ಮೈಸೂರು: ಬಸವಣ್ಣ ನವರು 12ನೇ ಶತಮಾನದಲ್ಲಿ ಆಯೋಜಿ ಸಿದ್ದ `ಪ್ರಮಥರ ಗಣಮೇಳ’ ಮಾದರಿ ಯಲ್ಲಿ ಎಲ್ಲಾ ಜಾತಿ-ಜನಾಂಗದ `ಅಸಂಖ್ಯ ಪ್ರಮಥ ಗಣಮೇಳ’ ಹಾಗೂ `ಸರ್ವ ಶರಣರ ಸಮ್ಮೇಳನ’ವನ್ನು ಫೆ.16ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬೆಂಗಳೂರಿನ ನಂದಿ ಗ್ರೌಂಡ್ಸ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಸವ ಕೇಂದ್ರಗಳು, ಬಸವ ಸಂಘಟನೆ…
ಫೆ.25ರಂದು ಸಂತ ಶ್ರೀ ಸೇವಾಲಾಲ್ ಜಯಂತಿ
February 13, 2020ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬಂಜಾರ(ಲಂಬಾಣಿ) ಸೇವಾ ಸಂಘದವರ ಸಂಯುಕ್ತಾಶ್ರಯದಲ್ಲಿ 281ನೇ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಫೆ.25ರಂದು ಸಂಜೆ 4 ಗಂಟೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋ ಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ತಸ್ನೀಂ, ಸಂಸದರಾದ ಪ್ರತಾಪ್‍ಸಿಂಹ, ವಿ.ಶ್ರೀನಿವಾಸ್ ಪ್ರಸಾದ್, ಸುಮಲತಾ ಅಂಬರೀಷ್, ಶಾಸಕ ತನ್ವೀರ್ ಸೇಠ್, ಶಾಸಕ ಜಿ.ಟಿ.ದೇವೇ ಗೌಡ, ಮರಿತಿಬ್ಬೇಗೌಡ, ಎಸ್.ಎ.ರಾಮದಾಸ್, ಕೆ.ವಿ.ನಾರಾಯಣಸ್ವಾಮಿ, ಅಶ್ವಿನ್…
ಉದ್ಯಮಿ ಆಗಲಿಚ್ಛಿಸುವವರಿಗೆ ಫೆ.25ಕ್ಕೆ `ದಿ ಪಿಚ್’ ಸ್ಪರ್ಧೆ
February 13, 2020ಮೈಸೂರು: ಉದ್ಯಮಿಯಾಗಲು ಬಯಸಿ, ಹೊಸ ವ್ಯವಹಾರ ಪರಿಕಲ್ಪನೆ ಹೊಂದಿರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲು `ವಿಪ್ರ ಪ್ರೊಫೆಷನಲ್ ಫೋರಂ’(ವಿಪಿಎಫ್), `ದಿ ಪಿಚ್’ ಎಂಬ ಸ್ಪರ್ಧಾ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಆಯ್ಕೆಯಾಗುವ 5 ಮಂದಿಗೆ ಉದ್ಯಮಿಯಾಗಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಫೆ.25ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ವಿಪಿಎಫ್ ನಿರ್ದೇಶಕ ಎಸ್.ವಿ.ವೆಂಕಟೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನವೋದ್ಯಮಿಗಳಾಗುವ ಅರ್ಹತೆ ಇರುವವರನ್ನು ಸ್ಪರ್ಧಾತ್ಮಕ ಚಟುವಟಿಕೆ ಮೂಲಕ ಗುರುತಿಸುವ ಉದ್ದೇಶ ಇದಾಗಿದೆ. ಮೈಸೂರಿನ ರ್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನಲ್ಲಿ ಅಂದು ಬೆಳಿಗ್ಗೆ…
ನಾಳೆಯಿಂದ 2 ದಿನ ಬ್ಯಾಂಕಿಂಗ್ ವಿಚಾರ ಸಂಕಿರಣ
February 13, 2020ಮೈಸೂರು: ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದಿಂದ ಫೆ.14 ಮತ್ತು 15ರಂದು `ಬ್ಯಾಂಕಿಂಗ್, ಹಣಕಾಸು, ವಿಮಾ ಕ್ಷೇತ್ರಗಳ ಸುಧಾರಣೆ: ಸಮಸ್ಯೆಗಳು ಹಾಗೂ ಸವಾಲುಗಳು’ ಕುರಿತು 2 ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಮರೀಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯ ಲಿದೆ. ಫೆ.14ರ ಬೆಳಿಗ್ಗೆ 9.30ಕ್ಕೆ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ರಾಮಚಂದ್ರಗೌಡ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಡೈರೆಕ್ಟ್ ಟ್ಯಾಕ್ಸ್…
ನೂತನ ಸಚಿವರಿಗೆ ಖಾತೆ ಹಂಚಿಕೆ
February 11, 2020ಬೆಂಗಳೂರು,ಫೆ.10-ವಿಧಾನಸಭೆ ಉಪ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ 10 ಶಾಸಕರನ್ನು ಫೆಬ್ರ ವರಿ 6ರಂದು ಸಂಪುಟಕ್ಕೆ ಸೇರಿಸಿಕೊಂಡ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅವರೆಲ್ಲ ರಿಗೂ ನಾಲ್ಕು ದಿನಗಳ ನಂತರ ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಅದೇ ವೇಳೆ ಹಾಲಿ ಶಾಸಕರಾಗಿ ದ್ದವರ ಕೆಲವು ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದ ಜಲಸಂಪ ನ್ಮೂಲ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿ ದಂತೆ ಆರೋಗ್ಯ ಖಾತೆ ಬಯಸಿದ್ದ ಡಾ.ಕೆ.ಸುಧಾ ಕರ್, ಬೆಂಗಳೂರು…
ಮೈಸೂರು ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ನೆಲೆ ಸ್ಥಳಾಂತರವಿಲ್ಲ
February 11, 2020ಮೈಸೂರು, ಫೆ.10 – ಬೆಂಗಳೂರಿನ ಯಲ ಹಂಕದಲ್ಲಿರುವ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ತರಬೇತಿ ಕೇಂದ್ರ ವನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾ ಣಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್‍ದೀಪ್ ಸಿಂಗ್‍ಪುರಿ ಭರವಸೆ ನೀಡಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಇಂದು ಬೆಳಿಗ್ಗೆ ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿ, ಐಎಎಫ್ ಹೆಲಿಕಾಪ್ಟರ್ ತರಬೇತಿ ಕೇಂದ್ರವನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸದಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಭರವಸೆ ನೀಡಿದ್ದಾರೆ. ಇದರೊಂ ದಿಗೆ…
ಅರಣ್ಯದಂಚಿನ ಕುಗ್ರಾಮ ಪಚ್ಚೇದೊಡ್ಡಿ ಶಾಲೆಯಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ವಾಸ್ತವ್ಯ
February 11, 2020ಹನೂರು, ಫೆ.10(ಸೋಮು)- ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಸೋಮವಾರ ತಾಲೂಕಿನ ಕಾಡಂಚಿನ ಪಚ್ಚೇದೊಡ್ಡಿ ಗ್ರಾಮದಲ್ಲಿ ಶಾಲಾ ವಾಸ್ತವ್ಯ ಹೂಡಿದ್ದು, ಅವರಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಸಂಜೆ 7 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಆರತಿ ಬೆಳಗುವ ಮೂಲಕ ಸ್ವಾಗತ ನೀಡಿದರು. ಗ್ರಾಮದ ಎಲ್ಲಾ ಬೀದಿ ರಸ್ತೆ ಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ…
ಇಂದು ಮತ ಎಣಿಕೆ: ಒಂದೇ ಗಂಟೆಯಲ್ಲಿ ಫಲಿತಾಂಶ ಪ್ರಕಟ
February 11, 2020ಮೈಸೂರು, ಫೆ. 10(ಆರ್‍ಕೆ)- ಭಾನುವಾರ ನಡೆದ ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡ್ ಉಪ ಚುನಾವಣೆ ಮತ್ತು ಹುಣಸೂರು ನಗರಸಭೆಯ 31 ವಾರ್ಡ್‍ಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದೆ. ಪಾಲಿಕೆ ಉಪಚುನಾವಣೆಯ ಮತ ಎಣಿಕೆಯು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ಕಾರಿ ಸಂಸ್ಕøತ ಪಾಠಶಾಲೆಯಲ್ಲಿ ನಾಳೆ (ಫೆ. 11) ನಡೆದರೆ, ಹುಣ ಸೂರು ನಗರಸಭೆ ಚುನಾವಣೆಯ ಮತ ಎಣಿಕೆ ಅಲ್ಲಿನ ನಗರಸಭಾ ಕಾರ್ಯಾಲಯ ದಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂ ತೆರೆದು ಇವಿಎಂಗಳಲ್ಲಿ ದಾಖ ಲಾಗಿರುವ…
ಫಲಿತಾಂಶ ಮುನ್ನಾ ದಿನ ರಸ್ತೆ ಅಪಘಾತದಲ್ಲಿ ಹುಣಸೂರು ನಗರಸಭೆ ಜೆಡಿಎಸ್ ಅಭ್ಯರ್ಥಿ ಸಾವು
February 11, 2020ಹುಣಸೂರು, ಫೆ. 10(ಕೆಕೆ)- ಹುಣಸೂರು ನಗರಸಭೆಯ 17ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಹೊನ್ನಲಗಯ್ಯ(54) ರಸ್ತೆ ಅಪಘಾತದಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ನಗರಸಭೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು, ಮಂಗಳವಾರ ನಡೆಯಲಿ ರುವ ಮತ ಎಣಿಕೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶಕ್ಕೂ ಮುನ್ನವೇ ಅವರು ದುರಂತ ಸಾವಿಗೀಡಾಗಿದ್ದಾರೆ. ಹುಣಸೂರು ನಗರ ಹೊರವಲಯದ ಬಾಚಳ್ಳಿ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿದ್ದ ಪತ್ನಿಯನ್ನು ಕರೆತರಲು ಸೋಮವಾರ ಸಂಜೆ ಬೈಕ್‍ನಲ್ಲಿ (ಕೆಎ 09-ಹೆಚ್‍ಜೆ 2910) ತೆರಳುತ್ತಿದ್ದಾಗ ಚಿಕ್ಕಹುಣಸೂರು ಕೆರೆ ಬಳಿನಿಯಂತ್ರಣ…
ಮೀಸಲಾತಿ ಮಾನವ ಹಕ್ಕಾಗಿ ಪರಿಣಮಿಸಿದೆ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಪ್ರತಿಪಾದನೆ
February 11, 2020ಮೈಸೂರು,ಫೆ.10(ಎಂಟಿವೈ)- ಮೀಸಲಾತಿ ಮಾನವ ಹಕ್ಕಾಗಿ ಮಾರ್ಪಟ್ಟಿರುವ ಕಾಲಘಟ್ಟದಲ್ಲಿ ಸುಪ್ರಿಂ ಕೋರ್ಟ್ ಇತ್ತೀಚೆಗೆ `ಮೀಸಲಾತಿ ಮೂಲಭೂತ ಹಕ್ಕಲ್ಲ’ ಎಂದು ನೀಡಿರುವ ತೀರ್ಪು ಅತೀವ ನೋವನ್ನು ತಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವಿಷಾದಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ತಮ್ಮದೇ ನೇತೃತ್ವದ ಆಯೋಗವು ಸೋಮವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಮೈಸೂರು ವಿಭಾಗ ಮಟ್ಟದ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ…










