ಎಸ್‍ಟಿಗೆ ಪರಿವಾರ, ತಳವಾರ, ಸಿದ್ದಿ ಸಮುದಾಯ ಸೇರ್ಪಡೆ: ಗೆಜೆಟ್ ಪ್ರಕಟಣೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ
ಮೈಸೂರು

ಎಸ್‍ಟಿಗೆ ಪರಿವಾರ, ತಳವಾರ, ಸಿದ್ದಿ ಸಮುದಾಯ ಸೇರ್ಪಡೆ: ಗೆಜೆಟ್ ಪ್ರಕಟಣೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ

March 22, 2020

ಮೈಸೂರು,ಮಾ.21- ಪರಿವಾರ, ತಳವಾರ ಹಾಗೂ ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಇಂದು ಗೆಜೆಟ್ ಪ್ರಕಟಣೆಯಾಗಿ ಹೊರಬಿದ್ದಿದೆ.

ಇದರೊಂದಿಗೆ ಹಲವಾರು ವರ್ಷಗಳಿಂದ ಸುಮಾರು 20 ಲಕ್ಷ ಜನ ನಡೆಸಿದ್ದ ಹೋರಾಟಕ್ಕೆ ಅಂತಿಮ ಜಯ ಸಿಕ್ಕಂತಾಗಿದೆ. ಈ ಒಂದು ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ತಮ್ಮ ಒತ್ತಾಸೆಗೆ ಬೆಂಬಲವಾಗಿ ನಿಂತ ಈ ಮಹನೀಯರ ಉಪಕಾರವನ್ನು ಮರೆಯಲಾಗದು. ಅದರಲ್ಲೂ ಈ ಒಂದು ಪ್ರಯತ್ನ ಅಂತಿಮ ಘಟ್ಟ ತಲುಪಲು ದಿವಂಗತ ಅನಂತಕುಮಾರ್ ಅವರು ಸಾಕಷ್ಟು ಪರಿ ಶ್ರಮಪಟ್ಟಿದ್ದರು. ಈ ಸಂದರ್ಭದಲ್ಲಿ ಅವರಿಗೂ ಧನ್ಯವಾದಗಳನ್ನು ಸಲ್ಲಿಸುವುರೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

Translate »