ಸೋಂಕಿತನ ಟ್ರಾವೆಲ್ ಇಸ್ಟರಿ ಅಸ್ಪಷ್ಟ
ಮೈಸೂರು

ಸೋಂಕಿತನ ಟ್ರಾವೆಲ್ ಇಸ್ಟರಿ ಅಸ್ಪಷ್ಟ

March 29, 2020

ಮೈಸೂರು,ಮಾ.೨೯(ಪಿಎಂ)_ ಜಿಲ್ಲೆಯಲ್ಲಿ ಪತ್ತೆಯಾದ ಮೂರನೇ ಕೊರೊನಾ ಪಾಸಿಟಿವ್ ವ್ಯಕ್ತಿ (ಪಿ_೫೨) ತನ್ನ ಟ್ರಾವೆಲ್ ಇಸ್ಟರಿ ಕುರಿತು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೀಗಾಗಿ ಸದರಿ ರೋಗಿ ಮಾಹಿತಿ ಆಧರಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಷ್ಟಸಾಧ್ಯ ಎನ್ನುವಂತಾಗಿದೆ. ಈ ನಡುವೆ ಸದರಿ ವ್ಯಕ್ತಿ ಕೆಲಸ ಮಾಡುತ್ತಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಯ ಐವರಲ್ಲಿ ಶನಿವಾರ ಒಂದೇ ದಿನ ಕೊರೊನಾ ಪಾಸಿಟಿವ್ ಆಗಿರುವುದು ಸೋಂಕು ಸಮುದಾಯವಾಗಿ ಹರಡುವ ಭೀತಿ ಉಂಟು ಮಾಡಿದೆ.

ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಈ ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ ೯೦೦ರ ಕ್ಕೂ ಹೆಚ್ಚು ಮಂದಿ ಯನ್ನು ಕ್ವಾರಂಟೈನಲ್ಲಿ ಇರಿಸಲಾಗಿದೆ.

೩೫ ವರ್ಷ ವಯಸ್ಸಿನ ಜಿಲ್ಲೆಯ ಮೂರನೇ ಕೊರೊನಾ ಸೋಂಕಿತನು ವಿದೇಶ ಪ್ರವಾಸ ಕೈಗೊಂಡವರ ಸಂಪರ್ಕ ಸಹ ಹೊಂದಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಈತನಿಗೆ ಕೊರೊನಾ ಸೋಂಕು ಯಾವ ರೀತಿ ತಗುಲಿತು ಎಂಬುದು ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ.

Translate »