ಮೈಸೂರು

ಪಟ್ಟಿಯಿಂದ ಮತದಾರರ ಹೆಸರು  ಬಿಟ್ಟು ಹೋಗದಂತೆ ಎಚ್ಚರ ವಹಿಸಿ
ಮೈಸೂರು

ಪಟ್ಟಿಯಿಂದ ಮತದಾರರ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ

April 5, 2023

ಮೈಸೂರು, ಏ.4(ಆರ್‍ಕೆ)-ಮತ ದಾರರ ಪಟ್ಟಿಯಿಂದ ಯಾರ ಹೆಸರೂ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸು ವಂತೆ ಜಿಲ್ಲಾ ಚುನಾವಣಾಧಿಕಾರಿ ಗಳೂ ಆದ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂಜನಗೂಡು ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಇಂದು ಸೆಕ್ಟರಲ್ ಅಧಿಕಾರಿಗಳು, ಸ್ಥಿರ ನಿಗಾ ತಂಡ ಹಾಗೂ ಬೂತ್ ಲೆವೆಲ್ ಅಧಿಕಾರಿ ಗಳ ಸಭೆ ನಡೆಸಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಹೊಸದಾಗಿ ಹೆಸರು ಸೇರಿಸಲು ಏಪ್ರಿಲ್ 11ರವರೆಗೆ ಅವಕಾಶವಿರುವುದರಿಂದ…

ವರುಣಾದಲ್ಲಿ ಸಿದ್ದು ವಿರುದ್ಧ ಸೋಮಣ್ಣ?
ಮೈಸೂರು

ವರುಣಾದಲ್ಲಿ ಸಿದ್ದು ವಿರುದ್ಧ ಸೋಮಣ್ಣ?

April 5, 2023

ಮೈಸೂರು, ಏ.4(ಆರ್‍ಕೆ)- ಪ್ರತಿಷ್ಠಿತ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕಣ ಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆದ ಬಿ.ವೈ. ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ, ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧಿ ಸುವುದಾಗಿ ಸ್ಪಷ್ಟಪಡಿಸಿದ್ದರು….

ಏ.9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬಂಡೀಪುರದಲ್ಲಿ ಎಡಿಜಿಪಿ ಅಲೋಕ್‍ಕುಮಾರ್ ಪರಿಶೀಲನೆ
ಮೈಸೂರು

ಏ.9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬಂಡೀಪುರದಲ್ಲಿ ಎಡಿಜಿಪಿ ಅಲೋಕ್‍ಕುಮಾರ್ ಪರಿಶೀಲನೆ

April 5, 2023

ಮೈಸೂರು, ಏ.4(ಆರ್‍ಕೆ)- ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 9ರಂದು ಚಾಮರಾಜನಗರ ಜಿಲ್ಲೆ, ಗುಂಡ್ಲು ಪೇಟೆ ತಾಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವರು. ಪ್ರಧಾನಿಗಳ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಇಂದು ಬಂಡೀಪುರಕ್ಕೆ ಭೇಟಿ ನೀಡಿ, ಮೇಲುಕಮನ ಹಳ್ಳಿ ಸಮೀಪ ಹೆಲಿಪ್ಯಾಡ್ ನಿರ್ಮಿಸಲು ದ್ದೇಶಿಸಿರುವ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ಪ್ರಧಾನ ಮಂತ್ರಿಗಳು ಆಗಮಿಸುವ ಹೆಲಿಕಾಪ್ಟರ್ ಸುರಕ್ಷಿತವಾಗಿ ಭೂಸ್ಪರ್ಶವಾಗಲು ವ್ಯವಸ್ಥಿತ ಹೆಲಿಪ್ಯಾಡ್‍ಗೆ ಕ್ರಮ ವಹಿಸಬೇಕೆಂದು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ…

ನಂಜನಗೂಡಲ್ಲಿ ವಿಜೃಂಭಣೆಯ ಪಂಚ ಮಹಾರಥೋತ್ಸವ
ಮೈಸೂರು

ನಂಜನಗೂಡಲ್ಲಿ ವಿಜೃಂಭಣೆಯ ಪಂಚ ಮಹಾರಥೋತ್ಸವ

April 4, 2023

ನಂಜನಗೂಡು, ಏ.2- ದಕ್ಷಿಣಕಾಶಿ, ಗರಳಾಪುರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿ ರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ (ದೊಡ್ಡಜಾತ್ರೆ) ಗೌತಮ ಪಂಚ ಮಹಾ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಉದ್ಘೋಷ, ಜಯಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು. ದೊಡ್ಡಜಾತ್ರೆ ಅಂಗವಾಗಿ ಭಾನುವಾರ ಮುಂಜಾನೆ 2 ಗಂಟೆಯಿಂದಲೇ ದೇವಾ ಲಯದಲ್ಲಿ ಕ್ಷೀರಾಭಿಷೇಕ, ಫಲಪಂಚಾ ಮೃತಾಭಿಷೇಕ, ಮಹೋನ್ನತಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆ ನೆರವೇರಿಸಿ ನಂತರ ಹೋಮ ಹವ ನಾದಿಗಳನ್ನು ನೆರವೇರಿಸಲಾಯಿತು. ನಂತರ ರಥದ ಬಳಿ ಬಲಿ ಪೂಜೆ ನೆರವೇರಿಸಿದ ನಂತರ ಉತ್ಸವಮೂರ್ತಿಯನ್ನು ವಿಶೇಷ ಹೂ,…

`ಸಂವಿಧಾನ ಬಚಾವೋ, ದೇಶ ಬಚಾವೋ’ ಪ್ರತಿಭಟನಾ ಧರಣಿ  ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ
ಮೈಸೂರು

`ಸಂವಿಧಾನ ಬಚಾವೋ, ದೇಶ ಬಚಾವೋ’ ಪ್ರತಿಭಟನಾ ಧರಣಿ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ

April 3, 2023

ಮೈಸೂರು,ಏ.2(ಪಿಎಂ)- ರಾಜ್ಯ ಬಿಜೆಪಿ ಸರ್ಕಾ ರದ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಜನತೆ ಈ ಬಾರಿ ಕಾಂಗ್ರೆಸ್‍ಗೆ ಅಧಿಕಾರ ನೀಡಲು ತೀರ್ಮಾನಿಸಿದ್ದು, ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆ ಬಳಿಕ ಒಕ್ಕಲಿಗರು, ಲಿಂಗಾ ಯತರು, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿ ದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆ ಆವರಣದಲ್ಲಿ ಬಿಜೆಪಿ ಮೀಸಲಾತಿ ಯನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳು ತ್ತಿದೆ…

ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ತಂಡ ತೀವ್ರ ನಿಗಾ
ಮೈಸೂರು

ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ತಂಡ ತೀವ್ರ ನಿಗಾ

March 16, 2023

ಮೈಸೂರು, ಮಾ. 15(ಆರ್‍ಕೆ)- ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೆಚ್ಚದ ಮೇಲೆ ತೀವ್ರ ನಿಗಾ ಇಡಲು ಸ್ಥಿರ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಇಂದು ಚುನಾವಣೆ ಸಿದ್ಧತೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಿ ಸೆಕ್ಟರ್ ಅಧಿಕಾರಿ ಗಳು, ಪೊಲೀಸ್, ಅರಣ್ಯ, ಕಂದಾಯ, ಜಿಎಸ್‍ಟಿ, ವಾಣಿಜ್ಯ ತೆರಿಗೆ, ಅಬಕಾರಿ, ಆದಾಯ ತೆರಿಗೆ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಚುನಾವಣಾ ಅಕ್ರಮ ತಡೆಗಟ್ಟಲು ಸ್ಥಿರ…

ಟೋಲ್‍ನಿಂದ ಪಾರಾಗಲು ಸರ್ವಿಸ್ ರಸ್ತೆಗಿಳಿಯುತ್ತಿರುವ ವಾಹನಗಳು!
ಮೈಸೂರು

ಟೋಲ್‍ನಿಂದ ಪಾರಾಗಲು ಸರ್ವಿಸ್ ರಸ್ತೆಗಿಳಿಯುತ್ತಿರುವ ವಾಹನಗಳು!

March 16, 2023

ಮೈಸೂರು, ಮಾ.15(ಆರ್‍ಕೆ)-ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ವೇ ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಒಂದೆಡೆ ಪ್ರತಿಭಟನೆ ಎದುರಿ ಸುತ್ತಿದ್ದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದೀಗ ಮತ್ತೊಂದು ಹೊಸ ತಲೆನೋವು ಆರಂಭವಾಗಿದೆ. ಬೆಂಗಳೂರು-ನಿಡಘಟ್ಟ ನಡುವೆ ಕಣಿಮಿಣಿಕೆ ಬಳಿ ಸ್ಥಾಪಿಸಿರುವ ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಯಿಂದ ಪಾರಾ ಗಲು ವಾಹನ ಸವಾರರು, ಅದಕ್ಕಿಂತ ಮುಂಚಿತವಾಗಿ ಕ್ರೈಸ್ಟ್ ಯೂನಿವರ್ಸಿಟಿ ಬಳಿ ಎಡಬದಿ ಇರುವ ಬ್ಯಾರಿಕೇಡ್ ತೆರವುಗೊಳಿಸಿ ಸರ್ವೀಸ್ ರಸ್ತೆಯಲ್ಲಿ ಮೈಸೂರು ಕಡೆ ಬರುತ್ತಿದ್ದಾರೆ. ನಿನ್ನೆ (ಮಾ.14)ಯಿಂದ ಈ ಪ್ಲಾಜಾದಲ್ಲಿ ಟೋಲ್ ವಸೂಲಿ…

ಈಗ ನಾನು ನಂಜನಗೂಡು  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಲ್ಲ
ಮೈಸೂರು

ಈಗ ನಾನು ನಂಜನಗೂಡು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಲ್ಲ

March 16, 2023

ಮೈಸೂರು, ಮಾ.15-ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ, ಈಗ ಹಿಂದೆ ಸರಿದು, ದಿವಂಗತ ಆರ್.ಧ್ರುವ ನಾರಾಯಣ್ ಅವರ ಪುತ್ರ ದರ್ಶನ್‍ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿ ಸಿದ್ದಾರೆ. ಬುಧವಾರ ಸಂಜೆ ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಧ್ರುವ ನಾರಾಯಣ್ ಅವರ ನಿವಾಸಕ್ಕೆ ತಮ್ಮ ಪುತ್ರ ಸುನೀಲ್ ಬೋಸ್ ಅವರೊಂದಿಗೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದರು. ಧ್ರುವನಾರಾಯಣ್ ಓರ್ವ ಕ್ರಿಯಾ ಶೀಲ ನಾಯಕ. ಆತ ತೀರಿಹೋದನಲ್ಲಾ,…

ಮೊದಲ ಹಂತದಲ್ಲಿ 11,133  ಪೌರಕಾರ್ಮಿಕರ ಖಾಯಂ
ಮೈಸೂರು

ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರ ಖಾಯಂ

March 14, 2023

ಮೈಸೂರು,ಮಾ.13(ಪಿಎಂ)- ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಯಡಿ ಕೆಲಸ ಮಾಡುತ್ತಿರುವ 11,133 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅಲ್ಲದೆ, ಎರಡನೇ ಹಂತ ದಲ್ಲಿ 12,867 ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಕೋಟೆ ಎಂ.ಶಿವಣ್ಣ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪೌರಕಾರ್ಮಿಕರ ಕುಂದು ಕೊರತೆ ಸಂಬಂಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಬಳಿಕ ಇಲ್ಲಿನ ಕೋರ್ಟ್ ಹಾಲ್‍ನಲ್ಲಿ…

ಮಾಜಿ ರಾಯಭಾರಿ ಎ.ಮಾಧವನ್ ನಿಧನ
ಮೈಸೂರು

ಮಾಜಿ ರಾಯಭಾರಿ ಎ.ಮಾಧವನ್ ನಿಧನ

March 14, 2023

ಮೈಸೂರು,ಮಾ.13(ಪಿಎಂ)- ಹಿಂದಿನ ಯುಎಸ್‍ಎಸ್‍ಆರ್‍ನ ಮಾಸ್ಕೋ, ಜಪಾನ್ ಮತ್ತು ಜರ್ಮನಿಯಲ್ಲಿ ಭಾರತದ ರಾಯಭಾರಿಯಾಗಿದ್ದು, ಈಗ ಮೈಸೂ ರಿನಲ್ಲಿ ನೆಲೆಸಿದ್ದ ಎ.ಮಾಧವನ್ (89) ಅವರು ವಯೋಸಹಜ ಅನಾರೋಗ್ಯ ದಿಂದ ಭಾನುವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಲೇಖಕರೂ ಆದ ಪತ್ನಿ ಶ್ರೀಮತಿ ಗಿರಿಜಾ ಮಾಧವನ್, ಅಮೆರಿಕ ದಲ್ಲಿ ನೆಲೆಸಿರುವ ಪುತ್ರ ಸೇರಿದಂತೆ ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಮಿಳುನಾಡು ಮೂಲದವರಾದ ಎ. ಮಾಧವನ್, ಎಂ.ಅನಂತನಾರಾಯಣನ್ ಮತ್ತು ಅಖೀಲಾಂಡೇಶ್ವರಿ ಪುತ್ರರಾಗಿ 1933ರ ಅ.9ರಂದು ಜನಿಸಿದರು….

1 4 5 6 7 8 1,611
Translate »