ಮೈಸೂರು

ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ
ಮೈಸೂರು

ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ

March 28, 2020

ಮೈಸೂರು, ಮಾ.28(ಎಸ್ ಬಿಡಿ)-  ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ ಆರಂಭವಾಗಿದೆ. ನಗರದ ಮೆಟ್ರೋಪೋಲ್ ವೃತ್ತದ ಬಳಿ, ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ 2ನೇ ನೆರವು ಕೇಂದ್ರ ಆರಂಭಿಸಲಾಗಿದೆ. ಈಗಾಗಲೇ ಗಂಗೋತ್ರಿ ಬಡಾವಣೆ ಯೂತ್ ಹಾಸ್ಟೆಲ್ ನೆರವು ಕೇಂದ್ರದಲ್ಲಿ 70ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು ತೀವ್ರ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಮೈಸೂರು ನಗರದಲ್ಲಿ ನೂರಾರು ಮಂದಿ ಊಟ, ವಸತಿ…

ಮೈಸೂರು ಜಿಲ್ಲೆಯಲ್ಲಿ ಒಟ್ಟು 1832 ಜನರ ಮೇಲೆ ನಿಗಾ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಒಟ್ಟು 1832 ಜನರ ಮೇಲೆ ನಿಗಾ

March 28, 2020

ಮೈಸೂರು, ಮಾ.28(ಎಸ್ ಬಿಡಿ)-  ಮೈಸೂರು ಜಿಲ್ಲೆಯಲ್ಲಿ ಒಟ್ಟು 1832 ಜನರ ಮೇಲೆ ನಿಗಾವಹಿಸಲಾಗಿದೆ. ಇವರಲ್ಲಿ 1192 ಮಂದಿಯನ್ನು 14 ದಿನಗಳ ಗೃಹ ದಿಗ್ಭಂದನದಲ್ಲಿಟ್ಟು ನಿಗಾ ಇಡಲಾಗಿದ್ದು, ಈವರೆಗೆ 637 ಮಂದಿ ಈ ಪ್ರಕ್ರಿಯೆ ಪೂರೈಸಿದ್ದಾರೆ. ಒಟ್ಟು 69 ಸ್ಯಾಂಪಲ್ ಟೆಸ್ಟ್ ನಲ್ಲಿ 65 ನೆಗಿಟಿವ್ ಹಾಗೂ 3 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 1 ಸ್ಯಾಂಪಲ್ ರಿಜೆಕ್ಟ್ ಆಗಿದ್ದು, ಸದ್ಯ ಕೆ.ಆರ್.ಆಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿ ಮೂವರು ದಾಖಲಾಗಿದ್ದಾರೆ. ಒಟ್ಟಾರೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ, ನಿಯಂತ್ರಣಕ್ಕೆ ಅಗತ್ಯ ಕ್ರಮ…

ಕೊರೋನಾ ಪರಿಸ್ಥಿತಿ ನಿರ್ವಹಣೆ: ಕಾಂಗ್ರೆಸ್ ಕಾರ್ಯಪಡೆ ಮೊದಲ ಸಭೆ ಮಾ.31ಕ್ಕೆ
ಮೈಸೂರು

ಕೊರೋನಾ ಪರಿಸ್ಥಿತಿ ನಿರ್ವಹಣೆ: ಕಾಂಗ್ರೆಸ್ ಕಾರ್ಯಪಡೆ ಮೊದಲ ಸಭೆ ಮಾ.31ಕ್ಕೆ

March 28, 2020

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಮಾ.31 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಪಡೆಯ ಮುಖ್ಯಸ್ಥ ರಮೇಶ್ ಕುಮಾರ್ ಅವರು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅನೌಪಚಾರಿಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ನಾಯಕ ಹಸನಬ್ಬ ಅವರು ಉಪಸ್ಥಿತರಿದ್ದರು. ಕಾರ್ಯಪಡೆಯ ಮೊದಲ ಸಭೆ ಮುಂದಿನ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ…

ಕೊರೊನಾ:  ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ
ಮೈಸೂರು

ಕೊರೊನಾ: ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ

March 28, 2020

ಮೈಸೂರು,ಮಾ.28(ಎಂಟಿವೈ)- ನೊವೆಲ್ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳ ಸೇರಿದಂತೆ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ವೈರಾಣು ನಾಶಪಡಿಸುವ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯಾಚರಣೆಯನ್ನು ಶನಿವಾರ ಆರಂಭವಾಗಿದೆ. ಮೈಸೂರು ನಗರ ಪಾಲಿಕೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯಾಚರಣೆ ಆರಂಭಿಸಿದ್ದು, ಪಾಲಿಕೆಯ 9 ವಲಯಗಳಲ್ಲಿರುವ 65 ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿತು. ರಾಜ್ಯದಲ್ಲಿ ನೊವೆಲ್ ಕೊರೊನಾ ಮೂರನೇ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವೈರಾಣು ಹರಡುವ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದು…

ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು
ಮೈಸೂರು

ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು

March 28, 2020

ಲಾಕ್ ಡೌನ್ ನಿಂದಾಗಿ ಅತಂತ್ರಕ್ಕೀಡಾಗಿದ್ದ ಕಾರ್ಮಿಕರು ನೆರವಿನ ನಿರೀಕ್ಷೆಯಲ್ಲಿ ದಿನದೂಡಿದ್ದರು ಅನ್ಯ ಮಾರ್ಗವಿಲ್ಲದೆ ಕಾಲ್ನಡಿಗೆಯಲ್ಲಿ ಮರಳಿ ಊರಿನತ್ತ ಪಯಣ ಮೈಸೂರು,ಮಾ.28(ಎಂಟಿವೈ)- ಕೋವಿಡ್ -19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಏ.14ರವರೆಗೆ ದೇಶವೇ ಲಾಕ್ ಡೌನ್ ಆಗಿರುವುದರಿಂದ ಕೂಲಿ ಮಾಡಲು ಮೈಸೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಮಂದಿ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರು ಜೀವಭಯದಿಂದ ಕಾಲ್ನಡಿಗೆಯಲ್ಲೇ ಸ್ವಗ್ರಾಮ ಸೇರಲು ಮುಂದಾಗಿದ್ದಾರೆ. ಮೈಸೂರಿನ ವಿವಿಧೆಡೆ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಗಾರೆ ಕೆಲಸ , ಕೂಲಿ ಕೆಲಸ ಹಾಗೂ ಸೆಕ್ಯುರಿಟಿ ಗಾರ್ಡ್ ಆಗಿ…

ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ
ಮೈಸೂರು

ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ

March 28, 2020

ಮೈಸೂರು, ಮಾ.27(SPN)- ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಪಾಠ ನಡೆಸಲು ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನ ಮುಂದಾಗಿದ್ದಾರೆ. ಇದು ಮೈಸೂರು ವಿವಿ ಮಾನಸಗಂಗೋತ್ರಿಯ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನಾ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೋವಿಡ್ -19 ಭೀತಿಯಿಂದ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ತರಗತಿಗಳು ಸಹ ನೆನೆಗುದಿಗೆ ಬಿದ್ದಿವೆ. ಪರಿಣಾಮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿಗಧಿಪಡಿಸಿದ್ದ ಬಾಕಿ ಉಳಿದ ಪಠ್ಯಕ್ರಮಗಳು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ಎಂ.ಎಸ್. ಸಪ್ನಾ ಅವರು ತಂತ್ರಜ್ಞಾನದ ಬಳಸಿಕೊಂಡು…

ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ
ಮೈಸೂರು

ಎಣ್ಣೆ ಸಿಗದಿದ್ದಕ್ಕೆ ನದಿಗೆ ಹಾರಿ ಕಾರ್ಮಿಕ ಆತ್ಮಹತ್ಯೆ

March 28, 2020

ಮೈಸೂರು: ಕುಡಿಯಲು ಮದ್ಯ ಸಿಗದ ಕಾರಣಬೇಸರಗೊಂಡ ಕಾರ್ಮಿಕ ನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇಂದು ನಡೆದಿದೆ. ರಾಜು (೪೦) ಆತ್ಮಹತ್ಯೆ ಮಾಡಿಕೊಂಡವ. ಈತ ಕಾರ್ಖಾನೆ ಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕುಡಿತದ ಚಟ ಅಂಟಿಸಿಕೊಂಡಿದ್ದ. ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ. ಇದರಿಂದ ಕುಡಿಯಲು ಮದ್ಯ ಸಿಗದೆ ತೀವ್ರ ವಾಗಿ ಬೇಸರಗೊಂಡು, ಲಕ್ಷಣ ತೀರ್ಥ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹುಣಸೂರು ಪೊಲೀಸ್…

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್
ಮೈಸೂರು

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್

March 28, 2020

ಮೈಸೂರು, ಮಾ.28(SPN)-ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು. ಗುಣಶೇಖರ್, ವಿಶ್ವ,ನಾಗಮಹದೇವ,ರಮೇಶ್,ಗುರು,ರಾಜು ಬಂಡೆಂಪಾ ಕಾಶೆಂಪೂರ್ ಮತ್ತಿತರರು ಉಪಸ್ಥಿತರಿದ್ದರು. ಎಲ್ಲರಿಗೂ ಆರೋಗ್ಯ ಅಧಿಕಾರಿಗಳನ್ನೂ ಕರೆಯಿಸಿ ಕೋವಿಡ್ -19ರ ಬಗ್ಗೆ ಜಾಗೃತಿ ಮೂಡಿಸಿ ಇನ್ನು ಮುಂದೆ ಬೀದಿಗಳಲ್ಲಿ ಊಟ ಕೊಡಲಾಗುವುದಿಲ್ಲ.ಜಿಲ್ಲಾಡಳಿತ,ಪಾಲಿಕೆ ಗುರುತಿಸಿದ ಗಂಜಿ ಕೇಂದ್ರಗಳಲ್ಲಿ ಊಟ ಕೊಡಲಾಗುವುದು ಎಂದು ಮನವರಿಕೆ ಮಾಡಿದರು.200ಕ್ಕೂ ಹೆಚ್ಚು ಜನರನ್ನು…

ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ
ಮೈಸೂರು

ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ

March 27, 2020

ಮೈಸೂರು, ಮಾ.27(SPN)-ಮಹಾಮಾರಿ‌ ಕೊರೊನಾ ಹೆಲ್ತ್ ಕರ್ಪೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತಗಳಾದ ಪಡಿತರ ವಿತರಣೆಯಲ್ಲಿ ಗೊಂದಲವಾಗಿದ್ದು, ಇದನ್ನು ಸರಿಪಡಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತ ಒತ್ತಾಯಿದ್ದಾರೆ. ಹೌದು, ರಾಮಕೃಷ್ಣ ನಗರ ಪಡಿತರ ಅಂಗಡಿಯಲ್ಲಿ‌ ರೇಷನ್‌ ವಿತರಣೆಗೆ ಒಟಿಪಿ ಇದ್ದರೆ ವಿತರಣೆ ಮಾಡುತ್ತೇವೆ ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದು, ಸಾಮಾನ್ಯ ಜನರಿಗೆ ಆಹಾರ ಇಲಾಖೆಯ ನೂತನ ಸುತ್ತೊಲೆ ಪ್ರಕಾರ ಆಧಾರಗೆ ಜೋಡಣೆ ಮಾಡಿರುವ ಮೊಬೈಲ್ ನಂಬರಗೆ ಒಟಿಪಿ ಬರುತ್ತದೆ. ಈ ಬದಲಾವಣೆ ಮಾಂಡಿಕೊಂಡಿರುವವರಿಗೂ ಈ ಗೊಂದಲವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಸಾರ್ವಜನಿಕರು…

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ
ಮೈಸೂರು

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ

March 27, 2020

ಮೈಸೂರು, ಮಾ.27(ಎಸ್ ಬಿಡಿ)- ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಟಿ.ಕೆ.ಲೇಔಟ್, ಗಂಗೋತ್ರಿ ಬಡಾವಣೆಯ ಮಾರುತಿ ದೇವಾಲಯ ರಸ್ತೆಯಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ನೆರವು ಕೇಂದ್ರ ತೆರೆಯಲಾಗಿದ್ದು, ನಿರ್ಬಂಧ ಅವಧಿ ಮುಗಿಯುವವರೆಗೂ ಮುಂದುವರೆಯಲಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಜನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಹೋಟೆಲ್ ಗಳನ್ನೂ ಮುಚ್ಚಿಸಲಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿರಾಶ್ರಿತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ….

1 622 623 624 625 626 1,611
Translate »