ಮೈಸೂರು

ನಂಜನಗೂಡಲ್ಲಿ ಹರ್ಷವರ್ಧನ್‍ಗೆ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ
ಮೈಸೂರು

ನಂಜನಗೂಡಲ್ಲಿ ಹರ್ಷವರ್ಧನ್‍ಗೆ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ

March 3, 2023

ನಂಜನಗೂಡು, ಮಾ.2- ಮುಂಬ ರುವ ವಿಧಾನಸಭಾ ಚುನಾವಣೆಯಲ್ಲಿ ನಂಜನ ಗೂಡು ಕ್ಷೇತ್ರದ ಹಾಲಿ ಶಾಸಕ ಬಿ.ಹರ್ಷ ವರ್ಧನ್ 30 ಸಾವಿರಕ್ಕೂ ಅಧಿಕ ಮತ ಗಳಿಂದ ಜಯ ಗಳಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹರ್ಷವರ್ಧನ್ 12 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರಿಗೆ ಸಿಗುತ್ತಿರುವ ಅಭೂತ…

ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ
ಮೈಸೂರು

ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ

March 3, 2023

ಮೈಸೂರು, ಮಾ.2(ಎಂಕೆ)-ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಮಾ.26 ರಂದು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸುವ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನಿಸಲಾಯಿತು. ಮೈಸೂರಿನ ಸೈಲೆಂಟ್ ಶೋರ್‍ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳೀಯ ಜೆಡಿಎಸ್ ಶಾಸಕರು, ಮುಖಂಡರು, ನಗರಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಂಬಂಧ ಚರ್ಚೆ ನಡೆಸಲಾಯಿತು. ಈ ವೇಳೆ ಮುಖಂಡರಿಂದ ಹಲವು ಸಲಹೆಗಳನ್ನು ಪಡೆದು ಮಾತನಾಡಿದ ಮಾಜಿ…

ಆರೋಪ, ಅಪಪ್ರಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ
ಮೈಸೂರು

ಆರೋಪ, ಅಪಪ್ರಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ

March 3, 2023

ಮೈಸೂರು: ಆರೋಪ, ಅಪಪ್ರಚಾರದ ಬದಲು ನಿಮ್ಮ ಪಕ್ಷದ ಸಾಧನೆ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ. ಹಣ ಕೊಟ್ಟು ಜನರನ್ನು ಕರೆಸಿ ಭಾಷಣ ಮಾಡುವ ಬದಲು, ನೀವೇ ಹಳ್ಳಿಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಜೆಡಿಎಸ್, ಬಿಜೆಪಿಯ `ಬಿ’ ಟೀಂ. ಅದಕ್ಕೆ ಮತ ನೀಡಬೇಡಿ ಎಂದು ಅಪಪ್ರಚಾರ ಮಾಡುತ್ತೀರಿ. ಈ ಕಾಯಿಲೆ ಸಿದ್ದರಾಮಯ್ಯನವರಿಗೆ ಮಾತ್ರ ಇದೆ ಎಂದುಕೊಂಡಿದ್ದೆ. ಈಗ ಅಮಿತ್ ಷಾಗೂ ಶುರುವಾಗಿದೆ. ನಿಮಗೆ ಜೆಡಿಎಸ್‍ನ ಚಿಂತೆ ಏಕೆ. ನೀವೇನು…

ಕ್ಷೇತ್ರದ ಜನತೆ ಸ್ವಚ್ಛ ರಾಜಕಾರಣಕ್ಕೆ ಈ ಬಾರಿ ಭಾಷ್ಯ ಬರೆಯಲಿದ್ದಾರೆ
ಮೈಸೂರು

ಕ್ಷೇತ್ರದ ಜನತೆ ಸ್ವಚ್ಛ ರಾಜಕಾರಣಕ್ಕೆ ಈ ಬಾರಿ ಭಾಷ್ಯ ಬರೆಯಲಿದ್ದಾರೆ

March 3, 2023

ಮೈಸೂರು, ಮಾ.2-ಚುನಾವಣೆಯಲ್ಲಿ ಜಾತಿ-ಮತ-ಸ್ವಜನ ಪಕ್ಷಪಾತಿಗಳಿಗೆ ಮಣೆ ಹಾಕಬೇಡಿ ಎಂದು ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಆಯೋಜಿಸಿದ್ದ ವಾರ್ಡ್ ನಂ 55ರ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ವಾರ್ಡ್ ಮಟ್ಟದ ಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಗೆ ಕೆಲವೇ ದಿನಗಳಿದ್ದು, ಈ ಸಂದರ್ಭದಲ್ಲಿ ಕೆಲವರು ಜಾತಿ ಹಾಗೂ ಧರ್ಮವನ್ನು ಮುನ್ನೆಲೆಗೆ ತಂದಿದ್ದಾರೆ. ಆದರೆ, ನಾನು ಅದೆಲ್ಲವನ್ನು ಮೀರಿ ಆಲೋಚಿಸುವವನು. ಹುಟ್ಟುವಾಗ ಇಂತಹವುದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿರಲಿಲ್ಲ….

ಗೃಹ ಬಳಕೆ ಗ್ಯಾಸ್ 50 ರೂ.,ವಾಣಿಜ್ಯ 360 ರೂ. ಹೆಚ್ಚಳ
ಮೈಸೂರು

ಗೃಹ ಬಳಕೆ ಗ್ಯಾಸ್ 50 ರೂ.,ವಾಣಿಜ್ಯ 360 ರೂ. ಹೆಚ್ಚಳ

March 2, 2023

ಮೈಸೂರು, ಮಾ.1(ಆರ್‍ಕೆ)-ಪೆಟ್ರೋಲಿಯಂ ಮತ್ತು ತೈಲ ಮಾರು ಕಟ್ಟೆ ಕಂಪನಿ (ಔಒಅ)ಗಳು ತಕ್ಷಣವೇ ಜಾರಿಗೆ ಬರುವಂತೆ ಎಲ್‍ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಬೆಲೆಯನ್ನು ಹೆಚ್ಚಿಸಿವೆ. 2022ರ ಜುಲೈ ತಿಂಗಳಲ್ಲಿ ಎಲ್‍ಪಿಜಿ ದರ ಏರಿಕೆಯಾಗಿತ್ತು. ಅದ ರಂತೆ 14.2 ಕೆ.ಜಿ. ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ದರ 1,057.50 ರೂ.ನಿಂದ ಈಗ 1,107.50 ರೂ.ಗಳಿಗೆ ಹಾಗೂ 19 ಕೆ.ಜಿ.ಯ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 360 ರೂ. ಏರಿಕೆಯಾಗಿದ್ದು, ಇದ ರೊಂದಿಗೆ 1810ರೂ. ಇದ್ದ ಈ ಸಿಲಿಂಡರ್ ದರ ಈಗ…

ಭ್ರಮರ ಟ್ರಸ್ಟ್‍ನ ಜೀವಮಾನ ಸಾಧನೆ ಪ್ರಶಸ್ತಿ
ಮೈಸೂರು

ಭ್ರಮರ ಟ್ರಸ್ಟ್‍ನ ಜೀವಮಾನ ಸಾಧನೆ ಪ್ರಶಸ್ತಿ

March 2, 2023

ಮೈಸೂರು,ಮಾ.1(ಪಿಎಂ)-ಕೋವಿಡ್ ಮಹಾ ಮಾರಿ ತೊಡೆದು ಹಾಕಲು `ಕೋವ್ಯಾಕ್ಸಿನ್’ ಲಸಿಕೆ ಆವಿಷ್ಕರಿಸಿದ `ಭಾರತ್ ಬಯೋಟೆಕ್’ನ ವಿಜ್ಞಾನಿಗಳ ತಂಡವು ವೈ.ಟಿ ಮತ್ತು ಮಾಧುರಿ ತಾತಾಚಾರಿಯವರ `ಭ್ರಮರ ಟ್ರಸ್ಟ್’ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ `ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನವಾಗಿದ್ದು, ಮಾ.4ರಂದು ಮೈಸೂರಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಭಾರತ್ ಬಯೋಟೆಕ್‍ನ ಸಹ ಸಂಸ್ಥಾಪಕರೂ ಆದ ಕಾರ್ಯಕಾರಿ ಅಧ್ಯಕ್ಷ ಡಾ.ಕೃಷ್ಣ ಎಲ್ಲ ಅವರ ನೇತೃತ್ವ ದಲ್ಲಿ ಸದರಿ ಲಸಿಕೆ ಆವಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿಗಳ ತಂಡವು ಪ್ರಶಸ್ತಿ ಸ್ವೀಕರಿಸಲಿದೆ. ಮೈಸೂರು ಜಿಲ್ಲಾ ಪತ್ರಕರ್ತರ…

ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ತನ್ವೀರ್ ಸೇಠ್ ನಿರ್ಧಾರ
ಮೈಸೂರು

ಚುನಾವಣಾ ರಾಜಕಾರಣದಿಂದ ನಿವೃತ್ತಿಗೆ ತನ್ವೀರ್ ಸೇಠ್ ನಿರ್ಧಾರ

February 28, 2023

ಮೈಸೂರು, ಫೆ.27-ಮೈಸೂರಿನ ನರ ಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಸತತ ವಾಗಿ ಐದು ಬಾರಿ ಗೆಲುವು ಸಾಧಿಸಿ ಸೋಲಿ ಲ್ಲದ ಸರದಾರನಾಗಿರುವ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ತಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಕಳೆದ ಡಿಸೆಂಬರ್ ನಲ್ಲಿ, ಬೆಳಗಾವಿ ಅಧಿವೇಶನದ ವೇಳೆ ಎಐಸಿಸಿ ಮತ್ತು ಕೆಪಿಸಿಸಿ ನಾಯಕರಿಗೆ ಲಿಖಿತವಾ ಗಿಯೇ ತಿಳಿಸಿರುವ ತನ್ವೀರ್, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯಲು ಅವಕಾಶ ಕಲ್ಪಿಸುವಂತೆ ಕೋರಿಕೊಂಡಿ ದ್ದಾರೆ. ಜೊತೆಗೆ ತಾವು ಚುನಾವಣೆಯಲ್ಲಿ…

ಈಗ ವಿಶ್ವವಿದ್ಯಾನಿಲಯಗಳೆಂದರೆ ಹಾಸ್ಯಾಸ್ಪದ ಎನ್ನುವಂತಾಗಿದೆ
ಮೈಸೂರು

ಈಗ ವಿಶ್ವವಿದ್ಯಾನಿಲಯಗಳೆಂದರೆ ಹಾಸ್ಯಾಸ್ಪದ ಎನ್ನುವಂತಾಗಿದೆ

February 28, 2023

ಮೈಸೂರು,ಫೆ.27(ಪಿಎಂ)- ವಿಶ್ವವಿದ್ಯಾನಿಲಯಗಳು ಎಂದರೆ ಇಂದು ಹಾಸ್ಯಾಸ್ಪದ ಎನ್ನುವಂತಾಗಿದೆ. ಅವುಗಳಿಗೆ ಬೆಲೆಯೇ ಇಲ್ಲವೆನೋ ಎನ್ನುವಂತಹ ಸನ್ನಿವೇಶ ನಿರ್ಮಾಣ ವಾಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವಿಷಾದಿಸಿದರು. ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಹಾಗೂ ಅಭಿನಂದನಾ ಸಮಿತಿ, ಸಂಶೋಧನಾ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ಎನ್. ಯಶೋಧ ಮತ್ತು ಆಡಳಿತಾಧಿಕಾರಿ ಡಾ.ಜಿ.ಹೆಚ್.ನಾಗ ರಾಜ್ ಅವರಿಗೆ `ಸಾರ್ಥಕ ಸಾಧಕರಿಗೆ ಬೀಳ್ಕೊಡುಗೆ’ ಶೀರ್ಷಿಕೆಯಡಿ ಸೋಮವಾರ ಹಮ್ಮಿಕೊಂಡಿದ್ದ ಅಭಿ ನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಶ್ವವಿದ್ಯಾನಿಲಯಗಳಲ್ಲಿ…

ಕರ್ನಾಟಕ ಸಂಗೀತ ಪರಂಪರೆಗೆ ಪಿಟೀಲು ಟಿ.ಚೌಡಯ್ಯರಿಂದ ವಿಶ್ವದರ್ಜೆ ಕೊಡುಗೆ
ಮೈಸೂರು

ಕರ್ನಾಟಕ ಸಂಗೀತ ಪರಂಪರೆಗೆ ಪಿಟೀಲು ಟಿ.ಚೌಡಯ್ಯರಿಂದ ವಿಶ್ವದರ್ಜೆ ಕೊಡುಗೆ

February 27, 2023

ಮೈಸೂರು,ಫೆ.26(ಪಿಎಂ)- ಕರ್ನಾ ಟಕ ಸಂಗೀತ ಪರಂಪರೆಗೆ ಮೈಸೂರು ಪಿಟೀಲು ಟಿ.ಚೌಡಯ್ಯನವರು ಅಸಾ ಧಾರಣ, ವಿಶ್ವದರ್ಜೆಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನುಭಾವರ ಪರಿಶ್ರಮದಿಂದ ಕರ್ನಾಟಕ ಸಂಗೀತವು ನಿಸ್ಸಂದೇಹವಾಗಿ ಇಡೀ ಪ್ರಪಂಚದಲ್ಲೇ ಅತ್ಯಂತ ಮಾಧರ್ಯವೆಂಬ ಮನ್ನಣೆ ಗಳಿಸಿದೆ ಎಂದು ಚಿತ್ರವೀಣಾ ವಿದ್ವಾಂಸ ಎನ್.ರವಿಕಿರಣ್ ಹೇಳಿದರು. ಮೈಸೂರಿನ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್‍ನಲ್ಲಿ ಭಾನು ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕಿ ಡಾ.ಪದ್ಮಾವತಿ ನರಸಿಂಹನ್ ಅವರ `ಕಲಾ ಕೌಸ್ತುಭ’ ಆಂಗ್ಲ ಪುಸ್ತಕ (ಕರ್ನಾಟಕ ಸಂಗೀತಕ್ಕೆ ಪಿಟೀಲು ಟಿ. ಚೌಡಯ್ಯನವರ ಕೊಡುಗೆ ಕುರಿತು ರಚಿಸಿರುವ…

ಬಂಜಾರ ಸಮುದಾಯ ವಿಶಿಷ್ಟ ಸಂಸ್ಕøತಿ, ಗುರು ಪರಂಪರೆ ಹೊಂದಿದೆ
ಮೈಸೂರು

ಬಂಜಾರ ಸಮುದಾಯ ವಿಶಿಷ್ಟ ಸಂಸ್ಕøತಿ, ಗುರು ಪರಂಪರೆ ಹೊಂದಿದೆ

February 27, 2023

ಮೈಸೂರು, ಫೆ.26(ಎಂಟಿವೈ)-ಬಂಜಾರ ಸಮುದಾಯ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಗುರುಪರಂಪರೆ ಯನ್ನು ಹೊಂದಿದೆ ಎಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ತಿಳಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ನಡೆಯುವ ಬುಡಕಟ್ಟು ಸಂಸ್ಕೃತಿ ಉತ್ಸವ ವಿಭಿನ್ನವಾಗಿರುತ್ತದೆ. ಯಾವುದೇ ಧರ್ಮದಲ್ಲಿಯೂ ಇಲ್ಲದ ಆಚರಣೆ ಮತ್ತು ಸಂಪ್ರದಾಯ ನಮ್ಮಲ್ಲಿದೆ. ಸಂತ ಸೇವಾಲಾಲ್‍ರ ಸಂದೇಶವು ಸೇವೆಗಾಗಿ ಬಾಳು ಎನ್ನುವುದೇ…

1 6 7 8 9 10 1,611
Translate »