ನಂಜನಗೂಡು, ಫೆ.18(ರವಿ)-ಶನಿವಾರ(ಫೆ.29) ಹಾಗೂ ಭಾನುವಾರ(ಮಾ.1) ನಡೆಯುವ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ದಕ್ಷಿಣಕಾಶಿ, ಗರಳಪುರಿ ಕ್ಷೇತ್ರ ಸಜ್ಜಾಗಿದೆ. 1994, 2013 ನಂತರ ಮೂರನೇ ಬಾರಿಗೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯವಹಿಸುತ್ತಿರುವ ನಂಜನಗೂಡು, ಕನ್ನಡದ ಕಂಪು ಬೀರಲು ಸಜ್ಜುಗೊಳ್ಳುತ್ತಿದೆ. 17ನೇ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ನಂಜನಗೂಡಿನವರೇ ಆದ ಸಾಹಿತಿ ಟಿ.ಎಸ್.ರಾಜಪ್ಪ ಆಯ್ಕೆಗೊಂಡಿರುವುದು ಮತ್ತೊಂದು ವಿಶೇಷ. ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಸುಪುತ್ರಿ, ಲೇಖಕಿ ತಾರಿಣಿ ಚಿದಾನಂದಗೌಡ ಉದ್ಘಾಟಿಸುವರು. ಸಮ್ಮೇಳನದ ಯಶಸ್ವಿಗಾಗಿ ಟೊಂಕಕಟ್ಟಿ ನಿಂತಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ…
ಯಶವಂತ್, ಧರ್ಮೇಂದ್ರ ಸೇರಿ 11 ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಬಡ್ತಿ
February 29, 2020ಮೈಸೂರು, ಫೆ.28-ಮಳವಳ್ಳಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಧರ್ಮೇಂದ್ರ, ಬೆಂಗಳೂರಿನ ಸೈಬರ್ ಕ್ರೈಂ ಠಾಣೆ ಇನ್ಸ್‍ಪೆಕ್ಟರ್ ಕೆ.ಎನ್.ಯಶವಂತಕುಮಾರ್ ಸೇರಿ 11 ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಡಿವೈಎಸ್ಪಿ ಗಳಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಡ್ತಿ ಪಡೆದಿರುವ ಈ 11 ಡಿವೈಎಸ್ಪಿ ಗಳು ಬೆಂಗಳೂರಿನ ರಾಜ್ಯ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯಲ್ಲಿ ವರದಿ ಮಾಡಿಕೊಳ್ಳು ವಂತೆಯೂ ನಂತರ ಸ್ಥಳ ನಿಯೋಜನೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪತ್ನಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪತಿ
February 29, 2020ಮಳವಳ್ಳಿ, ಫೆ.28-ಕ್ಷುಲ್ಲಕ ಕಾರಣಕ್ಕಾಗಿ ಪತಿರಾಯನೋರ್ವ ಬೆಂಕಿ ಹಚ್ಚಿ ಪತ್ನಿಯನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಬೆಳಕವಾಡಿ ಗ್ರಾಮದಿಂದ ತಡವಾಗಿ ವರದಿಯಾಗಿದೆ. ಗ್ರಾಮದ ಮಹದೇವ ಸ್ವಾಮಿ ಎಂಬಾತನೇ ಪತ್ನಿ ಗೀತಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದವನಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ವಿವರ: ಮಹದೇವಸ್ವಾಮಿ ಮತ್ತು ಗೀತಾ ಅವರಿಗೆ ಕಳೆದ 14 ವರ್ಷದ ಹಿಂದೆ ಮದುವೆಯಾಗಿತ್ತು. ಇತ್ತೀಚೆಗೆ ಮಹದೇವ ಸ್ವಾಮಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದನೆನ್ನಲಾಗಿದ್ದು, ಈ ವಿಷಯವಾಗಿ ದಂಪತಿ…
ಬಿಎಸ್‍ವೈಗೆ ಶುಭಾಶಯ ಸುರಿಮಳೆ
February 28, 2020ಬೆಂಗಳೂರು: ರಾಜ್ಯ ರಾಜಕಾರಣ ಗುರುವಾರ ಹೊಸ ರಾಜಕೀಯ ಬಾಂಧವ್ಯಕ್ಕೆ ನಾಂದಿಯಾಯಿತು. ರಾಜಕಾರಣ ಕೇವಲ ಅಧಿಕಾರ ಹಿಡಿಯಲು ನಡೆಯುವ ಪ್ರಕ್ರಿಯೆ ಯಷ್ಟೆ. ಚುನಾವಣೆ, ಸ್ಪರ್ಧೆ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಬರೀ ರಾಜಕೀಯಕ್ಕೆ ಸೀಮಿತ. ಅದಕ್ಕೂ ಮೀರಿದ್ದು ಮಾನವೀಯ ಸಂಬಂಧ ಗಳು, ಸಾಮರಸ್ಯ, ಬಾಂಧವ್ಯ, ಪ್ರೀತಿ- ವಿಶ್ವಾಸ, ಸಹಬಾಳ್ವೆ. ಇವೆಲ್ಲವೂ ಮಾನವೀಯ ಸಂಬಂಧ ಗಳ ಬಳುವಳಿ ಎಂಬುದಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‍ನಲ್ಲಿ ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ 78ನೇ ಹುಟ್ಟುಹಬ್ಬದ ಅಭಿ ನಂದನಾ ಸಮಾರಂಭ. ವಿಭಿನ್ನ…
ಯಡಿಯೂರಪ್ಪ ಶ್ರೀಮಂತ ಮನೆತನದಿಂದ ಬಂದವರಲ್ಲ, ಪರಿಶ್ರಮದಿಂದ ಮೇಲೆ ಬಂದವರು
February 28, 2020ಬೆಂಗಳೂರು, ಫೆ.27-ಯಡಿಯೂರಪ್ಪ ನವರು ರಾಜಕೀಯ ಜೀವನದ ಪ್ರಾರಂಭ ದಲ್ಲಿ ಸೈಕಲ್ ತುಳಿದು ಕರ್ನಾಟಕದಲ್ಲಿ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಧೀಮಂತ ಹೋರಾಟ ಗಾರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಣಗಾನ ಮಾಡಿದರು. ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್‍ನಲ್ಲಿ ಗುರುವಾರ ಸಂಜೆ ನಡೆದ ಸಮಾ ರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ಬೆಳ್ಳಿ ನೇಗಿಲು ನೀಡಿ 78ನೇ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸಿ, ಮಾತನಾಡಿದ ಅವರು, ಯಡಿಯೂರಪ್ಪ ಹುದ್ದೆಯಿಂದ ದೊಡ್ಡವರೆನ್ನಿಸಿಕೊಂಡಿಲ್ಲ. ಅವರು ಮಾಡಿದ…
ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಿ ಸಿದ್ದರಾಮಯ್ಯ ಶುಭ ಹಾರೈಕೆ
February 28, 2020ಬೆಂಗಳೂರು, ಫೆ.27-ಮಾನವೀಯ ಸಂಬಂ ಧಕ್ಕೆ ರಾಜಕಾರಣ ಅಡ್ಡಿಯಾಗಬಾರದು ಎಂದು ನಂಬಿರುವವನು ನಾನು. ಸಿಎಂ ಯಡಿಯೂರಪ್ಪ 77 ವಸಂತ ಪೂರೈಸಿ 78ನೇ ವಸಂತಕ್ಕೆ ಕಾಲಿ ಡುತ್ತಿದ್ದಾರೆ. ಅವರಿಗೆ ಹೃದಯಪೂರ್ವಕವಾಗಿ ಶುಭ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದರು. ಅರಮನೆ ಮೈದಾನದಲ್ಲಿ ನಡೆದ ಅಭಿ ನಂದನಾ ಸಮಾರಂಭದಲ್ಲಿ `ಕಾಫಿ ಟೇಬಲ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಬರುವಂತೆ ಯಡಿ ಯೂರಪ್ಪ ಅವರ ಅಭಿಮಾನಿಗಳು ನನಗೂ…
ಮಂಡ್ಯ, ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಮಾರಾಟಕ್ಕೆ ಸರ್ಕಾರ ಸಿದ್ಧತೆ
February 28, 2020ಬೆಂಗಳೂರು, ಫೆ.27(ಕೆಎಂಶಿ)- ಬ್ರಿಟಿಷರ ಕಾಲದಲ್ಲಿ ಆರಂಭ ಗೊಂಡ ಮಂಡ್ಯದ ಪ್ರತಿಷ್ಠಿತ ಮೈಶುಗರ್ ಸೇರಿದಂತೆ ಎರಡು ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರ ಮಡಿಲಿಗೆ ಹಾಕಲು ಸರ್ಕಾರ ಮುಂದಾಗಿದೆ. ಸರ್ಕಾರಿ ಮತ್ತು ಸಹಕಾರಿ ಒಡೆ ತನದಲ್ಲಿರುವ ಮಂಡ್ಯದ ಮೈಶು ಗರ್, ಪಾಂಡವಪುರ ಕಾರ್ಖಾನೆ ಗಳನ್ನು ಸಹಭಾಗಿತ್ವದಡಿ ಖಾಸಗಿ ಯರಿಗೆ ಮಾರಾಟ ಮಾಡಲು ಸಿದ್ಧತೆ ನಡೆದಿದೆ. ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಸುದ್ದಿಗಾರರಿಗೆ ಈ ಕಾರ್ಖಾನೆಗಳ ಮಾರಾಟದ ಬಗ್ಗೆ ಮಾಹಿತಿ ನೀಡಿ, ಇವುಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ-ಪಿಪಿಪಿ ಆಧಾರದ ಮೇಲೆ…
ಕನ್ನಕ್ಕೆ ಕಡಿವಾಣ ಹಾಕಲು `ಅನ್ನಭಾಗ್ಯ’ಕ್ಕೆ ಬದಲಾವಣೆ
February 28, 2020ಬೆಂಗಳೂರು,ಫೆ.27(ಕೆಎಂಶಿ)-ಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ಜಾರಿ ಗೊಂಡ ಅನ್ನಭಾಗ್ಯ ಯೋಜನೆ ಸ್ವರೂಪ ಬದಲಾಯಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಪ್ರಸ್ತುತ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಯೂನಿಟ್‍ಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ, ಬೇಳೆ, ಉಪ್ಪು ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನೂ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಯೋಜನೆ ದೊಡ್ಡ ಪ್ರಮಾಣದಲ್ಲಿ ದುರುಪ ಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಉಚಿತ ಅಕ್ಕಿ ನೀಡಿಕೆ ಪ್ರಮಾಣದಲ್ಲಿ ಮಾರ್ಪಾಡು ಮಾಡಿ, ಪ್ರತಿ ಕೆಜಿಗೆ ಸಾಂಕೇತಿಕ ದರ ನಿಗದಿಪಡಿಸಿ, ಈ…
2000 ರೂ. ನೋಟುಗಳ ಮರು ಚಲಾವಣೆಗೆ ಬಿಡದಂತೆ ಬ್ಯಾಂಕ್‍ಗಳಿಗೆ ಆರ್‍ಬಿಐ ಸೂಚನೆ
February 28, 2020ಬೆಂಗಳೂರು, ಫೆ.27(ಕೆಎಂಶಿ)-ಸಾರ್ವಜನಿಕರಿಂದ ಬ್ಯಾಂಕ್‍ಗಳಿಗೆ ಸಂದಾಯ ವಾಗುವ 2,000 ರೂಪಾಯಿ ಮುಖಬೆಲೆಯ ನೋಟು ಗಳನ್ನು ಮರು ಚಲಾವಣೆಗೆ ಬಿಡದಂತೆ ಆರ್‍ಬಿಐ ಸೂಚಿ ಸಿದೆ. ಇದರ ಹಿನ್ನೆಲೆಯಲ್ಲೇ ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಲಭ್ಯವಿಲ್ಲ. ಅಲ್ಲದೆ, ಬ್ಯಾಂಕ್ ಕೌಂಟರ್‍ಗಳಲ್ಲಿ ಗೋಗರೆದರೂ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡುತ್ತಿಲ್ಲ. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸಂಪೂರ್ಣ ಬಂದ್ ಮಾಡಿರುವ ಆರ್‍ಬಿಐ, ಈಗ ಚಲಾವಣೆಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನೂ ವಶಕ್ಕೆ ಪಡೆಯುತ್ತಿದೆ. ಇದರ ಬದಲಿಗೆ 500ರೂ….
ಮೈಸೂರು ಚಾಮುಂಡೇಶ್ವರಿ, , ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಧಾರ
February 28, 2020ಬೆಂಗಳೂರು, ಫೆ.27 (ಕೆಎಂಶಿ)- ಮುಜರಾಯಿ ಇಲಾಖೆಗೆ ಹೆಚ್ಚಿನ ಆದಾಯ ತರುತ್ತಿರುವ ಪ್ರಮುಖ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಗೋಶಾಲೆಗಳ ಆರಂ ಭಕ್ಕೆ ಸರ್ಕಾರ ಮುಂದಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಜ ರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೈಸೂರಿನ ಚಾಮುಂಡಿ, ನಂಜನಗೂಡು ಶ್ರೀಕಂಠೇ ಶ್ವರ ಸ್ವಾಮಿ, ಕೊಲ್ಲೂರು ಮೂಕಾಂಬಿಕೆ, ಬೆಂಗಳೂ ರಿನ ಬನಶಂಕರಿ ದೇವಸ್ಥಾನ ಸೇರಿದಂತೆ 25 ದೇವಾಲಯಗಳ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ಆರಂಭಿಸುವುದಾಗಿ ಹೇಳಿದರು. ಹತ್ತರಿಂದ 15 ಎಕರೆ ವಿಸ್ತೀರ್ಣದಲ್ಲಿ ಹಸುಗಳನ್ನು ಸಾಕಲು, ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲು ತೀರ್ಮಾನಿಸಿದ್ದೇವೆ….










