ಆಯಿಷ್‍ನಿಂದ ಸೈಕ್ಲಾಥಾನ್; ನೂರಾರು ವಿದ್ಯಾರ್ಥಿಗಳು ಭಾಗಿ
ಮೈಸೂರು

ಆಯಿಷ್‍ನಿಂದ ಸೈಕ್ಲಾಥಾನ್; ನೂರಾರು ವಿದ್ಯಾರ್ಥಿಗಳು ಭಾಗಿ

February 9, 2020

ಮೈಸೂರು, ಫೆ.8(ಪಿಎಂ)- ಆಯಿಷ್ (ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ) ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸೈಕ್ಲಾಥಾನ್‍ನಲ್ಲಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನ ಹಾಗೂ ಫೆ.28ರಿಂದ ಮಾ.1 ರವರೆಗೆ ನಡೆಯುವ ಸಂಸ್ಥೆಯ ಆಯಿಷ್ ಆವಾಜ್ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಆರಂಭಗೊಂಡ ಸೈಕ್ಲಾ ಥಾನ್, ಚಾಮರಾಜ ಒಡೆಯರ್ ವೃತ್ತ, ದೊಡ್ಡ ಗಡಿಯಾರ ವೃತ್ತ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಚಿಕ್ಕ ಗಡಿಯಾರ ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಡಿಸಿ ಕಚೇರಿ ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ ಮಾರ್ಗವಾಗಿ ಆಯಿಷ್ ಪಂಚವಟಿ ಆವರಣದಲ್ಲಿ ಅಂತ್ಯಗೊಂಡಿತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟ್ರಿಣ್ ಟ್ರಿಣ್ ಸೈಕಲ್ ಹಾಗೂ ತಮ್ಮ ಸ್ವಂತ ಸೈಕಲ್ ಗಳಲ್ಲಿ ಭಾಗವಹಿಸಿದ್ದರು.

ಚಾಲನೆ ನೀಡಿದ ಮುಖ್ಯ ಪೇದೆ: ದೇವ ರಾಜ ಪೆÇಲೀಸ್ ಠಾಣೆ ಮುಖ್ಯ ಪೇದೆ ರಮೇಶ್ ಸೈಕ್ಲಾಥಾನ್‍ಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಪ್ರತಿ ಬಾರಿ ಜಾಥಾ ಮತ್ತಿ ತರ ಕಾರ್ಯಕ್ರಮ ಆಯೋಜಿಸಿದ ವೇಳೆ ಸೂಕ್ತ ರಕ್ಷಣೆ, ಭದ್ರತೆಗೆ ದುಡಿಯುವ ಪೆÇಲೀಸ್ ಸಿಬ್ಬಂದಿ ಮೂಲಕ ಜಾಥಾಗೆ ಚಾಲನೆ ನೀಡಿಸಿದ್ದು ವಿಶೇಷವಾಗಿತ್ತು. ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ, ಪಿಆರ್‍ಓ ಕೀರ್ತಿ ಮತ್ತಿತರರು ಹಾಜರಿದ್ದರು.

Translate »