ಮೈಸೂರು, ಫೆ.8(ಪಿಎಂ)- ಆಯಿಷ್ (ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕ್ಲಾಥಾನ್‍ನಲ್ಲಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನ ಹಾಗೂ ಫೆ.28ರಿಂದ ಮಾ.1 ರವರೆಗೆ ನಡೆಯುವ ಸಂಸ್ಥೆಯ ಆಯಿಷ್ ಆವಾಜ್ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಆರಂಭಗೊಂಡ ಸೈಕ್ಲಾ ಥಾನ್, ಚಾಮರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ವೃತ್ತ, ಗಾಂಧಿ…
ಫೆ.24ರೊಳಗೆ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಿ: ಪೂರ್ಣಿಮಾ
February 9, 2020ಮೈಸೂರು,ಫೆ.8(ವೈಡಿಎಸ್)-ಪಿಎಂ ಕಿಸಾನ್ ಯೋಜನೆಯಡಿ ರೈತರು ಹೆಸರು ನೋಂದಾಯಿಸಿ ಕೊಳ್ಳಲು ಫೆ.24 ಕೊನೆ ದಿನ ಎಂದು ಎಡಿಸಿ ಪೂರ್ಣಿಮಾ ಡಿಸಿ ಕಚೇರಿಯಲ್ಲಿ ನಡೆದ ಗೋಷ್ಠಿಯಲ್ಲಿ ಹೇಳಿದರು. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫೆ.24 ರೊಳಗೆ 1 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು (ಬೆಳೆ ಸಾಲ) ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿ ಸಲು ಸರ್ಕಾರ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಹೊರಗುಳಿದ ರೈತರು ಫೆ.24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. ದೇಶಾದ್ಯಂತ…
`ಉನ್ನತ ಹುದ್ದೆಗೇರಿದಾಗ ಜನಪರ ನಿರ್ಧಾರಗಳು ಬಹಳ ಮುಖ್ಯ’
February 9, 2020ಮೈಸೂರು ಫೆ.8(ಎಸ್‍ಪಿಎನ್)- ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಕೆಲಸ ಪಡೆದು ಹುದ್ದೆಗಳನ್ನು ಅಲಂಕರಿಸಿದ ಬಳಿಕ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು. ಮೈಸೂರು ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ವತಿಯಿಂದ ಕರ್ನಾಟಕ ಆಡಳಿತ ಸೇವೆಗೆ ನೂತನವಾಗಿ ಆಯ್ಕೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು. ಸಮಾಜದೊಂದಿಗೆ ಬೆರೆಯದೇ ಒಂಟಿಯಾಗಿದ್ದರೆ, ಸಮಾಜದಿಂದ ದೂರವಾಗುತ್ತೇವೆ. ಆಗ ಜನರ ಭಾವನೆಗಳನ್ನು ಅರಿತು ಜನಪರ ಸೇವೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಉನ್ನತ ಹುದ್ದೆಗಳಿಗೆ…
ಮೂಳೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
February 9, 2020ಮೈಸೂರು,ಫೆ.8(ಪಿಎಂ)-ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ 9 ವರ್ಷದ ಬಾಲ ಕಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಕ್ಸ್ಟ್ರಾಕಾಪೆರ್Çರಿಯಲ್ ರೇಡಿಯೊಥೆರಪಿ ಎಂಬ ಅತ್ಯಾಧುನಿಕ ವೈದ್ಯಕೀಯ ತಂತ್ರ ಜ್ಞಾನ ವಿಧಾನ ಬಳಸಿ, ಕಾಯಿಲೆ ಗುಣ ಪಡಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಂ.ಬಿ.ಸುಮನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ವಿಧಾನವನ್ನು ಯಶಸ್ವಿಯಾಗಿ ಬಳಸಿದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪಾತ್ರವಾಗಿದೆ ಎಂದರು. 3ನೇ ತರಗತಿ ಬಾಲಕಿಯನ್ನು ಬಲಗಾಲಿನಲ್ಲಿ ನೋವು…
ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ
February 9, 2020ಮೈಸೂರು, ಫೆ.8(ಪಿಎಂ)- ಈಗಿರುವ ಮೀಸಲಾತಿ ಪದ್ಧತಿ ಬದಲಿಗೆ ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೆ ತರಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿದೆ. ಇದಕ್ಕೆ ನಮ್ಮ ವಿರೋಧವಿದೆ. ನಾವು ಮೀಸಲು ಕೊಡಿ ಎಂದು ಕೇಳಿಲ್ಲ. ಆದಿ ಕಾಲದಿಂದ ಇಂದಿಗೂ ಅಸ್ಪøಶ್ಯತೆ ಜಾರಿಯಲ್ಲಿದೆ. ಜಾತಿ-ಧರ್ಮದ ಹೆಸರಿನಲ್ಲಿ ದೌರ್ಜನ್ಯ ಇಂದಿಗೂ ನಡೆಯುತ್ತಲೇ ಇವೆ. ಈ ನಡುವೆ ಮೀಸಲಾತಿ ಪದ್ಧತಿ ತೆಗೆದು ಹಾಕುವ ಮಾತುಗಳು…
ಪಡುವಾರಹಳ್ಳಿ ರಸ್ತೆಗಳ ಅಭಿವೃದ್ಧಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ
February 8, 2020ಮೈಸೂರು: ಮೈಸೂರಿನ ಪಡುವಾರಹಳ್ಳಿಯಲ್ಲಿ ಎರಡು ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಟೆಂಪಲ್ ರಸ್ತೆಯಿಂದ ಹುಣಸೂರು ಹೆದ್ದಾರಿಯ ಸಿಗ್ನಲ್ ಲೈಟ್ ಸರ್ಕಲ್‍ವ ರೆಗೆ 35 ಲಕ್ಷ ರೂ. ವೆಚ್ಚದಲ್ಲಿ ಪಡುವಾರ ಹಳ್ಳಿ 6ನೇ ಮುಖ್ಯ ರಸ್ತೆಗೆ ಮೆಟ್ಲಿಂಗ್ ಮಾಡಿ ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಅದೇ ರೀತಿ ವಾಲ್ಮೀಕಿ ರಸ್ತೆಯಿಂದ ಮಾತೃ ಮಂಡಲಿ ಸರ್ಕಲ್‍ವರೆಗಿನ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶಾಸಕರು ಚಾಲನೆ ನೀಡಿದರು….
ಅವಹೇಳನಕಾರಿ ಹೇಳಿಕೆ: ಸಂಸದ ಹೆಗಡೆ ವಿರುದ್ಧ ಮೈಸೂರು ಡಿಸಿ, ಎಸ್‍ಪಿಗಿಂದು ಕಾಂಗ್ರೆಸ್ ದೂರು
February 8, 2020ಮೈಸೂರು: ಪದೇ ಪದೆ ಅವ ಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೆ.8ರ ಬೆಳಿಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಲಿದೆ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ತಿಳಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಸಂಸದರಾಗಿ ಜವಾಬ್ದಾರಿ ಯುತ ಸ್ಥಾನದಲ್ಲಿರುವ ಅನಂತ್‍ಕುಮಾರ್ ಹೆಗಡೆ, ಬೇಕೆಂದೇ ಸಮಾಜದಲ್ಲಿ ಗದ್ದಲ ಎಬ್ಬಿಸುವ…
ಇಂದಿನಿಂದ `ಭವನೋತ್ಸವ’ ಕಾರ್ಯಕ್ರಮ
February 8, 2020ಮೈಸೂರು: ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾ ಭವನ, ಮೈಸೂರು ಕೇಂದ್ರದ ಕಲಾಭಾರತಿ ವಿಭಾಗದ ವತಿಯಿಂದ ಭಾರತೀಯ ವಿದ್ಯಾಭವನ ಸಂಸ್ಥಾಪಕರಾದ ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 132ನೇ ಜನ್ಮೋತ್ಸವದ ಅಂಗವಾಗಿ ಫೆ.8 ಮತ್ತು 9ರಂದು ಭವನೋತ್ಸವ ಕಾರ್ಯ ಕ್ರಮವನ್ನು ಬಿವಿಬಿಯ ಪ್ರೊ.ವೈ.ಟಿ.ತಾತಾಚಾರಿ ಸಭಾಂ ಗಣದಲ್ಲಿ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರಭಾರ ಉಪಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಭಾರತೀಯ ವಿದ್ಯಾಭವನದ…
ರಾಷ್ಟ್ರೀಯ ಕಾಲೇಜು ಉತ್ಸವ ‘ಮಹಮ್-2020′ ಚಾಲನೆ
February 8, 2020ಮೈಸೂರು: ಮೈಸೂರಿನ ಪ್ರತಿಷ್ಠಿತ ಎಸ್‍ಬಿಆರ್‍ಆರ್ ಮಹಾಜನ ಕಾಲೇಜಿನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಾಲೇಜು ಉತ್ಸವ ‘ಮಹಮ್-2020′ ಉದ್ಘಾಟನೆಯನ್ನು ಮೈಸೂರಿನ ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಹಾಜನ ವಿದ್ಯಾಸಂಸ್ಥೆ ಇಡೀ ಮೈಸೂರಿನಲ್ಲೇ ತುಂಬಾ ಹಳೆಯದಾದ ಪ್ರತಿಷ್ಠಿತ ಸಂಸ್ಥೆ. ಈ ಸಮಾರಂಭಕ್ಕೆ ಆಗಮಿಸಿರುವುದು ನನಗೆ ಹೆಮ್ಮೆಯಾಗುತ್ತದೆ. ಪ್ರಪಂಚದಲ್ಲಿ ಮನುಷ್ಯನ ಸೃಷ್ಠಿ ವಿಕಾಸ ಮತ್ತು ಉಗಮ ಒಂದು ಅದ್ಭುತ. ಪ್ರಕೃತಿ ಯಿಂದ ಮನುಷ್ಯ ಬಹಳಷ್ಟು ಪಾಠ ಗಳನ್ನು ಕಲಿಯುತ್ತಾನೆ. ಮನುಷ್ಯ ನಿಗೆ ಮಾತು ಬಹಳ ದೊಡ್ಡ ವಿಸ್ಮಯ….
ಬಜೆಟ್‍ನಲ್ಲಿ ರೈತರ ಬೇಡಿಕೆ ಈಡೇರಿಸದಿದ್ದರೆ ಹೋರಾಟ
February 8, 2020ಮೈಸೂರು: ರಾಜ್ಯದಲ್ಲಿ ರೈತರು, ಕಾರ್ಮಿಕರ ಸ್ಥಿತಿ ಶೋಚನೀಯ ವಾಗಿದ್ದು, ರಾಜ್ಯ ಸರ್ಕಾರ 2020ರ ಮುಂಗಡಪತ್ರದಲ್ಲಿ ರೈತರ ಬೇಡಿಕೆಗಳಿಗೆ ಅನುದಾನ ಕಾಯ್ದಿರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಜವರೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಈವರೆಗಿನ ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರ ಹಿತ ರಕ್ಷಿಸುವ ಯೋಜನೆ ರೂಪಿಸುವಲ್ಲಿ ವಿಫಲವಾಗಿವೆ. ಇದರಿಂದ ರೈತರ ಆತ್ಮಹತ್ಯೆ ನಡೆಯುತ್ತಲೇ ಇವೆ. ಈ ನಡುವೆ ಬೆಲೆ ಕುಸಿತ, ಅತಿವೃಷ್ಟಿ, ಬರ, ಉತ್ಪಾದನಾ ವೆಚ್ಚ ಹೆಚ್ಚಳ ರೈತವರ್ಗ ತತ್ತರಿಸಿದೆ. ಪಿಎಲ್‍ಡಿ…










