ಫೆ.24ರೊಳಗೆ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಿ: ಪೂರ್ಣಿಮಾ
ಮೈಸೂರು

ಫೆ.24ರೊಳಗೆ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಿ: ಪೂರ್ಣಿಮಾ

February 9, 2020

ಮೈಸೂರು,ಫೆ.8(ವೈಡಿಎಸ್)-ಪಿಎಂ ಕಿಸಾನ್ ಯೋಜನೆಯಡಿ ರೈತರು ಹೆಸರು ನೋಂದಾಯಿಸಿ ಕೊಳ್ಳಲು ಫೆ.24 ಕೊನೆ ದಿನ ಎಂದು ಎಡಿಸಿ ಪೂರ್ಣಿಮಾ ಡಿಸಿ ಕಚೇರಿಯಲ್ಲಿ ನಡೆದ ಗೋಷ್ಠಿಯಲ್ಲಿ ಹೇಳಿದರು.

ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಫೆ.24 ರೊಳಗೆ 1 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು (ಬೆಳೆ ಸಾಲ) ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿ ಸಲು ಸರ್ಕಾರ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಹೊರಗುಳಿದ ರೈತರು ಫೆ.24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿ ಕೊಂಡಿದ್ದು, ಇದರಲ್ಲಿ 6.76 ಕೋಟಿ ಫಲಾನುಭವಿ ಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ ಪಡೆಯಲು) ಪಡೆದಿದ್ದು, 2.47 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಇದ್ದಾರೆ. ಜಿಲ್ಲೆಯಲ್ಲಿ 2,04 ಲಕ್ಷ ರೈತರು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರು ತಮ್ಮ ಸೇವಾ ವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಬೆಳೆಸಾಲ ಪಡೆಯ ಬಹುದು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ಮಾತನಾಡಿ, ರೈತರಿಗೆ ಮಂಜೂರಾದ ಬೆಳೆ ಸಾಲದ ಹಣವನ್ನು ಖಾತೆಗೆ ಜಮಾ ಮಾಡಿ, ಅಷ್ಟೂ ಹಣಕ್ಕೂ ಬಡ್ಡಿ ವಿಧಿಸಲಾಗುತ್ತಿತ್ತು. ಆದರೆ, ಈಗ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆ ಸಾಲವನ್ನು ಪಡೆದರೆ, ಬೆಳೆಗೆ ಎಷ್ಟು ಬೇಕೋ ಅಷ್ಟು ಹಣವನ್ನು ಮಾತ್ರವೇ ಎಟಿಎಂ ನಿಂದ ಪಡೆಯಬಹುದು. ನೀವು ಪಡೆದ ಹಣಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ರೈತರು ತಮ್ಮ ಕೃಷಿ ಅಗತ್ಯಕ್ಕೆ ಅನು ಗುಣವಾಗಿ ಇದನ್ನು ಬಳಕೆ ಮಾಡಬಹುದಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಇಲಾಖೆ ಅಧಿಕಾರಿ ಗಳ ನೆರವಿನೊಂದಿಗೆ ಬಿಟ್ಟು ಹೋಗಿರುವ ರೈತರ ಹೆಸ ರನ್ನು ನೋಂದಾಯಿಸುವ ಕೆಲಸ ಮಾಡುತ್ತಿದ್ದು, ಎಲ್ಲ ಸೇವಾವಲಯದ ಬ್ಯಾಂಕ್‍ಗಳು ಫೆ.24 ರವರೆಗೆ ಪ್ರತಿದಿನ ಎಷ್ಟು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುವ ಬಗ್ಗೆ ವರದಿ ನೀಡಬೇಕು ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಮಹಂತೇಶಪ್ಪ ಮಾತನಾಡಿ, ಜಿಲ್ಲೆಗೆ ಈ ಯೋಜನೆಯಡಿ 2 ಸಾವಿರ ರೂ.ಗಳಂತೆ ಮೊದಲ ಕಂತಿನಲ್ಲಿ 1,94,550 ರೈತರಿಗೆ, 2ನೇ ಕಂತಿನಲ್ಲಿ 1,85,881 ರೈತರಿಗೆ, 3ನೇ ಕಂತಿನಲ್ಲಿ 46 ರೈತರಿಗೆ ಸಹಾಯ ಧನ ಬಂದಿದ್ದು, ಸದ್ಯದಲ್ಲೇ ಉಳಿದವರಿಗೂ ಬರಲಿದೆ. ರಾಜ್ಯ ಸರ್ಕಾರದ ಮೊದಲ ಕಂತಿನಲ್ಲಿ 1,23,566 ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

Translate »