ಮೈಸೂರು

ಕೊರೊನಾ ವೈರಸ್ ಭೀತಿ: ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ
ಮೈಸೂರು

ಕೊರೊನಾ ವೈರಸ್ ಭೀತಿ: ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ

March 22, 2020

ಬೆಂಗಳೂರು, ಮಾ. 21- ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದ ಉಂಟಾಗಬಹು ದಾದ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಕವಾಗುವಂತೆ 12 ಐಎಎಸ್ ಅಧಿಕಾರಿಗಳಿಗೆ ಈಗಾಗಲೇ ಅವರು ಹೊಂದಿರುವ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ಹಲವಾರು ಜವಾಬ್ದಾರಿಗಳನ್ನು ನೀಡಿ ಶನಿವಾರ ಸರ್ಕಾರ ಆದೇಶ ಹೊರಡಿಸಿದೆ. ಅಟಲ್‍ಜಿ ಸ್ನೇಹ ಕೇಂದ್ರದ ನಿರ್ದೇಶಕಿ ಶ್ರೀಮತಿ ಮೀನಾ ನಾಗರಾಜ್ ಅವರಿಗೆ ಕಣ್ಗಾವಲು/ರೋಗಿಗಳೊಂದಿಗೆ ಸಂಪರ್ಕ ಪತ್ತೆ ಹಚ್ಚುವಿಕೆ/ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರ ಪಟ್ಟಿ ಪಡೆಯುವ ಜವಾಬ್ದಾರಿಯನ್ನು ನೀಡಲಾಗಿದೆ. ಎನ್‍ಯುಎಲ್‍ಎಂ…

ಕೋವಿಡ್-19 ಸೋಂಕು ಹಿನ್ನೆಲೆ ಕೆ.ಆರ್.ಆಸ್ಪತ್ರೆ ಸ್ವಚ್ಛತೆ ಪರೀಕ್ಷಿಸಿದ ಸಚಿವ ಸೋಮಣ್ಣ
ಮೈಸೂರು

ಕೋವಿಡ್-19 ಸೋಂಕು ಹಿನ್ನೆಲೆ ಕೆ.ಆರ್.ಆಸ್ಪತ್ರೆ ಸ್ವಚ್ಛತೆ ಪರೀಕ್ಷಿಸಿದ ಸಚಿವ ಸೋಮಣ್ಣ

March 22, 2020

ಮೈಸೂರು, ಮಾ. 21(ಆರ್‍ಕೆ)- ಕೋವಿಡ್-19 ಮಾರಕ ರೋಗ ಹರಡಿ ರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಆಸ್ಪತ್ರೆಯ ಹೊರರೋಗಿ ವಿಭಾಗದ ಕಟ್ಟಡದ ಸಭಾಂಗಣದಲ್ಲಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಸಚಿವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ಪಡೆದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮೈಕ್ರೋಬಯಾ ಲಜಿ ಪ್ರಯೋಗಾಲಯದಲ್ಲಿ ಕೋವಿಡ್-19 ಸೋಂಕಿನ ಮಾದರಿ ಪರೀಕ್ಷೆ…

ಪೌರಕಾರ್ಮಿಕರಿಗೆ ಶಾಸಕರಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

ಪೌರಕಾರ್ಮಿಕರಿಗೆ ಶಾಸಕರಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ

March 22, 2020

ಮೈಸೂರು,ಮಾ.21(ಎಂಟಿವೈ)- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಶಾಸಕ ಎಸ್.ಎ.ರಾಮದಾಸ್ ಮೈಸೂರಿನ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕೃಷ್ಣರಾಜ ಕ್ಷೇತ್ರ ಬಿಜೆಪಿ ಘಟಕ ಹಾಗೂ `ಲೆಟ್ಸ್ ಡು ಇಟ್’ ಸಂಸ್ಥೆ ಸಹ ಯೋಗದಲ್ಲಿ ನಗರ ಪಾಲಿಕೆಯ 49 ಮತ್ತು 50 ಹಾಗೂ 51ನೇ ವಾರ್ಡ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಶನಿವಾರ ಬೆಳಿಗ್ಗೆ ಪುನರ್ ಬಳಕೆ ಮಾಡುವ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿ ದರು. ನಗರದ…

ಜೀವನವಿಡೀ ಕನ್ನಡದ ಧ್ವನಿಯಾಗಿದ್ದ ಪಾಪು
ಮೈಸೂರು

ಜೀವನವಿಡೀ ಕನ್ನಡದ ಧ್ವನಿಯಾಗಿದ್ದ ಪಾಪು

March 22, 2020

ಕಸಾಪ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಸಿಪಿಕೆ ನುಡಿನಮನ ಮೈಸೂರು,ಮಾ.21(ಎಸ್‍ಪಿಎನ್)- ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ(ಪಾಪು) ಅವರಿಗೆ ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಜಿಲ್ಲಾ ಕಸಾಪ ಭವನದಲ್ಲಿ ಶನಿವಾರ ನುಡಿನಮನ ಸಲ್ಲಿಸಲಾಯಿತು. ಪಾಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾ ಡಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ದಕ್ಷಿಣ ಕರ್ನಾಟಕ ದಲ್ಲಿ ಕುವೆಂಪು, ಉತ್ತರ ಕರ್ನಾಟಕದಲ್ಲಿ ಪಾಟೀಲ್ ಪುಟ್ಟಪ್ಪ ನವರು ತಮ್ಮ ಜೀವಿತಾವಧಿಯವರೆಗೂ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರ ಆದರ್ಶ ಜೀವನ, ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ…

ಫಿಲೋಮಿನಾ ಕಾಲೇಜು ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಕೆ
ಮೈಸೂರು

ಫಿಲೋಮಿನಾ ಕಾಲೇಜು ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಕೆ

March 22, 2020

ಕಾಲೇಜಿನ ರಸಾಯನ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದಿಂದ ಕಾಲೇಜು ಸಿಬ್ಬಂದಿಗೆ ವಿತರಣೆ ಮೈಸೂರು,ಮಾ.21(ಎಂಟಿವೈ)- ಕೊರೊನಾ ವೈರಸ್ ವ್ಯಾಪಕವಾಗಿ ಹರಡು ತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಸಿ ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯ ಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ರವಿ ಜೆ.ಡಿ.ಸಲ್ಡಾನ ಮಾತನಾಡಿ, ನಮ್ಮ ವಿಭಾಗದವರೇ ಸರಳವಾಗಿ ಸ್ಯಾನಿ ಟೈಸರ್ ತಯಾರಿಸಿದ್ದಾರೆ. ಮೊದಲು 2 ಲೀ. ಸ್ಯಾನಿಟೈಸರ್ ತಯಾರಿಸಲಾಗಿದೆ. ಅದನ್ನು…

ಕೊರೊನಾ ಪರಿಣಾಮ: ರೈಲ್ವೆ, ಕೆಎಸ್‍ಆರ್‍ಟಿಸಿ ಪ್ರಯಾಣಿಕರ ಸಂಖ್ಯೆ ಶೇ.60ರಷ್ಟು ಕುಸಿತ
ಮೈಸೂರು

ಕೊರೊನಾ ಪರಿಣಾಮ: ರೈಲ್ವೆ, ಕೆಎಸ್‍ಆರ್‍ಟಿಸಿ ಪ್ರಯಾಣಿಕರ ಸಂಖ್ಯೆ ಶೇ.60ರಷ್ಟು ಕುಸಿತ

March 21, 2020

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಭೀತಿ ಮೈಸೂರಿನ ರೈಲ್ವೆ ಮತ್ತು ಸಾರಿಗೆ ಸೇವೆಗಳ ಮೇಲೆ ಭಾರಿ ಪರಿ ಣಾಮ ಬೀರಿದೆ. ಕೆಲ ದಿನಗಳಿಂದ ಪ್ರಯಾ ಣಿಕರ ಸಂಖ್ಯೆ ದಿನೇ ದಿನೇ ಇಳಿಮುಖ ವಾಗುತ್ತಾ ಬಂದಿದೆ. ಶುಕ್ರವಾರದವರೆಗೆ ಮೈಸೂರಿನಲ್ಲಿ ರೈಲ್ವೆ ಮತ್ತು ಕೆಎಸ್‍ಆರ್ ಟಿಸಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.50-60ರಷ್ಟು ಇಳಿಮುಖವಾಗಿದೆ. ನಗರ ರೈಲ್ವೆ ಕಚೇರಿಯಲ್ಲಿ ವಾರದಿಂದೀ ಚೆಗೆ ಭಾರಿ ಸಂಖ್ಯೆಯ ಬುಕಿಂಗ್‍ಗಳು ರದ್ದಾ ಗಿವೆ. ಪ್ರಯಾಣಿಕರ ಸಂಖ್ಯೆ ಕುಸಿದಿದ್ದ ರಿಂದ ನೈರುತ್ಯ ರೈಲ್ವೆ 12 ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ….

ಮಧ್ಯ ಪ್ರದೇಶ ಮುಖ್ಯಮಂತ್ರಿ   ಕಮಲ್‍ನಾಥ್ ರಾಜೀನಾಮೆ
ಮೈಸೂರು

ಮಧ್ಯ ಪ್ರದೇಶ ಮುಖ್ಯಮಂತ್ರಿ  ಕಮಲ್‍ನಾಥ್ ರಾಜೀನಾಮೆ

March 21, 2020

ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಪಾಲ ಲಾಲ್ ಜಿ ಟಂಡನ್ ಶುಕ್ರವಾರ ಅಂಗೀಕರಿಸಿದ್ದಾರೆ. ಇದರೊಂದಿಗೆ ಕಳೆದ 15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೃಹನ್ನಾಟಕಕ್ಕೆ ತೆರೆ ಬಿದ್ದಿದೆ. ಇಂದು ಸಂಜೆಯ ವೇಳೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಕಮಲ್‍ನಾಥ್ ಅವರಿಗೆ ಗುರುವಾರ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಹಿನ್ನೆಲೆ ಯಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ…

ಕೊರೊನಾ: ಪ್ರವಾಸಿಗರಿಲ್ಲದೆ ಟಾಂಗಾವಾಲಾಗಳ ಸಂಕಷ್ಟ!
ಮೈಸೂರು

ಕೊರೊನಾ: ಪ್ರವಾಸಿಗರಿಲ್ಲದೆ ಟಾಂಗಾವಾಲಾಗಳ ಸಂಕಷ್ಟ!

March 21, 2020

ಮೈಸೂರು,ಮಾ.20(ವೈಡಿಎಸ್)-ಕೊರೊನಾ ಕರಿನೆರಳು ಮೈಸೂರಿನ ಟಾಂಗಾ ವಾಲಾಗಳ ಮೇಲೆ ಬಿದ್ದಿದ್ದು, ಜೀವನ ನಡೆಸಲಾಗದ ಪರಿಸ್ಥಿತಿ ಎದುರಾಗಿದೆ. ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ವಿದೇಶಿಗರು, ಸಾರೋಟು, ಟಾಂಗಾಗಾಡಿಗಳಲ್ಲಿ ಸಂಚರಿಸಿ ಚರ್ಚ್, ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ ಮತ್ತಿತರೆ ಸ್ಥಳಗಳನ್ನು ವೀಕ್ಷಿ ಸುತ್ತಿದ್ದರು. ಟಾಂಗಾ ಸವಾರಿ ಪ್ರವಾಸಿಗ ರಿಗೆ ಮುದ ನೀಡುತ್ತಿತ್ತು. ಇದರಿಂದ ಬಂದ ಹಣದಿಂದ ಟಾಂಗಾವಾಲಾಗಳು ಜೀವ ನದ ಬಂಡಿ ಸಾಗಿಸುತ್ತಿದ್ದರು. ಕೊರೊನಾ ಭೀತಿಯಿಂದಾಗಿ ಮೈಸೂರಿಗೆ ಪ್ರವಾಸಿ ಗರು ಬರುವುದೇ ನಿಂತು ಹೋಗಿದೆ. ಪ್ರವಾ ಸಿಗರನ್ನೇ ನಂಬಿಕೊಂಡಿದ್ದ ಸಾರೋಟು,…

ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ ಮುಜರಾಯಿ ಇಲಾಖೆ ಆದೇಶ
ಮೈಸೂರು

ಕೊರೊನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ ಮುಜರಾಯಿ ಇಲಾಖೆ ಆದೇಶ

March 21, 2020

ಬೆಂಗಳೂರು, ಮಾ. 20- ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೇಶಾದ್ಯಂತ ವಿವಿಧ ರೀತಿಯ ನಿರ್ಬಂಧ, ನಿಷೇಧಗಳು ಚಾಲನೆಯಲ್ಲಿವೆ. ಹಲವೆಡೆ ಕರ್ಫ್ಯೂ ಹೇರಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯು ತನ್ನ ಎಲ್ಲಾ ದೇವಸ್ಥಾನಗಳಿಗೆ ನಿರ್ಬಂಧ ಹೇರಿದೆ. ಅನಿರ್ದಿ ಷ್ಟಾವಧಿಯವರೆಗೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶ ದವರೆಗೂ ಈ ನಿರ್ಬಂಧ ಮುಂದುವರಿಯಲಿದೆ. ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯ ಕ್ರಮ, ಉತ್ಸವ, ಪ್ರಸಾದ ವಿತರಣೆ, ದಾಸೋಹ ಇತ್ಯಾದಿಗಳನ್ನ ರಾಜ್ಯ ಸರ್ಕಾರ ನಿಷೇಧಿಸಿತ್ತು. ಈಗ ದೇವಸ್ಥಾನಗಳನ್ನೂ ಬಂದ್ ಮಾಡಲು ಆದೇಶಿಸ…

ಇಂದಿನಿಂದ ಕೊಡಗಿನಿಂದ ಬರುವ ಎಲ್ಲಾ ವಾಹನಗಳೂ ಸ್ಕ್ರೀನಿಂಗ್ ಜಿಲ್ಲಾ ಗಡಿಯಲ್ಲಿ ಸಿದ್ಧತೆ
ಮೈಸೂರು

ಇಂದಿನಿಂದ ಕೊಡಗಿನಿಂದ ಬರುವ ಎಲ್ಲಾ ವಾಹನಗಳೂ ಸ್ಕ್ರೀನಿಂಗ್ ಜಿಲ್ಲಾ ಗಡಿಯಲ್ಲಿ ಸಿದ್ಧತೆ

March 21, 2020

ಮೈಸೂರು,ಮಾ.20-ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಕೊಡಗಿನಿಂದ ಮೈಸೂರಿನತ್ತ ಬರುವ ಎಲ್ಲಾ ವಾಹನಗಳನ್ನೂ ಸ್ಕ್ರೀನಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಶನಿವಾರ ದಿಂದ ಈ ಕಾರ್ಯ ಆರಂಭವಾಗಲಿದೆ. ಕೊಡಗು ಗಡಿಯಲ್ಲಿ ಇದಕ್ಕಾಗಿಯೇ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಅಗತ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ. ಕೊಡಗಿನಿಂದ ಯಾವುದೇ ವಾಹನ ಬಂದರೂ, ಅದರಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಲಾಗುವುದು. ಅವರಲ್ಲಿ ಯಾರಿಗಾ ದರೂ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದರೆ ಅವರನ್ನು ತಪಾಸಣೆಗೊಳಪಡಿಸಿ ನಿಗಾ ವಹಿಸಲಾಗುವುದು ಎಂದು ಜಿಲ್ಲಾ…

1 628 629 630 631 632 1,611
Translate »