ಮೈಸೂರು,ಫೆ.27- 20ನೇ ವಾರ್ಷಿಕೋತ್ಸವದ ಅಂಗವಾಗಿ ಮುಕ್ತಕ ಸಾಹಿತ್ಯ ಅಕಾಡೆಮಿಯು ಫೆ.29 ಮತ್ತು ಮಾರ್ಚ್ 1ರಂದು ಎರಡು ದಿನಗಳ ಕಾರ್ಯ ಕ್ರಮವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ಶ್ರೀ ನಾದ ಬ್ರಹ್ಮ ಸಂಗೀತ ಸಭಾದ ಮೈಸೂರು ವಾಸು ದೇವಾಚಾರ್ಯ ಭವನದಲ್ಲಿ ಆಯೋಜಿಸಿದೆ.
ಕಾರ್ಯಕ್ರಮವು ವಿಚಾರ ಸಂಕಿರಣ, ಮುಕ್ತಕ ಪಠಣ, ನೃತ್ಯರೂಪಕ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ನಿರುಪಾದೀಶ ಸ್ವಾಮೀಜಿಯವರಿಗೆ ಡಾ. ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಇನ್ನಿತರ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಫೆ.29 (ಶನಿವಾರ): `ಕನ್ನಡ ಮುಕ್ತ ಸಾಹಿತ್ಯಾ ವಲೋಕನ’ ಕುರಿತು ವಿಚಾರ ಸಂಕಿರಣ. ಡಾ. ಜ್ಯೋತಿಶಂಕರ್, ವಿದ್ವಾನ್ ಕೆ.ಪಿ.ಮಂಜುನಾಥ್ ಮತ್ತು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ವಿವಿಧ ಅವಧಿಯ ಕನ್ನಡ ಮುಕ್ತಕಗಳ ಬಗ್ಗೆ ಪ್ರಬಂಧ ಮಂಡಿಸುವರು. ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಡಾ.ಪ್ರದಾನ್ ಗುರುದತ್ ಕಾರ್ಯಕ್ರಮ ಉದ್ಘಾಟಿ ಸುವರು. ಕರ್ನಾಟಕ ಮುಕ್ತಕ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್ ಅಧ್ಯಕ್ಷತೆ ವಹಿಸುವರು.
ಸಂಜೆ 5ಕ್ಕೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಹೆಚ್.ಕೆ.ರಾಮನಾಥ್ (ಶಿಕ್ಷಣ, ರಂಗಭೂಮಿ), ಬಿ.ಎಂ.ರಾಮಚಂದ್ರ (ವೇಷಭೂಷಣ, ವಿನ್ಯಾಸ), ಡಾ. ಪಿ.ಕೆ.ರಾಜಶೇಖರ್ (ಜಾನಪದ), ವಿದುಷಿ ನಂದಿನಿ ಈಶ್ವರ್ (ನೃತ್ಯ), ವೈ.ಎಸ್.ಸುಬ್ರಮಣ್ಯ (ವಿಜ್ಞಾನ, ಗಣಿತ), ಕೊಳ್ಳೇಗಾಲ ಶರಂ (ವಿಜ್ಞಾನ ಸಂವಹನ), ಕೆ.ಎಸ್.ನಾಗರಾಜು (ಲೆಕ್ಕ ಪರಿಶೋಧನೆ) ಮತ್ತು ಡಾ.ಟಿ.ವಿ.ಸತ್ಯನಾರಾಯಣ (ಸಂಸ್ಕøತ, ಸಂಶೋ ಧನೆ) ಅವರನ್ನು ಸನ್ಮಾನಿಸಲಾಗುವುದು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಹೆಚ್.ಚೆನ್ನಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಾರ್ಚ್ 1 (ಭಾನುವಾರ)
ಬೆಳಿಗ್ಗೆ 10.30ಕ್ಕೆ : ಸಿದ್ದರಾಮ ವಿಲಾಸದ ಆಯ್ದ ಭಾಗಗಳಿಂದ ಕಾವ್ಯವಾಚನ ಮತ್ತು ವ್ಯಾಖ್ಯಾನ, ಶ್ರೀ ನಿರುಪಾದೀಶ ಸ್ವಾಮೀಜಿಯವರ ಕವನ ವಾಚನವನ್ನು ವಿದ್ವಾನ್ ಕೆ.ರಾಮಚಂದ್ರ ಮತ್ತು ಡಾ.ಜ್ಯೋತಿ ಶಂಕರ್ ಪ್ರಸ್ತುತಪಡಿಸುವರು.
ಸಂಜೆ 5ಕ್ಕೆ: ಶ್ರೀ ನಿರುಪಾದೀಶ ಸ್ವಾಮೀಜಿ ಯವರಿಗೆ ಡಾ.ಡಿ.ವಿ.ಜಿ. ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ. ಮುಖ್ಯ ಅತಿಥಿಗಳಾಗಿ ಮಂಡ್ಯದ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಭಾಗವಹಿಸುವರು.
ಸಂಜೆ 6.30ಕ್ಕೆ : ನಾಟ್ಯಾಚಾರ್ಯ ಪ್ರೊ.ಕೆ.ರಾಮ ಮೂರ್ತಿರಾವ್ ನಿರ್ದೇಶನದಲ್ಲಿ ಮೈಸೂರು ಮೂಲದ ನೂಪುರ ಕಲಾವಿದರು ನೃತ್ಯ ತಂಡದಿಂದ `ಕನ್ನಡ ಡಿಂಡಿಮ’ ನೃತ್ಯರೂಪಕ ನಡೆಯಲಿದೆ ಎಂದು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಂತೋಷ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.