ಬೆಂಗಳೂರು: ದೇಶ ಹಾಗೂ ವಿದೇಶದಲ್ಲಿ ಮರಣ ಮೃದಂಗ ಸಾರುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಈಗಾಗಲೇ 5000 ಐಸಿಯು ಬೆಡ್‍ಗಳನ್ನು ಸಿದ್ಧಪಡಿಸ ಲಾಗಿದ್ದು, 500 ಹೊಸ ವೆಂಟಿಲೇಟರ್‍ಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.
ವೈರಸ್ ವಿರುದ್ಧ ಹೋರಾಡಲು ವೆಂಟಿಲೇಟರ್‍ಗಳು ಅತ್ಯಂತ ಅವಶ್ಯಕವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇವುಗಳ ಕೊರತೆ ಎದ್ದು ಕಾಣುತ್ತಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಲ್ಲಿ ಶ್ವಾಸಕೋಶದ ಸೋಂಕು ಹಾಗೂ ನ್ಯುಮೋನಿಯಾದಂತಹ ರೋಗಗಳು ಹೆಚ್ಚಾಗುತ್ತಿದ್ದು, ಸೋಂಕುಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿಲೇಟರ್‍ಗಳ ಖರೀದಿ ಮತ್ತು 5000 ಆಕ್ಸಿಜನ್ ಸೌಲಭ್ಯ ಇರುವ ಹಾಸಿಗಗಳ ಸೌಲಭ್ಯ ಸೃಷ್ಟಿಸಲು ಕ್ರಮ ಕೈಗೊಂಡಿದೆ. ಕಲಬುರಗಿ, ಬಳ್ಳಾರಿಯಲ್ಲಿ ರೀಜೆಂಟ್‍ಗಳ ಅಗತ್ಯವಿದೆ. ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದ್ದು, ಸಮ್ಮತಿ ನೀಡಿದ್ದಾರೆ. ಕೊರೊನಾ ವೈರಸ್ಸನ್ನು ಗಂಭೀರವಾಗಿ ಪರಿಗಣಿಸಿ ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಅಲ್ಲದೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಗತ್ಯವಿದ್ದರೆ, ಒತ್ತಡ ಹೇರಬಹುದು ಎಂದು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಉಸಿರಾಟ ತೊಂದರೆ ಅನುಭವಿಸುತ್ತಿರುವವರಿಗೆ ಕೊರೊನಾ ಪರೀಕ್ಷೆ ಅವಶ್ಯ: ಐಸಿಎಂಆರ್
ನವದೆಹಲಿ: ಕೊರೊನಾ ವೈರಸ್ ನಿರ್ಧರಣಾ ಪರೀಕ್ಷೆಯ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಶನಿವಾರ ಪರಿಷ್ಕರಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ತೀವ್ರ ಶ್ವಾಸ ಸಂಬಂಧಿ ಸಮಸ್ಯೆ, ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದಾಗಿ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ಕೊರೊನಾ ವೈರಸ್ (ಕೋವಿಡ್ -19) ರೋಗ ನಿರ್ಧರಣಾ ಪರೀಕ್ಷೆ ನಡೆಸಬೇಕು. ಈ ಸೋಂಕು ಮತ್ತಷ್ಟು ವಿಸ್ತರಿಸದಂತೆ ಸಮಗ್ರ ನಿಯಂತ್ರಣವನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಕೋವಿಡ್ -19 ಸೋಂಕಿತ ವ್ಯಕ್ತಿ ತನ್ನ ಲಕ್ಷಣಗಳನ್ನು ಮರೆಮಾಚಿ, ಇತರನ್ನು ಭೇಟಿ ಯಾಗಿದ್ದರೆ, ಅಂತಹ ವ್ಯಕ್ತಿಗಳನ್ನು ಭೇಟಿಯಾದ ದಿನದಿಂದ 5 ದಿನ, 14 ದಿನ ನಡುವೆ ಒಮ್ಮೆ ಪರೀಕ್ಷೆಗೊಳಪಡಿಸಬೇಕು ಎಂದು ನೂತನ ಮಾರ್ಗಸೂಚಿ ತಿಳಿಸಿದೆ.
ಕೋವಿಡ್ -19 ಪರೀಕ್ಷೆಗಳ ಸಂಯೋಜಿತ ವಿಧಾನಕ್ಕೆ ಅನುಗುಣವಾಗಿ ಎಲ್ಲರಿಗೂ ವಿಶ್ವಾಸಾರ್ಹ ರೋಗ ನಿರ್ಧರಣೆ ಲಭ್ಯವಾಗುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ. ಈವರೆಗೆ ದೇಶದಲ್ಲಿ ವರದಿಯಾಗಿರುವ ಕೋವಿಡ್ -19 ಪ್ರಕರಣಗಳು ವಿದೇಶ ಪ್ರಯಾಣಿಕರು ಮತ್ತು ಅವರಿಂದ ಸ್ಥಳೀಯರಿಗೆ ಸೋಂಕು ತಗುಲಿರುವ ಪ್ರಕರಣಗಳಾಗಿವೆ ಎಂದು ಐಸಿಎಂಆರ್ ಹೇಳಿದೆ. ಸಮುದಾಯದ ನಡುವೆ ಸೋಂಕು ಪ್ರಸರಣಗೊಂಡಿರುವ ಪ್ರಕರಣ ಇನ್ನೂ ದಾಖಲಾಗಿಲ್ಲ. ಒಂದು ವೇಳೆ ಅಂತಹ ಪ್ರಕರಣ ಕಂಡುಬಂದರೆ, ಅದಕ್ಕೆ ತಕ್ಕಂತೆ ಪರೀಕ್ಷಾ ಕಾರ್ಯತಂತ್ರ ಅಭಿವೃದ್ಧಿಪಡಿಸಲಾಗುತ್ತದೆ. ಈ ಸಂಬಂಧ ಸಲಹೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದೆ. ನೀತಿ ಆಯೋಗದ ಸದಸ್ಯ ವೈ.ಕೆ.ಪಾಲ್ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಕಾರ್ಯಪಡೆ ಈ ಕಾರ್ಯತಂತ್ರವನ್ನು ಪರಿಶೀಲಿಸುತ್ತಿದೆ.
ಇಂದು ವಿದ್ಯುಚ್ಛಕ್ತಿ ಬಿಲ್ ಪಾವತಿ ಕೌಂಟರ್ ರದ್ದು
ಮೈಸೂರು,ಮಾ.21-ವಿ.ವಿ ಮೊಹಲ್ಲಾ ವ್ಯಾಪ್ತಿಯ ಜನತಾ ಕಫ್ರ್ಯೂ ಪ್ರಯುಕ್ತ ಮಾ.22ರಂದು ಗ್ರಾಹಕರು ವಿದ್ಯುಚ್ಚಕ್ತಿ ಬಿಲ್ಲು ಪಾವತಿ ಮಾಡುವ ಂಖಿP ಕೌಂಟರ್‍ಗಳನ್ನು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮುಚ್ಚಲಾಗುತ್ತಿದೆ. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಆನ್‍ಲೈನ್ ಮುಖಾಂತರ ಅಥವಾ ಮೊಬೈಲ್ ಆಪ್ ಮುಖಾಂತರ ವಿದ್ಯುಚ್ಛಕ್ತಿ ಬಿಲ್ಲನ್ನು ಪಾವತಿಸಬಹುದು. ಶÀಂಕಿತ ಅಔಗಿIಆ-19 ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜನರ ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಗ್ರಾಹಕರು, ವಿದ್ಯುತ್ ಗುತ್ತಿಗೆದಾ ರರು ಹಾಗೂ ಸಾರ್ವಜನಿಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಶಾಖಾ ಕಚೇರಿಗಳು, ಉಪವಿಭಾಗ ಕಚೇರಿ ಹಾಗೂ ವಿಭಾಗ ಕಚೇರಿಗಳಿಗೆ ವಿನಾಕಾರಣ ಭೇಟಿ ಮಾಡದೆ, ದೂರವಾಣಿ ಮುಖಾಂ ತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು. ತುರ್ತು ನಿಗಮದ ಸೇವೆಗಳು ಅವಶ್ಯಕವಿದ್ದಲ್ಲಿ ದೂ.ಸಂಖ್ಯೆ 1912 ಹಾಗೂ ಶಾಖಾಧಿಕಾರಿಗಳ ದೂರವಾಣಿಗೆ ಕರೆಮಾಡು ವಂತೆ ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಚಿಕ್ಕಸಿದ್ದೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.