ಗ್ರಾಮೀಣರಿಗೆ, ಯುವಜನತೆಗೆ ಅಂಬೇಡ್ಕರ್ ತತ್ವ ಆದರ್ಶ ತಲುಪಿಸುವ ಕೆಲಸವಾಗಲಿ
ಮೈಸೂರು

ಗ್ರಾಮೀಣರಿಗೆ, ಯುವಜನತೆಗೆ ಅಂಬೇಡ್ಕರ್ ತತ್ವ ಆದರ್ಶ ತಲುಪಿಸುವ ಕೆಲಸವಾಗಲಿ

February 9, 2020

ಮೈಸೂರು ಮಾನಸ ಗಂಗೋತ್ರಿಯಲ್ಲಿ ವಿಶ್ವಜ್ಞಾನಿ ಸಭಾಂಗಣ ಉದ್ಘಾಟನೆ ಸಮಾರಂಭದಲ್ಲಿ ಎ.ಹೆಚ್.ವಿಶ್ವನಾಥ್
ಮೈಸೂರು,ಫೆ.8(ಪಿಎಂ)- ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ, ತತ್ವ, ಆದರ್ಶಗಳನ್ನು ಗ್ರಾಮೀಣ ಜನರು ಮತ್ತು ಯುವ ಸಮೂಹಕ್ಕೆ ತಲುಪಿಸುವ ಕೆಲಸ ವಾಗಬೇಕು ಎಂದು ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಿರ್ಮಿಸಿರುವ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ `ವಿಶ್ವ ಜ್ಞಾನಿ ಸಭಾಂಗಣ’ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ನಾವು ಅಂಬೇಡ್ಕರ್ ಅವರನ್ನು ಇಂದಿನ ಯುವ ಜನತೆಗೆ ಸಮರ್ಥವಾಗಿ ಪರಿಚಯಿಸುತ್ತಿಲ್ಲ. ಒಂದು ವೇಳೆ ಪರಿಚಯಿಸಿದರೂ ಕೇವಲ ಅವರ ಜೀವನದ ಒಂದು ಭಾಗವಾದ ಅಸ್ಪøಶ್ಯತೆಯ ನೋವುಂಡಿದ್ದನ್ನು ಮಾತ್ರ ತಿಳಿಸಲಾಗುತ್ತಿದೆ. ಅವರು ಜ್ಞಾನ ಸಂಪಾದನೆಗೆ ವಹಿ ಸಿದ ಶ್ರಮದ ಬಗ್ಗೆ ಹೆಚ್ಚು ಪರಿಚಯಿಸಬೇಕಿದೆ ಎಂದರು.

ಉನ್ನತ ಶಿಕ್ಷಣಕ್ಕಾಗಿ ಅಂಬೇಡ್ಕರ್ ಅವರು ವಿದೇಶಕ್ಕೆ ತೆರಳಲು ಶಾಹು ಮಹಾರಾಜ್ ನೆರವು ನೀಡಿದರು. ಇದು ಅವರು ಜ್ಞಾನ ಸಂಪಾದನೆಗೆ ಮಹತ್ವದ ನೆರವಾ ಯಿತು. ವಿಶ್ವ ಪರ್ಯಟನೆಯಿಂದಾಗಿ ಅವರು ಅಪಾರ ಅನುಭವ ಪಡೆದು ವಿಶ್ವಜ್ಞಾನಿಯಾದರು. ಅವರು ವಿದೇಶ ದಿಂದ ಬರುವಾಗ ಚಿನ್ನ, ಬೆಳ್ಳಿ ಅಥವಾ ಹಣ ತರ ಲಿಲ್ಲ. ಹಡಗಿನಲ್ಲಿ ಭಾರೀ ಸಂಖ್ಯೆಯ ಪುಸ್ತಕಗಳನ್ನು ತಂದರು. ಅವುಗಳ ಅಧ್ಯಯನ ನಡೆಸಿ, ಅಪಾರ ಜ್ಞಾನ ಹೊಂದಿದರು ಎಂದು ನೆನಪಿಸಿದರು.

ಅಪಾರವಾದ ಜ್ಞಾನ ಸಂಪಾದನೆಯಿಂದಾಗಿಯೇ ಅವರು ಸೂರ್ಯ, ಚಂದ್ರ ಇರುವವರೆಗೂ ನಮಗೆ ಬೇಕಾದಂತಹ ಸಂವಿಧಾನವನ್ನು ಕೊಟ್ಟರು. ನಮ್ಮನ್ನು ಯಾವುದೇ ಧರ್ಮ, ಜಾತಿ ಕಾಪಾಡುವುದಿಲ್ಲ. ಸ್ವತಂತ್ರ ಭಾರತದಲ್ಲಿ ನಮ್ಮನ್ನು ಕಾಪಾಡುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಎಂದು ಸ್ಮರಿಸಿದರು.

2011ರಲ್ಲಿ ಈ ಸಭಾಂಗಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವಾಗ ನಾನು ಸಂಸದನಾಗಿದ್ದೆ. ಅಲ್ಲದೆ, ಸಂಸದರ ನಿಧಿಯಿಂದ 25 ಲಕ್ಷ ರೂ. ಅನುದಾನ ಬಿಡು ಗಡೆ ಮಾಡಿಸಿದ್ದೆ. ಆಗ ನನ್ನಲ್ಲಿದ್ದ 1 ಕೋಟಿ ರೂ. ನಿಧಿ ಯನ್ನು ವಿವಿಧ ಕಾಮಗಾರಿಗಳಿಗೆ ಹಂಚಿದ್ದೆ. ಅವುಗಳಲ್ಲಿ ಎಷ್ಟು ಕೆಲಸ ನಡೆದಿದೆಯೋ ಗೊತ್ತಿಲ್ಲ. ಆದರೆ ಈ ಸಭಾಂಗಣಕ್ಕೆ ನೀಡಿದ್ದ ಹಣದ ಸದ್ಬಳಕೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಮಾತನಾಡಿ, ಅಂಬೇಡ್ಕರ್ ಅವರು ಜ್ಞಾನ, ಹೋರಾಟ ಮತ್ತು ಮಾನವೀಯ ಮೌಲ್ಯಗಳ ಪ್ರತೀಕದಂತೆ ಇದ್ದರು. ಅವರು ಕೇವಲ ಒಬ್ಬ ವ್ಯಕ್ತಿಯಾಗಿ ರಲಿಲ್ಲ. ಒಂದು ಶಕ್ತಿಯಾಗಿದ್ದರು. ಅವಕಾಶ ವಂಚಿತರಿಗೆ ಭರವಸೆ ಮೂಡಿಸಿದ ಬದುಕು ಅವರದು ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಂತೇ ಮನೋರ ಖ್ಖಿತ, ಭಂತೇ ಕಲ್ಯಾಣಸಿರಿ ಸಾನಿಧ್ಯ ವಹಿಸಿದ್ದರು. ಡಾ.ಅಂಬೇಡ್ಕರ್ ಫೌಂಡೇಷನ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶಕ ಡಿ.ಪಿ.ಮಾಝಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಮತ್ತಿತರರು ಹಾಜರಿದ್ದರು.

ಗಂಗೋತ್ರಿಯ 7ನೇ ಸಭಾಂಗಣ….
ಮಾನಸ ಗಂಗೋತ್ರಿಯಲ್ಲಿ ನಿರ್ಮಾಣಗೊಂಡಿ ರುವ 7ನೇ ಸಭಾಂಗಣ `ವಿಶ್ವಜ್ಞಾನಿ ಸಭಾಂಗಣ’ 300 ಆಸನಗಳೊಂದಿಗೆ ಸುಸಜ್ಜಿತವಾಗಿದೆ. ಅತ್ಯಾ ಧುನಿಕ ಧ್ವನಿ-ಬೆಳಕು ವ್ಯವಸ್ಥೆ ಒಳಗೊಂಡಿದೆ. ಡಾ. ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅಂಬೇ ಡ್ಕರ್ ಅವರ ಜನ್ಮದಿನ ಅಂಗವಾಗಿ ಇಂದು ಸಭಾಂ ಗಣ ಉದ್ಘಾಟಿಸಲಾಗಿದೆ. 2011ರಲ್ಲಿ ಅಂದಿನ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸಭಾಂ ಗಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಅಂದು ನಂಜನಗೂಡು ಶಾಸಕರಾಗಿದ್ದ ವಿ.ಶ್ರೀನಿ ವಾಸ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಅನುದಾನದಲ್ಲಿ ಹಂತ ಹಂತವಾಗಿ ಸಭಾಂಗಣ ನಿರ್ಮಾಣ ಮಾಡಲಾಗಿದೆ.-ಪ್ರೊ.ಜೆ.ಸೋಮಶೇಖರ್, ನಿರ್ದೇಶಕರು, ಡಾ.ಅಂಬೇಡ್ಕರ್ ಕೇಂದ್ರ, ಮೈ.ವಿ.ವಿ

Translate »