ನಂಜನ ಗೂಡಿನಲ್ಲಿ ನಾಳೆಯಿಂದ  17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
ಮೈಸೂರು

ನಂಜನ ಗೂಡಿನಲ್ಲಿ ನಾಳೆಯಿಂದ  17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

February 28, 2020

ಮೈಸೂರು,ಫೆ.27(ಎಂಟಿವೈ)- ದಕ್ಷಿಣ ಕಾಶಿ ನಂಜನ ಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲಾಮಂದಿರದಲ್ಲಿ ಫೆ.29 ಮತ್ತು ಮಾ. 1ರಂದು 17ನೇ ಜಿ¯್ಲÁ ಕನ್ನಡ ಸಾಹಿತ್ಯ ಸಮ್ಮೇಳನ ಜನಪದ ವಿದ್ವಾಂಸ ಟಿ.ಎಸ್. ರಾಜಪ್ಪ ಅವರ ಸಮ್ಮೇಳನಾಧ್ಯP್ಷÀತೆಯಲ್ಲಿ ಜರುಗಲಿದೆ ಎಂದು ಕಸಾಪ ಜಿ¯್ಲÁಧ್ಯP್ಷÀ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.29ರ ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯP್ಷÀರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಚಾಲನೆ ನೀಡಲಿz್ದÁರೆ. ಬೆಳಿಗ್ಗೆ 10.30ಕ್ಕೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾ ನಂದಗೌಡ ಸಮ್ಮೇಳನ ಉದ್ಘಾಟಿಸಲಿz್ದÁರೆ. ಜಿಲ್ಲಾ ಉಸ್ತು ವಾರಿ ಸಚಿವ ವಿ. ಸೋಮಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿz್ದÁರೆ. ನಂಜನಗೂಡು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಧ್ಯP್ಷÀತೆಯ ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯP್ಷÀ ಇಂಧೂದರ ಹೊನ್ನಾಪುರ ಹಾಗೂ ಸಮ್ಮೆಳನಾಧ್ಯP್ಷÀ ಟಿ.ಎಸ್.ರಾಜಪ್ಪ ಭಾಷಣ ಮಾಡಲಿz್ದÁರೆ. ಸಂಸದ ಪ್ರತಾಪಸಿಂಹ, ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಮತ್ತು ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಅವರು ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಿz್ದÁರೆ.

ಸಾಂಸ್ಕøತಿಕ ಕಾರ್ಯಕ್ರಮವನ್ನು ಚಿಂತಕ ಗುಬ್ಬಿಗೂಡು ರಮೇಶ್, ಪುಸ್ತಕ ಮಳಿಗೆಯನ್ನು ಶಾಸಕ ಜಿ.ಟಿ.ದೇವೇ ಗೌಡ ಮತ್ತು ಚಿತ್ರಕಲಾ ಪ್ರದರ್ಶನವನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಲಿz್ದÁರೆ. ಶಾಸಕ ಬಿ.ಹರ್ಷವರ್ಧನ್ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಮೊದಲ ದಿನ ಮೈಸೂ ರಿನ ದೇಸಿರಂಗ ಸಾಂಸ್ಕøತಿಕ ಟ್ರಸ್ಟ್‍ನಿಂದ ಕುವೆಂಪು ವಿರಚಿತ ಜಲಗಾರ ನಾಟಕ ಪ್ರದರ್ಶನವಾಗಲಿದೆ. ಮಾ.1ರ ಬೆಳಿಗ್ಗೆ 10ಕ್ಕೆ ಕವಿ ಎಚ್.ಎನ್.ಮಂಜುರಾಜ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ದಲಿತ ಸಾಹಿತ್ಯದ ಆಶಯ ಮತ್ತು ಪ್ರಭಾವ, ಉದ್ಯೋಗಸ್ಥ ಮಹಿಳೆ-ಸಾಮಾಜಿಕ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನಡೆಯುಲಿದೆ. ಮಾಜಿ ಸಂಸದ ಆರ್.ಧ್ರುವನಾರಾಯಣ ಅಧ್ಯಕ್ಷತೆಯಲ್ಲಿ ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿಪಿಕೆ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಚಿಂತಕ ದೇವನೂರ್ ಶಂಕರ್ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ನಂದೀಶ್ ಹಂಚೆ ಸಮಾರೋಪ ಭಾಷಣ ಮಾಡಲಿದ್ದಾರೆ. ಟಿ.ಎಸ್.ರಾಜಪ್ಪ ಸಮ್ಮೇನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಪದ್ಮಶ್ರೀ ಪುರಸ್ಕøತ ಕೆ.ವಿ.ಸಂಪತ್‍ಕುಮಾರ್ -ಜಯಲಕ್ಷ್ಮಿ ದಂಪತಿಯನ್ನು ಸನ್ಮಾನಿಸಲಾಗುತ್ತದೆ ಎಂದರು.

Translate »