ಮೈಸೂರು

ಮುಂದುವರೆದ ಕೋವಿಡ್-19 ಆತಂಕ: ಮೈಸೂರಿನ ಯೋಗ ಪ್ರವಾಸೋದ್ಯಮವೂ ಕುಸಿತ
ಮೈಸೂರು

ಮುಂದುವರೆದ ಕೋವಿಡ್-19 ಆತಂಕ: ಮೈಸೂರಿನ ಯೋಗ ಪ್ರವಾಸೋದ್ಯಮವೂ ಕುಸಿತ

March 12, 2020

ಮೈಸೂರಿಗೆ ಬರುತ್ತಿಲ್ಲ ವಿದೇಶಿ ವಿದ್ಯಾರ್ಥಿಗಳು, ವಾಸ್ತವ್ಯ ವಿಸ್ತರಿಸಿದ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮೈಸೂರು, ಮಾ.11(ಆರ್‍ಕೆ)- ಕೊರೊನಾ (ಕೋವಿಡ್-19) ಮಾರಣಾಂತಿಕ ವೈರಸ್ ಪ್ರಬಲವಾಗಿ ವ್ಯಾಪಿಸುತ್ತಿರುವುದರಿಂದ ಮೈಸೂರಿನ ಯೋಗ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ವಿದೇಶಗಳಲ್ಲಿ ಕೋವಿಡ್-19 ವ್ಯಾಪಕ ವಾಗಿ ಹರಡುತ್ತಿರುವುದು ಖಚಿತವಾಗಿರು ವುದರಿಂದ ವಿದೇಶಿ ಪ್ರವಾಸಿಗರು ಹಾಗೂ ಯೋಗ ವಿದ್ಯಾರ್ಥಿಗಳು ಮೈಸೂರಿಗೆ ಕೈ ಗೊಂಡಿದ್ದ ಪ್ರವಾಸವನ್ನು ರದ್ದುಪಡಿಸಿದ್ದು, ಯೋಗ ಕಲಿಯಲು ಮೈಸೂರಿಗೆ ಈಗಾ ಗಲೇ ಬಂದಿದ್ದ ಹಲವು ವಿದೇಶಿ ವಿದ್ಯಾರ್ಥಿ ಗಳು ಕೊರೊನಾ ವೈರಸ್ ಭೀತಿಯಿಂದಾಗಿ ತಮ್ಮ…

ದೊಡ್ಡಾಸ್ಪತ್ರೆಯಲ್ಲಿ ದೊಡ್ಡ ಸಮಸ್ಯೆ!?
ಮೈಸೂರು

ದೊಡ್ಡಾಸ್ಪತ್ರೆಯಲ್ಲಿ ದೊಡ್ಡ ಸಮಸ್ಯೆ!?

March 12, 2020

ಮೈಸೂರು, ಮಾ.10(ಎಂಕೆ)- ನೋ ಸ್ಟಾಕ್, ನೋ ಸ್ಟಾಕ್… ಇಲ್ಲಿ ರಿಪೋರ್ಟ್ ಸರಿಯಿಲ್ಲ ರೀ, ಹೊರಗಡೆ ಮಾಡಿಸಿ ಕೊಂಡ್ ಬನ್ನಿ… ಮೆಡಿಸಿನ್ ತಂದ್ರೆ ಟ್ರೀಟ್‍ಮೆಂಟ್ ಕೊಡ್ತಿವೀ… ನಮ್ಮಲ್ಲಿ ಟಿಟಿ ಇಂಜೆಕ್ಷನ್ನೇ ಇಲ್ಲ ರೀ…! ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೆ.ಆರ್.ಆಸ್ಪತ್ರೆಯಲ್ಲಿ ಬಡರೋಗಿ ಗಳಿಗೆ ವೈದ್ಯರಾಡುವ ಬಿಚ್ಚುನುಡಿಗಳಿವು. ಹೌದು! ಬಡವರು, ಆರ್ಥಿಕವಾಗಿ ಹಿಂದು ಳಿದವರು ಅರಸಿ ಬರುವ ಕೆ.ಆರ್. ಆಸ್ಪತ್ರೆ ಯಲ್ಲಿ ಸಾಧಾರಣ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. 10 ರೂ. ಚೀಟಿ ಕೊಂಡರೇ ಸಾಕು ಉಚಿತ ಅಥವಾ ಕಡಿಮೆ…

ಮುಡಾ ನಿವೇಶನ ಕಬಳಿಸಿದ `ನಕಲಿ ವ್ಯಕ್ತಿ’: ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಎಫ್‍ಐಆರ್ ಮಾತ್ರ ಆಗಿಲ್ಲ!
ಮೈಸೂರು

ಮುಡಾ ನಿವೇಶನ ಕಬಳಿಸಿದ `ನಕಲಿ ವ್ಯಕ್ತಿ’: ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಎಫ್‍ಐಆರ್ ಮಾತ್ರ ಆಗಿಲ್ಲ!

March 12, 2020

ಮುಡಾ ನಿವೇಶನ ಪಡೆದವರು ಎಚ್ಚರದ ಮೇಲೆ ಎಚ್ಚರ ವಹಿಸಬೇಕಿದೆ ಮೈಸೂರು, ಮಾ.11-ವ್ಯಕ್ತಿಯೋರ್ವರಿಗೆ ಮಂಜೂರಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮುಡಾ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಬಗ್ಗೆ ಮುಡಾ ಅಧಿ ಕಾರಿಗಳೇ ಪೊಲೀಸರಿಗೆ ದೂರು ಸಲ್ಲಿಸಿ ವರ್ಷವಾದರೂ ಆ ದೂರನ್ನು ಇನ್ನೂ ದಾಖ ಲಿಸಿಕೊಳ್ಳದೇ ಇರುವ ಬಗ್ಗೆ ವರದಿಯಾಗಿದೆ. ನಿವೇಶನದ ಮೂಲ ಮಂಜೂರಾತಿದಾ ರನ ಹೆಸರಿನಲ್ಲೇ ನಕಲಿ ವ್ಯಕ್ತಿ ಕ್ಲಿಯರ್ ಟೈಟಲ್ ಡೀಡ್ ಪಡೆದು ನಿವೇಶನವನ್ನು ಮಾರಾಟ ಮಾಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ…

ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆ
ಮೈಸೂರು

ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆ

March 12, 2020

ಮೈಸೂರು, ಮಾ. 11- ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ಚದುರಂಗ ರಸ್ತೆಯಲ್ಲಿ ರುವ ಯೂನಿವರ್ಸಿಟಿ ಕ್ವಾರ್ಟರ್ಸ್ ನಿವಾಸಿ ಪ್ರಾಧ್ಯಾಪಕ ಟಿ.ಆರ್. ಸ್ವರೂಪ್(33) ಅಧ್ಯ ಯನಕ್ಕಾಗಿ ಫೆಬ್ರವರಿ 1ರಂದು ಟರ್ಕಿಗೆ ತೆರಳಿ ಮಾರ್ಚ್ 2ರಂದು ವಾಪಸ್ಸಾಗಿದ್ದರು. ಅಂದಿನಿಂದ ಯಾರ ಜೊತೆ ಯಲ್ಲೂ ಸರಿಯಾಗಿ ಮಾತನಾಡದೇ ಮೌನಿಯಾಗಿದ್ದರು. ಮಾರ್ಚ್ 7ರಂದು ಬೆಳಿಗ್ಗೆ ಡಿಪಾರ್ಟ್‍ಮೆಂಟ್‍ಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಸ್ಸಾಗಿಲ್ಲ ಎಂದು ಅವರ ಪತ್ನಿ ಶ್ರೀಮತಿ ಎ.ಎಸ್. ಪುಣ್ಯಶ್ರೀ ಪೊಲೀಸರಿಗೆ…

200 ಕೋಟಿ ವೆಚ್ಚದಲ್ಲಿ ಶಿವನಸಮುದ್ರ ಬಳಿಯ ಐತಿಹಾಸಿಕ ವೆಸ್ಲಿ ಸೇತುವೆ ದುರಸ್ತಿ, ಸಂರಕ್ಷಣೆ; ಪರ್ಯಾಯ ಹೊಸ ಸೇತುವೆ ನಿರ್ಮಾಣ
ಮೈಸೂರು

200 ಕೋಟಿ ವೆಚ್ಚದಲ್ಲಿ ಶಿವನಸಮುದ್ರ ಬಳಿಯ ಐತಿಹಾಸಿಕ ವೆಸ್ಲಿ ಸೇತುವೆ ದುರಸ್ತಿ, ಸಂರಕ್ಷಣೆ; ಪರ್ಯಾಯ ಹೊಸ ಸೇತುವೆ ನಿರ್ಮಾಣ

March 12, 2020

ಸಂದೇಶ್‍ಗೆ ಸಚಿವ ಸಿ.ಟಿ.ರವಿ ವಿವರಣೆ ಚಾ.ನಗರದಲ್ಲಿ ವಿವಿಧೆಡೆ ಬಸ್ ತಂಗುದಾಣ ಐಬಿ ರಿಪೇರಿ ಜೊತೆಗೆ ಹೊಸ ಪೀಠೋಪಕರಣ ಬೆಂಗಳೂರು, ಮಾ.11-ಕೊಳ್ಳೇಗಾಲ ತಾಲೂಕು ಶಿವನಸಮುದ್ರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ, ಐತಿಹಾಸಿಕ ಮಹತ್ವವುಳ್ಳ ವೆಸ್ಲಿ ಸೇತುವೆಯ ಸಂರಕ್ಷಣೆ ಹಾಗೂ ಅದಕ್ಕೆ ಪರ್ಯಾಯವಾಗಿ ಹೊಸದಾಗಿ ಸೇತುವೆ ನಿರ್ಮಾಣವನ್ನು 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನು ಮೋದನೆ ನೀಡಲಾಗಿದೆ. ಈ ಪೈಕಿ ಮೊದಲ ಕಂತಾಗಿ 95 ಲಕ್ಷ ರೂಪಾಯಿಗಳನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಿಗೆ…

ಪೊಲೀಸರು ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತು ನೀಡಬೇಕಿದೆ
ಮೈಸೂರು

ಪೊಲೀಸರು ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತು ನೀಡಬೇಕಿದೆ

March 12, 2020

ಮೈಸೂರು,ಮಾ.11- ಪ್ರತಿಯೊಬ್ಬ ಪೊಲೀಸರು ತಮ್ಮ ಆರೋಗ್ಯದೊಂದಿಗೆ ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತುನೀಡಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕರೆ ನೀಡಿದರು. ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯ ದಲ್ಲಿ ನಿವೃತ್ತ ಮತ್ತು ಹಾಲಿ ಪೊಲೀಸರು ಹಾಗೂ ಅವರ ಕುಟುಂಬಗಳಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾ ಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯ ಎಂಬುದು ಕೇವಲ ಚಿಕಿತ್ಸೆಯಿಂದ ಬರುವು ದಿಲ್ಲ: ಲವಲವಿಕೆಯ ಜೀವನದಿಂದ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಮನೆಯಲ್ಲಿ…

ಕೋವಿಡ್: ವಿದೇಶಿಗಳಲ್ಲಿನ ಕನ್ನಡಿಗರ ರಕ್ಷಣೆಗೆ ಮನವಿ
ಮೈಸೂರು

ಕೋವಿಡ್: ವಿದೇಶಿಗಳಲ್ಲಿನ ಕನ್ನಡಿಗರ ರಕ್ಷಣೆಗೆ ಮನವಿ

March 12, 2020

ಬೆಂಗಳೂರು,ಮಾ.11-ಇಟಲಿ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಸಿಲುಕಿ ಕೊಂಡಿರುವ ಕನ್ನಡಿಗರನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ವಾಗಿ ರಾಜ್ಯಕ್ಕೆ ವಾಪಸ್ ಕರೆ ತರಲು ರಾಜ್ಯ ಸರಕಾರ, ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಸರಕಾರವು ಈಗಾಗಲೇ ವಿವಿಧ ದೇಶಗಳಲ್ಲಿರುವ ಭಾರತಿಯರನ್ನು ಏರ್ ಲಿಫ್ಟ್ ಮಾಡುತ್ತಿರುವ ಬೆನ್ನಲ್ಲಿಯೇ ರಾಜ್ಯ ಸರಕಾರವೂ ಕನ್ನಡಿಗರನ್ನು ವಾಪಸ್ ಕರೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಡಿಸಿಎಂ ಡಾ.ಅಶ್ವತ್ಥನಾರಾಯಣ, ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕೂಡ…

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾ.16ರವರೆಗೂ ಇಡಿ ವಶಕ್ಕೆ
ಮೈಸೂರು

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾ.16ರವರೆಗೂ ಇಡಿ ವಶಕ್ಕೆ

March 12, 2020

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಕ್ಕೊಳಗಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿ ರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರ ಬಂಧನ ಅವಧಿಯನ್ನು ಮಾರ್ಚ್ 16 ರವರೆಗೆ ವಿಸ್ತರಿಸಲಾಗಿದೆ. ರಾಣಾ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಣಾ ಕಪೂರ್ ಅವರು 30,000 ಕೋಟಿ ಸಾಲ ಮಂಜೂರು ಮಾಡಿದ್ದು ಅದರಲ್ಲಿ 20,000 ಕೋಟಿ ಹಣ ವಸೂಲಾಗದ ಸಾಲ (ಎನ್‍ಪಿಎ) ಆಗಿತ್ತು. ಇದೀಗ ವಸೂಲಾಗದ ಸಾಲ ಯಾವುದು ಎಂಬುದರ ಬಗ್ಗೆ…

ಜೈಲಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ, ನ್ಯಾಯ ಕೊಡಿಸಿ! ನಿರ್ಭಯಾ ಅಪರಾಧಿಯಿಂದ ಪೆÇಲೀಸರ ವಿರುದ್ಧ ದೂರು
ಮೈಸೂರು

ಜೈಲಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ, ನ್ಯಾಯ ಕೊಡಿಸಿ! ನಿರ್ಭಯಾ ಅಪರಾಧಿಯಿಂದ ಪೆÇಲೀಸರ ವಿರುದ್ಧ ದೂರು

March 12, 2020

ನವದೆಹಲಿ, ಮಾ.11- ನಿರ್ಭಯಾ ಸಾಮೂ ಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ತಾವು ಮಾಂಡೋಲಿ ಜೈಲಿನಲ್ಲಿದ್ದ ವೇಳೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಪೆÇಲೀಸ್ ಕಾನ್‍ಸ್ಟೆಬಲ್‍ಗಳ ವಿರುದ್ಧ ಎಫ್‍ಐಆರ್ ನೋಂದಣಿ ಕೋರಿ ಬುಧವಾರ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ನ್ಯಾಯಾಲಯ ಪವನ್ ಗುಪ್ತಾ ದೂರನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ನಿಗದಿಪಡಿಸಿದೆ. ಕಾನ್‍ಸ್ಟೆಬಲ್ ಅನಿಲ್‍ಕುಮಾರ್ ಮತ್ತು…

ಐಪಿಎಸ್ ಅಧಿಕಾರಿ ಎಡಿಜಿಪಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ!
ಮೈಸೂರು

ಐಪಿಎಸ್ ಅಧಿಕಾರಿ ಎಡಿಜಿಪಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ!

March 12, 2020

ಬೆಂಗಳೂರು, ಮಾ.11- ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆ ಯಿಂದ ದೂರ ಸರಿದ ಬೆನ್ನಲ್ಲೇ ಕರ್ನಾಟಕದ ಮತ್ತೋರ್ವ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. `ಕರ್ನಾಟಕದ ಸಿಂಗಂ’ ಎಂದೇ ಹೆಸರಾಗಿದ್ದ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಕಳೆದ ವರ್ಷ ಮೇ ತಿಂಗಳಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ್ದರು. ಇದೀಗ ಕರ್ನಾಟಕ ರಾಜ್ಯ ಗಣಕ ಪರಿಷತ್ ಎಡಿಜಿಪಿಯಾಗಿರುವ ಸಂಜಯ್ ಸಹಾಯ್ ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ಕೂಡ…

1 641 642 643 644 645 1,611
Translate »