ಮೈಸೂರು, ಮಾ.೩೦(ಪಿಎಂ)_ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕಾರ್ಮಿಕ ಕುಟುಂಬಗಳಿಗೆ ವಾರಕ್ಕೆ ಆಗುವಷ್ಟು ಪಡಿತರ ಪೊಟ್ಟಣ ವಿತರಣೆಗೆ ಶೀಘ್ರ ಕ್ರಮ ವಹಿಸುವುದಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯ ಚಟುವಟಿಕೆ ಕುರಿತು ಭಾನುವಾರ ವಾರ್ತಾ ಇಲಾಖೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಪಡಿತರ ಪದಾರ್ಥಗಳ ಪೊಟ್ಟಣ ಹಂಚಲು ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ…
ಜೆಕೆ ಟೈರ್ ಕಾರ್ಖಾನಿಯಿಂದ ದೇಣಿಗೆ
March 30, 2020ಕೋವಿಡ್ – 19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಹಮ್ಮಿಕೊಂಡಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ನೆರವಿಗೆ ಜೆಕೆ ಟೈರ್ ಕಾರ್ಖಾನೆಯು ತನ್ನ ಉದ್ಯೋಗಿಗಳ ಒಂದು ತಿಂಗಳ ಸಂಬಳ ನೀಡಲು ನಿರ್ಧರಿಸಿದೆ. ಜೆಕೆ ಟೈರ್ ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಪತ್ರಿಕೆ ಹೇಳಿಕೆ ನೀಡಿದ್ದು, ನಾವು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ನಮ್ಮ ಉತ್ಪನ್ನ ಮತ್ತು ರಫ್ತಿನ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಆದರೂ ಈ ವಿಷಮ ಪರಿಸ್ಥಿತಿ ನಿಭಾಯಿಸಲು ನಮ್ಮ ಉದ್ಯೋಗಿಗಳ ಸಂಬಳ ಕಡಿತಗೊಳಿಸಿ ಆ…
ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ
March 30, 2020ವದಂತಿ, ಭಯ ಹುಟ್ಟಿಸುವವರ ವಿರುದ್ದ ಕ್ರಮ ಜಿಲ್ಲೆಯಲ್ಲಿ 1702 ಮಂದಿ ಕ್ವಾರಂಟೇನ್ ನಲ್ಲಿದ್ದು, 766 ಮಂದಿ ಪೂರ್ಣಗೊಳಿಸಿದ್ದಾರೆ ಮೈಸೂರು,ಮಾ.29( MTY) – ಒಂದೇ ಸ್ಥಳದಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ನಿಯಮಾನುಸಾರ ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಿ, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಕೊರೊನಾ…
ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ
March 30, 2020220 ವಾಹನ ವಶ ಪಟ್ಟಣದ ಜನತೆ ಆತಂಕ ಬೇಡ* ಮೈಸೂರು,ಮಾ.29( MTY )- ನಂಜನಗೂಡು ಪಟ್ಟಣದಲ್ಲಿ ಐದು ಮಂದಿಗೆ ನೊವೆಲ್ ಕೊರೊನಾ ಸೋಂಕು ಇರುವುದು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ 220 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸೋಮವಾರದಿಂದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಸಿ.ಬಿ. ರಿಷ್ಯಂತ್ ಎಚ್ಚರಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಕುರಿತಂತೆ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ 1372 ನೌಕರರು ಕೆಲಸ ಮಾಡುತ್ತಿದ್ದು,…
ಸರ್ವಪಕ್ಷ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದು
March 30, 2020ಬೆಂಗಳೂರು, ಮಾ.29-ನಮ್ಮ ತಪ್ಪಿನಿಂದ ಯಾವ ನ್ಯೂನತೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ. 23 ಸಾವಿರ ಮಂದಿ ಪೈಕಿ 4.500 ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರ್ಕಾರ ಹೇಳಿದೆ. ಅವರನ್ನು ಕೂಡಲೇ ಪತ್ತೆ ಮಾಡಬೇಕು. ಮೂರನೇ ಹಂತಕ್ಕೆ ನಾವು ಇನ್ನೂ ಹೋಗಿಲ್ಲ ಎಂದು ಸಚಿವರು ಹೇಳಿದ್ದಾರೆ. ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ. ಆತನಿಗೆ ವಿದೇಶದಿಂದ ಬಂದವರ ಸಂಪರ್ಕ ಇರಲಿಲ್ಲ. ಆದರೂ ಕರೋನ…
ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಸಿಬ್ಬಂದಿಗೆ ಸೆಲ್ಫ್ ಪ್ರೊಟೆಕ್ಷನ್ ಇಲ್ಲ
March 30, 2020ಮೈಸೂರು ಮಾ. 29 (ಆರ್ ಕೆಬಿ)- ಕೋವಿದ್-19 ರೋಗಿಗಳ ಜೀವರಕ್ಷಣೆಗೆ ಹೋರಾಡುತ್ತಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಸೆಲ್ಫ್ ಪ್ರೊಟಕ್ಷನ್ ಇಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 8 ಜನರಿಗೆ ಕೋವಿದ್ 19 ಚಿಕಿತ್ಸೆ ನೀಡಲಾಗುತ್ತಿದೆ. ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಬೇಸಿಕ್ ಮೆಡಿಕಲ್ ಫೆಸಿಲಿಟಿ ಕೊರತೆ ಇದೆ ಎನ್ನಲಾಗಿದೆ. ಇವರಿಗೆ ಚಿಕಿತ್ಸೆಗೆ ಅಗತ್ಯವಾದ ನಾಲ್ಕು ಪ್ರಮುಖ…
ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನ ಎಂಬ ಮಹಾಮಾರಿ ವೈರಸ್ ತಂದು ಹಂಚಿದ ಕೀರ್ತಿ ಜುಬೀಲಂಟ್ ಕಾರ್ಖಾನೆಗೆ ಸಲ್ಲುತ್ತದೆ
March 29, 2020ಮೈಸೂರು,ಮಾ.29: ನಂಜನಗೂಡು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಂಟ್ ಔಷಧಿ ತಯಾರಿಕಾ ಕಾರ್ಖಾನೆ. ಈ ಕಾರ್ಖಾನೆಯಲ್ಲಿ ನೌಕರನಾಗಿದ್ದ ವ್ಯಕ್ತಿಯೊಬ್ಬನಿಗೆ ಕರೋನವೈರಸ್ ದೃಢಪಟ್ಟಿದ್ದು ಜಿಲ್ಲೆಯ ಮೂರನೇ ಸೋಂಕಿತ ವ್ಯಕ್ತಿ ಯಾಗಿದ್ದ. ಇದರಿಂದ ಬೆಚ್ಚಿಬಿದ್ದ ಜಿಲ್ಲಾ ಮತ್ತು ತಾಲೂಕು ಆಡಳಿತ ಕಾರ್ಖಾನೆಗೆ ತೆರಳಿ ಆತನ ಜೊತೆ ಸಂಪರ್ಕದಲ್ಲಿದ್ದ ವರನ್ನು ಸೇರಿದಂತೆ ಅಲ್ಲಿನ ಸಾವಿರಾರು ಕಾರ್ಮಿಕರಿಗೆ ಕ್ವಾರಂಟೈನ್ ಸೀಲ್ ಹಾಕಿ ಎಲ್ಲರನ್ನೂ ಹೋಂ ಕ್ವಾರಂಟೈನ್ನಲ್ಲಿರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿ ಕಾರ್ಖಾನೆಗೂ ಸಹ ಬೀಗ ಜಡಿಯಲಾಗಿತ್ತು ವಿಪರ್ಯಾಸವೆಂದರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊದಲಿನ ಸೋಂಕಿತ ವ್ಯಕ್ತಿಯ…
ಕೆ.ಆರ್.ಆಸ್ಪತ್ರೆ ಹಾಗೂ ಕ್ವಾರಂಟೇನ್ ಮನೆಗಳ ಸುತ್ತ ಪೆರಾಕ್ಸೈಡ್ , ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಣೆ
March 29, 2020ಸೋಂಕಿತರು ಓಡಾಡಿರುವ ಸ್ಥಳಗಳಲ್ಲಿ ವೈರಾಣು ನಾಶಕ್ಕೆ ಕ್ರಮ ಹೋಮ್ ಕ್ವಾರಂಟೇನ್ ಇರುವ ಮನೆಗಳು, ಸರ್ಕಾರಿ ಕಚೇರಿ ಸಮುಚ್ಚಯಕ್ಕೂ ಸಿಂಪಡಣೆ ಮೈಸೂರು,ಮಾ.29(MTY)- ನೊವೆಲ್ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೇ ಹಂತಕ್ಕೆ ವ್ಯಾಪಿಸಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಕೆ.ಆರ್.ಆಸ್ಪತ್ರೆ, ಸರ್ಕಾರಿ ಕಚೇರಿ ಹಾಗೂ ವಿವಿಧ ಬಡಾವಣೆಗಳಲಿರುವ ಹೋಮ್ ಕ್ವಾರಂಟೇನ್ ಮನೆಗಳಿಗೆ ವೈರಾಣು ನಾಶ ಮಾಡುವ ಜಲಜನಕದ ಪೆರಾಕ್ಸೈಡ್ ಹಾಗೂ ಸಿಲ್ವರ್ ನೈಟ್ರೇಟ್ ದ್ರಾವಣ ಸಿಂಪಡಿಸು ಕಾರ್ಯಾಚರಣೆ ಆರಂಭಿಸಿದೆ. ಕಳೆದ ಎರಡು ದಿನದಿಂದ ಮೈಸೂರು ನಗರ ಪಾಲಿಕೆಯ ಎಲ್ಲಾ 65 ವಾರ್ಡ್…
ಕೊರೊನಾ ಸೋಂಕಿನ ಬೀತಿ: ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸೂಪರ್ ಮಾರ್ಕೆಟ್
March 29, 2020ವಿದ್ಯಾರ್ಥಿಗಳೊಂದಿಗೆ ಸಿಬ್ಬಂದಿ ಮಾತಿನ ಚಕಮಕಿ ವಿಡಿಯೋ ವೈರಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರ ಸೂಚನೆ* ಮೈಸೂರು,ಮಾ.29(MTY )- ಮಹಾಮಾರಿ ಸ್ವರೂಪ ತಾಳುತ್ತಿರುವ ನೊವೆಲ್ ಕೊರೊನಾ ವೈರಸ್ ಎಲ್ಲರನ್ನೂ ಭಯಬೀತಗೊಳಿಸಿದ್ದು, ಚೀನಾ ವಿದ್ಯಾರ್ಥಿಗಳೆಂದು ಭಾವಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿಯಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಬಂದಿದ್ದ ಮೂರ್ನಾಲ್ಕು ಮಂದಿ…
ಹಸಿದವರ ನೋವಿಗೆ ಸ್ಪಂದಿಸಿದ ‘ಈಜಿ಼ ಬಾಯ್ಸ್’
March 29, 2020ದಿನಕ್ಕೆ 300 ಮಂದಿ ವಸತಿಹೀನರಿಗೆ ಆಹಾರ, ನೀರು ಪೂರೈಕೆ ಕರ್ತವ್ಯ ನಿರತ ಪೊಲೀಸರಿಗೆ ಸ್ಯಾನಿಟೈಸರ್ ವಿತರಣೆ ಮೈಸೂರು,ಮಾ.29(MTY)- ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 ದೇಶದಲ್ಲಿ ವ್ಯಾಪಿಸುವುದನ್ನ ತಡೆಗಟ್ಟಲು ಏ.14ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಮೈಸೂರಲ್ಲಿ ಕಂಗಾಲಾಗಿರುವ ವಸತಿಹೀನರ ಹಸಿವು ತಣಿಸಲು ಯುವಕರ ತಂಡವೊಂದು ಸದ್ದಿಲ್ಲದೆ ಸೇವೆ ಮಾಡುತ್ತಿದೆ. ಸಮಾನ ಮನಸ್ಕರ ಯುವಕರ ತಂಡ ಹಸಿದವರಿಗಾಗಿ ಅನ್ನ ನೀಡುವ ಮಹತ್ತರ ಸೇವೆ ಮಾಡುತ್ತಿದೆ. ಈಜೀ಼ ಬಾಯ್ಸ್( EeZee boys) ತಂಡದ ಸದಸ್ಯರೇ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ….










