ಜೆಕೆ ಟೈರ್ ಕಾರ್ಖಾನಿಯಿಂದ ದೇಣಿಗೆ
ಮೈಸೂರು

ಜೆಕೆ ಟೈರ್ ಕಾರ್ಖಾನಿಯಿಂದ ದೇಣಿಗೆ

March 30, 2020

ಕೋವಿಡ್ – 19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಹಮ್ಮಿಕೊಂಡಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರ ನೆರವಿಗೆ ಜೆಕೆ ಟೈರ್ ಕಾರ್ಖಾನೆಯು ತನ್ನ ಉದ್ಯೋಗಿಗಳ ಒಂದು ತಿಂಗಳ ಸಂಬಳ ನೀಡಲು ನಿರ್ಧರಿಸಿದೆ.

ಜೆಕೆ ಟೈರ್ ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಪತ್ರಿಕೆ ಹೇಳಿಕೆ ನೀಡಿದ್ದು, ನಾವು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ನಮ್ಮ ಉತ್ಪನ್ನ ಮತ್ತು ರಫ್ತಿನ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಆದರೂ ಈ ವಿಷಮ ಪರಿಸ್ಥಿತಿ ನಿಭಾಯಿಸಲು ನಮ್ಮ ಉದ್ಯೋಗಿಗಳ ಸಂಬಳ ಕಡಿತಗೊಳಿಸಿ ಆ ಹಣವನ್ನು ಸಮಾಜಕ್ಕೆ ಬಳಸುವುದಾಗಿ ಘೋಷಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷರು, ಎಲ್ಲಾ ನಿರ್ದೇಶಕರು ತಮ್ಮ ಒಂದು ತಿಂಗಳ ಸಂಬಳದಲ್ಲಿ ಶೇ. 25 ರಷ್ಟು ಹಣ, ಹಿರಿಯ ವ್ಯವಸ್ಥಾಪನಾ ಮಂಡಳಿಯವರು ಶೇ. 15 ರಿಂದ 20 ರಷ್ಟು ಹಣ ನೀಡಲಿದ್ದಾರೆ. ಅಲ್ಲದೆ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

Translate »