ಅನಗತ್ಯವಾಗಿ ಹೊರ ಬಂದರೆ ಕೇಸ್ ಹಾಕ್ತೀವಿ ಹುಷಾರ್!
ಮೈಸೂರು

ಅನಗತ್ಯವಾಗಿ ಹೊರ ಬಂದರೆ ಕೇಸ್ ಹಾಕ್ತೀವಿ ಹುಷಾರ್!

March 22, 2020

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಜನತಾ ಕಫ್ರ್ಯೂಗೆ ಕರೆ ನೀಡಿದ್ದು, ಸಾರ್ವಜನಿಕರು ಅನಗತ್ಯವಾಗಿ ಹೊರ ಬಂದರೆ, ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.

ಅಗತ್ಯವಿಲ್ಲದಿದ್ದರೂ ಸಾರ್ವಜನಿಕರು ಹೊರಗೆ ಬರಬಾರದು. ಅನಗತ್ಯವಾಗಿ ಸಾರ್ವಜನಿಕರು ಬೀದಿಗೆ ಬಂದು ಗುಂಪು ಸೇರು ವುದು, ನಿಂತುಕೊಳ್ಳುವುದು, ಹರಟೆ ಹೊಡೆಯುವುದು ಮಾಡಿ ದರೆ ಕೇಸ್ ಹಾಕಲಾಗುತ್ತದೆ. ಸಾರ್ವಜನಿಕರು ಕಫ್ರ್ಯೂವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು, ಪ್ರವಾಸ, ವಾಕಿಂಗ್, ಕಾರ್ಯಕ್ರಮ ಎಂದು ಹೊರಗೆ ಬರುವಂತಿಲ್ಲ. ಒಂದು ವೇಳೆ ಶಿಸ್ತು ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡಿದರೆ 31(ಐ), ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಈ ಸಂಬಂಧ ಈಗಾಗಲೇ ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿತರು ವಿಷಯ ಮುಚ್ಚಿಡುತ್ತಿರುವುದು ಬೆಳಕಿಗೆ ಬರುತ್ತಿದೆ. ಒಂದು ವೇಳೆ ಇಂತಹ ವಿಷಯಗಳು ಗಮನಕ್ಕೆ ಬಂದರೆ, ಅವರ ಮೇಲೆಯೂ ಶಿಸ್ತು ಕ್ರಮ ಜರುಗಿಸಲಾಗುವುದು. ಎಲ್ಲಾ ಕಡೆ ಪೆÇಲೀಸರು ಬ್ಯಾರಿಕೇಡ್ ಹಾಕಿ ಗಸ್ತು ತಿರುಗುತ್ತಿರುತ್ತಾರೆ. ಈಗಾಗಲೇ ಸಭೆ ನಡೆಸಿ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಲಾಗಿದ್ದು, ಹೊರಗಡೆ ಇರುವ ಪ್ರತಿ ಸಿಬ್ಬಂದಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

Translate »