ಮೈಸೂರು

ಹೆಚ್.ಡಿ.ಕೋಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು
ಮೈಸೂರು

ಹೆಚ್.ಡಿ.ಕೋಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು

March 10, 2020

ಸಂದೇಶ್ ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ಚಾ.ನಗರ ಉಪ್ಪಾರ ಬೀದಿ ಸರ್ಕಾರಿ ಶಾಲೆ ಕಾಂಪೌಂಡ್ ಶೀಘ್ರ ನಿರ್ಮಾಣ, ಶಾಲಾವರಣ ಸ್ವಚ್ಛತೆಗೆ ಕ್ರಮ ಬೆಂಗಳೂರು, ಮಾ.9- ಹೆಗ್ಗಡದೇವನಕೋಟೆ ತಾಲೂಕು ಆಸ್ಪತ್ರೆಯ ನಿವೇ ಶನದ ವಿಸ್ತೀರ್ಣ 5 ಎಕರೆ 12 ಗುಂಟೆ ಆಗಿದ್ದು, ಇದರಲ್ಲಿ ಒತ್ತುವರಿ ಆಗಿದ್ದ 13 ಗುಂಟೆ ಜಾಗವನ್ನು ತೆರವು ಗೊಳಿಸಿ, ಇಲಾಖಾ ವಶಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಇಂದು ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದರು. ಹೆಗ್ಗಡದೇವನ ಕೋಟೆ ತಾಲೂಕು ಆಸ್ಪತ್ರೆಗೆ ಸೇರಿದ…

ಸೈಕಲ್‍ನಲ್ಲಿ ದೇಶ ಸುತ್ತಿ ಶಾಂತಿ-ಸಾಮರಸ್ಯ ಸಂದೇಶ ಸಾರುತ್ತಿರುವ ನಾಗರಾಜಗೌಡ
ಮೈಸೂರು

ಸೈಕಲ್‍ನಲ್ಲಿ ದೇಶ ಸುತ್ತಿ ಶಾಂತಿ-ಸಾಮರಸ್ಯ ಸಂದೇಶ ಸಾರುತ್ತಿರುವ ನಾಗರಾಜಗೌಡ

March 10, 2020

ಮೈಸೂರು, ಮಾ.9(ಪಿಎಂ)- ಶಾಂತಿ-ಸಾಮರಸ್ಯ ಸಂದೇಶ ಸಾರಲು, ರಾಷ್ಟ್ರ ಪ್ರೇಮದ ಮಹತ್ವ ಪಸರಿ ಸಲು ಹಾಗೂ ಪರಿಸರ ಕಾಳಜಿಯ ಅಗತ್ಯತೆ ತಿಳಿಸಲು ಹಾಸನ ಮೂಲದ ವ್ಯಕ್ತಿಯೊಬ್ಬರು ಸೈಕಲ್‍ನಲ್ಲಿ ದೇಶ ಸಂಚಾರ ನಡೆಸುತ್ತಿದ್ದಾರೆ. ಹೀಗೆ ದೇಶ ಸುತ್ತಿ, ಸಂದೇಶ ಸಾರಲು ಸೈಕಲ್ ತುಳಿಯುತ್ತಿರುವವರು ನಾಗರಾಜಗೌಡ. ಇವರು ಹಾಸನ ನಗರದ ಅಗರಬತ್ತಿ ವ್ಯಾಪಾರಿ ಮಲ್ಲೇಗೌಡರ ಪುತ್ರರು. ಇವರ ತಾಯಿ ಶಾರದಮ್ಮ. ಎಸ್‍ಎಸ್‍ಎಲ್‍ಸಿ ಓದಿರುವ ನಾಗರಾಜಗೌಡ ತಮ್ಮ ಈ ಸೈಕಲ್ ಯಾತ್ರೆ ಆರಂಭಿಸಿದ್ದು ಮುಂಬೈ ನಗರದಿಂದ. ಕರ್ನಾಟಕದ ಹಾಸನದ ಇವರು ಮುಂಬೈಯಿಂದ ಯಾತ್ರೆ…

ಮೈಸೂರು-ಕಲಬುರ್ಗಿ ವಿಮಾನ ಬೆಂಗಳೂರಲ್ಲಿ ಸುರಕ್ಷಿತ ಭೂ ಸ್ಪರ್ಶ
ಮೈಸೂರು

ಮೈಸೂರು-ಕಲಬುರ್ಗಿ ವಿಮಾನ ಬೆಂಗಳೂರಲ್ಲಿ ಸುರಕ್ಷಿತ ಭೂ ಸ್ಪರ್ಶ

March 9, 2020

ಮೈಸೂರು,ಮಾ.8(ಆರ್‍ಕೆ)-ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಏರ್ ಅಲಯನ್ಸ್ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾ ಗಿದ್ದ ಮೈಸೂರು-ಕಲಬುರ್ಗಿ ಮಾರ್ಗದ ಅಲ ಯನ್ಸ್ ಏರ್ ವಿಮಾನದಲ್ಲಿ ಮಾರ್ಗ ಮಧ್ಯೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಮರಳಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿ, ಅಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಅಲ್ಲಿನ ತಾಂತ್ರಿಕ ವರ್ಗ ಸುಮಾರು ಎರಡು ಗಂಟೆ ಪರಿಶೀಲಿಸಿ, ದೋಷ ಸರಿಪಡಿಸಿದರು ಎಂದು ತಿಳಿದು ಬಂದಿದೆ. ಕಲಬುರ್ಗಿಯಿಂದ ಬೆಳಿಗ್ಗೆ 11.50ಕ್ಕೆ…

ಕೊಡಗಿನಲ್ಲಿ ಟಿಪ್ಪು ಜಯಂತಿ ವೇಳೆ ದಾಖಲಾಗಿದ್ದ 18 ಕೇಸ್ ಹಿಂದಕ್ಕೆ
ಮೈಸೂರು

ಕೊಡಗಿನಲ್ಲಿ ಟಿಪ್ಪು ಜಯಂತಿ ವೇಳೆ ದಾಖಲಾಗಿದ್ದ 18 ಕೇಸ್ ಹಿಂದಕ್ಕೆ

March 9, 2020

ಮಡಿಕೇರಿ,ಮಾ.8(ಪ್ರಸಾದ್)- ಟಿಪ್ಪು ಜಯಂತಿ ವಿರೋಧಿಸಿ ನಡೆದಂತಹ ಪ್ರತಿಭಟನೆಗಳು ಸೇರಿ ದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಒಟ್ಟು 46 ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆಯಲು ಅನುಮತಿ ನೀಡಿದೆ. ಈ 46 ಕೇಸುಗಳ ಪೈಕಿ 18 ಪ್ರಕರಣಗಳು ಕೊಡಗು ಜಿಲ್ಲೆಗೇ ಸಂಬಂಧಿಸಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣ ಗಳು ಟಿಪ್ಪು ಜಯಂತಿಯ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕೇಸು ಗಳಾಗಿದ್ದು, ಇದೀಗ ಬಿಜೆಪಿ ಸರಕಾರ ಎರಡೂ ಕೋಮುಗಳ ಕೇಸುಗಳನ್ನು ಹಿಂಪಡೆಯುತ್ತಿದೆ. ರಾಜ್ಯದಲ್ಲಿ…

ಏಳು ಮಂದಿ ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ
ಮೈಸೂರು

ಏಳು ಮಂದಿ ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ

March 9, 2020

ನವದೆಹಲಿ: ವಿಶ್ವ ಮಹಿಳಾ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಖಾತೆ ಗಳನ್ನು ಮಹಿಳೆಯ ರಿಗೆ ಬಿಟ್ಟುಕೊಟ್ಟಿದ್ದಾರೆ. 7 ಮಹಿಳಾ ಸಾಧಕರು ತಮ್ಮ ಸ್ಫೂರ್ತಿ ದಾಯಕ ಕಥೆಗಳನ್ನು ಹಂಚಿಕೊಳ್ಳಲು ನನ್ನ ಟ್ವಿಟರ್ ಅಕೌಂಟ್ ಅನ್ನು ಬಳಸುತ್ತಾರೆ ಎಂದು ಅವರು ಬಹುದಿನಗಳ ಹಿಂದೆಯೇ ಹೇಳಿಕೊಂಡಿದ್ದರು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 7 ಮಹಿಳಾ ಸಾಧಕಿಯರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಮತ್ತು ಜನರೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂವಹನ ನಡೆಸಲಿ ದ್ದಾರೆ ಎಂದು ಅವರು ಘೋಷಿಸಿದ್ದರು….

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ
ಮೈಸೂರು

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

March 9, 2020

ನವದೆಹಲಿ,ಮಾ.8- ರಾಜ್ಯದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ (82) ಅವರು ಇಂದು ವಿಧಿವಶರಾಗಿದ್ದಾರೆ. ಕೇಂದ್ರದ ಮಾಜಿ ಕಾನೂನು ಸಚಿವರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರೂ ಆಗಿದ್ದ ಭಾರದ್ವಾಜ್, ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಂಸರಾಜ್ ಭಾರದ್ವಾಜ್ ಅವರು, 2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಅವರು ಹೆಚ್ಚುವರಿಯಾಗಿ 2012 ರಿಂದ 2013, ಮಾರ್ಚ್‍ವರೆಗೆ ಕೇರಳದ ರಾಜ್ಯಪಾಲ ರಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಹಂಸರಾಜ್ ಭಾರದ್ವಾಜ್ ಅವರ ಅವಧಿಯಲ್ಲಿ ನಾಲ್ವರು ಮುಖ್ಯ ಮಂತ್ರಿಗಳು ಪ್ರಮಾಣ…

ಲಂಡನ್‍ಗೆ ಹಾರಲು ಸಜ್ಜಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಪುತ್ರಿಗೆ ತಡೆ: ಮತ್ತಷ್ಟು ವಂಚನೆ ಬಯಲು
ಮೈಸೂರು

ಲಂಡನ್‍ಗೆ ಹಾರಲು ಸಜ್ಜಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಪುತ್ರಿಗೆ ತಡೆ: ಮತ್ತಷ್ಟು ವಂಚನೆ ಬಯಲು

March 9, 2020

ನವದೆಹಲಿ: ಯೆಸ್ ಬ್ಯಾಂಕ್ ಮುಳುಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿರುವ ಜಾರಿ ನಿರ್ದೇಶನಾಲಯಕ್ಕೆ ತನಿಖೆಯ ವೇಳೆ ಬೆಚ್ಚಿಬೀಳುವ ವಿಚಾರಗಳು ಬಯಲಾಗುತ್ತಿವೆ. ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಡ್ರಿಲ್ ನಡೆಸುತ್ತಿರುವ ಇಡಿ, ಬಗೆದಷ್ಟು ಬಯಲಾಗುತ್ತಿರುವ ಕರ್ಮಕಾಂಡಗಳನ್ನು ಕಂಡು ಶಾಕ್ ಆಗಿದೆ. ಹೀಗಾಗಿಯೇ ಇಂದು ನಸುಕಿನ ವೇಳೆ ರಾಣಾ ಕಪೂರ್ ಅವರನ್ನು ಬಂಧಿಸಿದ ಇಡಿ, ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ತಮ್ಮ…

ಕೊರೊನಾ ವೈರಸ್ ಭೀತಿ: ಮೈಸೂರು ಭಾಗದ ವಾಣಿಜ್ಯ ವಹಿವಾಟಿಗೆ ಭಾರೀ ಪೆಟ್ಟು
ಮೈಸೂರು

ಕೊರೊನಾ ವೈರಸ್ ಭೀತಿ: ಮೈಸೂರು ಭಾಗದ ವಾಣಿಜ್ಯ ವಹಿವಾಟಿಗೆ ಭಾರೀ ಪೆಟ್ಟು

March 9, 2020

ಮೈಸೂರು, ಮಾ. 8(ಆರ್‍ಕೆ)- ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ಪ್ರವಾಸೋದ್ಯಮಕ್ಕೆ ಒಂದು ರೀತಿ ವಸಂತ ಕಾಲ. ಪ್ರವಾಸಿಗರು ಹೆಚ್ಚು ಹೆಚ್ಚು ಪ್ರವಾಸ ಕಾರ್ಯಕ್ರಮ ಆಯೋಜಿಸಿ ಕೊಳ್ಳುವುದು ಇದೇ ಸಮಯದಲ್ಲಿ. ಆದರೆ, ಈ ಬಾರಿ ಎಲ್ಲೆಡೆ ಕೊರೊನಾ ವೈರಸ್ ವದಂತಿ ಹಬ್ಬಿರುವುದರಿಂದ ಪ್ರವಾಸೋದ್ಯಮ, ಹೋಟೆಲ್, ಟೂರ್ಸ್ ಅಂಡ್ ಟ್ರಾವೆಲ್ಸ್, ಕೈಗಾರಿ ಕೋದ್ಯಮದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಅದರ ಜೊತೆಗೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಮಾಂಸಾಹಾರಿ ಪದಾರ್ಥಗಳ ಮಾರಾಟವೂ ಕುಂಠಿತವಾಗಿದೆ. ಇನ್ನೇನು ಮಕ್ಕಳಿಗೆ ಪರೀಕ್ಷೆಗಳು ಮುಗಿದು…

ಗಣಪತಿ ಆಶ್ರಮದ ಶುಕವನ, ಬೋನ್ಸಾಯ್ ಗಾರ್ಡನ್, ಮ್ಯೂಸಿಯಂ ಬಂದ್
ಮೈಸೂರು

ಗಣಪತಿ ಆಶ್ರಮದ ಶುಕವನ, ಬೋನ್ಸಾಯ್ ಗಾರ್ಡನ್, ಮ್ಯೂಸಿಯಂ ಬಂದ್

March 9, 2020

ಮೈಸೂರು, ಮಾ.8(ಎಸ್‍ಬಿಡಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕೆಲ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆಶ್ರಮದ ಶುಕವನ ಪಕ್ಷಿಧಾಮ, ಕಿಷ್ಕಿಂಧ ಮೂಲಿಕಾ ಬೋನ್ಸಾಯ್ ಗಾರ್ಡನ್ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯಕ್ಕೆ ಸೋಮವಾರದಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸ ಲಾಗಿದೆ. ಈ ಸಂಬಂಧ ಆಶ್ರಮದ ವೆಬ್‍ಸೈಟ್‍ನಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಪ್ರಕಟಿಸಲಾಗಿದೆ. `ಕೊರೊನಾದಿಂದ ಉದ್ಭವಿಸುತ್ತಿ ರುವ ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಶುಕವನ, ಬೋನ್ಸಾಯ್ ವನ ಹಾಗೂ ವಿಶ್ವ ಮ್ಯೂಸಿಯಂಗಳನ್ನು…

ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ತುಂಡಾದ ವ್ಯಕ್ತಿಯ ಕಾಲು 
ಮೈಸೂರು

ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ತುಂಡಾದ ವ್ಯಕ್ತಿಯ ಕಾಲು 

March 9, 2020

ಬೆಂಗಳೂರು, ಮಾ.8- ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದೆ. ನಗರದ ಆಡು ಗೋಡಿಯ ಬಳಿ ಈ ಘಟನೆ ಸಂಭವಿ ಸಿದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯೊಬ್ಬರ ಎಡಗಾಲು ತುಂಡಾಗಿದೆ. ಕಸದ ರಾಶಿಯ ನಡುವೆ ಈ ಸ್ಫೋಟ ಸಂಭವಿಸಿರುವುದು ಅಚ್ಚರಿ, ಆತಂಕ ಮೂಡಿಸಿದೆ. ಗಾಯಾಳು ವನ್ನು 50 ವರ್ಷದ ನರಸಿಂಹಯ್ಯ ಎಂದು ಗುರುತಿಸಲಾಗಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಗ್ರಾನೈಟ್ ಕತ್ತರಿಸುವ ಕೆಮಿಕಲ್ ಎಸೆದಿದ್ದು ಕೆಮಿಕಲ್ ರಿಯಾಕ್ಷನ್‍ನ ಪರಿಣಾಮ ಈ…

1 645 646 647 648 649 1,611
Translate »