ಮೈಸೂರು, ಮಾ.೨೯(ಪಿಎಂ)_ ಮೈಸೂರಿನ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಶನಿವಾರ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಆಹಾರ ಧಾನ್ಯದ ಪೊಟ್ಟಣ ಗಳನ್ನು ವಿತರಣೆ ಮಾಡಲಾಯಿತು.
ಕೊರೊನಾ ವೈರಸ್ ಆತಂಕದಲ್ಲಿ ಇಡೀ ದೇಶವೇ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ನಿತ್ಯದ ಬದುಕಿಗೆ ಹೆಣಾಗಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಲು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಿದೆ.
ಅಂತೆಯೇ ಹೆಬ್ಬಾಳ ಕಾಲೋನಿಯ ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯ ದ ಪೊಟ್ಟಣ ಗಳನ್ನು ಶನಿವಾರ ವಿತರಣೆ ಮಾಡಲಾಯಿತು. ಸುಮಾರು ೨೫೦ ರೂ. ಮೌಲ್ಯ ದ ಧಾನ್ಯ ದ ಪೊಟ್ಟಣ ವಿತರಣೆ ಮಾಡಲಾಯಿತು.
ಅಕ್ಕಿ, ಬೇಳೆ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡಿದ್ದು, ಒಂದಿಷ್ಟು ದಿನ ಇಲ್ಲಿನ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅನುಕೂಲ ವಾಗಲಿದೆ.