ಮೈಸೂರು, ಮಾ.29(ಎಸ್ ಬಿಡಿ)- ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅನಗತ್ಯವಾಗಿ ಓಡಾಡದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದರೂ ಗಂಭೀರವಾಗಿ ಪರಿಗಣಿಸದಿರುವುದು, ಆತಂಕ ಹೆಚ್ಚಿಸಿದೆ. ಮೈಸೂರಿನ ದೇವರಾಜ ಸಂಚಾರ ಠಾಣೆ ಪೊಲೀಸರು ಕೆ.ಆರ್.ವೃತ್ತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ತಡೆದು, ಅವರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು. ದಯಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿ ಹೇಳುತ್ತಿದ್ದರು. ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯೊಬ್ಬರು ವಾಹನ ಸವಾರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗವೂ ನಡೆದಿದೆ. ಮಕ್ಕಳನ್ನು…
ಕೊರೊನಾ ಜಾಗೃತಿಗಾಗಿ ಬಂದ ‘ರಾಮಾಚಾರಿ’
March 29, 2020* ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜನರಲ್ಲಿ ಅರಿವು * ಸ್ವಯಂ ಪ್ರೇರಣೆಯಿಂದ ಸುತ್ತುತ್ತಿರುವ ತಿ.ನರಸೀಪುರದ ವ್ಯಕ್ತಿ ಮೈಸೂರು,ಮಾ.29(ಎಂಟಿವೈ)- ಮಾರಕ ಕೊರೊನಾ ವೈರಸ್ ಮೈಸೂರಿನಲ್ಲಿ ಮೂರನೆ ಹಂತಕ್ಕೆ ಕಾಲಿಟ್ಟಿದ್ದು ರೆಡ್ ಅಲರ್ಟ್ ಘೋಷಿಸುವ ಸಂದರ್ಭ ಒದಗಿ ಬರುತ್ತಿದ್ದರೂ ಜನರು ಮಾತ್ರ ಬುದ್ದಿ ಕಲಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಬಗ್ಗೆ ಬೈಕ್ ನಲ್ಲಿ ಮೈಕ್ ಕಟ್ಟಿಕೊಂಡು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಗ್ಗಲೀಪುರದ ನಿವಾಸಿ ಮಲ್ಲಿಕಾರ್ಜುನ…
ಬಹಳ ತಡವಾಗಿ ಆದರೂ ಸಿಎಂ ಯಡಿಯೂರಪ್ಪನವರು ಸರ್ವಪಕ್ಷ ಸಭೆ ಕರೆದಿರುವುದು ಅಭಿನಂದನಾರ್ಹ: ಡಿ.ಕೆ. ಶಿವಕುಮಾರ್
March 29, 2020ಸರ್ವಪಕ್ಷ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತು… ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ರಾಜಕೀಯ ಬೇರೆ. ಈ ನಾಡಿನ ಸಮಸ್ಯೆಯೇ ಬೇರೆ. ಒಂದಕ್ಕೊಂದು ಬೆರೆಸಲು ಹೋಗುವುದಿಲ್ಲ. ಕೊರೋನಾ ಪರಿಸ್ಥಿತಿ ನಿಯಂತ್ರಣ, ನಿರ್ವಹಣೆಗೆ ಸರಕಾರ ಕೈಗೊಳ್ಳುವ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ, ವೈಯಕ್ತಿಕವಾಗಿ ನನ್ನ ಬೆಂಬಲವಿದೆ. ಕೊರೋನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ…
ಕೂಲಿ ಮಾಡುವ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ
March 29, 2020ಮೈಸೂರು, ಮಾ.೨೯(ಪಿಎಂ)_ ಮೈಸೂರಿನ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಶನಿವಾರ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಆಹಾರ ಧಾನ್ಯದ ಪೊಟ್ಟಣ ಗಳನ್ನು ವಿತರಣೆ ಮಾಡಲಾಯಿತು. ಕೊರೊನಾ ವೈರಸ್ ಆತಂಕದಲ್ಲಿ ಇಡೀ ದೇಶವೇ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ನಿತ್ಯದ ಬದುಕಿಗೆ ಹೆಣಾಗಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಲು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಿದೆ. ಅಂತೆಯೇ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ದ ಪೊಟ್ಟಣ ಗಳನ್ನು ಶನಿವಾರ…
ಸೋಂಕಿತನ ಟ್ರಾವೆಲ್ ಇಸ್ಟರಿ ಅಸ್ಪಷ್ಟ
March 29, 2020ಮೈಸೂರು,ಮಾ.೨೯(ಪಿಎಂ)_ ಜಿಲ್ಲೆಯಲ್ಲಿ ಪತ್ತೆಯಾದ ಮೂರನೇ ಕೊರೊನಾ ಪಾಸಿಟಿವ್ ವ್ಯಕ್ತಿ (ಪಿ_೫೨) ತನ್ನ ಟ್ರಾವೆಲ್ ಇಸ್ಟರಿ ಕುರಿತು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಸದರಿ ರೋಗಿ ಮಾಹಿತಿ ಆಧರಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಷ್ಟಸಾಧ್ಯ ಎನ್ನುವಂತಾಗಿದೆ. ಈ ನಡುವೆ ಸದರಿ ವ್ಯಕ್ತಿ ಕೆಲಸ ಮಾಡುತ್ತಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಯ ಐವರಲ್ಲಿ ಶನಿವಾರ ಒಂದೇ ದಿನ ಕೊರೊನಾ ಪಾಸಿಟಿವ್ ಆಗಿರುವುದು ಸೋಂಕು ಸಮುದಾಯವಾಗಿ ಹರಡುವ ಭೀತಿ ಉಂಟು ಮಾಡಿದೆ. ಸಾವಿರಕ್ಕೂ ಹೆಚ್ಚಿನ…
ಕೊರೊನಾ ಲಾಕ್ ಡೌನ್ ಎಫೆಕ್ಟ್: ಟೈಲರ್ ಗಳಿಗೆ ನೆರವಾಗಲು ರಾಜ್ಯ ಸಂಘ ಮನವಿ
March 29, 2020ಮೈಸೂರು, ಮಾ.29(ಆರ್ ಕೆಬಿ)- ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಮೂರಾಬಟ್ಟೆಯಾಗಿರುವ ದಿನಗೂಲಿ ಟೈಲರ್ ವೃತ್ತಿಯವರಿಗೆ ನೆರವಾಗುವಂತೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ. ರಾಜ್ಯದಲ್ಲಿರುವ ಹೋಲಿಗೆ ವ್ರತ್ತಿ ಭಾಂದವರು ದಿನಗೂಲಿ ನೌಕರರಂತೆ ದುಡಿಯುವವರಾಗಿದ್ದು, ಒಂದು ದಿನ ಕೆಲಸ ಮಾಡದಿದ್ದರೆ ತುಂಬಾ ಕಷ್ಟ ಅನುಭವಿಸುವವರಾಗಿರುತ್ತಾರೆ. ಆದ್ದರಿಂದ ಈಗ ಬಂದಿರುವ ಕೊರೋನಾ ವೈರಸ್ ನಿಂದಾಗಿ ಸರ್ಕಾರದ ನಿಬಂಧನೆಗಳನ್ನು ಒಪ್ಪಿಕೊಂಡು ಅಂಗಡಿಗಳನ್ನು ಮುಚ್ಚಿ ಮನೆಯಲ್ಲೇ ಕುಳಿತುಕೊಂಡಿರುವುದರಿಂದ ಬಟ್ಟೆಗಳನ್ನು ಹೊಲಿದು ಜೀವನ…
ಮೈಸೂರಿನಲ್ಲಿ 5 ಕೊರೊನಾ ವೈರಸ್ ಹೊಸ ಪ್ರಕರಣ ಪತ್ತೆ
March 28, 2020ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ನಂಜನಗೂಡಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮೈಸೂರು,ಮಾ.28(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮಾರಕ ನೊವೆಲ್ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಶನಿವಾರ ಐವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು ಆ ಮೂಲಕ ಸೋಂಕು ಪೀಡಿತರ ಸಂಖ್ಯೆ 8ಕ್ಕೆ ಏರಿದಂತಾಗಿದೆ. ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಯ 5 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಎರಡು ದಿನದ ಹಿಂದೆಯಷ್ಟೆ ಜ್ಯುಬಿಲೆಂಟ್ ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರಿಂದ ಆ ಕಾರ್ಖಾನೆಯಲ್ಲಿ ಕೆಲಸ ಮಾಡುವ…
ಕರ್ನಾಟಕ – ಕೇರಳ ಗಡಿಗೆ ಸಚಿವ ಸುರೇಶ್ ಕುಮಾರ್ ಬೇಟಿ
March 28, 2020ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಆಗಮಿಸಿ ಪರಿಶೀಲನೆ ತರಕಾರಿ ವಾಹನಗಳಿಗೆ ರಾಸಾಯನಿಕ ಸಿಂಪಡಿಸುವಂತೆ ಸೂಚನೆ ಗುಂಡ್ಲುಪೇಟೆ,ಮಾ.28(ಎಂಟಿವೈ)- ನೊವೆಲ್ ಕೊರೊನಾ ವೈರಾಣು ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ – ಕೇರಳ ಗಡಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಶನಿವಾರ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಬೇಟಿ ನೀಡಿ ಪರಿಶೀಲಿಸಿದರು. ಕರ್ನಾಟಕ ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 212(766) ಹಾದು ಹೋಗುವ ಬಂಡೀಪುರ ಅರಣ್ಯದ ಮೂಲೆಹೊಳೆ ಚೆಕ್ ಪೋಸ್ಟ್…
ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು
March 28, 2020ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನನಿಲ್ಲಿಸ್ತಿಲ್ಲ ಯಾಕಂತ ಅರ್ಥವಾಗ್ತಿಲ್ಲ.? ನಿಮ್ಮ ರಕ್ಷಣೆಗಾಗಿ ಕೆಲಸ ಮಾಡೋರ್ ಮೇಲೆ ದೌರ್ಜನ್ಯ ನಡೆಸೋದು ಸರಿಯೇ.: ಸಚಿವ ಶ್ರೀರಾಮುಲು ಪ್ರಶ್ನೆ. ಮಂಡ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 650 ಬೆಡ್ ಆಸ್ಪತ್ರೆ ಈವರೆಗೆ ರಾಜ್ಯದಲ್ಲಿ 74 ಕೊರೊನಾವೈರಸ್ ಪಾಸಿಟಿವ್ ಕೇಸುಗಳು ಪತ್ತೆ ಕೊರೊನಾ ಸೋಂಕು ಪೀಡಿತರ ತಪಾಸಣಾ ಕೇಂದ್ರಕ್ಕೆ ಭೇಟಿ,ಪರಿಶೀಲನೆ ಮಂಡ್ಯ,ಮಾ.28(ನಾಗಯ್ಯ);ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ಭೀತಿಯಿಂದ ಲಾಕ್ ಡೌನ್ ಆರ್ಡ್ ಮಾಡಲಾಗಿದೆ,ಆದರೆ ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನ ನಿಲ್ಲಿಸ್ತಿಲ್ಲ,ಯಾಕೆ ಅಂತ ನನಗೂ…
ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ
March 28, 2020ಮೈಸೂರು, ಮಾರ್ಚ್.28.(ಕರ್ನಾಟಕ ಸರ್ಕಾರ): ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಲ್ಲಿ ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಲಾಗಿದ್ದು, ಈ 21 ದಿನಗಳಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸಲು ಪೋಷಕರು ಸಹಕರಿಸಬೇಕೆಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಅವರು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ವಿಶೇಷ ಮಕ್ಕಳ ಹಾರೈಕೆಯನ್ನು ಪೋಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು. ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಿರುವ ಹಿನ್ನೆಲೆಯಲ್ಲಿ…










