ಎಟಿಎಂ ಸೇವೆ ಎಂದಿನಂತೆ ಲಭ್ಯ ಬ್ಯಾಂಕ್ ಶಾಖೆಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ಸಣ್ಣಪುಟ್ಟ ಕೆಲಸಕ್ಕೆ ಬ್ಯಾಂಕಿಗೆ ಹೋಗದಂತೆ ಮನವಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಪರ್ಯಾಯವಾಗಿ ಬಳಸಲು ಸಲಹೆ ಮೈಸೂರು, ಮಾ.23(ಪಿಎಂ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆ ಲಾಕ್ ಡೌನ್ ನಿರ್ಬಂಧಕ್ಕೆ ಒಳಗಾಗಿದೆ. ಇಲ್ಲಿನ ಬ್ಯಾಂಕಿಂಗ್ ಸೇವೆ ಲಾಕ್‍ಡೌನ್ ನಿರ್ಬಂಧ ದಿಂದ ಹೊರತಾಗಿದ್ದರೂ ಕನಿಷ್ಠ ಅಗತ್ಯ ಸೇವೆಗೆ ಸೀಮಿತಗೊಳಿಸಲಾಗಿದೆ. ಲಾಕ್‍ಡೌನ್ ನಿರ್ಬಂಧವಿರುವ ಜಿಲ್ಲೆ ಗಳು ಮಾತ್ರವಲ್ಲದೆ, ಕೊರೊನಾ ಹಿನ್ನೆಲೆ ಯಲ್ಲಿ ಇಡೀ ರಾಜ್ಯದಲ್ಲಿ…
ಲಾಕ್‍ಡೌನ್ ಎಫೆಕ್ಟ್: ಮೈಸೂರಲ್ಲಿ ಬಂದ್ ವಾತಾವರಣ ಅಗತ್ಯ ವಸ್ತುಗಳ ಮಾರಾಟ ಅಬಾಧಿತ
March 24, 2020ಮೈಸೂರು, ಮಾ.23(ಆರ್‍ಕೆಬಿ)- ಕೊರೊನಾ ವೈರಸ್ ತಡೆಗಟ್ಟುವ ದೃಷ್ಟಿ ಯಿಂದ ನಿನ್ನೆಯಷ್ಟೇ ಜನತಾ ಕಫ್ರ್ಯೂ ಯಶಸ್ವಿಯಾಗಿ ಪೂರೈಸಿದ ಮೈಸೂರಿನಲ್ಲಿ ಸೋಮವಾರವೂ ಬಂದ್ ವಾತಾವರಣ ಕಂಡು ಬಂದಿತು. ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿ, ಕೆಲ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಾರಿಗೆ ಬಸ್‍ಗಳು ರಸ್ತೆಗಿಳಿಯ ಲಿಲ್ಲ. ಹೀಗಾಗಿ ಮೈಸೂರು ನಗರ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣ ದಲ್ಲಿ ಜನರು ಕಂಡು ಬರಲಿಲ್ಲ. ಪೊಲೀಸರು ನಿಲ್ದಾಣದಲ್ಲಿ ಕಾವಲಿದ್ದು, ಜನರು ಬಸ್ ನಿಲ್ದಾಣದ ಒಳಗೆ ಪ್ರವೇಶಿಸದಂತೆ ಕಟ್ಟು ನಿಟ್ಟಿನ…
ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಸಾಲದ ಕಂತು ಪಾವತಿಗೆ 6 ತಿಂಗಳ ವಿನಾಯಿತಿಗೆ ಆಗ್ರಹ
March 24, 2020ಮೈಸೂರು, ಮಾ.23(ಎಂಟಿವೈ)- ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿರುವ ಟ್ಯಾಕ್ಸಿ ಮಾಲೀಕರು ಸೇರಿದಂತೆ ಶ್ರಮಿಕ ವರ್ಗ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಾಡಿರುವ ಸಾಲದ ಕಂತು ಪಾವತಿಸಲು ಆರು ತಿಂಗಳು ವಿನಾಯಿತಿ ನೀಡುವಂತೆ ಒತ್ತಾಯಿಸಿ ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಕಾರ್ಯಕರ್ತರು ದೇವರಾಜ ಅರಸ್ ರಸ್ತೆಯಲ್ಲಿ ಭಿತ್ತಿಫಲಕ ಪ್ರದರ್ಶಿಸಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ ಮಾತನಾಡಿ, ಕೊರೊನಾ ವೈರಾಣು ಜನರನ್ನು ಭಯಭೀತ ಗೊಳಿಸಿದ್ದು,…
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳ ಸಭೆ
March 24, 2020ಕೊರೊನಾ ಸಂಹಾರಕ್ಕೆ ಕೈಜೋಡಿಸಿದ ಖಾಸಗಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಯ ಶೇ.50ರಷ್ಟು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆ ಒದಗಿಸುವ ಭರವಸೆ ಮೈಸೂರು, ಮಾ.23(ಪಿಎಂ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ಶೇ.50ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆ ಒದಗಿಸಲು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೋಮವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ವೈದ್ಯರೊಂದಿಗೆ ಸಭೆ ನಡೆಸಿ, ಕೋವಿಡ್-19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ…
ಬಾರ್, ವೈನ್‍ಸ್ಟೋರ್‍ಗಳಿಗೆ ಬೀಗಮುದ್ರೆ ಹಾಕಿದ ಅಬಕಾರಿ ಸಿಬ್ಬಂದಿ
March 24, 2020ಮೈಸೂರು ನಗರದಲ್ಲಿ 280, ಜಿಲ್ಲೆಯ ತಾಲೂಕುಗಳಲ್ಲಿ 200 ಬಾರ್‍ಗಳಿಗೆ ಬೀಗ ದಿನಕ್ಕೆ 2.5 ಕೋಟಿ ವಹಿವಾಟು ಖೋತಾ ಮೈಸೂರು,ಮಾ.23(ಎಂಟಿವೈ)- ನೊವೆಲ್ ಕೊರೊನಾ ವೈರಸ್ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಸೋಮವಾರ ಅಬಕಾರಿ ಇಲಾಖೆ ಸಿಬ್ಬಂದಿ ಎಲ್ಲಾ ಬಾರ್ ಹಾಗೂ ವೈನ್ ಸ್ಟೋರ್‍ಗಳಿಗೆ ಬೀಗ ಮುದ್ರೆ ಜಡಿದರು. ನಿಯಮ ಉಲ್ಲಂಘಿಸಿ, ಕದ್ದುಮುಚ್ಚಿ ವ್ಯಾಪಾರ ಮಾಡಬಹುದೆಂಬ ಅನು ಮಾನದಿಂದ ಸೋಮವಾರ ಬೆಳಿಗ್ಗೆಯೇ ಹಲವು ತಂಡಗಳಲ್ಲಿ…
ಮಾ.31ರವರೆಗೆ ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ
March 24, 2020ಮೈಸೂರು, ಮಾ.23(ವೈಡಿಎಸ್)-ವಿಶ್ವದಾದ್ಯಂತ ತೀವ್ರ ಹಾವಳಿ ಉಂಟು ಮಾಡುತ್ತಿರುವ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಮಾ.31ರ ವರೆಗೆ ಲಾಕ್ ಡೌನ್‍ಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದಿನ ನಿತ್ಯದ ಅಗತ್ಯ ಪದಾರ್ಥಗಳನ್ನು ಖರೀದಿ ಸಲು ದಿನಸಿ ಅಂಗಡಿ, ಸೂಪರ್ ಮಾರ್ಕೆಟ್ ಮುಂದೆ ಕ್ಯೂನಲ್ಲಿ ನಿಂತು ಖರೀದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಕರೆ ನೀಡಿದ್ದ ಜನತಾ ಕರ್ಫ್ಯೂ ಹಿನ್ನೆಲೆ ಎಲ್ಲಾ ವಾಣಿಜ್ಯ ವಹಿ ವಾಟೂ ಬಂದ್ ಆಗಿದ್ದವು….
ಹೋಟೆಲ್ ಉದ್ಯಮ ಪೂರ್ಣ ಬಂದ್‍ಗೆ ನಿರ್ಧಾರ
March 24, 2020ಮೈಸೂರು,ಮಾ.23(ಎಸ್‍ಪಿಎನ್)-ಮೈಸೂರಿನ ಹೋಟೆಲ್ ಮಾಲೀಕರು `ರಾಜ್ಯ ಮತ್ತು ಕೇಂದ್ರ’ ಸರ್ಕಾರದ ಮಾರ್ಗಸೂಚಿ ಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಮಾರಕ ವೈರಸ್ `ಕೊರೊನಾ’ ತಡೆಗೆ ಸಹಕರಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದರು. ಮೈಸೂರು ಕೃಷ್ಣಮೂರ್ತಿಪುರಂನಲ್ಲಿರುವ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಕೆಲವು ಷರತ್ತಿನೊಂದಿಗೆ ಹೋಟೆಲ್‍ನಲ್ಲಿ ತಿಂಡಿ-ತಿನಿಸುಗಳ ಪಾರ್ಸಲ್ ಹಾಗೂ ಬೇಕರಿ ವಹಿವಾಟು(ಸೋಮವಾರಕ್ಕೆ) ನಡೆಸಲು ಮಾತ್ರ ಅನುಮತಿ ನೀಡಿತ್ತು. ಆದರೆ, ಪೊಲೀಸರು ನಿರಾಕರಿಸಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಮಾಲೀಕರು ಯಾವುದೇ…
ಮೈಸೂರಿಗೆ 20 ವೆಂಟಿಲೇಟರ್ ಕೇಳಿದ್ದೇವೆ: ಜಿಲ್ಲಾಧಿಕಾರಿ
March 24, 2020ಮೈಸೂರು, ಮಾ. 23(ಆರ್‍ಕೆ)- ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಮೈಸೂರಿಗೆ 20 ವೆಂಟಿಲೇಟರ್‍ಗಳು ಬೇಕೆಂದು ಕೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಗಳಲ್ಲಿ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಇರಿಸಲಾಗಿದೆ. ಕೊರೊನಾ ವೈರಸ್ ಸೋಂಕಿತರಿಗೆ ವೆಂಟಿಲೇಟರ್‍ಗಳ ಕೊರತೆ ಇರುವ ಕಾರಣ ಸರ್ಕಾರಕ್ಕೆ 20 ವೆಂಟಿಲೇಟರ್ ಉಪಕರಣ ಬೇಕೆಂದು ಬೇಡಿಕೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ಈಗಾಗಲೇ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ನಡೆಸಿದಾಗ ತಮಗೆ…
ಕೊರೊನಾ ವೈರಸ್ ವಿರುದ್ಧ ಕಲಾವಿದರಿಂದ ಜನ ಜಾಗೃತಿ
March 24, 2020ಮೈಸೂರು, ಮಾ.23(ಆರ್‍ಕೆಬಿ)- ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಕಲಾವಿದರು ಬೀದಿಗಿಳಿದಿದ್ದಾರೆ. ಕಲಾವಿದ ಎಸ್.ಯೋಗಾನಂದ್ ನೇತೃತ್ವದ ತಂಡ ಸೋಮವಾರ ಮೈಸೂರಿನ ಚಿಕ್ಕ ಗಡಿಯಾರ ವೃತ್ತದ ಬಳಿ ಕಲೆಯ ಮೂಲಕ ಕೊರೊನಾ ವಿಚಾರದಲ್ಲಿ ಜನಜಾಗೃತಿ ಮೂಡಿಸಿದರು. ಕೊರೊನಾ ವೈರಸ್‍ನ ಚಿತ್ರವನ್ನು ರಚಿಸಿ, ಅದರಿಂದ ಉಂಟಾಗುವ ಭೀಕರತೆ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ವೈರಸ್ ಹರಡಬೇಡಿ, ಮುಂಜಾಗ್ರತೆ ವಹಿಸಿ ದರೆ ಕೊರೊನಾ ವೈರಸ್ ಓಡಿಸಬಹುದು. ಎಲ್ಲರೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಿ. ಮಾಸ್ಕ್ ಧರಿಸಿ, ಆಗಾಗ್ಗೆ ಸ್ಯಾನಿಟೈಜûರ್ ಬಳಸಿ ಕೈ ತೊಳೆಯುತ್ತಿರಿ. ಮುಖ,…
ಹೋಂ ಕ್ವಾರಂಟೈನ್ ಆದೇಶ ಉಲ್ಲಂಘನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
March 24, 2020ಮೈಸೂರು, ಮಾ.23(ವೈಡಿಎಸ್)- ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ವಿವಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರು ವಿವಿ ಮೊಹಲ್ಲಾ ವ್ಯಕ್ತಿಯೊಬ್ಬರು ಮಾ.22ರಂದು ಆಸ್ಟ್ರೇಲಿಯಾದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವ್ಯಕ್ತಿಯ ಮುಂಗೈಗೆ ಸೀಲ್ ಹಾಕಿ, ಕೊರೊನಾ ಬಾಧಿತ ದೇಶದಿಂದ ಬಂದಿದ್ದರಿಂದ 14 ದಿನಗಳ ಕಾಲ ಮೈಸೂರಿನ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್‍ಗೆ ಒಳಪಡಿಸಿ, ಏ.6ರವರೆಗೆ ಇರುವಂತೆ ಸೂಚಿಸಲಾಗಿತ್ತು. ಆದರೆ, ಕೊರೊನಾ ಸೋಂಕು ಬಾಧಿತ ದೇಶದಿಂದ ಬಂದವನಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಇತರರಿಗೂ ಹರಡುತ್ತದೆಂದು…










