ಮೈಸೂರು, ಮಾ.7(ಪಿಎಂ)- ಮೈಸೂ ರಿನ ಕೆಆರ್ ಆಸ್ಪತ್ರೆಯಲ್ಲಿನ ಚೆಲುವಾಂಬ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ಭೇಟಿ ನೀಡಿದಾಗ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿ ಟ್ಟರು. ಸಚಿವರು ಆಸ್ಪತ್ರೆ ಆವರಣಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಸಚಿವರನ್ನು ಸುತ್ತುವರೆದು ಅಳಲು ತೋಡಿಕೊಂಡರು. ಅನೇಕರು ಒಮ್ಮೆಗೇ ಸಮಸ್ಯೆಗಳನ್ನು ಹೇಳಲು ಮುಂದಾಗಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು. ಸಚಿವರು ಅವ ರನ್ನು ಸಮಾಧಾನಪಡಿಸಿ ಒಬ್ಬೊಬ್ಬರಾಗಿ ಹೇಳುವಂತೆ ಸೂಚಿಸಿದರು. ಬಳಿಕ ಕೆಲ ವರು ಹೇಳಿದ ಸಮಸ್ಯೆಗಳನ್ನು ಸಚಿವರು…
ವಿದ್ಯಾರಣ್ಯಪುರಂ: ವಾರದಲ್ಲಿ 12ಕ್ಕೂ ಹೆಚ್ಚು ಕೊಕ್ಕರೆ ಸಾವು-ಹಕ್ಕಿಜ್ವರ ಶಂಕೆ
March 8, 2020ಮೈಸೂರು, ಮಾ.7(ಪಿಎಂ)- ಮೈಸೂರಿನ ವಿದ್ಯಾರಣ್ಯಪುರಂ ಸೇರಿದಂತೆ ನಗರದ ವಿವಿಧೆಡೆ ಕೊಕ್ಕರೆಗಳು ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿದೆ. ವಿದ್ಯಾರಣ್ಯಪುರಂ 5ನೇ ಮುಖ್ಯರಸ್ತೆ ಯಲ್ಲಿ ವಾರದಿಂದ ಈವರೆಗೆ 12ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಹೀಗಾಗಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಶನಿವಾರವೂ 2 ಕೊಕ್ಕರೆ ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ವಾರ್ಡಿನ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಅವರಿಗೆ ವಿಷಯ ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಡಾ.ನಾಗರಾಜ್, ಕೊಕ್ಕರೆಗಳ ಮೃತ…
ಪರಿವಾರ, ತಳವಾರ ಎಸ್‍ಟಿಗೆ; ಪಕ್ಷಾತೀತ ಹೋರಾಟದ ಫಲ
March 8, 202036 ವರ್ಷಗಳ ಸುದೀರ್ಘ ಹೋರಾಟ: ಶಾಸಕ ಅನಿಲ್ ಚಿಕ್ಕಮಾದು ಕೃತಜ್ಞತೆ ಮೈಸೂರು,ಮಾ.7(ಎಂಟಿವೈ)- ಸತತ 36 ವರ್ಷಗಳ ಸುದೀರ್ಘ ಹಾಗೂ ಪಕ್ಷಾ ತೀತ ಹೋರಾಟದ ಫಲವಾಗಿ ಪರಿವಾರ ಮತ್ತು ತಳವಾರ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಈ ಹೋರಾಟದ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ದಿ.ಚಿಕ್ಕಮಾದು ಸೇರಿದಂತೆ ಹಲವು ನಾಯಕರ ಪರಿಶ್ರಮವಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಶನಿವಾರ…
ಮೈಸೂರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
March 7, 2020ಮೈಸೂರು, ಮಾ.6(ಆರ್‍ಕೆ)-ಹುಟ್ಟು ಹಬ್ಬದ ಸಂಭ್ರಮದಲ್ಲಿ ತನ್ನ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳಿಗೆ ಅದ್ಧೂರಿ ಪಾರ್ಟಿ ನೀಡಿ ಹಿಂದಿರುಗಿದ ಬಿಜೆಪಿ ಮುಖಂಡ ರೊಬ್ಬರನ್ನು ಜೊತೆಯಲ್ಲಿದ್ದವರೇ ಒಡೆದ ಬಿಯರ್ ಬಾಟಲಿಯಿಂದ ಮನಸೋ ಇಚ್ಛೆ ಇರಿದು ಬರ್ಬರವಾಗಿ ಇರಿದು ಕೊಲೆಗೈದಿ ದ್ದಾರೆ. ಈ ಆಘಾತಕಾರಿ ಘಟನೆ ಶುಕ್ರವಾರ ಮುಂಜಾನೆ ಮೈಸೂರಿನ ಕುವೆಂಪುನಗರದ ಲಲಿತಾದ್ರಿ ರಸ್ತೆಯ ಲವ-ಕುಶ ಪಾರ್ಕ್ ಬಳಿ ಯಲ್ಲಿರುವ ಸರ್ವೀಸ್ ಅಪಾರ್ಟ್‍ಮೆಂಟ್ ವೊಂದರಲ್ಲಿ ಸಂಭವಿಸಿದೆ. ಮೈಸೂರಿನ ಜನತಾನಗರ ನಿವಾಸಿಯೂ ಆದ ಕೆ.ಆರ್.ಕ್ಷೇತ್ರದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಎಸ್.ಆನಂದ ಅಲಿಯಾಸ್ ವಡ್ಡಾ…
ಮಾಜಿ ಕಾರ್ಪೊರೇಟರ್ ಪತಿ ಅಣ್ಣಯ್ಯನ ಮೇಲೆ ಲಾಂಗ್‍ನಿಂದ ಹಲ್ಲೆ
March 7, 2020ಮೈಸೂರು, ಮಾ.6(ಆರ್‍ಕೆ)-ಗ್ರಾಮ ದೇವತೆ ಹಬ್ಬದ ಸಿದ್ಧತೆ ವೇಳೆ ಉಂಟಾದ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ, ಸಮಾಧಾನಪಡಿಸಲೆತ್ನಿಸಿದ ಮಾಜಿ ಕಾರ್ಪೊರೇಟರ್ ರಜನಿ ಅವರ ಪತಿ ಅಣ್ಣಯ್ಯರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಗಾಯಗೊಳಿಸಿ ರುವ ಘಟನೆ ಮೈಸೂರು ತಾಲೂಕು ಯರಗನ ಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ತಲೆಗೆ ಗಾಯಗಳಾಗಿರುವ ಸಿದ್ದೇಗೌಡರ ಮಗ ಅಣ್ಣಯ್ಯರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಣ್ಣಯ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಣ್ಣಯ್ಯರ ಮೇಲೆ ಹಲ್ಲೆ ನಡೆಸಿ, ಅವರ…
ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ಪತ್ನಿ ಕೊಂದ ಪತಿ
March 7, 2020ಮೈಸೂರು,ಮಾ.6(ಆರ್‍ಕೆ)- ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಯೋರ್ವ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ಮೈಸೂರು ತಾಲೂಕು ಇಲವಾಲ ಹೋಬಳಿ, ಹೊಸಕಾಮನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ. ಹೊಸಕಾಮನಕೊಪ್ಪಲಿನ ನಾಗೇಶ (38), ತನ್ನ ಪತ್ನಿ ಶ್ರೀಮತಿ ಮಮತಾ (26)ರನ್ನು ಕೊಲೆ ಮಾಡಿದವನಾಗಿದ್ದು, ಆತನನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾರ್ ಬೆಂಡಿಂಗ್ ಕೆಲಸ ಮಾಡುವ ನಾಗೇಶನ ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ 8 ವರ್ಷದ ಹಿಂದೆ ಪಿರಿಯಾಪಟ್ಟಣದವರಾದ ಮಮತಾರೊಂದಿಗೆ ಎರಡನೇ ಮದುವೆಯಾಗಿದ್ದ….
ಯೆಸ್ ಬ್ಯಾಂಕ್ ಬಿಕ್ಕಟ್ಟು ಶೀಘ್ರ ಶಮನ, ನಿಮ್ಮ ಹಣ ಸುರಕ್ಷಿತ: ವಿತ್ತ ಸಚಿವೆ ಅಭಯ
March 7, 2020ನವದೆಹಲಿ, ಮಾ.6- ಯೆಸ್ ಬ್ಯಾಂಕ್ ಖಾತೆದಾರರ ಹಣ ಸುರಕ್ಷಿತವಾಗಿದ್ದು, ಖಾತೆ ದಾರರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿದ್ದಾರೆ. ದೇಶದ ಬ್ಯಾಂಕಿಂಗ್ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಜೆ ದೆಹಲಿ ಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಕುರಿತು ಭಾರತೀಯ…
ಮದ್ಯಪಾನ ಮಾಡುತ್ತಿದ್ದ ಯುವಕರ ಮೇಲೆ ಏಕಾಏಕಿ ದುಷ್ಕರ್ಮಿಗಳ ದಾಳಿ
March 7, 2020ಓರ್ವ ಸಾವು, ಮತ್ತೋರ್ವ ಪಾರು ನಂಜನಗೂಡು,ಮಾ. 6(ರವಿ)-ನಿರ್ಜನ ಪ್ರದೇಶದ ರಸ್ತೆ ಬದಿ ಪಾನಗೋಷ್ಠಿ ನಡೆಸುತ್ತಿದ್ದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ನಂತರ ಶವವನ್ನು ನಾಲೆಗೆ ಎಸೆದಿ ರುವ ಘಟನೆ ನಂಜನಗೂಡು ತಾಲೂಕು ಕಲ್ಕುಂದ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ. ಹತ್ಯೆಗೀಡಾದ ಯುವಕನ ಜೊತೆ ಪಾನಗೋಷ್ಠಿ ನಡೆಸುತ್ತಿದ್ದ ಆತನ ಸ್ನೇಹಿತ ದುಷ್ಕರ್ಮಿಗಳ ಹಲ್ಲೆ ಯಿಂದ ತೀವ್ರವಾಗಿ ಗಾಯಗೊಂಡನಾದರೂ, ಅವ ರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ವಿವರ: ತಾಲೂಕಿನ ತಗಡೂರು ಗ್ರಾಮದ ಮನೋಜ್(20)…
ಶ್ರೀರಾಮ, ಮೈಶುಗರ್, ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ
March 7, 2020ಬೆಂಗಳೂರು,ಮಾ.6(ಕೆಎಂಶಿ)-ಮಂಡ್ಯ ಜಿಲ್ಲೆಯ ಮೈಶುಗರ್, ಪಾಂಡವಪುರ ಹಾಗೂ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಯವರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಜೂನ್ ತಿಂಗಳಿನಿಂದ ಕಬ್ಬು ಅರೆ ಯಲು ಸೂಚನೆ ಕೊಡಲಾಗಿದೆ ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಜೆಡಿಎಸ್‍ನ ಶ್ರೀಕಂಠೇಗೌಡ ಅವರು ಮಾತನಾಡು ತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಶಿವರಾಂ ಹೆಬ್ಬಾರ್, ಶ್ರೀರಾಮ, ಪಾಂಡವಪುರ, ಮೈಶುಗರ್ ಸಕ್ಕರೆ ಕಾರ್ಖಾನೆಗಳನ್ನು 40 ವರ್ಷಗಳ ಅವಧಿಗೆ ಖಾಸಗಿ…
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ರಿಂಗ್ ರಸ್ತೆ ಆಜುಬಾಜು ಬಡಾವಣೆ, ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರ ಸಭೆ
March 7, 2020ಬೆಂಗಳೂರು,ಮಾ.6-ಮೈಸೂರು ಹೊರ ವರ್ತುಲ (ರಿಂಗ್ ರಸ್ತೆ) ರಸ್ತೆಗೆ ಹೊಂದಿಕೊಂಡಂತಿರುವ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅದರಿಂದ ಅನು ಮೋದಿತ ಬಡಾವಣೆಗಳು ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆಯೂ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರದಲ್ಲೇ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳು ವುದಾಗಿ ಕಾನೂನು ಸಚಿವ ಮಾಧುಸ್ವಾಮಿ ವಿಧಾನ ಸಭೆ ಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ. ಮೈಸೂರು ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಂಡಿರುವ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ…










