ಕೊರೊನಾ ಲಾಕ್ ಡೌನ್ ಎಫೆಕ್ಟ್: ಟೈಲರ್ ಗಳಿಗೆ ನೆರವಾಗಲು ರಾಜ್ಯ ಸಂಘ ಮನವಿ
ಮೈಸೂರು

ಕೊರೊನಾ ಲಾಕ್ ಡೌನ್ ಎಫೆಕ್ಟ್: ಟೈಲರ್ ಗಳಿಗೆ ನೆರವಾಗಲು ರಾಜ್ಯ ಸಂಘ ಮನವಿ

March 29, 2020

ಮೈಸೂರು, ಮಾ.29(ಆರ್ ಕೆಬಿ)- ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಮೂರಾಬಟ್ಟೆಯಾಗಿರುವ ದಿನಗೂಲಿ ಟೈಲರ್ ವೃತ್ತಿಯವರಿಗೆ ನೆರವಾಗುವಂತೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ರಾಜ್ಯದಲ್ಲಿರುವ ಹೋಲಿಗೆ ವ್ರತ್ತಿ ಭಾಂದವರು ದಿನಗೂಲಿ ನೌಕರರಂತೆ ದುಡಿಯುವವರಾಗಿದ್ದು, ಒಂದು ದಿನ ಕೆಲಸ ಮಾಡದಿದ್ದರೆ ತುಂಬಾ ಕಷ್ಟ ಅನುಭವಿಸುವವರಾಗಿರುತ್ತಾರೆ. ಆದ್ದರಿಂದ ಈಗ ಬಂದಿರುವ ಕೊರೋನಾ ವೈರಸ್ ನಿಂದಾಗಿ ಸರ್ಕಾರದ ನಿಬಂಧನೆಗಳನ್ನು ಒಪ್ಪಿಕೊಂಡು ಅಂಗಡಿಗಳನ್ನು ಮುಚ್ಚಿ ಮನೆಯಲ್ಲೇ ಕುಳಿತುಕೊಂಡಿರುವುದರಿಂದ ಬಟ್ಟೆಗಳನ್ನು ಹೊಲಿದು ಜೀವನ ನಡೆಸುವ ಟೈಲರ್ ಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಕಷ್ಟದ ದಿನಗಳನ್ನು ಕಳೆಯುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಹೊಲಿಗೆ ವೃತ್ತಿ ಭಾಂದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಟ್ಟಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿರುವ ಮುಖ್ಯಮಂತ್ರಿಗಳು ದಿನಗೂಲಿ ಕಾರ್ಮಿಕರಾದ ಟೈಲರ್ ಗಳ ಬಗ್ಗೆಯೂ ಗಮನ ಹರಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕೆ.ಎಸ್.ಆನಂದ್, ಪ್ರಧಾನ ಕಾರ್ಯದರ್ಶಿ ಬಿ.ವಸಂತ್, ಮೈಸೂರು ಅಧ್ಯಕ್ಷ ಜಗದೀಶ್ ಕುತ್ನೀಕರ್ ಅವರು ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.

Translate »