ಮೈಸೂರು, ಫೆ.27(ಆರ್‍ಕೆ)- ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾ ಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಅವರಿಗೆ ಕೊರೊನರಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೊಳಪಡಿಸಿ ಸ್ಟಂಟ್ ಅಳವಡಿಸ ಲಾಗಿದೆ. ಚಿಕಿತ್ಸೆಗೆ ಅರ್ಜುನ್ ಜನ್ಯ ಸ್ಪಂದಿಸುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮೈಸೂರಿನ ಬೋಗಾದಿ ಸಮೀಪ ವಾಸ ವಾಗಿರುವ ಜನ್ಯ ಅವರಿಗೆ ಎದೆ ನೋವು ಕಾಣಿಸಿ ಕೊಂಡ ಕಾರಣ, ನಿನ್ನೆ ಮುಂಜಾನೆಯೇ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಪಡಿಸಲಾಗಿದೆ. ಗ್ಯಾಸ್ಟ್ರೋ ಎಂಟರಿಟಿಸ್ ಸಮಸ್ಯೆಯಿಂದಾಗಿ ಫೆಬ್ರವರಿ 23ರಂದು ಮಧ್ಯಾಹ್ನವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಬಳಿಕ ಅವರನ್ನು ಹೆಚ್ಚುವರಿ ಪರೀಕ್ಷೆಗೊಳ ಪಡಿಸಿದಾಗ ಬೆನ್ನು ನೋವು, ಎದೆನೋವು ಹಾಗೂ ತೀವ್ರ ತಲೆನೋವು ಇದೆ ಎಂಬುದು ತಿಳಿಯಿತು. ಆದ್ದರಿಂದ ಅವರನ್ನು ಸ್ಪೆಷಲ್ ವಾರ್ಡ್‍ನಲ್ಲಿ ಮುಂದುವರೆಸಿ ಚಿಕಿತ್ಸೆ ನೀಡಲಾಯಿತು. ನಂತರ ಗ್ಯಾಸ್ಟ್ರಿಕ್ ಸಮಸ್ಯೆ ಗುಣಮುಖವಾಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
39 ವರ್ಷದ ಅರ್ಜುನ್ ಜನ್ಯ ಅವರಿಗೆ ಬುಧ ವಾರ ಮುಂಜಾನೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳ ಪಡಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸುತ್ತಿರುವುದ ರಿಂದ ತೀವ್ರ ನಿಗಾ ಘಟಕದಿಂದ ವಾರ್ಡಿಗೆ ಸ್ಥಳಾಂ ತರಿಸಲಾಗಿದ್ದು, ಎರಡು-ಮೂರು ದಿನದೊಳ ಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗು ವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.