ಮೈಸೂರು

‘ಸಪ್ತಪದಿ’ ರಾಯಭಾರಿಯಾಗಿ ಇನ್ಫೋಸಿಸ್‍ನ ಸುಧಾಮೂರ್ತಿ ಆಯ್ಕೆ
ಮೈಸೂರು

‘ಸಪ್ತಪದಿ’ ರಾಯಭಾರಿಯಾಗಿ ಇನ್ಫೋಸಿಸ್‍ನ ಸುಧಾಮೂರ್ತಿ ಆಯ್ಕೆ

March 2, 2020

ಬೆಂಗಳೂರು,ಮಾ.1-`ಸಪ್ತಪದಿ’ ವಿವಾಹಕ್ಕೆ ಇನ್ಫೋಸಿಸ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರನ್ನು ರಾಯ ಭಾರಿಯನ್ನಾಗಿ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿ ವಾಸ್ ಪೂಜಾರಿ ಹೇಳಿದರು. ಶಿರಸಿಯ ಡಾ.ಅಂಬೇಡ್ಕರ್ ಭವನದಲ್ಲಿ ಮುಜ ರಾಯಿ ದತ್ತಿ ಇಲಾಖೆ ಹಾಗೂ ಜಿಲ್ಲಾಡ ಳಿತದಿಂದ ಆಯೋಜಿಸಿದ್ದ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಪ್ತಪದಿ ವಿವಾಹಕ್ಕೆ ಯಾವುದೇ ಆದಾಯ ಮಿತಿ ಇಲ್ಲ, ಸರಳ ಸಾಮೂಹಿಕ ವಿವಾಹ ಎಲ್ಲ ವರ್ಗದವರಿಗೆ ಸಹಕಾರಿಯಾಗಲಿದೆ ಎಂದರು. ಬಡವರು, ಮಧ್ಯಮ ವರ್ಗ ಸೇರಿ ಎಲ್ಲ…

ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದೇಶಿಗರ ಅನಧಿಕೃತ ವಾಸ!
ಮೈಸೂರು

ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದೇಶಿಗರ ಅನಧಿಕೃತ ವಾಸ!

March 2, 2020

ಮೈಸೂರು, ಮಾ. 1 (ಆರ್‍ಕೆ)- ನಂಜನಗೂಡಿನ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಅನಧಿಕೃತವಾಗಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ವೀಸಾ, ಪಾಸ್‍ಪೋರ್ಟ್ ಇಲ್ಲದೆಯೇ ಪಶ್ಚಿಮ ಬಂಗಾಳ ಗಡಿ ಮೂಲಕ ನುಸುಳಿ ಬಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯ, ಅಡಕನಹಳ್ಳಿ ಸೇರಿದಂತೆ ವಿವಿಧ ಕೈಗಾರಿಕಾ ಪ್ರದೇಶ ಗಳಲ್ಲಿರುವ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ ಎಂದು ರಾಜ್ಯ ಗುಪ್ತ ವಾರ್ತಾ ವಿಭಾಗದ ಮೂಲಗಳು ತಿಳಿಸಿವೆ. ಬಹುತೇಕ ಮಂದಿ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಮೂಲದ ಸುಮಾರು…

ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ, ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಬಜೆಟ್‍ನಲ್ಲಿ ಅನುದಾನ ಮುಖ್ಯಮಂತ್ರಿ  ಪ್ರತಾಪ್ ಸಿಂಹ  ಅವರಿಗೆ ಮನವಿ
ಮೈಸೂರು

ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ, ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಬಜೆಟ್‍ನಲ್ಲಿ ಅನುದಾನ ಮುಖ್ಯಮಂತ್ರಿ ಪ್ರತಾಪ್ ಸಿಂಹ ಅವರಿಗೆ ಮನವಿ

March 2, 2020

ಮೈಸೂರು, ಮಾ.1- ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಮೈಸೂರು -ಕುಶಾಲನಗರ ರೈಲ್ವೆ ಮಾರ್ಗ ಆರಂಭಕ್ಕೆ ಬಜೆಟ್‍ನಲ್ಲಿ ಹಣ ಬಿಡು ಗಡೆ ಮಾಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಮೈಸೂರು ನಗರ ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದು, ಉಡಾನ್ ಯೋಜನೆಯ ಯಶಸ್ವಿ ಅನುಷ್ಠಾನ ದಿಂದಾಗಿ ವಿಮಾನ ಹಾರಾಟ ಹೆಚ್ಚಾ ಗಿದೆ. ಮುಂಬರುವ ದಿನಗಳಲ್ಲಿ ದೊಡ್ಡ ವಿಮಾನಗಳ ಸೇವೆಯನ್ನು ಒದಗಿ ಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಹಾಗೂ ರನ್‍ವೇ…

ಮೈಸೂರಲ್ಲಿ ಆರ್ಥಿಕ ಗಣತಿ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಆರ್ಥಿಕ ಗಣತಿ ಪರಿಶೀಲನೆ

March 2, 2020

ಮೈಸೂರು,ಮಾ.1(ಎಂಟಿವೈ)- ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ನಡೆಸುತ್ತಿ ರುವ 7ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ದ ರಾಜ್ಯಮಟ್ಟದ ತಂಡ ಸಂಚರಿಸಿ ವಿವಿಧೆಡೆ ಮೊಬೈಲ್ ಆ್ಯಪ್ ಮೂಲಕ ಗಣತಿ ನಡೆಸಿ ಸಂಘಟಿತ ಮತ್ತು ಅಸಂಘಟಿತ ಉದ್ದಿಮೆದಾರರಿಂದ ಮಾಹಿತಿ ಕಲೆಹಾಕಿತು. ಕೇಂದ್ರ ಸರ್ಕಾರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ, ಕೇಂದ್ರ ಸರ್ಕಾರದ ಇ-ಆಡಳಿತ ಅಡಿಯಲ್ಲಿ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ದ ಸಹಯೋಗದಲ್ಲಿ…

ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯ
ಮೈಸೂರು

ಮಲೆ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯ

March 2, 2020

ಹನೂರು, ಮಾ.1(ಎಂಟಿವೈ, ಸೋಮ)- ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಹಿನ್ನೆಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದ ಹಳೆ ಚಪ್ಪಲಿ ಹಾಗೂ ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ಭಾನುವಾರ 70 ಸ್ವಯಂಸೇವಕರು ಒಳಗೊಂಡಂತೆ 130ಕ್ಕೂ ಹೆಚ್ಚು ಮಂದಿ ಶ್ರಮದಾನ ಮಾಡಿ 8 ಲೋಡ್ ತ್ಯಾಜ್ಯ ಸಂಗ್ರಹಿಸುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು. ಪ್ರತಿ ವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಕೊಳ್ಳೇಗಾಲ, ಹನೂರು…

ಮೇಕ್ ಇನ್ ಇಂಡಿಯಾ ಯಶಸ್ಸು 40 ಮಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಗಿಟ್ಟಿಸಿದ ಭಾರತ!
ಮೈಸೂರು

ಮೇಕ್ ಇನ್ ಇಂಡಿಯಾ ಯಶಸ್ಸು 40 ಮಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಗಿಟ್ಟಿಸಿದ ಭಾರತ!

March 2, 2020

ನವದೆಹಲಿ,ಮಾ.1-ರಷ್ಯಾ ಹಾಗೂ ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೋಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದ ವನ್ನು ಗಿಟ್ಟಿಸಿಕೊಂಡಿದೆ. ದೇಶಿಯವಾಗಿ ಡಿಆರ್‍ಡಿಒ ಹಾಗೂ ಬಿಇಎಲ್ ಸಂಸ್ಥೆಗಳು ತಯಾರಿಸಿರುವ ವೆಪನ್ ಲೊಕೇಟಿಂಗ್ ರಡಾರ್ (ಶಸ್ತ್ರಾಸ್ತ್ರ ಪತ್ತೆ ರೆಡಾರ್)ಗಳನ್ನು ಅರ್ಮೇ ನಿಯಾಗೆ ರಫ್ತು ಮಾಡಲಿದೆ. ‘ಸ್ವಾತಿ’ ರಡಾರ್‍ಗಳನ್ನು ಅರ್ಮೇನಿಯಾಗೆ ರಫ್ತು ಮಾಡುವ ಕೆಲಸ ಈಗಾಗಲೇ ಪ್ರಾರಂಭ ವಾಗಿದ್ದು, ಇದನ್ನು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ. ಅರ್ಮೇ ನಿಯನ್ನರು ರಷ್ಯಾ ಹಾಗೂ ಪೆÇೀಲ್ಯಾಂಡ್‍ನ ರಡಾರ್‍ಗಳನ್ನು ಪರೀಕ್ಷಿಸಿದ್ದರು….

ಕೇಂದ್ರದ ಒಪ್ಪಿಗೆ ಸಿಕ್ಕರೆ ಸೇನಾ ಕಾಪ್ಟರ್ ತಯಾರಿಸಲು ಸಿದ್ಧ: ಎಚ್‍ಎಎಲ್ ಘೋಷಣೆ
ಮೈಸೂರು

ಕೇಂದ್ರದ ಒಪ್ಪಿಗೆ ಸಿಕ್ಕರೆ ಸೇನಾ ಕಾಪ್ಟರ್ ತಯಾರಿಸಲು ಸಿದ್ಧ: ಎಚ್‍ಎಎಲ್ ಘೋಷಣೆ

March 2, 2020

ಹೊಸದಿಲ್ಲಿ, ಮಾ. 1- ಅಮೆರಿಕದ ಬೋಯಿಂಗ್ ಕಂಪನಿ ನಿರ್ಮಿತ ಅಪಾಚೆ ಹೆಲಿಕಾಪ್ಟರ್‍ಗಳಿಗೆ ಸರಿಸಮನಾದ ಸೇನಾ ಹೆಲಿಕಾಪ್ಟರ್ ನಿರ್ಮಿಸಲು ಸಿದ್ಧವಿರುವು ದಾಗಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಘೋಷಿಸಿದೆ. ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದ ರ್ಶನದಲ್ಲಿ ಎಚ್‍ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧ ವನ್, ಅಪಾಚೆ ಮಾದರಿಯ ದಾಳಿ ಕೋರ ಹೆಲಿಕಾಪ್ಟರ್‍ಗಳ ಪ್ರಾಥಮಿಕ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆ ಮುಂದುವರಿಸಲು ಕೇಂದ್ರ ಸರಕಾರ ಈ ವರ್ಷವೇ ಅನುಮತಿ ನೀಡಿ ದರೆ 2027ರಲ್ಲಿ ಮೊದಲ ಕಾಪ್ಟರ್ ಉತ್ಪಾದನೆಯಾಗಲಿದೆ ಎಂದಿದ್ದಾರೆ. ಭಾರತೀಯ…

ರಾಜಕಾರಣದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗುತ್ತಿಲ್ಲ
ಮೈಸೂರು

ರಾಜಕಾರಣದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗುತ್ತಿಲ್ಲ

March 2, 2020

ಮೈಸೂರು,ಮಾ.1-ರಾಜಕಾರಣ ದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿ ದರು. ಖಾಸಗಿ ಕಾರ್ಯಕ್ರಮಕ್ಕಾಗಿ ಭಾನು ವಾರ ಮೈಸೂರಿಗೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮ ದವರೊಂದಿಗೆ ಮಾತನಾಡುತ್ತಾ, 30-40 ವರ್ಷ ಒಂದು ಪಕ್ಷದಲ್ಲಿದ್ದು, ಅಧಿ ಕಾರ ಅನುಭವಿಸಿದವರೇ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ. ಇನ್ನು ಬಿಜೆಪಿ ಯಲ್ಲಿ ಹೊಸಬರನ್ನು ಬೆಳೆಸುತ್ತಿದ್ದಾರೆ. ಅಲ್ಲಿ ಹಳಬರು ಸುಮ್ಮನೇ ಕೂರುವಂ ತಹ ಪರಿಸ್ಥಿತಿ ತಲೆದೋರಿದ್ದು, ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ…

`ರನ್ ಫಾರ್ ವೈಲ್ಡ್’ ಮ್ಯಾರಥಾನ್‍ನಲ್ಲಿ 1600 ಮಂದಿ ಭಾಗಿ
ಮೈಸೂರು

`ರನ್ ಫಾರ್ ವೈಲ್ಡ್’ ಮ್ಯಾರಥಾನ್‍ನಲ್ಲಿ 1600 ಮಂದಿ ಭಾಗಿ

March 2, 2020

ಮೈಸೂರು,ಮಾ.1(ಎಂಟಿವೈ)- ಮೈಸೂರಿನಲ್ಲಿ ಎಟಿಎಂಇ ಇಂಜಿನಿಯ ರಿಂಗ್ ಕಾಲೇಜು ವತಿಯಿಂದ ಭಾನು ವಾರ ಆಯೋಜಿಸಿದ್ದ ಮ್ಯಾರಥಾನ್‍ನಲ್ಲಿ ಸಾರ್ವಜನಿಕರು ಸೇರಿದಂತೆ 1600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಕಾಲೇಜಿನ ವಾರ್ಷಿಕೋತ್ಸವ ಹಿನ್ನೆಲೆ ಯಲ್ಲಿ `ರನ್ ಫಾರ್ ವೈಲ್ಡ್’ ಮತ್ತು `ಬದುಕಿ, ಬದುಕಲು ಬಿಡಿ’ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಮ್ಯಾರಥಾನ್‍ಗೆ ಇಂದು ಬೆಳಿಗ್ಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವನ್ಯ ಸಂಪತ್ತಿನ ಸಂರಕ್ಷಣೆ ಘೋಷಣೆಯೊಂ ದಿಗೆ…

ಪೊಲೀಸ್ ಗೃ.ನಿ.ಸ.ಸಂಘದ ಚುನಾವಣೆ; ನಂಜುಂಡೇಗೌಡ ಬಣ ಜಯಭೇರಿ
ಮೈಸೂರು

ಪೊಲೀಸ್ ಗೃ.ನಿ.ಸ.ಸಂಘದ ಚುನಾವಣೆ; ನಂಜುಂಡೇಗೌಡ ಬಣ ಜಯಭೇರಿ

March 2, 2020

ಮೈಸೂರು,ಮಾ.1(ವೈಡಿಎಸ್)-ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ 9 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾ ವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷರಾದ ನಿವೃತ್ತ ಡಿವೈಎಸ್‍ಪಿ ನಂಜುಂಡೇಗೌಡ ಬಣ ಜಯಭೇರಿ ಬಾರಿಸಿದೆ. ನಂಜುಂಡೇಗೌಡ ಬಣದಲ್ಲಿ ಹಾಲಿ ನಿರ್ದೇಶಕರೇ ಸ್ಪರ್ಧಿಸಿದ್ದರು. 9 ಸ್ಥಾನಗಳಿಗೆ ಮೂವರು ಮಹಿಳೆಯರು ಸೇರಿದಂತೆ 14 ಮಂದಿ ಸ್ಪರ್ಧಿಸಿದ್ದರು. ನೇತಾಜಿ ನಗರದಲ್ಲಿನ ಸಂಘದ ಕಚೇರಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 2 ಬೂತ್‍ಗಳಲ್ಲಿ ಮತದಾನ ನಡೆಯಿತು. ಒಟ್ಟು 321 ಮತಗಳಿದ್ದು, 242 ಮಂದಿ…

1 657 658 659 660 661 1,611
Translate »