`ಉನ್ನತ ಹುದ್ದೆಗೇರಿದಾಗ ಜನಪರ ನಿರ್ಧಾರಗಳು ಬಹಳ ಮುಖ್ಯ’
ಮೈಸೂರು

`ಉನ್ನತ ಹುದ್ದೆಗೇರಿದಾಗ ಜನಪರ ನಿರ್ಧಾರಗಳು ಬಹಳ ಮುಖ್ಯ’

February 9, 2020

ಮೈಸೂರು ಫೆ.8(ಎಸ್‍ಪಿಎನ್)- ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಕೆಲಸ ಪಡೆದು ಹುದ್ದೆಗಳನ್ನು ಅಲಂಕರಿಸಿದ ಬಳಿಕ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು.

ಮೈಸೂರು ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ವತಿಯಿಂದ ಕರ್ನಾಟಕ ಆಡಳಿತ ಸೇವೆಗೆ ನೂತನವಾಗಿ ಆಯ್ಕೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು. ಸಮಾಜದೊಂದಿಗೆ ಬೆರೆಯದೇ ಒಂಟಿಯಾಗಿದ್ದರೆ, ಸಮಾಜದಿಂದ ದೂರವಾಗುತ್ತೇವೆ. ಆಗ ಜನರ ಭಾವನೆಗಳನ್ನು ಅರಿತು ಜನಪರ ಸೇವೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಉನ್ನತ ಹುದ್ದೆಗಳಿಗೆ ಆಯ್ಕೆ ಯಾದವರಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅವನ್ನು ಕಡಿಮೆ ಸಮಯದಲ್ಲಿ ಎದುರಿಸುವ, ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಚಾಕಚಕ್ಯತೆ ಬೆಳಸಿ ಕೊಳ್ಳಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ ಎಂದರು.

13 ಅಧಿಕಾರಿಗಳಿಗೆ ಅಭಿನಂದನೆ: ಇದೇ ವೇಳೆ ಜಿಲ್ಲಾ ಖಜಾನೆ ಅಧಿಕಾರಿ ಜೆ.ಪಿ.ಸುಷ್ಮಾ, ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಟಿ.ಆರ್.ಮಂಜುನಾಥ್,  ಡಾ.ಭಾವನಾ, ಎಂ.ಮಾನಸ, ಆರ್.ಎಸ್.ಪೂಜಾ, ಎಂ.ಬಿ.ಚೆನ್ನಕೇಶವ, ಪೌರಾಡಳಿತ ಇಲಾಖೆಯ ಮುಖ್ಯಾಧಿಕಾರಿ ಎಸ್.ಬಿ.ಯಶವಂತ್‍ಕುಮಾರ್, ಡಿವೈಎಸ್‍ಪಿ ಅನೂಷಾರಾಣಿ, ಎಸ್.ಡಿ. ಸುಪ್ರೀತ್ ದೇವ್, ಕೆ.ಜೆ.ಮಂಜುಳಾ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಕೆ.ಕೆ.ಕಿರಣ್‍ಕುಮಾರ್, ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ವಿ.ಎಲ್.ನಾಗರಾಜ್ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್, ಎಡಿಸಿ ಬಿ.ಆರ್.ಪೂರ್ಣಿಮಾ, ಪ್ರೊ.ಎಂ. ಕೃಷ್ಣೇಗೌಡ, ಹೆಚ್.ಬಾಲಕೃಷ್ಣ, ರಾ.ರಾಮಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ. ಎಸ್‍ಬಿಎಂ ಪ್ರಸನ್ನ ಉಪಸ್ಥಿತರಿದ್ದರು.

 

Translate »