ನವದೆಹಲಿ, ಮಾ.11- ನಿರ್ಭಯಾ ಸಾಮೂ ಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ತಾವು ಮಾಂಡೋಲಿ ಜೈಲಿನಲ್ಲಿದ್ದ ವೇಳೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಪೆÇಲೀಸ್ ಕಾನ್‍ಸ್ಟೆಬಲ್‍ಗಳ ವಿರುದ್ಧ ಎಫ್‍ಐಆರ್ ನೋಂದಣಿ ಕೋರಿ ಬುಧವಾರ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ನ್ಯಾಯಾಲಯ ಪವನ್ ಗುಪ್ತಾ ದೂರನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ನಿಗದಿಪಡಿಸಿದೆ. ಕಾನ್‍ಸ್ಟೆಬಲ್ ಅನಿಲ್‍ಕುಮಾರ್ ಮತ್ತು ಇನ್ನೊಬ್ಬ ಅಪರಿಚಿತ ಪೆÇಲೀಸ್ ಕಾನ್‍ಸ್ಟೆ ಬಲ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ದೂರಿನಲ್ಲಿ ಹರ್ಷ್ ವಿಹಾರ್ ಪೆÇಲೀಸ್ ಠಾಣೆಯ ಎಸ್‍ಎಚ್‍ಒಗೆ ನಿರ್ದೇಶನ ನೀಡಲಾಗಿದೆ.
ಶೀಘ್ರವೇ ಪವನ್ ಗುಪ್ತಾ ಗಲ್ಲಿಗೇರುವ ಕಾರಣ ಇಬ್ಬರೂ ಪೆÇಲೀಸರನ್ನು ಗುರುತಿಸಲು ಸಾಕ್ಷಿಯಾಗಿ ಹಾಜರಾಗಲು ಅವಕಾಶ ನೀಡುವುದು ಅಗತ್ಯವಾ ಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೂರ್ವ ದೆಹಲಿಯ ಮಾಂಡೋಲಿ ಕೇಂದ್ರ ಕಾರಾಗೃಹದಲ್ಲಿ ಪವನ್ ಗುಪ್ತಾ ಮೇಲೆ ಜುಲೈ 26 ಮತ್ತು 29, 2019ರಂದು ಇಬ್ಬರು ಕಾನ್‍ಸ್ಟೆಬಲ್‍ಗಳು ಕೆಟ್ಟದಾಗಿ ಥಳಿಸಿದ್ದಾರೆ ಎಂದು ಕ್ರಿಮಿನಲ್ ದೂರಿನಲ್ಲಿ ಆರೋ ಪಿಸಲಾಗಿದೆ. ತಲೆಗೆ ಪೆಟ್ಟು ಬಿದ್ದಿದ್ದಕ್ಕಾಗಿ ಆತನನ್ನು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡ ಲಾಗಿತ್ತು. ಅಲ್ಲದೆ 14 ಹೊಲಿಗೆಗಳನ್ನು ಹಾಕಲಾಗಿದೆ. ದೈಹಿಕ ಹಲ್ಲೆಗೆ ಸಂಬಂಧಿಸಿದ ದಂಡ ವಿಧಿ ಅನ್ವಯ ಇಬ್ಬರು ಪೆÇಲೀಸರ ವಿರುದ್ಧ ಎಫ್‍ಐಆರ್ ನೋಂದಣಿ ಕೋರಿದ್ದಾಗಿ ಪವನ್ ಗುಪ್ತಾ ಪರ ವಕೀಲರು ಹೇಳಿ ದ್ದಾರೆ. ಇದಕ್ಕೂ ಮೊದಲು ಮಾ.20ರಂದು ಬೆಳಿಗ್ಗೆ 5.30ಕ್ಕೆ ಪವನ್‍ಕುಮಾರ್ ಗುಪ್ತಾ ಸೇರಿದಂತೆ ನಾಲ್ಕು ಮರಣದಂಡನೆ ಶಿಕ್ಷೆಯನ್ನು ಗಲ್ಲಿಗೇರಿ ಸಲು ಹೊಸ ಡೆತ್ ವಾರಂಟ್ ಹೊರಡಿಸಿತ್ತು.