ಮಳವಳ್ಳಿ, ಫೆ.8-ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಗಾತ್ರದ ಪೈಪ್‍ಗಳನ್ನು ಕಳವು ಮಾಡಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಮಳ ವಳ್ಳಿ ಉಪ ವಿಭಾಗದ ಪೊಲೀಸರು 13.21 ಲಕ್ಷ ರೂ. ಮೌಲ್ಯದ ಪೈಪ್‍ಗಳು ಹಾಗೂ 3 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಳವಳ್ಳಿ ತಾಲೂಕು ನಿಡಘಟ್ಟ ಗ್ರಾಮದ ಬಾಳೆ ವ್ಯಾಪಾರಿ ಶಿವನಂಜು ಅಲಿಯಾಸ್ ಮನು(27), ಬೆಂಗಳೂರು ಹೆಗ್ಗನಹಳ್ಳಿ ಗ್ರಾಮದ ಕಂಟ್ರಾಕ್ಟರ್ ಆರ್.ಗಿರಿಧರ್(34), ಪಾಂಡವಪುರ ತಾಲೂಕು ಸೆಣಬ ಗ್ರಾಮದ ಚೆಲುವರಾಜು ಅಲಿಯಾಸ್ ಅನಿಲ್ ಅಲಿ ಯಾಸ್ ಕರಿಯ(29), ಮೂಲತಃ ಬೆಂಗ ಳೂರಿನ ಸುಂಕದಕಟ್ಟೆಯವನಾಗಿದ್ದು, ಹಾಲಿ ರಾಮನಗರ ಜಿಲ್ಲೆ ಸಾತನೂರು ವಾಸಿ ಸಿ. ಪ್ರಮೋದ್(33) ಬಂಧಿತ ಆರೋಪಿಗಳು.
ವಿವರ: ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಯು ಕಿರುಗಾವಲು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯು ತ್ತಿದೆ. ಅದಕ್ಕಾಗಿ ಹೊನಗಾನಹಳ್ಳಿ ಗ್ರಾಮದ ಬಳಿ 106 ಡಕ್ ಟೈಲ್ಸ್ ಕಬ್ಬಿಣದ ಪೈಪು ಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಪೈಪ್ ಗಳನ್ನು ಕಳವು ಮಾಡಲಾಗಿದೆ ಎಂದು ಜ. 24ರಂದು ಕಾಮಗಾರಿ ಗುತ್ತಿಗೆದಾರ ಕಂಪನಿ ಬೆಂಗಳೂರಿನ ಅರುಣ್ ಇಂಜಿನಿಯರಿಂಗ್ ಪ್ರೊಡಕ್ಟ್‍ನ ಪ್ರೊಡಕ್ಟ್ ಮ್ಯಾನೇಜರ್ ಟಿ. ಗೋವಿಂದಯ್ಯ ಕಿರುಗಾವಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಎಸ್ಪಿ ಪರಶುರಾಂ ಅವರು ಎಎಸ್‍ಪಿ ಡಾ. ಶೋಭಾರಾಣಿ, ಮಳವಳ್ಳಿ ಡಿವೈಎಸ್‍ಪಿ ಎಂ.ಜೆ.ಪೃಥ್ವಿ ಮಾರ್ಗದರ್ಶನದಲ್ಲಿ ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಧರ್ಮೇಂದ್ರ ನೇತೃತ್ವದಲ್ಲಿ ಹಲಗೂರು ಠಾಣೆ ಸಬ್ ಇನ್ಸ್‍ಪೆಕ್ಟರ್ ಪುರುಷೋತ್ತಮ್, ಬೆಳಕವಾಡಿ ಠಾಣೆ ಪೇದೆಗಳಾದ ರಿಯಾಸ್ ಪಾಷಾ, ಅನೀಫ್, ಕಿರುಗಾವಲು ಠಾಣೆ ಪೇದೆ ಮಹಮ್ಮದ್ ಫಾರೂಖ್, ಉಪ ವಿಭಾಗದ ಅಪರಾಧ ಪತ್ತೆ ದಳದ ಆರ್.ಪ್ರಭುಸ್ವಾಮಿ, ಪ್ರೇಂಕುಮಾರ್, ರಾಜು ಮತ್ತು ವೈ.ಬಿ.ರವಿ ಅವರನ್ನೊಳಗೊಂಡ ತಂಡ ರಚಿಸಿದ್ದರು.
ಕಳವು ಮಾಡಲ್ಪಟ್ಟ ಪೈಪ್‍ಗಳನ್ನು ಇಂತಹ ಕಾಮಗಾರಿ ಹೊರತುಪಡಿಸಿ ಬೇರೆ ಯಾವು ದಕ್ಕೂ ಬಳಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಪೊಲೀಸ್ ತಂಡ, ಇಂತಹ ಪೈಪ್ ಗಳನ್ನು ಮಾರಾಟ ಮಾಡುವ ಕಂಪನಿಗಳ ತಲಾಷೆ ನಡೆಸಿತ್ತು. ಆ ಸಂದರ್ಭದಲ್ಲಿ ಚೆನ್ನೈನ ಒಂದು ಕಂಪನಿಗೆ ಈ ಪೈಪ್‍ಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಖದೀಮರು ಕಾಮಗಾರಿ ಮುಗಿದು ಹೆಚ್ಚುವರಿಯಾಗಿ ಉಳಿದು ಕೊಂಡಿದೆ ಎಂದು ಹೇಳಿ ಈ ಪೈಪ್‍ಗಳನ್ನು ಚೆನ್ನೈ ಕಂಪನಿಗೆ ಮಾರಾಟ ಮಾಡಿದ್ದರು ಎಂಬ ಮಾಹಿತಿ ಪಡೆದ ಪೊಲೀಸರ ತಂಡ ನಾಲ್ವರು ಖದೀಮರನ್ನು ಬಂಧಿಸಿ ಚೆನ್ನೈಗೆ ಮಾರಾಟ ಮಾಡಲ್ಪಟ್ಟಿದ್ದ 13,21,074 ರೂ. ಮೌಲ್ಯದ 106 ಪೈಪ್‍ಗಳನ್ನು ವಶಪಡಿಸಿಕೊಳ್ಳಲಾಯಿತು. ರಾತ್ರೋರಾತ್ರಿ ಮೂರು ಲಾರಿಗಳು ಹಾಗೂ ಕ್ರೇನ್ ಬಳಸಿ ಜನವರಿ 1ರಿಂದ 24ರವರೆಗೆ ಈ ಪೈಪ್‍ಗಳನ್ನು ಕಳವು ಮಾಡಲಾಗಿತ್ತು ಎಂಬುದು ವಿಚಾರಣೆ ವೇಳೆ ತಿಳಿದು ಬಂದು, ಪೈಪ್ ಸಾಗಾಟಕ್ಕೆ ಬಳಸಿದ್ದ ಮೂರು ಲಾರಿ ಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.