ಚೌಡಯ್ಯ ಮೆಮೋರಿಯಲ್ ಹಾಲ್‍ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕನಲ್ಲಿ ಕೊರೊನಾ!
ಮೈಸೂರು

ಚೌಡಯ್ಯ ಮೆಮೋರಿಯಲ್ ಹಾಲ್‍ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕನಲ್ಲಿ ಕೊರೊನಾ!

March 22, 2020

ಬೆಂಗಳೂರು: ಕಳೆದ ಮಾರ್ಚ್ 12ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಜಾನಪದ ಸಂಗೀತಗಾರ ಮಿರ್ ಮುಕ್ತಿಯಾರ್ ಅಲಿ ಅವರ ಸಂಗೀತ ಕಾರ್ಯ ಕ್ರಮ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಸಮಾರಂಭದಲ್ಲಿ ಯಾರೆಲ್ಲಾ ಬಂದಿದ್ದರು, ಎಷ್ಟು ಜನರಿದ್ದರು ಎಂಬ ಬಗ್ಗೆ ಆರೋಗ್ಯ ಇಲಾಖೆ ಇದೀಗ ಮಾಹಿತಿ ಪತ್ತೆಹಚ್ಚಲು ಹೊರಟಿದೆ. ಈ ಕಾರ್ಯಕ್ರಮವನ್ನು ಆಯೋ ಜಿಸಿದ್ದು ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್(ಐಎಫ್‍ಎ). ಈ ಬಗ್ಗೆ ಪ್ರತಿಕ್ರಿಯಿಸಿದ ಚೌಡಯ್ಯ ಮೆಮೋರಿಯಲ್ ಹಾಲ್ ಅಧ್ಯಕ್ಷ ಸುಬ್ಬರಾಜು ಅರಸ್, ಕಳೆದ 12ರಂದು ನಡೆದ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಮೊನ್ನೆ 18ರಂದು ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ ಎಂದು ನಮಗೆ ಫೌಂಡೇಶನ್ ನಿಂದ ಮೇಲ್ ಬಂದಿದೆ ಎಂದರು. ಕರ್ನಾಟಕದಲ್ಲಿ ವರದಿಯಾಗಿರುವ 20 ಸೋಂಕಿತ ವ್ಯಕ್ತಿಗಳಲ್ಲಿ ವ್ಯಕ್ತಿ ಕೂಡ ಒಬ್ಬರಾಗಿದ್ದು ಇವರು ಅಮೆರಿಕಾದಿಂದ ಬಂದಿದ್ದರು. ಈ ಬಗ್ಗೆ ಸುಬ್ಬರಾಜು ಅರಸ್ ಬಿಬಿಎಂಪಿ ಆರೋಗ್ಯ ಕಾರ್ಯಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಗೀತ ಕಾರ್ಯಕ್ರಮ ಮುಗಿದ ಮರುದಿನ ಅಂದರೆ ಮಾರ್ಚ್ 13ರಂದು ಸರ್ಕಾರ ಜನರು ಸಾರ್ವಜನಿಕವಾಗಿ, ಗುಂಪು-ಗುಂಪಾಗಿ ಸೇರುವುದನ್ನು ನಿರ್ಬಂಧಿಸಿತ್ತು.

Translate »