ.ಇಂದಿರಾ ನರಸಿಂಹನ್, ಸಂಗೀತ ವಿದುಷಿ ಸಾವಿತ್ರಿ ಪ್ರಭಾಕರ್, ಸಣ್ಣ ಹೋಟೆಲ್ ಮಾಲೀಕರಾದ ಅನಂತಲಕ್ಷ್ಮಿ ಹಾಗೂ `ಮನೆಗೆಲಸ’ ವೃತ್ತಿ ಮಾಡುತ್ತಲೇ ಇಬ್ಬರು ವಿಶೇಷ ಮಕ್ಕಳ ಪಾಲನೆಯನ್ನೂ ಸಮರ್ಥವಾಗಿ ನಡೆಸುತ್ತಿರುವ ಸವಿತಾ…
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಸರಳ ಆಚರಣೆ
May 11, 2020ಮೈಸೂರು, ಮೇ 10(ಆರ್‍ಕೆಬಿ)- ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಮೈಸೂರು ಜಿಲ್ಲಾಡಳಿತ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಚಾಮರಾಜ ಕ್ಷೇತ್ರ ಶಾಸಕ ಎಲ್. ನಾಗೇಂದ್ರ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಹೇಮ ರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಮಾ ಜಕ್ಕೆ ಒಳ್ಳೆಯ ವಿಚಾರಗಳನ್ನು ನೀಡಿದ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶವನ್ನು ನಾವೆಲ್ಲರೂ ಅನುಸರಿಸಬೇಕು ಎಂದರು. ಕಿತ್ತಳೆ ವಲಯದತ್ತ ಮೈಸೂರು: ದೇಶ…
`ಸ್ಪಿರುಲಿನಾ ಚಿಕ್ಕಿ’ ಕೋವಿಡ್ ಚಿಕಿತ್ಸೆಗಲ್ಲ: ಸಿಎಫ್‍ಟಿಆರ್‍ಐ ಸ್ಪಷ್ಟನೆ ಮಕ್ಕಳ ನ್ಯೂನಪೋಷಣೆ ಸುಧಾರಿಸಲು ಅಭಿವೃದ್ಧಿಪಡಿಸಿದ್ದು
May 11, 2020ಮೈಸೂರು, ಮೇ 10(ಆರ್‍ಕೆಬಿ)- ಸಿಎಫ್‍ಟಿಆರ್‍ಐ ಮೈಸೂರು ಅಭಿವೃದ್ಧಿ ಪಡಿಸಿರುವ ಸ್ಪಿರುಲಿನಾ ಚಿಕ್ಕಿಗಳು ಮಕ್ಕಳಲ್ಲಿ ಕಾಣುವ ನ್ಯೂನಪೋಷಣೆ ಯನ್ನು ಸುಧಾರಿಸಲೆಂದು ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಕೋವಿಡ್ ರೋಗಕ್ಕೆ ಚಿಕಿತ್ಸೆಗಾಗಿ ಅಭಿವೃದ್ಧಿ ಪಡಿ ಸಿದ್ದಲ್ಲ ಎಂದು ಕೇಂದ್ರೀಯ ಆಹಾರ ತಂತ್ರ ಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಪ್ರಕಟಣೆ ತಿಳಿಸಿದೆ. ಈ ಸ್ಪಿರುಲಿನಾ ಚಿಕ್ಕಿಗಳಾಗಲಿ ಅಥವಾ ಇದೇ ರೀತಿಯಲ್ಲಿ ಪರಿಹಾರ ಆಹಾರ ವಾಗಿ ಸರಬರಾಜು ಮಾಡಿದ ಇತರೆ ಸಿಎಫ್‍ಟಿಆರ್‍ಐ ಉತ್ಪನ್ನಗಳಾಗಲಿ ಯಾವುದೇ ರೋಗ ಇಲ್ಲವೇ ಖಾಯಿಲೆಗೆ ಚಿಕಿತ್ಸೆ ಎಂದು ಎಲ್ಲಿಯೂ…










