ಪೊಲೀಸರು ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತು ನೀಡಬೇಕಿದೆ
ಮೈಸೂರು

ಪೊಲೀಸರು ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತು ನೀಡಬೇಕಿದೆ

March 12, 2020

ಮೈಸೂರು,ಮಾ.11- ಪ್ರತಿಯೊಬ್ಬ ಪೊಲೀಸರು ತಮ್ಮ ಆರೋಗ್ಯದೊಂದಿಗೆ ತಮ್ಮ ಕುಟುಂಬದ ಆರೋಗ್ಯಕ್ಕೂ ಒತ್ತುನೀಡಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕರೆ ನೀಡಿದರು.

ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯ ದಲ್ಲಿ ನಿವೃತ್ತ ಮತ್ತು ಹಾಲಿ ಪೊಲೀಸರು ಹಾಗೂ ಅವರ ಕುಟುಂಬಗಳಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾ ಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆರೋಗ್ಯ ಎಂಬುದು ಕೇವಲ ಚಿಕಿತ್ಸೆಯಿಂದ ಬರುವು ದಿಲ್ಲ: ಲವಲವಿಕೆಯ ಜೀವನದಿಂದ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಮನೆಯಲ್ಲಿ ಟಿ.ವಿ. ಮುಂದೆ ಕುಳಿತು ಆರೋಗ್ಯ ಕಳೆದುಕೊಳ್ಳುವುದಕ್ಕಿಂತ ಸಾಮಾಜಿಕ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವಂತ ರಾಗಬಹುದು. ಈ ಶಿಬಿರದಲ್ಲಿ ಪ್ರತಿದಿನ 50 ಮಂದಿಯಂತೆ ತಪಾಸಣೆ ಪಡೆದುಕೊಳ್ಳಲು ಡಿಸಿಪಿ ಶಿವರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಈ ಮೂಲಕ ಶಿಬಿರದ ಸದುಪಯೋಗವನ್ನು ಪ್ರತಿ ಯೊಬ್ಬರೂ ಪಡೆದುಕೊಳ್ಳಲು ಸಹಕರಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸುಯೋಗ್ ಆಸ್ಪತ್ರೆಯು ಮಾನವೀಯ ಅಂತಃಕರಣದ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಡರೋಗಿಗಳ ಹಿನ್ನೆಲೆಯನ್ನು ಪ್ರಧಾನವಾಗಿಟ್ಟುಕೊಂಡು ವೈದ್ಯರು ಸೂಚಿ ಸುವ ಔಷಧಗಳಿಗೆ ಪರ್ಯಾಯವಾಗಿ ಜೆನರಿಕ್ ಔಷಧ ಗಳನ್ನು ವಿತರಿಸುವ ಮೂಲಕ ದುಬಾರಿ ಚಿಕಿತ್ಸಾ ವೆಚ್ಚವನ್ನು ತಗ್ಗಿಸಲಾಗುವುದೆಂದರು. ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಎ.ಎನ್.ಪ್ರಕಾಶ್‍ಗೌಡ, ನಗರ ಸಶಸ್ತ್ರ ಮೀಸಲು ಪಡೆ ಉಪ ಪೊಲೀಸ್ ಆಯುಕ್ತ ಶಿವರಾಜು, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಮರಿಸ್ವಾಮಿ, ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇ ಶಕ ಡಾ.ರಾಜೇಂದ್ರ ಪ್ರಸಾದ್, ನಿರ್ದೇಶಕರಾದ ಡಾ.ಸೀಮಾ ಯೋಗಣ್ಣ ಉಪಸ್ಥಿತರಿದ್ದರು.

Translate »