ಮುಂಬೈ,ಮಾ.9-ಯೆಸ್‍ಬ್ಯಾಂಕ್ ದಿವಾಳಿ ಎಬ್ಬಿಸಿದ ಸಂಸ್ಥಾಪಕ ರಾಣಾ ಕಪೂರ್‍ಗೆ ಸಿಬಿಐ ಶಾಕ್ ನೀಡಿದೆ. ಮುಂಬೈನಲ್ಲಿ ರಾಣಾ ಕಪೂರ್‍ಗೆ ಸೇರಿದ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು 7 ಸ್ಥಳಗಳಲ್ಲಿ ಸೋಮವಾರ ಸಿಬಿಐ ದಾಳಿ ನಡೆಸಿದೆ. ರಾಣಾ ಕಪೂರ್, ದಿವಾನ್ ಹೌಸಿಂಗ್ ಮತ್ತು ಫೈನಾನ್ಸ್ ಲಿಮಿಟೆಡ್ ಕಂಪನಿಯಿಂದ ಸುಮಾರು 600 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದ ಮೇಲೆ ಸಿಬಿಐ ಅಧಿ ಕಾರಿಗಳ ತಂಡ ದಾಳಿಮಾಡಿ ಶೋಧಿಸಿದೆ. ರಾಣಾ ಕಪೂರ್(62), ಡಿಹೆಚ್‍ಎಫ್‍ಎಲ್‍ನ ಪ್ರವರ್ತಕ ಕಪಿಲ್ ವಧಾವನ್ ಅವರ ಡಿಹೆಚ್ ಎಫ್‍ಎಲ್…
ರಂಗ ಸಾಧಕಿ ಅನಿತಾ ಕಾರ್ಯಪ್ಪಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
March 10, 2020ಬೆಂಗಳೂರು,ಮಾ.9-ಕೊಡಗು ಜಿಲ್ಲೆಯ ರಂಗ ಭೂಮಿ ಸಾಧಕಿ ಶ್ರೀಮತಿ ಅನಿತಾ ಕಾರ್ಯಪ್ಪ ಅವರು ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವ ರಿಂದ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಸ್ವೀಕರಿಸಿದರು. ಕೊಡಗಿನಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಬಾಂಧವ್ಯ ವೃದ್ಧಿಯ ಕೊಂಡಿಯಾಗಿ 40 ವರ್ಷಗಳ ರಂಗಭೂಮಿ ಸೇವೆಗೆ ಇವರು ಈ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಪ್ರಶಸ್ತಿ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಇವರು ಸೇರಿದಂತೆ…
ಮೈಸೂರು ರೇಸ್ ಕೋರ್ಸ್‍ನಲ್ಲಿ ಅಕ್ರಮ ಕುದುರೆ ಜೂಜಾಟ 8 ಮಂದಿ ಸೆರೆ, 2.33 ಲಕ್ಷ ರೂ. ನಗದು ವಶ
March 10, 2020ಮೈಸೂರು, ಮಾ.9(ಆರ್‍ಕೆ)-ಮೈಸೂರು ರೇಸ್ ಕೋರ್ಸ್‍ನಲ್ಲಿ ಬೆಟ್ಟಿಂಗ್ ಕಟ್ಟಿಕೊಂಡು ಅನಧಿಕೃತವಾಗಿ ಕುದುರೆ ಜೂಜಾಟದಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2,32,910 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಚಂದ್ರಶೇಖರ ಅವರ ಮಗ ವಿಶ್ವನಾಥ(52), ಬಸವೇಶ್ವರ ರಸ್ತೆ 9ನೇ ಕ್ರಾಸ್ ನಿವಾಸಿ ಮರಿಯಪ್ಪರ ಮಗ ಎಂ. ಹರೀಶ್(40), ಕೆಬಿಎಲ್ ಬಡಾವಣೆಯ ಶಿವಕುನ್ನೇಗೌಡರ ಮಗ ಸುನಿಲ್‍ಕುಮಾರ್(33), ಮಂಡಿ ಮೊಹಲ್ಲಾ, ಪಟ್ಟೇಗಾರ್ ನಿವಾಸಿ ಆರ್.ಕೃಷ್ಣಾಚಾರ್ ಅವರ ಮಗ ಶ್ರೀನಿವಾಸ(28), ಆಲನಹಳ್ಳಿ 3ನೇ ಮೇನ್ ರಸ್ತೆಯ ತಮ್ಮಣ್ಣ ಅವರ ಮಗ…
ಕೊರೊನಾ ಬಗ್ಗೆ ನಿರಂತರ ಜನಜಾಗೃತಿ
March 10, 2020ಮೈಸೂರು, ಮಾ.9(ಎಸ್‍ಬಿಡಿ)- ಮೈಸೂ ರಿನ ರೈಲು ನಿಲ್ದಾಣದಲ್ಲಿ ಕೊರೊನಾ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ರೈಲುಗಳ ಮೂಲಕ ಎಲ್ಲೆಡೆಯಿಂದ ಸಾವಿರಾರು ಜನ ಮೈಸೂರಿಗೆ ಆಗಮಿಸು ತ್ತಾರೆ. ಇಲ್ಲಿಂದ ಬೇರೆ ಕಡೆಗೂ ಪ್ರಯಾಣ ಬೆಳೆಸುತ್ತಾರೆ. ಹಾಗಾಗಿ ವಿವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ. ಜಾಹಿರಾತು ಪ್ರದರ್ಶನ ಮಾದರಿ ಎಲ್‍ಸಿಡಿಗಳಲ್ಲಿ ವೀಡಿಯೋ ಬಿತ್ತರಿಸ ಲಾಗುತ್ತಿದೆ. ಎಲ್ಲಾ ಪ್ರಯಾಣಿಕರಿಗೂ ಕರಪತ್ರ ಹಂಚಲಾಗುತ್ತಿದೆ. ಅಲ್ಲದೆ ಧ್ವನಿ ವರ್ಧಕದ ಮೂಲಕವೂ ಕೊರೊನಾ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗದ ಗುಣಲಕ್ಷಣಗಳು, ಚಿಕಿತ್ಸೆಯ…
ಇಂದಿನಿಂದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಖಾಸಗಿ ಬಸ್‍ಗಳ ದರ ಹೆಚ್ಚಳ
March 10, 2020ಮೈಸೂರು,ಮಾ.9-ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಖಾಸಗಿ ಬಸ್‍ಗಳ ದರವನ್ನು ನಾಳೆ (ಮಾ.10) ಯಿಂದ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಖಾಸಗಿ ಬಸ್ ಮಾಲೀ ಕರ ಸಂಘದ ಗೌರವ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ ತಿಳಿಸಿದ್ದಾರೆ. ದಿನೇ ದಿನೆ ಡಿಸೇಲ್, ಬಿಡಿಭಾಗಗಳು, ಇನ್ಷೂರೆನ್ಸ್ ಮತ್ತು ಟೋಲ್ ದರಗಳು ಹೆಚ್ಚಾ ಗುತ್ತಿದ್ದು ಉದ್ಯಮವನ್ನು ನಡೆಸುವುದೇ ಕಷ್ಟವಾಗಿರುವುದರಿಂದ ಅನಿವಾರ್ಯವಾಗಿ ಈ 3 ಜಿಲ್ಲೆಯ ಖಾಸಗಿ ಬಸ್ ದರವನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆ ಖಾಲಿ ಹುದ್ದೆ ಭರ್ತಿಗೆ ಕೆಪಿಎಸ್‍ಸಿಗೆ ಪತ್ರ
March 10, 2020ಬೆಂಗಳೂರು, ಮಾ.9(ಕೆಎಂಶಿ)- ಕೃಷಿ ಇಲಾಖೆಯ ಗ್ರೂಪ್-ಸಿ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಹಾಗೂ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್, ವಿಧಾನ ಸಭೆ ಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಹೆಚ್.ಡಿ.ರೇವಣ್ಣ ಅವರ ಪ್ರಸ್ತಾವಕ್ಕೆ ಉತ್ತರಿಸಿರುವ ಸಚಿವರು, ಖಾಲಿ ಇರುವ ಹುದ್ದೆಗಳಿಗೆ ಹೆಚ್ಚುವರಿ ಪ್ರಭಾರ ದಲ್ಲಿರಿಸಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರ್ಕಾರದ ಸೌಲಭ್ಯ…
ಕಣ್ಮರೆಯಾಗುವ ಹಂತ ತಲುಪಿವೆ ಈ ಪಾರಂಪರಿಕ ಕಲ್ಯಾಣಿಗಳು!
March 10, 2020ಮೈಸೂರು, ಮಾ.9(ಎಂಕೆ)- ಸುತ್ತಲೂ ಸುರಿದ ಕಟ್ಟಡದ ತ್ಯಾಜ್ಯ, ಚಪ್ಪಡಿ ಕಲ್ಲುಗಳು, ಕಸದ ರಾಶಿ ಮತ್ತು ಬೃಹತ್ತಾಗಿ ಬೆಳೆದ ಪೊದೆಗಳ ನಡುವೆ ಮರೆಯಾಗಿ ಪಾರಂಪರಿಕ ‘ಕಲ್ಯಾಣಿ’ಗಳೆರಡು ಮುಚ್ಚಿ ಹೋಗುತ್ತಿವೆ. ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯಲ್ಲಿ ಮೈಸೂರು ವಿವಿ ಈಜುಕೊಳಕ್ಕೆ ಹೊಂದಿಕೊಂಡಂತೆ ಅಕ್ಕ- ಪಕ್ಕದಲ್ಲಿರುವ ಎರಡು ಪ್ರತ್ಯೇಕ ಕಲ್ಯಾಣಿಗಳು ನಿರ್ವಹಣೆ ಮತ್ತು ಅಭಿವೃದ್ಧಿ ಕಾಣದೆ ಕಸ ಮತ್ತು ಕೆಸರಿನ ಗುಂಡಿಗಳಾಗಿ ಮಾರ್ಪಟ್ಟಿವೆ. ಆಯುಶ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯದ ‘ಚಂದ್ರವನ’ ಔಷಧಿಯ ಗಿಡ ಮೂಲಿಕೆಗಳ ಸಸ್ಯ…
ಮದ್ದೂರು ಬಳಿ ಕೆಎಸ್‍ಆರ್‍ಪಿ ಬಸ್ ಉರುಳಿ 11ಕ್ಕೂ ಅಧಿಕ ಪೆÇಲೀಸರಿಗೆ ಗಾಯ
March 10, 2020ಮದ್ದೂರು,ಮಾ.9(ನಾಗಯ್ಯ)- ಭದ್ರತಾ ಕರ್ತವ್ಯಕ್ಕೆ ಸಿಬ್ಬಂದಿ ಕರೆದೊಯ್ಯುತ್ತಿದ್ದ ಕೆಎಸ್‍ಆರ್‍ಪಿ ಪೊಲೀಸ್ ಬಸ್‍ವೊಂದು ಸ್ಟೇರಿಂಗ್ ಲಾಕ್ ಆಗಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು 11ಕ್ಕೂ ಹೆಚ್ಚು ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ತಾಲೂಕಿನ ತೈಲೂರು ಕೆರೆ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಚಾಲಕ ನಾಗಣ್ಣ, ಕೆಎಸ್‍ಆರ್‍ಪಿ ಪೊಲೀಸರಾದ ರಿಯಾಜ್, ಚಂದ್ರಶೇಖರ್, ಸೈಯ್ಯದ್, ಸಾಗರ್, ರಾಘವೇಂದ್ರ, ರಾಮನ ಗೌಡ ಹಾಗೂ ಆನಂದ್ ಇತರರು ಗಾಯಗೊಂಡಿದ್ದು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವರ: ಸೋಮವಾರ ರಾತ್ರಿ ಆದಿಚುಂಚನಗರಿಯಲ್ಲಿ ನಡೆದ ರಥೋತ್ಸವ…
ವೈವಿಧ್ಯತೆ ಗುಣವುಳ್ಳ ಹೆಣ್ಣು ಪ್ರಕೃತಿಯ ಪ್ರತಿರೂಪ
March 10, 2020ವಿದುಷಿ ಡಾ.ತುಳಸಿ ರಾಮಚಂದ್ರ ಬಣ್ಣನೆ ಮೈಸೂರು, ಮಾ.9(ಎಂಕೆ)- ಹೆಣ್ಣು ಪ್ರಕೃತಿಯ ಪ್ರತಿರೂಪವಾಗಿದ್ದು, ಪ್ರಕೃತಿಯಲ್ಲಿರುವ ವೈವಿಧ್ಯತೆಯ ಗುಣಗಳು ಹೆಣ್ಣಿನಲ್ಲೂ ಇವೆ ಎಂದು ವಿದುಷಿ ಡಾ.ತುಳಸಿ ರಾಮಚಂದ್ರ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯದಲ್ಲಿ ಏರ್ಪಡಿಸಿದ್ದ ‘ವಿಶ್ವ ಮಹಿಳಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸ್ತ್ರೀ ಎಂಬುದೇ ಶಕ್ತಿ. ದೇಶದ ಯಾವುದೇ ಗ್ರಾಮಗಳಿಗೂ ಭೇಟಿ ನೀಡಿದರೂ ಅಲ್ಲಿ ಗ್ರಾಮ ದೇವತೆಯನ್ನು ಪೂಜಿಸುವ ಪದ್ಧತಿಗಳು ನಡೆದುಕೊಂಡು ಬಂದಿವೆ. ವಿಶ್ವದ…
ಶ್ರೀಮಂತರು, ಸುಶಿಕ್ಷಿತರ ಕುಟುಂಬದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚು
March 10, 2020ಮಹಿಳಾ ಅಧಿಕಾರಿ ಕೆ.ಸುಶೀಲಾ ವಿಷಾದ ಮುಕ್ತ ವಿವಿಯಲ್ಲಿ ಮಹಿಳಾ ದಿನಾಚರಣೆ ಮೈಸೂರು,ಮಾ.9(ಎಂಟಿವೈ)- ಬಡ ಕುಟುಂಬಗಳಿಗಿಂತ ಶ್ರೀಮಂತ ಹಾಗೂ ಸುಶಿಕ್ಷಿತ ಕುಟುಂಬದಲ್ಲೇ ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮೈಸೂರು ಜಿ.ಪಂನ ಯೋಜನಾ ನಿರ್ದೇಶಕಿ ಕೆ.ಸುಶೀಲಾ ವಿಷಾದಿಸಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮುಕ್ತ ವಿವಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿ ಸುವ ಹಿರಿಯ ಸಿಬ್ಬಂದಿ ಲಲಿತಮ್ಮ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ…










