ಬೆಂಗಳೂರು: ಇಂದು ಎಲ್ಲಾ ಹಿರಿಯ ಅಧಿಕಾರಿಗಳು, ಎಸ್ಪಿಗಳ ಜೊತೆ ಚರ್ಚೆ ನಡೆಸಿದ್ದೇವೆ. 15 ದಿನದಿಂದ ರಾಜ್ಯ ಸರ್ಕಾರ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅವುಗಳ ಜಾರಿ ಬಗ್ಗೆ ಚರ್ಚೆ ಆಗಿದೆ. ಮುಂದಿನ ಎರಡು ವಾರ ಪ್ರಮುಖವಾದದ್ದು ಎಂದು ಪ್ರಧಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆ ಸಜ್ಜಾಗುವ ಬಗ್ಗೆ ಚರ್ಚೆ ಆಗಿದೆ. ನಮ್ಮ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ಸಹಕಾರ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಹಿರಿಯ ಪೆÇಲೀಸ್ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ…
ರಾಜ್ಯದಲ್ಲಿ ಕೊರೊನಾ ಹಾವಳಿ: ವಿಶೇಷ ಪ್ಯಾಕೇಜ್‍ಗೆ ಡಿಕೆಶಿ ಮನವಿ
March 22, 2020ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಕೊರೊನಾ ಪರಿಸ್ಥಿತಿ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಡಿಕೆ ಶಿವಕುಮಾರ್, ಕೊರೊನಾ ಸೋಂಕು ಮಹಾ ಮಾರಿಯಾಗಿ ಕಾಡುತ್ತಿದೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಈಗಾಗಲೇ ಇದರಿಂದ ಸಾಕಷ್ಟು ನಷ್ಟವಾಗಿದೆ ಮುಂದಿನ ದಿನಗಳಲ್ಲಿ ಇದನ್ನು ಎದುರಿಸಲು…
ಎಸ್‍ಟಿಗೆ ಪರಿವಾರ, ತಳವಾರ, ಸಿದ್ದಿ ಸಮುದಾಯ ಸೇರ್ಪಡೆ: ಗೆಜೆಟ್ ಪ್ರಕಟಣೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ
March 22, 2020ಮೈಸೂರು,ಮಾ.21- ಪರಿವಾರ, ತಳವಾರ ಹಾಗೂ ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಇಂದು ಗೆಜೆಟ್ ಪ್ರಕಟಣೆಯಾಗಿ ಹೊರಬಿದ್ದಿದೆ. ಇದರೊಂದಿಗೆ ಹಲವಾರು ವರ್ಷಗಳಿಂದ ಸುಮಾರು 20 ಲಕ್ಷ ಜನ ನಡೆಸಿದ್ದ ಹೋರಾಟಕ್ಕೆ ಅಂತಿಮ ಜಯ ಸಿಕ್ಕಂತಾಗಿದೆ. ಈ ಒಂದು ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೃತಜ್ಞತೆ ಸಲ್ಲಿಸಿದ್ದಾರೆ. ಈ…
ಜನತಾ ಕರ್ಫ್ಯೂ ಪಾಲಿಸದಿದ್ದರೆ ಕಾನೂನು ಕ್ರಮ ಎಂಬ ಭಾಸ್ಕರ್ ರಾವ್ ಆದೇಶ ಅಧಿಕ ಪ್ರಸಂಗತನ: ಸಿದ್ದರಾಮಯ್ಯ
March 22, 2020ಬೆಂಗಳೂರು, ಮಾ.21- ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಅನು ಷ್ಠಾನಕ್ಕೆ ಸಹಕಾರ ನೀಡದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದ ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಜನತಾ ಕರ್ಫ್ಯೂ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಭಾಸ್ಕರ್ ರಾವ್ ಹೇಳಿಕೆಗೆ ಸಿದ್ದರಾಮಯ್ಯ ತಪರಾಕಿ ಬಾರಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ಯವರ ‘ಜನತಾ ಕರ್ಫ್ಯೂ’ ಕರೆಯನ್ನು ಪಾಲಿಸದ ಜನರ ವಿರುದ್ಧ ಕಾನೂನು…
ಅನಗತ್ಯವಾಗಿ ಹೊರ ಬಂದರೆ ಕೇಸ್ ಹಾಕ್ತೀವಿ ಹುಷಾರ್!
March 22, 2020ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಜನತಾ ಕಫ್ರ್ಯೂಗೆ ಕರೆ ನೀಡಿದ್ದು, ಸಾರ್ವಜನಿಕರು ಅನಗತ್ಯವಾಗಿ ಹೊರ ಬಂದರೆ, ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ. ಅಗತ್ಯವಿಲ್ಲದಿದ್ದರೂ ಸಾರ್ವಜನಿಕರು ಹೊರಗೆ ಬರಬಾರದು. ಅನಗತ್ಯವಾಗಿ ಸಾರ್ವಜನಿಕರು ಬೀದಿಗೆ ಬಂದು ಗುಂಪು ಸೇರು ವುದು, ನಿಂತುಕೊಳ್ಳುವುದು, ಹರಟೆ ಹೊಡೆಯುವುದು ಮಾಡಿ ದರೆ ಕೇಸ್ ಹಾಕಲಾಗುತ್ತದೆ. ಸಾರ್ವಜನಿಕರು ಕಫ್ರ್ಯೂವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು, ಪ್ರವಾಸ, ವಾಕಿಂಗ್, ಕಾರ್ಯಕ್ರಮ ಎಂದು…
ಚೌಡಯ್ಯ ಮೆಮೋರಿಯಲ್ ಹಾಲ್‍ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕನಲ್ಲಿ ಕೊರೊನಾ!
March 22, 2020ಬೆಂಗಳೂರು: ಕಳೆದ ಮಾರ್ಚ್ 12ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಜಾನಪದ ಸಂಗೀತಗಾರ ಮಿರ್ ಮುಕ್ತಿಯಾರ್ ಅಲಿ ಅವರ ಸಂಗೀತ ಕಾರ್ಯ ಕ್ರಮ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಸಮಾರಂಭದಲ್ಲಿ ಯಾರೆಲ್ಲಾ ಬಂದಿದ್ದರು, ಎಷ್ಟು ಜನರಿದ್ದರು ಎಂಬ ಬಗ್ಗೆ ಆರೋಗ್ಯ ಇಲಾಖೆ ಇದೀಗ ಮಾಹಿತಿ ಪತ್ತೆಹಚ್ಚಲು ಹೊರಟಿದೆ. ಈ ಕಾರ್ಯಕ್ರಮವನ್ನು ಆಯೋ ಜಿಸಿದ್ದು ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್(ಐಎಫ್‍ಎ). ಈ ಬಗ್ಗೆ ಪ್ರತಿಕ್ರಿಯಿಸಿದ ಚೌಡಯ್ಯ ಮೆಮೋರಿಯಲ್ ಹಾಲ್ ಅಧ್ಯಕ್ಷ ಸುಬ್ಬರಾಜು ಅರಸ್,…
ಕೊರೊನಾ ವೈರಸ್ ಹೋರಾಟಕ್ಕೆ ಸಿದ್ಧ: 5000 ಐಸಿಯು ಬೆಡ್, 500 ಹೊಸ ವೆಂಟಿಲೇಟರ್ ಖರೀದಿಸಿದ ರಾಜ್ಯ ಸರ್ಕಾರ
March 22, 2020ಬೆಂಗಳೂರು: ದೇಶ ಹಾಗೂ ವಿದೇಶದಲ್ಲಿ ಮರಣ ಮೃದಂಗ ಸಾರುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಈಗಾಗಲೇ 5000 ಐಸಿಯು ಬೆಡ್‍ಗಳನ್ನು ಸಿದ್ಧಪಡಿಸ ಲಾಗಿದ್ದು, 500 ಹೊಸ ವೆಂಟಿಲೇಟರ್‍ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. ವೈರಸ್ ವಿರುದ್ಧ ಹೋರಾಡಲು ವೆಂಟಿಲೇಟರ್‍ಗಳು ಅತ್ಯಂತ ಅವಶ್ಯಕವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳ ಕೊರತೆ ಎದ್ದು ಕಾಣುತ್ತಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಲ್ಲಿ ಶ್ವಾಸಕೋಶದ ಸೋಂಕು ಹಾಗೂ ನ್ಯುಮೋನಿಯಾದಂತಹ ರೋಗಗಳು…
ಕನಿಷ್ಠ ವಾರಕ್ಕಾಗುವಷ್ಟು ಆಹಾರ ಸಾಮಗ್ರಿ ದಾಸ್ತಾನು ಮಾಡಿಕೊಳ್ಳಿ
March 22, 2020ಬೆಂಗಳೂರು,ಮಾ.21(ಕೆಎಂಶಿ)- ಕನಿಷ್ಠ ಒಂದು ವಾರಕ್ಕೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದ್ದಾರೆ. ಕ್ಲಬ್, ಬಾರ್, ಮಾಲ್, ಸಿನಿಮಾ ಮಂದಿರ, ಹವಾ ನಿಯಂತ್ರಿತ ಹೊಟೇಲ್‍ಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಇಂಗಿತವನ್ನು ಸಚಿ ವರು ವ್ಯಕ್ತಪಡಿಸಿದಂತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತಿರುವ ಸರ್ಕಾರ ಮತ್ತಷ್ಟು ಬಿಗಿ ಕ್ರಮಕ್ಕೆ ಮುಂದಾದಂತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ದಲ್ಲಿ ಆಹಾರದ ಕೊರತೆ…
ವದಂತಿ ನಂಬದಿರಿ: ಡಿಸಿ ಮನವಿ
March 22, 2020ಮೈಸೂರು,ಮಾ.21(ವೈಡಿಎಸ್)- ಕೊರೊನಾ ವೈರಸ್ ತಡೆಗಟ್ಟಲು ಯೋಧರು ವಿಮಾನದ ಮೂಲಕ ಬಂದು ರಾತ್ರಿ ಔಷಧಿ ಸಿಂಪಡಿಸಲಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ಯಾರೂ ನಂಬಬಾರದು ಎಂದು ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೋವಿಡ್-19 ವೈರಸ್ ಹರಡದಂತೆ ತಡೆಗಟ್ಟಲು ಭಾರತೀಯ ಯೋಧರು ವಿಮಾನದಲ್ಲಿ ಶನಿವಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಔಷಧಿ ಸಿಂಪಡಿಸಲಿದ್ದಾರೆ. ಹಾಗಾಗಿ ಮನೆಯಿಂದ ಯಾರೂ ಹೊರಬರಬಾರದು. ಬಟ್ಟೆಗಳನ್ನು ಒಗೆದು ಒಣಹಾಕಿ ದ್ದರೆ ತೆಗೆದುಕೊಳ್ಳಬೇಕು ಎಂಬ ಆಡಿಯೋ ವೈರಲ್…
`ಜನತಾ ಕಫ್ರ್ಯೂ’ಗೆ ಬೆಂಬಲಿಸಿ
March 22, 2020ಮೈಸೂರು, ಮಾ.21(ಎಂಟಿವೈ)- ಕೊರೊನಾ ವೈರಸ್ ತ್ವರಿತ ರೀತಿ ವ್ಯಾಪಿ ಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಭಾನು ವಾರದ (ಮಾ.22) `ಜನತಾ ಕಫ್ರ್ಯೂ’ಗೆ ಎಲ್ಲರೂ ಬೆಂಬಲ ನೀಡಬೇಕು. ಮಹಾ ಮಾರಿ ಕೊರೊನಾದಿಂದ ದೂರ ಉಳಿಯಿರಿ. ಜತೆಗೆ ಒಂದು ದಿನವಾದರೂ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ. ಕೊರೊನಾ ವೈರಾಣು ಹಾಗೂ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಶನಿವಾರ ಮೈಸೂರು ಅರಮನೆಯ ಉಪ…










