ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾ.16ರವರೆಗೂ ಇಡಿ ವಶಕ್ಕೆ
ಮೈಸೂರು

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾ.16ರವರೆಗೂ ಇಡಿ ವಶಕ್ಕೆ

March 12, 2020

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಕ್ಕೊಳಗಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿ ರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರ ಬಂಧನ ಅವಧಿಯನ್ನು ಮಾರ್ಚ್ 16 ರವರೆಗೆ ವಿಸ್ತರಿಸಲಾಗಿದೆ. ರಾಣಾ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ರಾಣಾ ಕಪೂರ್ ಅವರು 30,000 ಕೋಟಿ ಸಾಲ ಮಂಜೂರು ಮಾಡಿದ್ದು ಅದರಲ್ಲಿ 20,000 ಕೋಟಿ ಹಣ ವಸೂಲಾಗದ ಸಾಲ (ಎನ್‍ಪಿಎ) ಆಗಿತ್ತು. ಇದೀಗ ವಸೂಲಾಗದ ಸಾಲ ಯಾವುದು ಎಂಬುದರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಯೆಸ್ ಬ್ಯಾಂಕ್ ಸಿಇಒ ಆಗಿರುವ ರಾಣಾ ಕಪೂರ್‍ನನ್ನು ಮಾರ್ಚ್ 8ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಜಾರಿ ನಿರ್ದೇಶನಾಲಯವು ರಾಣಾ ಅವರನ್ನು ಹಣ ವರ್ಗಾವಣೆ ತಡೆ ನ್ಯಾಯಾಲಯ (ಪಿಎಂಎಲ್‍ಎ)ಕ್ಕೆ ಹಾಜರು ಪಡಿಸಿದ್ದು, ಬಂಧನ ಅವಧಿ ವಿಸ್ತರಿಸುವಂತೆ ಮನವಿ ಮಾಡಿತ್ತು.

Translate »