ಬೆಂಗಳೂರು, ಫೆ.27(ಕೆಎಂಶಿ)-ಸಾರ್ವಜನಿಕರಿಂದ ಬ್ಯಾಂಕ್‍ಗಳಿಗೆ ಸಂದಾಯ ವಾಗುವ 2,000 ರೂಪಾಯಿ ಮುಖಬೆಲೆಯ ನೋಟು ಗಳನ್ನು ಮರು ಚಲಾವಣೆಗೆ ಬಿಡದಂತೆ ಆರ್‍ಬಿಐ ಸೂಚಿ ಸಿದೆ. ಇದರ ಹಿನ್ನೆಲೆಯಲ್ಲೇ ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಲಭ್ಯವಿಲ್ಲ. ಅಲ್ಲದೆ, ಬ್ಯಾಂಕ್ ಕೌಂಟರ್‍ಗಳಲ್ಲಿ ಗೋಗರೆದರೂ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನೀಡುತ್ತಿಲ್ಲ. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸಂಪೂರ್ಣ ಬಂದ್ ಮಾಡಿರುವ ಆರ್‍ಬಿಐ, ಈಗ ಚಲಾವಣೆಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನೂ ವಶಕ್ಕೆ ಪಡೆಯುತ್ತಿದೆ. ಇದರ ಬದಲಿಗೆ 500ರೂ. 200ರೂ. ಹಾಗೂ 100 ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚು ಚಲಾವಣೆಗೆ ಬಿಡುವಂತೆ ಆರ್‍ಬಿಐ ಸೂಚಿಸಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು ಮತ್ತು ಹೆಚ್ಚು ಮುಖಬೆಲೆಯ ನೋಟುಗಳ ಕಂತೆಗಳನ್ನು ಪೇರಿಸುವುದನ್ನು ತಡೆಗಟ್ಟಲು ಹಾಗೂ ನಗದು ರಹಿತ ವಹಿವಾಟಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳಿಗೆ ಆಗುವ ಗತಿಯೇ 500 ರೂ. ಮುಖಬೆಲೆಯ ನೋಟಿಗೂ ಆಗುವ ಸಾಧ್ಯತೆ ಇದೆ. ಈ ಕ್ರಮಗಳಿಂದ ಕಳ್ಳ ವಹಿವಾಟು ತಡೆ ಹಾಗೂ ನಗದು ರಹಿತ ವಹಿವಾಟು ಹೆಚ್ಚಳಕ್ಕೆ ಅನುಕೂಲವಾಗಲಿದೆ.