ಬೆಂಗಳೂರು ಮಾರ್ಚ್ 26 (ಕೆಎಂಶಿ) : ಎಸ್‍ಎಸ್‍ಎಲ್‍ಸಿ ಪರೀಕ್ಷೆ ಏಪ್ರಿಲ್ 20 ರ ನಂತರ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಈ ಮಾಹಿತಿ ನೀಡಿರುವುದಲ್ಲದೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಎಂಬ ವದಂತಿಗೆ ಕಿವಿಗೊಡಬೇಡಿ ಎಂದಿದ್ದಾರೆ. ಕೊರೋನಾ ವೈರಸ್ ತಡೆಗಟ್ಟಲು ಪ್ರಧಾನಿಯವರು ಮೂರು ವಾರಗಳ ಕಾಲ ವಿಧಿಸಿರುವ ಕಫ್ರ್ಯೊ ಸಡಿಲಗೊಂಡ ನಂತರ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. 7 ರಿಂದ 9ನೇ ತರಗತಿಯ ಪರೀಕ್ಷೆಗಳು ಕೂಡಾ ಏಪ್ರಿಲ್…
ಕೊರೊನಾ ಭೀತಿ: 3 ತಿಂಗಳ ಪಡಿತರ ಒಟ್ಟಿಗೆ ವಿತರಿಸಲು ನಿರ್ಧಾರ
March 26, 2020ಬೆಂಗಳೂರು ಮಾರ್ಚ್ 26 (ಕೆಎಂಶಿ): ಪ್ರಧಾನಿ ನರೇಂದ್ರ ಮೋದಿ ಅವರು ರೇಷನ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣದಿಂದಲೇ ಪಾಲನೆ ಮಾಡಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಮಹತ್ವದ ನಿಲುವು. ದೇಶಾದ್ಯಂತ ಕರೋನಾ ಸೋಂಕು ಮತ್ತಷ್ಟು ಜನರಿಗೆ ತಲುಪದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರೆ. ಹೀಗಾಗಿ 21 ದಿನಗಳ…
ಲಾಕ್ ಡೌನ್ ನಡುವೆ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆ
March 26, 2020ಮೈಸೂರು, ಮಾ26: ಲಾಕ್ ಡೌನ್ ನಡುವೆಯೇ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆಯಾಗಿದೆ. ನಂಜನಗೂಡಿನ ಕಾರ್ಖಾನೆಯೇೂಂದರ 35 ವರ್ಷದ ನೌಕರರಿಗೆ ವೈರಸ್ ಪತ್ತೆಯಾಗಿದ್ದು, ಈತ ಮೈಸೂರು ನಿವಾಸಿ ಎಂದು ತಿಳಿದಿದೆ. ಈತನ ಸಂಪರ್ಕದಲ್ಲಿದ್ದ ಎಂಟು ಮಂದಿಯನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಸೇೂಂಕಿತ ಕೆಲಸ ಮಾಡುತ್ತಿದ್ದ ಕಾರ್ಖಾನೆ ನೌಕರರಿಗೆ ಸ್ಟಾಂಪಿಂಗ್ ಮಾಡಲಾಗಿದ್ದು ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿದೆ. ಇದರೊಂದಿಗೆ ಮೈಸೂರಲ್ಲಿ ಮೂವರಿಗೆ ಸೇೂಂಕು ಪತ್ತೆಯಾದಂತಾಗಿದೇ.
ನಿರ್ಗತಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ ಪೊಲೀಸರು ಹಾಗೂ ಮಾಜಿ ಶಾಸಕರು
March 26, 2020ಮೈಸೂರು: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಕೋವಿಡ್ -19 ನಿಂದಾಗಿ ಲಾಕ್ ಡೌನ್ ಆಗಿರುವ ಕಾರಣ 3ನೇ ದಿನವೂ ಸಹ 500ಕ್ಕೂ ಹೆಚ್ಚು ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ,ಮಹಿಳೆಯರಿಗೆ ಉಚಿತ ಮಾಸ್ಕ್, ನೀರು, ಆಹಾರ ವಿತರಣೆ ಮೈಸೂರು ನಗರದ ರೈಲ್ವೆ ನಿಲ್ದಾಣದ ಬಳಿ ಜರುಗಿತು. ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯವರಾದ ಶ್ರೀ ಪ್ರಕಾಶ್ ಗೌಡರವರು ಸಹಕಾರ ನೀಡಿದರು. ಪಾಲಿಕೆ ಸದಸ್ಯ ಗೋಪಿ,ವಿಶ್ವ,ಗುಣಶೇಖರ್,ನಾಗಮಹದೇವ,ಹರ್ಷ ಮತ್ತಿತರರು ಉಪಸ್ಥಿತರಿದ್ದರು.ಸೋಸಿಯಲ್ ಡಿಸ್ಟೆನ್ಸ್…
ಕೊರೊನಾ ಭೀತಿ; ಪೌರಕಾರ್ಮಿಕರ ಕೆಲಸದ ಅವಧಿ ಕಡಿತ ಪೌರಕಾರ್ಮಿಕರ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮೈಸೂರು ಪಾಲಿಕೆ ಆಯುಕ್ತರ ಆದೇಶ
March 25, 2020ಮೈಸೂರು, ಮಾ.24(ಪಿಎಂ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಅವರ ಕೆಲಸದ ಸಮಯವನ್ನು ಮೈಸೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಇದ್ದ ಪೌರ ಕಾರ್ಮಿಕರ ಕೆಲಸದ ಅವಧಿಯನ್ನು ಪ್ರತಿದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10.30ರವರೆಗೆ ಹಾಗೂ ಒಳಚರಂಡಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಸಂಜೆ 4ರ ಬದಲಿಗೆ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ನಿಗದಿಪಡಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ,…
`ಲಾಕ್‍ಡೌನ್’ನಿಂದ ಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚಿದ ಜನಸ್ಪಂದನ ಟ್ರಸ್ಟ್
March 25, 2020ಇಂದಿನಿಂದ ಉಚಿತ ನೀರು, ಆಹಾರ, ಮಾಸ್ಕ್ ವಿತರಣೆ ಮೈಸೂರು, ಮಾ.24(ಆರ್‍ಕೆಬಿ)- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂಪೂರ್ಣ `ಲಾಕ್‍ಡೌನ್’ ಜಾರಿಗೊಳಿಸಿದೆ. ಕೂಲಿಗಾಗಿ ಮೈಸೂರಿಗೆ ಬಂದಿರುವ ಕಾರ್ಮಿಕರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈಲು ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ, ತಮ್ಮ ಊರುಗಳಿಗೆ ಹೋಗಲಾಗದೆ, ದುಡಿಯಲು ಕೂಲಿಯೂ ಇಲ್ಲದೆ, ಊಟೋಪಚಾರಕ್ಕೆ ಹಣವೂ ಇಲ್ಲದ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ. ಇವರಿಗೆ ನೆರವಾಗುವ ಬಗ್ಗೆ ಸಭೆ ನಡೆಸಿ ಚರ್ಚಿಸಿದ ಜನಸ್ಪಂದನ ಟ್ರಸ್ಟ್ ಮಾ.25 ರಿಂದ ಮಾ.31ರವರೆಗೆ ನೆರವಾಗಲಿದೆ. ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು,…
ಪಾಲಿಕೆ ಅಭಯ ತಂಡದಿಂದ ರಾಸಾಯನಿಕ ಸಿಂಪಡಣೆ
March 25, 2020ಮೈಸೂರು, ಮಾ. 24(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್ ಡಿಸೀಸ್) ಮಾರಣಾಂತಿಕ ವೈರಾಣು ಹರಡುವ ಭೀತಿ ಉಂಟಾಗಿರುವ ಕಾರಣ, ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡವು ನಗರದಾದ್ಯಂತ ಎಲ್ಲಾ ವಾರ್ಡುಗಳಲ್ಲಿ ರಾಸಾಯನಿಕ ಸಿಂಪಡಿಸಿತು. ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ನಾಗರಾಜ್, ಅಭಿವೃದ್ಧಿ ಅಧಿಕಾರಿಗಳಾದ ಸತ್ಯಮೂರ್ತಿ, ಸುನಿಲ್, ನಾಗರಾಜು ಹಾಗೂ ಇಂದು ಬೆಳಿಗ್ಗೆ ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳಲ್ಲೂ ಉಪಕರಣ ಬಳಸಿ ಸಾಂಕ್ರಾಮಿಕ ರೋಗ ನಿಯಂತ್ರಿಸಲು ರಾಸಾಯನಿಕವನ್ನು ಅಭಯ ತಂಡದ ಸಿಬ್ಬಂದಿ ಸಿಂಪಡಿಸಿದರು. ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಅವರು ಕುವೆಂಪುನಗರದ…
ಕೋವಿಡ್-19 ವಿರುದ್ಧದ ಹೋರಾಟ ಸಮಾಜದ ನಡವಳಿಕೆ ಮೇಲೆ ನಿಂತಿದೆ: ಸುತ್ತೂರು ಶ್ರೀ
March 25, 2020ಮೈಸೂರು,ಮಾ.24(ಎಸ್‍ಪಿಎನ್)-ನೊವೆಲ್ ಕೋವಿಡ್-19 ವೈರಾಣು ಹರಡುವಿಕೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಜನತೆ `ಸಾಮಾಜಿಕ ಅಂತರ ಕಾಯ್ದು ಕೊಂಡು’ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ. ಕೋವಿಡ್-19 ಸೋಂಕಿನ ವಿರುದ್ಧ ಜನತೆ ಭಯಪಡ ಬೇಕಿಲ್ಲ. ಬದಲಾಗಿ ಪರಿಸ್ಥಿತಿಯ ಸೂಕ್ಷ್ಮತೆ ಅರಿತು, ಸೋಂಕು ಹರಡುವಿಕೆಯ ತೀವ್ರತೆ ತಗ್ಗಿಸಲು ಯಾವುದೇ ವ್ಯಕ್ತಿಗಳಿಂದ ಕನಿಷ್ಠ ಮಟ್ಟದ ಅಂತರವನ್ನಾದರೂ ಕಾಯ್ದು ಕೊಳ್ಳಬೇಕು ಎಂದಿದ್ದಾರೆ. ಕೊರೊನಾ ವಿರುದ್ಧ ಕೇಂದ್ರ ಮತ್ತು…
ದೇಶದಲ್ಲಿ ಐದು ಲಕ್ಷ, ರಾಜ್ಯದಲ್ಲಿ ಲಕ್ಷ ಮಂದಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ
March 25, 2020ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಪರಿಷತ್‍ನಲ್ಲಿ ವಿವರಣೆ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ಎಚ್ಚರಿಕಾ ಕ್ರಮ 20 ಸಾವಿರ ಹೋಟೆಲ್ ಕೊಠಡಿ ಪಡೆಯಲು ನಿರ್ಧಾರ; ಸಾವಿರ ವೆಂಟಿಲೇಟರ್, 15 ಲಕ್ಷ ಎನ್-95 ಮಾಸ್ಕ್ ಖರೀದಿ ಬೆಂಗಳೂರು, ಮಾ.24- ದೇಶಾದ್ಯಂತ ಸುಮಾರು 5 ಲಕ್ಷ ಹಾಗೂ ಕರ್ನಾಟಕದಲ್ಲಿ 1 ಲಕ್ಷ ಮಂದಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ಕೊರೊನಾ…
ಲಲಿತಮಹಲ್ ಪ್ಯಾಲೇಸ್ ಬಳಿ ಕ್ಯಾರ್‍ವಾನ್‍ನಲ್ಲಿ ಗೆಳತಿಯೊಂದಿಗೆ ಬೀಡು ಬಿಟ್ಟಿರುವ ಚೀನಿ ಯುವಕ
March 24, 2020ಸಾರ್ವಜನಿಕರಲ್ಲಿ ಆತಂಕ, ಕುತೂಹಲ ವೈದ್ಯಾಧಿಕಾರಿಯಿಂದ ಆರೋಗ್ಯ ತಪಾಸಣೆ ಗೊಂದಲಕ್ಕೆ ತೆರೆ ಎಳೆದ ವೈದ್ಯರು; ಸ್ಥಳೀಯರು ನಿರಾತಂಕ ಮೈಸೂರು,ಮಾ.23(ಎಂಟಿವೈ)- ಚೀನಾದ ವುಹಾನ್‍ನಲ್ಲಿ ಜನ್ಮ ತಳೆದು ಜಗತ್ತಿನ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಲ್ಲಣವನ್ನುಂಟು ಮಾಡಿರುವ ನೊವೆಲ್ ಕೊರೊನಾ ಮೈಸೂರಿಗೂ ಎಂಟ್ರಿಯಾಗಿ ಭೀತಿ ಮೂಡಿಸಿರುವ ಬೆನ್ನಲ್ಲೇ ಲಲಿತಮಹಲ್ ಪ್ಯಾಲೇಸ್ ಬಳಿ ಖಾಲಿ ಜಾಗದಲ್ಲಿ ಕಳೆದ ಐದು ದಿನದಿಂದ ಗೆಳತಿ ಹಾಗೂ ಶ್ವಾನದೊಂದಿಗೆ ಚೀನಿ ಯುವಕನೊಬ್ಬ ಕ್ಯಾರವಾನ್‍ನಲ್ಲಿ ಬೀಡುಬಿಟ್ಟಿರುವುದು ಬೆಳಕಿಗೆ ಬಂದಿದೆ. ನಿಯಮಾನುಸಾರ ಒಂದು ವರ್ಷದ ಹಿಂದೆಯೇ ತನ್ನ ವಾಹನ(ಕ್ಯಾರವಾನ್)ದಲ್ಲೇ ಭಾರತಕ್ಕೆ ಪ್ರವಾಸ…










