ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣರಿಂದ ಕಾಮಗಾರಿ ಪರಿಶೀಲನೆ ಮೈಸೂರು, ಫೆ.27(ಆರ್‍ಕೆ)-ಭಾರೀ ಮಳೆಯಿಂದಾಗಿ ಕುಸಿದಿದ್ದ ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 2019ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ರಭಸ ವಾಗಿ ನುಗ್ಗಿದ ಕಾರಣ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆ ನಡುವಿನ ರಸ್ತೆ ಕುಸಿದಿದ್ದರಿಂದ ಇಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ…
ಸಾಮಾಜಿಕ ನ್ಯಾಯ ರಕ್ಷಣೆಗೆ ಪಕ್ಷ ಸಂಘಟನೆ ಅಗತ್ಯ
February 28, 2020ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ] ಮೈಸೂರು, ಫೆ.27(ಆರ್‍ಕೆ)-ಸಮಾ ನತೆ, ಸಾಮಾಜಿಕ, ನ್ಯಾಯ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸ ಬೇಕೆಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮೈಸೂರಿನ ಇಂದಿರಾ ಕಾಂಗ್ರೆಸ್ ಭವನದಲ್ಲಿ ಇಂದು ಏರ್ಪಡಿ ಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಜನರು ಭಯದಿಂದ ಜೀವಿ ಸುವ ಪರಿಸ್ಥಿತಿ…
ಮುಖ್ಯಮಂತ್ರಿ ಯಡಿಯೂರಪ್ಪ ಪರ ವಿಶೇಷ ಪೂಜೆ, ಸಿಹಿ ವಿತರಣೆ
February 28, 2020ಮೈಸೂರು, ಫೆ.27- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿ.ಎಸ್.ಯಡಿಯೂರಪ್ಪ ಅಭಿ ಮಾನಿ ಬಳಗದ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಯಡಿಯೂರಪ್ಪ ನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಆನಂದ್ ಮಾತನಾಡಿ ಬಿ.ಎಸ್. ಯಡಿಯೂರಪ್ಪನವರು ಜನನಾಯಕ. ಅವರು ಜನರಿಂದ ಉನ್ನತ ಸ್ಥಾನಕ್ಕೇರಿ ಈಗ ಜನರಿಗೋಸ್ಕರ ಬದುಕುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಯಾವತ್ತೂ ಮುಖ್ಯಮಂತ್ರಿ ಆಗಬೇಕೆಂದು ಬಯಸಿದವರಲ್ಲ. ಅವರಲ್ಲಿರುವ ನಿಸ್ವಾರ್ಥ ಸೇವೆ ಪರಿಗಣಿಸಿ ಜನರೇ ಅವರನ್ನು…
ಸರ್ವಜೀವಿಗಳ ನೋವಿಗೆ ಸ್ಪಂದಿಸಿದವರು ಶ್ರೀ ಶಾರದಾದೇವಿ: ಶ್ರೀ ರಾಮಕೃಷ್ಣ ಪರಮಹಂಸರ 185ನೇ ಜನ್ಮದಿನೋತ್ಸವದಲ್ಲಿ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಉಪನ್ಯಾಸ
February 28, 2020ಮೈಸೂರು, ಫೆ.27(ಎಂಕೆ)- ಅಪಾರ ಅನುಕಂಪ ದಿಂದ ಸರ್ವಜೀವಿಗಳ ನೋವಿಗೆ ಸ್ಪಂದಿಸಿದವರು ಶ್ರೀ ಶಾರದಾದೇವಿ. ತಾಯಿ, ಗುರು, ದೇವಿಯಾಗಿದ್ದ ಅವರು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದು ದಾವಣಗೆರೆ ರಾಮಕೃಷ್ಣ ಮಿಷನ್‍ನ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದಜೀ ಮಹಾ ರಾಜ್ ಸ್ಮರಿಸಿಕೊಂಡರು. ಮೈಸೂರಿನ ಯಾದವಗಿರಿಯಲ್ಲಿರುವ ಶ್ರೀ ರಾಮ ಕೃಷ್ಣ ಆಶ್ರಮದಲ್ಲಿ ‘ಶ್ರೀ ರಾಮಕೃಷ್ಣ ಪರಮಹಂಸರ 185ನೇ ಜನ್ಮದಿನೋತ್ಸವ ಹಾಗೂ ಆಶ್ರಮದ ವಾರ್ಷಿಕೋತ್ಸವ’ದ ಅಂಗವಾಗಿ ಆಯೋಜಿಸಿದ್ದ ‘ಮಹಾತಾಯಿ ಶ್ರೀ ಶಾರದಾದೇವಿಗೆ ನಮನ’ ಉಪ ನ್ಯಾಸದಲ್ಲಿ ‘ಕರುಣಾಮಯಿ ಶ್ರೀಶಾರದಾಮಾಯಿ’ ಕುರಿತು ಮಾತನಾಡಿದ ಅವರು, ತಾಯಿ…
ಗುಣಮಟ್ಟದ ಸಂಶೋಧನೆಯಿಂದಷ್ಟೇ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ: ಶಾರದಾ ವಿಲಾಸ ಫಾರ್ಮಸಿ ಕಾಲೇಜು ರಜತ ಮಹೋತ್ಸವದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಎಸ್.ಸಚ್ಚಿದಾನಂದ ಅಭಿಮತ
February 28, 2020ಮೈಸೂರು,ಫೆ.27(ವೈಡಿಎಸ್)-ಗುಣಮಟ್ಟದ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಅಭಿಪ್ರಾಯಪಟ್ಟರು. ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ `ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ರಜತ ಮಹೋತ್ಸವ ಹಾಗೂ ಪದವಿ ಪ್ರದಾನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಪ್ರತಿ ವರ್ಷ ಹಲವು ಸಂಶೋಧನಾ ಪ್ರಬಂಧಗಳು…
ನಂಜನ ಗೂಡಿನಲ್ಲಿ ನಾಳೆಯಿಂದ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
February 28, 2020ಮೈಸೂರು,ಫೆ.27(ಎಂಟಿವೈ)- ದಕ್ಷಿಣ ಕಾಶಿ ನಂಜನ ಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲಾಮಂದಿರದಲ್ಲಿ ಫೆ.29 ಮತ್ತು ಮಾ. 1ರಂದು 17ನೇ ಜಿ¯್ಲÁ ಕನ್ನಡ ಸಾಹಿತ್ಯ ಸಮ್ಮೇಳನ ಜನಪದ ವಿದ್ವಾಂಸ ಟಿ.ಎಸ್. ರಾಜಪ್ಪ ಅವರ ಸಮ್ಮೇಳನಾಧ್ಯP್ಷÀತೆಯಲ್ಲಿ ಜರುಗಲಿದೆ ಎಂದು ಕಸಾಪ ಜಿ¯್ಲÁಧ್ಯP್ಷÀ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.29ರ ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯP್ಷÀರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಚಾಲನೆ ನೀಡಲಿz್ದÁರೆ. ಬೆಳಿಗ್ಗೆ 10.30ಕ್ಕೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾ…
ಮುಕ್ತಕ ಸಾಹಿತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವ
February 28, 2020ಮೈಸೂರು,ಫೆ.27- 20ನೇ ವಾರ್ಷಿಕೋತ್ಸವದ ಅಂಗವಾಗಿ ಮುಕ್ತಕ ಸಾಹಿತ್ಯ ಅಕಾಡೆಮಿಯು ಫೆ.29 ಮತ್ತು ಮಾರ್ಚ್ 1ರಂದು ಎರಡು ದಿನಗಳ ಕಾರ್ಯ ಕ್ರಮವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ಶ್ರೀ ನಾದ ಬ್ರಹ್ಮ ಸಂಗೀತ ಸಭಾದ ಮೈಸೂರು ವಾಸು ದೇವಾಚಾರ್ಯ ಭವನದಲ್ಲಿ ಆಯೋಜಿಸಿದೆ. ಕಾರ್ಯಕ್ರಮವು ವಿಚಾರ ಸಂಕಿರಣ, ಮುಕ್ತಕ ಪಠಣ, ನೃತ್ಯರೂಪಕ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ನಿರುಪಾದೀಶ ಸ್ವಾಮೀಜಿಯವರಿಗೆ ಡಾ. ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಇನ್ನಿತರ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಫೆ.29 (ಶನಿವಾರ): `ಕನ್ನಡ ಮುಕ್ತ ಸಾಹಿತ್ಯಾ ವಲೋಕನ’ ಕುರಿತು…
ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಕೊರೊನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
February 28, 2020ಮೈಸೂರು, ಫೆ.27(ಆರ್‍ಕೆ)- ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾ ಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಅವರಿಗೆ ಕೊರೊನರಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೊಳಪಡಿಸಿ ಸ್ಟಂಟ್ ಅಳವಡಿಸ ಲಾಗಿದೆ. ಚಿಕಿತ್ಸೆಗೆ ಅರ್ಜುನ್ ಜನ್ಯ ಸ್ಪಂದಿಸುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮೈಸೂರಿನ ಬೋಗಾದಿ ಸಮೀಪ ವಾಸ ವಾಗಿರುವ ಜನ್ಯ ಅವರಿಗೆ ಎದೆ ನೋವು ಕಾಣಿಸಿ ಕೊಂಡ ಕಾರಣ, ನಿನ್ನೆ ಮುಂಜಾನೆಯೇ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಪಡಿಸಲಾಗಿದೆ….
ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ
February 28, 2020ಮೈಸೂರು, ಫೆ.27- ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಫೆಬ್ರವರಿ 28 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಲಿದ್ದಾರೆ. ಬೆಳಿಗ್ಗೆ 11-30 ಗಂಟೆಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಮೈಸೂರು ನಗರದ ನಿಸರ್ಗ ಬಡಾವಣೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಸ್ಥಳ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 12 ಗಂಟೆಗೆ ಇಲವಾಲ ಹೋಬಳಿಯ ಆನಂದೂ ರಿನಲ್ಲಿ ಕೃಷ್ಣರಾಜಸಾಗರ ಜಲಾಶಯದ…
ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
February 28, 2020ಮೈಸೂರು,ಫೆ.27-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನಿರ್ವಹಣಾ ಕೆಲಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಫೆ.28ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಇಲವಾಲ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಇಲವಾಲ, ಹಳೆ-ಕಾಮನಕೊಪ್ಪಲು, ಮೈದನಹಳ್ಳಿ, ಮೇಗÀಳಾಪುರ, ಭದ್ರೇಗೌಡನಕೊಪ್ಪಲು, ಚಿಕ್ಕೆಗೌಡನಕೊಪ್ಪಲು, ಹೊಸಕೋಟೆ, ಸರಕಟ್ಟೆ, ಯಾಚೇಗೌಡನಹಳ್ಳಿ, ದಡಕನಹಳ್ಳಿ, ರಾಮೇನಹಳ್ಳಿ, ಯಡಹಳ್ಳಿ, ಕಲ್ಲೂರು, ನಾಗನಹಳ್ಳಿ, ಗುಂಗ್ರಾಲ್ ಛತ್ರ, ಛತ್ರದಕೊಪ್ಪಲು, ರಟ್ನಳ್ಳಿ, ವೀರಪ್ಪನಕೊಪ್ಪಲು ಸುತ್ತಮುತ್ತÀ ವಿದ್ಯುತ್ ವ್ಯತ್ಯಯವಾಗಲಿದೆ.










