ಮೈಸೂರು, ಫೆ.28(ಎಸ್‍ಬಿಡಿ)- ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದಿಂದ ಮೊದಲ ಬಾರಿಗೆ ಆರಂಭಿಸಿದ ಸ್ಲೀಪರ್ ಸೌಲಭ್ಯದ 4 ವೋಲ್ವೊ ಬಸ್‍ಗಳ ಸಂಚಾರ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಸಬರ್ಬನ್ ಬಸ್ ನಿಲ್ದಾಣ ದಲ್ಲಿ ಚಾಲನೆ ನೀಡಿದರು. ಮೈಸೂರು-ಸಿಕಂದರಾಬಾದ್ ಮಾರ್ಗ ದಲ್ಲಿ 2 `ಅಂಬಾರಿ ಡ್ರೀಮ್‍ಕ್ಲಾಸ್ ಎಸಿ ಸ್ಲೀಪರ್ ಬಸ್’ಗಳು ಸಂಚರಿಸಲಿವೆ. ಇವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ ಸಂಪ ರ್ಕಿಸಲಿವೆ. ಕೆಂಗೇರಿ ನೈಸ್ ರಸ್ತೆ ಮುಖಾಂ ತರ ಹೆಬ್ಬಾಳ, ಯಲಹಂಕ ಮಾರ್ಗವಾಗಿ ಸಂಚಾರ…
ಹೈದರಾಬಾದ್ ಎನ್‍ಕೌಂಟರ್: ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುಪ್ರೀಂ ನಕಾರ
February 29, 2020ನವದೆಹಲಿ, ಫೆ.28- ತೆಲಂಗಾಣದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‍ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಮತ್ತು ಮೃತಪಟ್ಟವರಿಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಎನ್‍ಕೌಂಟರ್‍ನಲ್ಲಿ ಮೃತಪಟ್ಟವರ ಕುಟುಂಬಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಅರ್ಜಿ ಸಲ್ಲಿಸಿದ ಕುಟುಂಬಗಳು ಮೂವರು ಸದಸ್ಯರಿರುವ ವಿಚಾರಣಾ ಆಯೋಗವನ್ನು ಸಂಪರ್ಕಿಸಲು ತಿಳಿಸಿತು. ಆಯೋಗ ಎನ್‍ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿದ್ದು. ನಿಮ್ಮ ಬಳಿ ಇರುವ ದಾಖಲೆಯನ್ನು ಆಯೋಗಕ್ಕೆ ನೀಡಿ ಎಂದು…
ಕೆವೈಸಿ ಮಾಡಿಸಿಲ್ಲದವರಿಗೆ ಬ್ಯಾಂಕ್ ಖಾತೆ ಸ್ಥಗಿತ ಭೀತಿ
February 29, 2020ನವದೆಹಲಿ,ಫೆ.28-‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ (ಎಸ್‍ಬಿಐ)ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವವರಿಗೆ ಖಾತೆ ಸ್ಥಗಿತ ಭೀತಿ ಎದುರಾಗಿದೆ. ಫೆ.28ರೊಳಗೆ ಖಾತೆದಾರರು ಬ್ಯಾಂಕಿಗೆ ಕೆವೈಸಿ ವಿವರ ನೀಡದಿದ್ದರೆ ಖಾತೆ ಸ್ಥಗಿತಗೊಶಿಸುವುದಾಗಿ ಬ್ಯಾಂಕ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬ್ಯಾಂಕ್ ನೀಡಿದ್ದ ಗಡುವು ಶುಕ್ರವಾರಕ್ಕೆ ಮುಗಿದಿದೆ. ಖಾತೆಗಳು ಸ್ಥಗಿತಗೊಳ್ಳಲಿವೆಯೇ ಎಂಬುದು ಶನಿವಾರ ತಿಳಿಯಲಿದೆ. ಇತ್ತೀಚೆಗೆ ಎಲ್ಲ ಬ್ಯಾಂಕುಗಳು ಕೆವೈಸಿ ವಿಚಾರ ದಲ್ಲಿ ಹೆಚ್ಚು ಕಟ್ಟುನಿಟ್ಟಾಗಿವೆ. ಬ್ಯಾಂಕುಗಳು ತಮ್ಮ ಎಲ್ಲಾ ಗ್ರಾಹಕರ ಕೆವೈಸಿಯನ್ನು ನಿಯತಕಾಲಿಕ ವಾಗಿ ನವೀಕರಿಸಬೇಕಾಗುತ್ತದೆ. ಮನಿಲಾಂಡ…
ದತ್ತಾತ್ರೆಯ ಪಾಟೀಲರ ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ
February 29, 2020ಕಲಬುರಗಿ: ಬಿ.ಎಸ್.ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಬೇಕೆಂದರೆ ಶಾಸಕ ದತ್ತಾತ್ರೆಯ ಪಾಟೀಲರನ್ನು ಮಂತ್ರಿ ಮಾಡಬೇಕು ಇಲ್ಲದಿದ್ದರೆ 10 ಶಾಸಕರ ಕೈಯ್ಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸ್ವಾಮೀಜಿಗಳು ಬಹಿರಂಗ ವಾಗಿ ಧಮ್ಕಿ ಹಾಕಿದ್ದಾರೆ. ಕಲಬುರಗಿಯ ಸಾರಂಗದರ ದೇಶಿಕೇಂದ್ರ ಶೀಗಳು ಕಾರ್ಯಕ್ರಮ ವೊಂದರಲ್ಲಿ ಮಾತನಾಡಿ ಮಾತು ಕೊಟ್ಟಂತೆ ದತ್ತಾತ್ರೆಯ ಪಾಟೀಲ್‍ರನ್ನು ಮುಂದಿನ ವರ್ಷದೊಳಗೆ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ಅವರಿಗೆ ರಾಜಿನಾಮೆ ನೀಡಿ ಮನೆಯಲ್ಲಿರುವಂತೆ ಹೇಳುತ್ತೇನೆ. ಇದೇ ವೇಳೆ ಶಾಸಕ ಅಪ್ಪುಗೌಡರಿಗೂ ರಾಜೀನಾಮೆ ನೀಡುವಂತೆ ಹೇಳುತ್ತೇನೆ ಎಂದರು. ಇನ್ನು ಕಲ್ಯಾಣ ಕರ್ನಾಟಕ…
ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ
February 29, 2020ಮೈಸೂರು,ಫೆ.28(ವೈಡಿಎಸ್)-ರಾಜ್ಯ ಸರ್ಕಾರವು ಶೇ.12ರಷ್ಟು ಬಸ್ ಪ್ರಯಾಣ ದರ ಏರಿಸಿರುವುದನ್ನು ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ನಗರದ ಗೌನ್‍ಹೌಸ್ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಜಮಾವಣೆ ಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ದಿನೇ ದಿನೇ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರವನ್ನು 150 ರೂ.ಗಳಷ್ಟು ಹೆಚ್ಚಿಸಿತ್ತು. ಈಗ ರಾಜ್ಯ ಸರ್ಕಾರ ಶೇ.12ರಷ್ಟು ಬಸ್ ಪ್ರಯಾಣ ದರ ಹೆಚ್ಚಳ…
ವಿಜಯ ವಿಠ್ಠಲದಲ್ಲಿ ವಿಜ್ಞಾನ ದಿನಾಚರಣೆ
February 29, 2020ಮೈಸೂರು, ಫೆ. 28- ಮೈಸೂರಿನ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಸಿ.ವಿ. ರಾಮನ್ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಚ್. ಸತ್ಯಪ್ರಸಾದ್ ಮಾತನಾಡುತ್ತಾ ಬೆಳಕಿನ ಚದುರುವಿಕೆಯ ಸಂಶೋಧನೆಯಿಂದ ಸರ್ ಸಿ.ವಿ. ರಾಮನ್ ನೊಬೆಲ್ ಪಾರಿತೋಷಕ ಪುರಸ್ಕøತರಾದದ್ದು ಭಾರತಕ್ಕೆ ಹೆಮ್ಮೆಯ ವಿಷಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೇಷ್ಠ ಭಾರತೀಯರಲ್ಲಿ ಸಿ.ವಿ. ರಾಮನ್ ಪ್ರಮುಖರು. ರಾಮನ್ ಅವರು ನೂರಾರು ಭಾರತೀಯ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದುಕೊಂಡು…
ಹವಾಮಾನ ವೈಪರೀತ್ಯದಿಂದ ಆಹಾರ ಉತ್ಪಾದನೆ ಕುಸಿತ
February 29, 2020ಬೆಂಗಳೂರು,ಫೆ.28(ಕೆಎಂಶಿ)-ಹವಾಮಾನ ವೈಪ ರೀತ್ಯದಿಂದಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೇ.55ರಷ್ಟು ಆಹಾರ ಉತ್ಪನ್ನಗಳು, ಶೇ.74ರಷ್ಟು ಎಣ್ಣೆ ಬೀಜಗಳು ಉತ್ಪಾದನೆಯಾಗುತ್ತವೆ. ಆದರೆ ಇತ್ತೀಚಿನ ಹವಾ ಮಾನ ವೈಪರಿತ್ಯದಿಂದ ನಮ್ಮ ಗುರಿ ಮುಟ್ಟಲಾಗುತ್ತಿಲ್ಲ. ಹಾಗೆಂದು ರಾಜ್ಯಕ್ಕೆ ಎಣ್ಣೆಬೀಜ ಇಲ್ಲವೆ ಆಹಾರದ ಕೊರತೆ ಉಂಟಾಗಿಲ್ಲ. ಈ ಹವಾಮಾನ ವೈಪರಿತ್ಯದಿಂದ ನಮ್ಮ ಲ್ಲಿರುವ ನೆಲ-ಜಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ…
1.26 ಲಕ್ಷ ರೂ. ಎಗರಿಸಿದ್ದ ಇಬ್ಬರು ಇರಾನಿ ಪ್ರವಾಸಿಗರ ಸೆರೆ
February 29, 2020ಮೈಸೂರು,ಫೆ.28(ಆರ್‍ಕೆ)-ಮೈಸೂರಿನ ಉಪಯೋಗಿಸಿದ ಕಾರುಗಳ ಷೋ ರೂಂವೊಂ ದರ ಅಕೌಂಟೆಂಟ್ ಗಮನ ಬೇರೆಡೆ ಸೆಳೆದು 1.26 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದ ಇಬ್ಬರು ಇರಾನಿ ಪ್ರವಾಸಿಗರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇರಾನಿ ಪ್ರಜೆಗಳಾದ ಸೈಯದ್ ರೋಸ್ಟಮಿ ಮತ್ತು ಸಬರ್ ಹುಸೇನ್ ಬಂಧಿತರಾಗಿದ್ದು, 4 ದಿನಗಳ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಇವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಗೊಳಪಡಿಸಿದ ಮೈಸೂರಿನ ಹುಣಸೂರು ರಸ್ತೆಯ ಮಾಂಡವಿ ಮೋಟಾರ್ಸ್ ಯೂಸ್ಡ್ ಕಾರ್‍ಗಳ ಟ್ರೂ ವ್ಯಾಲ್ಯೂ ಶೋರೂಂನಲ್ಲಿ ಅಕೌಂಟೆಂಟ್ ಗಮನ ಬೇರೆಡೆ…
ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜಿಗೆ ಪ್ರಶಸ್ತಿ
February 29, 2020ಮೈಸೂರು, ಫೆ.28- ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ರುವ ಬೋರ್ಡ್ ಫಾರ್ ಐ.ಟಿ. ಎಜು ಕೇಷನ್ ಸ್ಟ್ಯಾಂಡರ್ಡ್ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‍ಬೈಟ್ಸ್ ರಸಪ್ರಶ್ನೆ ಸ್ಪರ್ಧೆಯ ಮೈಸೂರು ಪ್ರಾದೇ ಶಿಕ ಆವೃತ್ತಿಯ ಅಂತಿಮ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜು ಪ್ರಶಸ್ತಿ ಪಡೆದಿದೆ. ವಿನ್ನರ್ ಅಪ್ ಆಗಿ ಎನ್‍ಐಇ ಕಾಲೇಜಿನ ವರುಣ್ ಗುಪ್ತಾ ಮತ್ತು ಗುರುಪ್ರಸಾದ್ ವೀರಣ್ಣ, ರನ್ನರ್ ಅಪ್ ಆಗಿ ಎನ್‍ಐಇ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೈಸೂರಿನ ಶಿವೇಶ್ ಶ್ರೀವಾಸ್ತವ…
ಶಿಕ್ಷಣ ಸಚಿವರ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯ ಫಲಶೃತಿ: ಕಾಡಂಚಿನ ಗ್ರಾಮಸ್ಥರ ಹಲವು ಬೇಡಿಕೆಗಳ ಈಡೇರಿಕೆ
February 29, 2020ಹನೂರು,ಫೆ.28(ಸೋಮ)-ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಫೆ.10ರಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಕೈಗೊಂಡಿದ್ದ ಸಂದರ್ಭ ಗ್ರಾಮಸ್ಥರು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನು ಸಚಿವರು ಈಡೇರಿಸಿದ್ದಾರೆ. ಕಾಡಂಚಿನ ಪಚ್ಚೆದೊಡ್ಡಿ ಗ್ರಾಮದಿಂದ 6 ರಿಂದ 10ನೇ ತರಗತಿ ವರೆಗಿನ ಮಕ್ಕಳು ಪ್ರತಿದಿನ ಕಾಡಿನಲ್ಲಿ 10 ಕಿಲೋ ಮೀ.ನಷ್ಟು ನಡೆದುಕೊಂಡೇ ಶಾಲೆಗೆ ಹೋಗಿ ಬರಬೇಕಿರುವುದರಿಂದ ವಾಹ ನದ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶಾಲಾ ಮಕ್ಕಳಿಗೆ ವಾಹನ…










