ಮೈಸೂರು

ಇಂದು ಧರೆಗೆ ದೊಡ್ಡವರ ಉತ್ಸವ
ಮೈಸೂರು

ಇಂದು ಧರೆಗೆ ದೊಡ್ಡವರ ಉತ್ಸವ

February 28, 2020

ಮೈಸೂರು, ಫೆ.27- ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮೈಸೂರು ಇವರ ಸಹಯೋಗ ದಲ್ಲಿ ಈ ವರ್ಷವೂ ಫೆ.28ರಂದು ಕರ್ನಾಟಕ ಕಲಾಮಂದಿರದಲ್ಲಿ `ಧರೆಗೆ ದೊಡ್ಡವರು’ ಎಂಬ ಅಹೋರಾತ್ರಿ ಕಾರ್ಯ ಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಂಡಾಯ ಹಾಗೂ ಕಲಾತಂಡದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಾರ್ಯಕ್ರಮವನ್ನು ನಡೆಸಲಾಗುವುದು. ಅಂದು ಸಂಜೆ 6 ಗಂಟೆಗೆ ಧೂಪ…

ಗೋಧ್ರಾ ನರಮೇಧಕ್ಕೀಗ 18 ವರ್ಷ
ಮೈಸೂರು

ಗೋಧ್ರಾ ನರಮೇಧಕ್ಕೀಗ 18 ವರ್ಷ

February 28, 2020

ಗೋಧ್ರಾ(ಗುಜರಾತ್), ಫೆ.27- ಸರಿಯಾಗಿ 18 ವರ್ಷಗಳ ಹಿಂದೆ ಇದೇ ದಿನ (ಫೆ.27) ಆ ಘನಘೋರ ದುರಂತ ಸಂಭವಿಸಿ, ಇಡೀ ವಿಶ್ವವೇ ಆಘಾತಗೊಳ್ಳುವಂತೆ ಮಾಡಿತ್ತು. ಗೋಧ್ರಾ ದಲ್ಲಿನ ನರಹಂತಕ ಪಾತಕಿ ಗಳು ಬೆಳಿಗ್ಗೆ 7.43ರ ವೇಳೆಗೆ ಹಚ್ಚಿದ ಬೆಂಕಿಗೆ `ಸಬರಮತಿ ಎಕ್ಸ್ ಪ್ರೆಸ್’ ರೈಲಿನ ಕೆಲವು ಬೋಗಿ ಗಳು ಧಗಧÀಗನೆ ಹೊತ್ತಿ ಉರಿದಿದ್ದವು. ಬೋಗಿಗಳ ಒಳಗಿದ್ದ 59 ಹಿಂದೂ ಯಾತ್ರಾರ್ಥಿಗಳು, ಕರ ಸೇವಕರು ಕ್ಷಣಮಾತ್ರ ದಲ್ಲಿ ಜೀವಂತ ದಹನವಾಗಿದ್ದರು. 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹಿಂದೂ ಯಾತ್ರಾರ್ಥಿಗಳ ಮಾರಣ…

ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ
ಮೈಸೂರು

ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ

February 28, 2020

2015-18ರವರೆಗಿನ ಬಾಕಿ ಉಳಿಸಿಕೊಂಡ ಉಪಾಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಸಂದಾಯಕ್ಕೆ ನಿರ್ಣಯ 518 ಮಂದಿ ಖಾಯಂ ಹಾಗೂ 1,648 ಗುತ್ತಿಗೆ ಪೌರಕಾರ್ಮಿಕರಿಗೆ ಯೋಜನೆ ಫಲ ಮೈಸೂರು, ಫೆ.27(ಪಿಎಂ)- ಮೈಸೂರು ಮಹಾ ನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ 2015-18ರವರೆಗಿನ ಬಾಕಿ ಉಳಿಸಿಕೊಂಡಿರುವ ಉಪಾ ಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಪಾವತಿ ಮಾಡಲು ಗುರುವಾರ ನಡೆದ ಮಹಾ ನಗರಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್…

ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ
ಮೈಸೂರು

ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

February 27, 2020

ಮೈಸೂರು,ಫೆ.26-ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಬೇಕಾದ ಬಾಕಿ 42.19 ಲಕ್ಷ ರೂ. ಗಳನ್ನು ಕೂಡಲೇ ಪಾವತಿಸುವಂತೆ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 75ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಈ ಸೂಚನೆ ನೀಡಿ ದರು ಎಂದು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಹಾಗೂ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿ ವಿ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ 2020-21ನೇ ಸಾಲಿನ ರೂ. 1,71,20,…

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 300 ಕೋಟಿ ರೂ.ಗೆ ಕೋರಿಕೆ
ಮೈಸೂರು

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 300 ಕೋಟಿ ರೂ.ಗೆ ಕೋರಿಕೆ

February 27, 2020

ಮೈಸೂರು,ಫೆ.26(ಪಿಎಂ)- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ 300 ಕೋಟಿ ರೂ. ಮೀಸಲಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು. ಮೈಸೂರಿನ ಕೆಆರ್ ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ನಿವೇಶನ ದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಸಂಘದ ವತಿಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅತಿಥಿಯಾಗಿದ್ದ ಅವರು, ಈಗಾಗಲೇ ಮಂಡಳಿಯ ಕಚೇರಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ 25 ಕೋಟಿ ರೂ. ನೀಡಿದೆ ಎಂದು ಹೇಳಿದರು. ರಾಜ್ಯದ 21 ವಿಧಾನಸಭಾ…

ಯತ್ನಾಳ್ ಹೇಳಿಕೆ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಯತ್ನಾಳ್ ಹೇಳಿಕೆ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ

February 27, 2020

ಮೈಸೂರು, ಫೆ.26(ಎಂಕೆ)- ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ನಗರದ ಗಾಂಧಿವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಶಾಸಕ ಯತ್ನಾಳ್ ಕೂಡಲೇ ಹೆಚ್.ಎಸ್.ದೊರೆಸ್ವಾಮಿ ಅವರಲ್ಲಿ ಕ್ಷಮೆ ಕೋರ ಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಗಾಂಧಿ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ 102 ವರ್ಷದ ಹಿರಿಯ ದೊರೆಸ್ವಾಮಿ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದಾರೆ. ಅಂತಹ ಹೋರಾಟ ಗಾರರಿಗೆ…

ವಸಂತಮಹಲ್ ಆವರಣದಲ್ಲಿ ಹೊತ್ತಿ ಉರಿದ ಕಾರು
ಮೈಸೂರು

ವಸಂತಮಹಲ್ ಆವರಣದಲ್ಲಿ ಹೊತ್ತಿ ಉರಿದ ಕಾರು

February 27, 2020

ಮೈಸೂರು, ಫೆ.26(ಆರ್‍ಕೆ)- ಮರದ ಕೆಳಗೆ ನೆರಳಲ್ಲಿ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮೈಸೂರಿನ ನಜರ್ ಬಾದ್‍ನ ವಸಂತಮಹಲ್ ಆವರಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಹಾಸನದ ದೇವೇಗೌಡ ನಗರದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಎ.ಎ.ಶಿವಕುಮಾರ್ ಎಂಬುವರಿಗೆ ಸೇರಿದ ಮಾರುತಿ ಸ್ವಿಫ್ಟ್ ಡಿಸೈರ್ (ಕೆಎ 03-ಎಂವಿ 8366) ಕಾರು ಬೆಂಕಿ ಗಾಹುತಿಯಾಗಿದೆ. ಮೈಸೂರಿನ ನಜರ್‍ಬಾದ್ ನಲ್ಲಿರುವ ವಸಂತಮಹಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಭಾಷಾ ಕೌಶಲ್ಯ ಅಭಿವೃದ್ಧಿ’ ಕುರಿತಾದ ಒಂದು ದಿನದ ವಿಭಾಗ ಮಟ್ಟದ…

ಖಾಸಗಿ ಶಾಲೆ ನಾಮಫಲಕಗಳಲ್ಲಿ ಕನ್ನಡ ನಿರ್ಲಕ್ಷ್ಯ; ಡಿಸಿಗೆ ದೂರು
ಮೈಸೂರು

ಖಾಸಗಿ ಶಾಲೆ ನಾಮಫಲಕಗಳಲ್ಲಿ ಕನ್ನಡ ನಿರ್ಲಕ್ಷ್ಯ; ಡಿಸಿಗೆ ದೂರು

February 27, 2020

ಮೈಸೂರು, ಫೆ.26(ಆರ್‍ಕೆಬಿ)- ಮೈಸೂರು ಜಿಲ್ಲೆಯ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಯನ್ನು ಪೂರ್ಣ ನಿರ್ಲಕ್ಷಿಸಿವೆ. ಶಾಲೆಯ ನಾಮಫಲಕ, ವಾಹನ, ರಶೀದಿಗಳೆಲ್ಲ ಆಂಗ್ಲಮಯವಾಗಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತು. ಶೇ.60 ಭಾಗ ನಾಮಫಲಕ ಕಡ್ಡಾಯ ವಾಗಿ ಕನ್ನಡದಲ್ಲಿರಬೇಕೆಂಬ ನಿಯಮ ಪಾಲನೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಶಾಲೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಜೂನ್‍ನಲ್ಲಿ…

ಕಂಪ್ಯೂಟರ್ ಕೋರ್ಸ್ ಪರೀಕ್ಷೆ ಆರಂಭ
ಮೈಸೂರು

ಕಂಪ್ಯೂಟರ್ ಕೋರ್ಸ್ ಪರೀಕ್ಷೆ ಆರಂಭ

February 27, 2020

ಮೈಸೂರು, ಫೆ.26(ಪಿಎಂ)- ಮೈಸೂರಿನ ವಸಂತ್ ಮಹಲ್‍ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪರೀಕ್ಷೆಗಳು ಬುಧವಾರ ಆರಂಭವಾಗಿದ್ದು, ಮಾ.3 ರವರೆಗೆ ನಡೆಯಲಿವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ ಪರೀಕ್ಷೆಯನ್ನು ಖಾಸಗಿ ಕಂಪ್ಯೂಟರ್ ಶಿಕ್ಷಣ ತರಬೇತಿ ಸಂಸ್ಥೆಗಲ್ಲಿ 6 ತಿಂಗಳ ಕೋರ್ಸ್ ಪೂರೈಸಿದ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದವರು ಈ ಕೋರ್ಸ್ ಅಭ್ಯಾಸ ಮಾಡಲು ಅರ್ಹರು. ಇಂದು ಆಫೀಸ್ ಆಟೋಮೇಷನ್ ಹಾಗೂ ಗ್ರಾಫಿಕ್ ಡಿಸೈನರ್ ಪತ್ರಿಕೆಗಳ ಥಿಯರಿ ಪರೀಕ್ಷೆ ನಡೆಯಿತು. 278 ಮಂದಿ ಪರೀಕ್ಷೆ…

ಭಾರತದ ರಕ್ಷಣಾ ವಲಯದಲ್ಲಿ 3 ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ಅಮೆರಿಕ ಒಪ್ಪಂದ
ಮೈಸೂರು

ಭಾರತದ ರಕ್ಷಣಾ ವಲಯದಲ್ಲಿ 3 ಶತಕೋಟಿ ಯುಎಸ್ ಡಾಲರ್ ಹೂಡಿಕೆಗೆ ಅಮೆರಿಕ ಒಪ್ಪಂದ

February 25, 2020

ನವದೆಹಲಿ, ಫೆ.24- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ವೇದಿಕೆಯಾಗಿದೆ. ಮಂಗಳವಾರ ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್ ಮೂರು ಶತಕೋಟಿ ಯುಎಸ್ ಡಾಲರ್ ಯುದ್ಧ ಹೆಲಿಕಾಪ್ಟರ್ ಮತ್ತು ರಕ್ಷಣಾ ಸಾಮಗ್ರಿಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದಿದ್ದಾರೆ. ಮಾಹಿತಿಯ ಪ್ರಕಾರ, ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾ ಡುವ ಬಗ್ಗೆ ಭಾರತ…

1 664 665 666 667 668 1,611
Translate »