ಮೂಳೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮೈಸೂರು

ಮೂಳೆ ಕ್ಯಾನ್ಸರ್‍ಗೆ ತುತ್ತಾಗಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

February 9, 2020

ಮೈಸೂರು,ಫೆ.8(ಪಿಎಂ)-ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ 9 ವರ್ಷದ ಬಾಲ ಕಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಕ್ಸ್ಟ್ರಾಕಾಪೆರ್Çರಿಯಲ್ ರೇಡಿಯೊಥೆರಪಿ ಎಂಬ ಅತ್ಯಾಧುನಿಕ ವೈದ್ಯಕೀಯ ತಂತ್ರ ಜ್ಞಾನ ವಿಧಾನ ಬಳಸಿ, ಕಾಯಿಲೆ ಗುಣ ಪಡಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಂ.ಬಿ.ಸುಮನ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ವಿಧಾನವನ್ನು ಯಶಸ್ವಿಯಾಗಿ ಬಳಸಿದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪಾತ್ರವಾಗಿದೆ ಎಂದರು.

3ನೇ ತರಗತಿ ಬಾಲಕಿಯನ್ನು ಬಲಗಾಲಿನಲ್ಲಿ ನೋವು ಮತ್ತು ಊತದ ಸಮಸ್ಯೆ ಗಳಿವೆ ಎಂದು ನಮ್ಮ ಆಸ್ಪತ್ರೆಗೆ ಕರೆತರಲಾಯಿತು. ಬಹಳ ಅಪರೂಪದ ಕ್ಯಾನ್ಸರ್ ಆದ ರೈಟ್ ಟಿಬಿಯಾದ ಎವಿಂಗ್ಸ್ ಸರ್ಕೋಮಾ ಕಾಯಿಲೆಯಿಂದ ಬಾಲಕಿ ಬಳಲುತ್ತಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿತು ಎಂದು ತಿಳಿಸಿದರು.

ಸಾಂಪ್ರದಾಯಿಕ ವಿಧಾನದಲ್ಲಿ ಕ್ಯಾನ್ಸರ್ ಪೀಡಿತ ಮೂಳೆಯನ್ನು ದೇಹದಿಂದ ಬೇರ್ಪಡಿಸಿ ಕೃತಕ ಮೂಳೆಯನ್ನು ಅಳವಡಿಸಲಾಗುತ್ತದೆ. ಆದರೆ, ಈ ಅತ್ಯಾಧುನಿಕ ಎಕ್ಸ್ಟ್ರಾಕಾಪೆರ್Çರಿಯಲ್ ರೇಡಿಯೊಥೆರಪಿ ವಿಧಾನದಂತೆ ಬಾಲಕಿಯ ಕ್ಯಾನ್ಸರ್ ಪೀಡಿತ ಮೂಳೆಯನ್ನು ದೇಹದಿಂದ ಬೇರ್ಪಡಿಸಿ, ಬರಡಾದ ರೀತಿಯಲ್ಲಿ ವಿಕಿರಣಕ್ಕೆ ಒಳಪಡಿಸಲಾಯಿತು. ಕ್ಯಾನ್ಸರ್ ಕೋಶಗಳು ನಾಶವಾದ ನಂತರ ಅದೇ ಮೂಳೆಯನ್ನು ಸ್ವ-ಸ್ಥಾನದಲ್ಲಿ ಮರು ಜೋಡಣೆ ಮಾಡಲಾಗಿದೆ ಎಂದರು.

ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಲೋಹದ ಮೂಳೆಯನ್ನು ಸೇರಿಸಲಾಗುತ್ತದೆ. ಆದರೆ, ಎಕ್ಸ್ಟ್ರಾಕಾಪೆರ್Çರಿಯಲ್ ರೇಡಿಯೊಥೆರಪಿಯಲ್ಲಿ ನೈಸರ್ಗಿಕ ಮೂಳೆಗಳನ್ನು ಉಳಿಸಿಕೊಳ್ಳಲಾಗುತ್ತದೆ. ಇದು ಹೆಚ್ಚು ಜೈವಿಕ ಕಾರ್ಯ ವಿಧಾನವಾಗಿದೆ ಎಂದರು.

ಆಸ್ಪತ್ರೆಯ ಲಕೋಲಾಜಿಸ್ಟ್ ಡಾ.ಕೆ.ಆರ್.ಸುಹಾಸ್ ಮಾತನಾಡಿ, ಮೂಳೆ ಕ್ಯಾನ್ಸರ್ ಎಲ್ಲಾ ರೀತಿಯ ಕ್ಯಾನ್ಸರ್‍ಗಳಲ್ಲಿ ಕೇವಲ ಶೇ.1ರಿಂದ3ರಷ್ಟು ಅಪರೂಪದ ಗಡ್ಡೆಗಳಾಗಿರು ತ್ತವೆ. ಕೆಲವು ವರ್ಷಗಳ ಹಿಂದೆ ಮೂಳೆ ಕ್ಯಾನ್ಸರ್ ಅನ್ನು ಭೀಕರ ರೋಗವೆಂದು ಪರಿ ಗಣಿಸಲಾಗಿತ್ತು. ಇಂದು ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳು, ಕೀಮೊಥೆರಪಿ ಮತ್ತು ರೇಡಿಯೊಥೆರಪಿಗಳ ಸಹಾಯದಿಂದ 90 ಪ್ರತಿಶತಕ್ಕಿಂತ ಹೆಚ್ಚು ರೋಗಿಗಳಲ್ಲಿ ಅಂಗವನ್ನು ಉಳಿಸಲು ಮತ್ತು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ 60ರಿಂದ80ರಷ್ಟು ಪ್ರತಿಶತದಷ್ಟು ರೋಗಿಗಳಲ್ಲಿ ಗುಣಪಡಿಸಲು ಸಾಧ್ಯವಿದೆ. ಈ ಹಿಂದೆ ಕೇವಲ 20 ಪ್ರತಿಶತ ಮಾತ್ರ ಸಾಧ್ಯವಾಗುತ್ತಿತ್ತು ಎಂದರು. ಆಸ್ಪತ್ರೆಯ ಮಾರುಕಟ್ಟೆ ವ್ಯವಸ್ಥಾಪಕ ಕೆ.ವಿ.ಕಾಮತ್ ಗೋಷ್ಠಿಯಲ್ಲಿದ್ದರು.

Translate »